ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟಿ20 ಮ್ಯಾಚ್ – ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ
2ನೇ ಟಿ-20 ಮ್ಯಾಚ್ನ್ನ ಟೀಂ ಇಂಡಿಯಾ ಸೋತಿತ್ತು.. ಈಗ ನಡೆಯೋದು ಫೈನಲ್ ಮ್ಯಾಚ್. ಭಾರತ-ದಕ್ಷಿಣ ಆಫ್ರಿಕಾ ಟಿ-20 ಸೀರಿಸ್ನ ಕೊನೆಯ ಮ್ಯಾಚ್ ಜೊಹಾನ್ಸ್ಬರ್ಗ್ನಲ್ಲಿ ನಡೀತಾ ಇದೆ. ಟೀಂ ಇಂಡಿಯಾಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಹೀಗಾಗಿ ಪ್ಲೇಯಿಂಗ್-11ನಲ್ಲಿ ಯಾರೆಲ್ಲಾ ಇರ್ತಾರೆ ಅನ್ನೋದು ನಿಜಕ್ಕೂ ತೀವ್ರ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: ಎರಡನೇ ಟಿ20 ಪಂದ್ಯ – ಸೌತ್ ಆಫ್ರಿಕಾ ವಿರುದ್ಧ ಸೋತ ಟೀಮ್ ಇಂಡಿಯಾ
ಭಾರತ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುತ್ತಿದೆ. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಯಿತು, ನಂತರ ಎರಡನೇ ಟಿ20ಯಲ್ಲಿ ದಕ್ಷಿಣ ಆಫ್ರಿಕಾ ಭಾರತವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಹೀಗಾಗಿ ಮೂರನೇ ಟಿ20 ಯಲ್ಲಿ ಭಾರತ ಗೆದ್ದರಷ್ಟೆ ಸರಣಿ ಸೋಲನ್ನು ತಪ್ಪಿಸಬಹುದು. ಟೀಮ್ ಇಂಡಿಯಾಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯ ಅಂತಾನೇ ಹೇಳಬಹುದು. ಹೀಗಾಗಿ ಟೀಂ ಇಂಡಿಯಾದ ಪ್ಲೇಯಿಂಗ್-11 ತುಂಬಾ ಮಹತ್ವ ಪಡೆದಿದೆ.
ಟೀಂ ಇಂಡಿಯಾ PLAYING-11?
- ಶುಬ್ಮನ್ ಗಿಲ್
- ಯಶಸ್ವಿ ಜೈಸ್ವಾಲ್ OR ರುತುರಾಜ್ ಗಾಯಕ್ವಾಡ್
- ಶ್ರೇಯಸ್ ಅಯ್ಯರ್
- ಸೂರ್ಯಕುಮಾರ್ ಯಾದವ್
- ರಿಂಕು ಸಿಂಗ್
- ಇಶಾನ್ ಕಿಶನ್
- ರವೀಂದ್ರ ಜಡೇಜ
- ರವಿ ಬಿಷ್ಣೋಯಿ
- ಮೊಹಮ್ಮದ್ ಸಿರಾಜ್
- ಮುಕೇಶ್ ಕುಮಾರ್
- ಅರ್ಶ್ದೀಪ್ ಸಿಂಗ್
ಟೀಂ ಇಂಡಿಯಾಗೆ ಸವಾಲ್ ಆಗಿರುವುದು ಬೌಲಿಂಗ್ ವಿಚಾರದಲ್ಲಿ. ಎರಡನೇ ಪಂದ್ಯ ಸೋಲಲು ಕಾರಣ ಕೂಡಾ ಬೌಲಿಂಗ್ ವೈಫಲ್ಯ. ಆಸ್ಟ್ರೇಲಿಯಾ ವಿರುದ್ಧದ ಟ-20 ಸೀರಿಸ್ ವೇಳೆಯೂ ಅಷ್ಟೇ ನಮ್ಮ ಬೌಲಿಂಗ್ ಅಷ್ಟಕ್ಕಷ್ಟೇ ಇತ್ತು. ಟಿ-20ಯಲ್ಲಿ ಬೌಲಿಂಗೇ ಟೀಮ್ ಇಂಡಿಯಾದ ವೀಕ್ನೆಸ್ ಆಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಈ 3ನೇ ಟಿ-20 ಮ್ಯಾಚ್ ಬಳಿಕ ಟೀಂ ಇಂಡಿಯಾಗೆ ಇನ್ನು ಉಳಿದಿರೋದು ಮೂರು ಟಿ-20 ಮ್ಯಾಚ್ಗಳಷ್ಟೇ. ಅದು ಅಫ್ಘಾನಿಸ್ತಾನದ ವಿರುದ್ಧ. ಅದಾದ್ಮೇಲೆ ನೇರವಾಗಿ ವರ್ಲ್ಡ್ಕಪ್ ಆಡಬೇಕು. ಹೀಗಾಗಿ ವರ್ಲ್ಡ್ಕಪ್ಗೆ ಟಿ-20 ಟೀಮ್ನ್ನ ಸೆಟ್ ಮಾಡೋಕೆ ಈ ಮ್ಯಾಚ್ ಬಿಟ್ಟು ಸಿಗೋದು 3 ಮ್ಯಾಚ್ಗಳಷ್ಟೇ. ಆ ಮೂರು ಮ್ಯಾಚ್ಗಳಲ್ಲೇ ಟಿ-20 ಟೀಂನ್ನ ಫೈನಲ್ ಮಾಡಬೇಕು. ನಂತರ ಐಪಿಎಲ್ ನಡೆಯುತ್ತೆ. ಅಲ್ಲಿನ ಪರ್ಫಾಮೆನ್ಸ್ ಕೂಡ ಕೌಂಟ್ ಆಗಬಹುದು. ಆದ್ರೆ ವರ್ಲ್ಡ್ಕಪ್ಗೆ ಟಿ-20 ಟೀಂನ್ನ ಸೆಟ್ ಮಾಡೋದು, 15 ಮಂದಿಯನ್ನ ಪಿಕ್ ಮಾಡೋದು ಅಷ್ಟೊಂದು ಸುಲಭ ಇಲ್ಲ. ಹೀಗಾಗಿ ಮುಂದಿನ ಎಲ್ಲಾ ಮ್ಯಾಚ್ಗಳು ಕೂಡ ಟೀಂ ಇಂಡಿಯಾಗೆ ತುಂಬಾನೆ ಇಂಪಾರ್ಟೆಂಟ್.