ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಟಿ20 3ನೇ ಪಂದ್ಯ – ಜೊಹಾನ್ಸ್ಬರ್ಗ್ ಪಿಚ್ ಹೇಗಿದೆ?
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಟಿ20 ಪಂದ್ಯಗಳ ಸರಣಿಯ ಮೂರನೇ ಮತ್ತು ನಿರ್ಣಾಯಕ ಪಂದ್ಯ ಜೋಹಾನ್ಸ್ಬರ್ಗ್ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ಇಂದು ನಡೆಯಲಿದೆ. ಜೊಹಾನ್ಸ್ಬರ್ಗ್ ಪಿಚ್ ಹೇಗಿದೆ? ಯಾರಿಗೆ ಫೇವರ್ ಆಗಿದೆ? ಇಲ್ಲೂ ಮಳೆಯಾಗುವ ಸಾಧ್ಯತೆ ಇದೆಯಾ? ಎಂಬ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ನಾಲ್ಕು ಆಟಗಾರರು.. ಒಂದೇ ಫ್ರಾಂಚೈಸಿ – ಇವರನ್ನು ತಂಡ ಬಿಟ್ಟು ಕೊಟ್ಟಿಲ್ಲ ಯಾಕೆ ಅನ್ನೋದು ನಿಮಗೆ ಗೊತ್ತಾ?
ಜೊಹಾನ್ಸ್ಬರ್ಗ್ ಬ್ಯಾಟಿಂಗ್ ಮಾಡುವವರಿಗೆ ಹೇಳಿ ಮಾಡಿಸಿದ ಪಿಚ್. ಆಲ್ಮೋಸ್ಟ್ ಎಲ್ಲಾ ಮ್ಯಾಚ್ನಲ್ಲೂ ಇಲ್ಲಿ ರನ್ ಸುರಿಮಳೆಯೇ ಆಗುತ್ತೆ. ಟಿ-20 ಆಗಿರಲಿ, ಏಕದಿನ ಸರಣಿಯೇ ಆಗಿರಲಿ, ಬ್ಯಾಟ್ಸ್ಮನ್ಗಳಿಗೆ ಹೇಳಿ ಮಾಡಿಸಿದಂಥಾ ಪಿಚ್. ಇಲ್ಲಿ ಟಿ-20ಯಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದಾಗ ಎವರೇಜ್ ಸ್ಕೋರ್ ಅಂದ್ರೆ 173. ಇದು ಎವರೇಜ್ ಸ್ಕೋರ್. ಹೀಗಾಗಿ 200 ಪ್ಲಸ್ ಸ್ಕೋರ್ ಬರೋದು ಗ್ಯಾರಂಟಿ. ಫಸ್ಟ್ ಮಾಡಿದ ಟೀಂ ಮ್ಯಾಚ್ ಗೆಲ್ಲಬೇಕು ಅನ್ನೋದಾದ್ರೆ 200 ಪ್ಲಸ್ ಸ್ಕೋರ್ ಮಾಡಲೇಬೇಕಾಗುತ್ತೆ. ಯಾಕಂದ್ರೆ 200 ಪ್ಲಸ್ ಸ್ಕೋರ್ ಇದ್ರೂ ಈ ಪಿಚ್ನಲ್ಲಿ ಸುಲಭವಾಗಿ ಚೇಸಿಂಗ್ ಮಾಡಿ ವಿನ್ ಆಗಬಹುದು. ಇದುವರೆಗೆ ಇಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ ಟೀಮ್ 15 ಮ್ಯಾಚ್ಗಳನ್ನ ಗೆದ್ದಿದೆ. ಚೇಸಿಂಗ್ ಮಾಡಿದ ತಂಡ 17 ಮ್ಯಾಚ್ಗಳನ್ನ ಗೆದ್ದಿದೆ. ಸೋ ಫಸ್ಟ್ ಬ್ಯಾಟಿಂಗ್ ಮಾಡಿದ ಟೀಮ್ ಎಷ್ಟು ಸಾಧ್ಯವಾಗುತ್ತೋ ಅಷ್ಟು ದೊಡ್ಡ ಮೊತ್ತದ ಸ್ಕೋರ್ ಗಳಿಸಲೇಬೇಕಾಗುತ್ತೆ. ಸ್ಕೋರ್ ಬೋರ್ಡ್ನಲ್ಲಿ 210-220 ರನ್ ಮಾಡಿದ್ರೂ ಕೂಡ ಇಲ್ಲಿ ಚೇಸ್ ಮಾಡಬಹುದು. ಹೀಗಾಗಿ ಬ್ಯಾಟ್ಸ್ಮನ್ಗಳು ಮತ್ತು ಬೌಲರ್ಸ್ಗಳ ಮೇಲೆ ಸೇಮ್ ಅಮೌಂಟ್ ಆಫ್ ರೆಸ್ಪಾನ್ಸಿಬಿಲಿಟಿ ಇದೆ. ಪ್ರೆಷರ್ ಕೂಡ ಇದೆ. ಇನ್ನು ಟಾಸ್ ಗೆದ್ರೆ ಮೊದಲು ಬೌಲಿಂಗ್ ಚೂಸ್ ಮಾಡುವ ಸಾಧ್ಯತೆ ಹೆಚ್ಚಿದೆ.
ಇನ್ನು ಸೌತ್ ಆಫ್ರಿಕಾ ಸೀರಿಸ್ನಲ್ಲಿ ಪಿಚ್ ರಿಪೋರ್ಟ್ನಷ್ಟೇ ವೆದರ್ ರಿಪೋರ್ಟ್ ಕೂಡ ಇಂಪಾರ್ಟೆಂಟ್ ಆಗಿದೆ. ಮೊದಲು ಎರಡೂ ಮ್ಯಾಚ್ ವೇಳೆಯೂ ಮಳೆಯಾಗಿತ್ತು. 2ನೇ ಮ್ಯಾಚ್ನಲ್ಲಿ ಡಕ್ವರ್ತ್ ಲೂಯಿಸ್ ರೂಲ್ಸ್ನಿಂದ ಟೀಂ ಇಂಡಿಯಾಗೆ ಹೊಡೆತ ಕೂಡ ಬಿದ್ದಿದೆ. ಸದ್ಯ ಜೊಹಾನ್ಸ್ಬರ್ಗ್ ವೆದರ್ ರಿಪೋರ್ಟ್ ಪ್ರಕಾರ, ಮಳೆಯಾಗುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಫುಲ್ 40 ಓವರ್ಸ್ ಮ್ಯಾಚ್ ನಡೀಬಹುದೋ ಏನೊ.