ದಕ್ಷಿಣ ಆಫ್ರಿಕಾ ಮತ್ತು ಭಾರತದ 2ನೇ ಟಿ-20 ಮ್ಯಾಚ್ – ಮಳೆಯಿಂದ ಪಂದ್ಯಕ್ಕೆ ಅಡ್ಡಿ ಆಗುತ್ತಾ?
ಭಾರತ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ನಡೀತಾ ಇರೋದು ಮೂರು ಟಿ-20 ಮ್ಯಾಚ್ಗಳು. ಈ ಪೈಕಿ ಒಂದು ಮ್ಯಾಚ್ ಈಗಾಗಲೇ ಮಳೆಯಿಂದ ಕ್ಯಾನ್ಸಲ್ ಆಗಿದೆ. ಈಗ ಎರಡನೇ ಮ್ಯಾಚ್ ನಡೆಯುತ್ತಾ ಎಂಬ ಅನುಮಾನ ಮೂಡಿದೆ. 2ನೇ ಮ್ಯಾಚ್ಗೆ ಆಗೋ ಗ್ರೌಂಡ್ನ ಪಿಚ್ ಹೇಗಿದೆ? ಯಾರಿಗೆ ಫೇವರ್ ಆಗಿದೆ? ಹಾಗೆಯೇ ಭಾರತೀಯ ಕಾಲಮಾನ ಎಷ್ಟು ಗಂಟೆಗೆ ಮ್ಯಾಚ್ ಶುರುವಾಗುತ್ತೆ?. ಎಂಬ ವರದಿ ಇಲ್ಲಿದೆ.
ಸೇಂಟ್ ಜಾರ್ಜಸ್ ಪಾರ್ಕ್ನಲ್ಲಿ 2ನೇ ಟಿ-20 ಮ್ಯಾಚ್ ನಡೀತಾ ಇದೆ. ಇಲ್ಲಿನ ಪಿಚ್ ಆರಂಭದಲ್ಲಿ ಬ್ಯಾಟ್ಸ್ಮನ್ಗಳಿಗೆ ಸ್ವಲ್ಪ ಫೇವರ್ ಆಗಿರುತ್ತೆ. ಬಳಿಕ ಸ್ಪಿನ್ನರ್ಸ್ಗಳಿಗೆ ಮತ್ತು ಸೀಮ್ ಬೌಲರ್ಸ್ಗಳಿಗೆ ಹೆಚ್ಚು ಅಡ್ವಾಂಟೇಜ್ ಆಗಿರಲಿದೆ. ಮಿಡ್ಲ್ ಓವರ್ಗಳಲ್ಲಂತೂ ಸ್ಪಿನ್ನರ್ಸ್ಗಳ ರೋಲ್ ತುಂಬಾ ಕ್ರೂಶಿಯಲ್ ಆಗಿರುತ್ತೆ. ಇಲ್ಲಿ ಟಾಸ್ ಅಷ್ಟೊಂದು ಇಂಪಾರ್ಟೆಂಟ್ ಆಗುತ್ತೆ ಅಂತಾನೆ ಹೇಳೋಕಾಗಲ್ಲ. ಯಾಕಂದ್ರೆ ಫಸ್ಟ್ ಬ್ಯಾಟಿಂಗ್ ಮಾಡಿದ ಟೀಂ ಮತ್ತು ಚೇಸಿಂಗ್ ಮಾಡಿದ ಟೀಮ್ ಕೂಡ ಸೇಮ್ ನಂಬರ್ ಆಫ್ ಮ್ಯಾಚ್ಗಳನ್ನ ಗೆದ್ದುಕೊಂಡಿದೆ. ಆದ್ರೂ, ಎಕ್ಸ್ಪರ್ಟ್ಗಳು ಹೇಳೋ ಪ್ರಕಾರ, ಟಾಸ್ ಗೆದ್ರೆ ಮೊದಲು ಬ್ಯಾಟಿಂಗ್ ಚೂಸ್ ಮಾಡುವ ಸಾಧ್ಯತೆ ಹೆಚ್ಚಿದೆ.
- ಜಾರ್ಜಸ್ ಪಾರ್ಕ್ ಗ್ರೌಂಡ್ ನಲ್ಲಿ 8 ಟಿ-20 ಮ್ಯಾಚ್ ಗಳಾಗಿವೆ
- ಫಸ್ಟ್ ಬ್ಯಾಟಿಂಗ್ ಮಾಡಿದ ತಂಡ 4 ಮ್ಯಾಚ್ ಗಳನ್ನ ಗೆದ್ದಿದೆ
- ಚೇಸಿಂಗ್ ಮಾಡಿದ ಟೀಮ್ ಕುಡ 4 ಮ್ಯಾಚ್ ಗಳನ್ನ ಗೆದ್ದಿದೆ
- ಎವರೇಜ್ ಫಸ್ಟ್ ಇನ್ನಿಂಗ್ಸ್ ಸ್ಕೋರ್ 160 ರನ್
- ಜಾರ್ಜಸ್ ಪಾರ್ಕ್ ಗ್ರೌಂಡ್ ನಲ್ಲಿ ಹೈಯೆಸ್ಟ್ ಸ್ಕೋರ್ 179
ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ-20 ಮ್ಯಾಚ್ಗೆ ಟೀಂ ಇಂಡಿಯಾದ ಪ್ಲೇಯಿಂಗ್-11 ಹೇಗಿರಬಹುದು? ಸಂಭಾವ್ಯ ತಂಡದಲ್ಲಿ ಯಾರೆಲ್ಲಾ ಇದ್ದಾರೆ ಅನ್ನೋದನ್ನ ನೋಡೋಣ.
ಟೀಂ ಇಂಡಿಯಾ PLAYING-11!
- ಶುಬ್ಮನ್ ಗಿಲ್
- ರುತುರಾಜ್ ಗಾಯಕ್ವಾಡ್
- ಶ್ರೇಯಸ್ ಅಯ್ಯರ್
- ಸೂರ್ಯಕುಮಾರ್ ಯಾದವ್
- ರಿಂಕು ಸಿಂಗ್
- ರವೀಂದ್ರ ಜಡೇಜ
- ಇಶಾನ್ ಕಿಶನ್
- ರವಿ ಬಿಷ್ಣೋಯಿ
- ಮೊಹಮ್ಮದ್ ಸಿರಾಜ್
- ಮುಕೇಶ್ ಕುಮಾರ್
- ಅರ್ಶ್ದೀಪ್ ಸಿಂಗ್
ಇದು ದಕ್ಷಿಣ ಆಫ್ರಿಕಾ ವಿರುದ್ಧದ ಫಸ್ಟ್ ಮ್ಯಾಚ್ಗೆ ಟೀಂ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್-11. ಈಗ ಟೀಂ ಇಂಡಿಯಾ ಆಡೋ ಪ್ರತಿ ಟಿ20 ಮ್ಯಾಚ್ಗಳು ಕೂಡ ತುಂಬಾನೆ ಇಂಪಾರ್ಟೆಂಟ್. ಯಾಕಂದ್ರೆ ಟಿ20 ವರ್ಲ್ಡ್ಕಪ್ಗೆ ಇನ್ನು ಕೆಲ ತಿಂಗಳುಗಳಷ್ಟೇ ಬಾಕಿ ಉಳಿದಿರೋದು. ಹೀಗಾಗಿ ನಮ್ಮವರು ಆಡುವ ಪ್ರತಿ ಮ್ಯಾಚ್ ಕೂಡ ಇಲ್ಲಿ ಕೌಂಟ್ ಆಗುತ್ತೆ. ಪ್ಲೇಯರ್ಸ್ಗಳ ಪರ್ಫಾಮೆನ್ಸ್ ಅವರ ಭವಿಷ್ಯವನ್ನೇ ನಿರ್ಧರಿಸಲಿದೆ. ವರ್ಲ್ಡ್ಕಪ್ಗೆ ಟೀಂ ಇಂಡಿಯಾ ಸ್ಕ್ವಾಡ್ ಸೆಟ್ಅಪ್ ಮಾಡೋ ದೃಷ್ಟಿಯಲ್ಲಿ ಪ್ರತಿ ಮ್ಯಾಚ್ಗಳು ಕೂಡ ಇಂಪಾರ್ಟೆಂಟ್ ಆಗಿರಬಹುದು. ಆದ್ರೆ ದಕ್ಷಿಣ ಆಫ್ರಿಕಾದಲ್ಲಿ ಈಗ ನೆಟ್ಟಗೆ ಮ್ಯಾಚ್ ನಡೀಬೇಕಲ್ಲ. ಯಾಕಂದ್ರೆ 2ನೇ ಟಿ20 ಮ್ಯಾಚ್ ಕೂಡ ಎಲ್ಲಿ ಮಳೆಯಲ್ಲಿ ಕೊಚ್ಚಿ ಹೋಗುತ್ತೋ ಎಂಬಂತಾಗಿದೆ. ಸೌತ್ ಆಫ್ರಿಕಾ ವೆದರ್ ರಿಪೋರ್ಟ್ ಪ್ರಕಾರ, ಮಳೆ ಬರುವ ಚಾನ್ಸ್ 84 ಪರ್ಸೆಂಟ್ನಷ್ಟಿದೆ. ಹೀಗಾಗಿ 2ನೇ ಮ್ಯಾಚ್ಗೂ ಮಳೆ ಅಡ್ಡಿಯಾಯ್ತು ಅಂದ್ರೆ, ಬಳಿಕ ಉಳಿಯೋದು ಒಂದೇ ಒಂದು ಮ್ಯಾಚ್. ಆಡಿ ಏನು ಪ್ರಯೋಜನ. ಇನ್ನು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಂತೂ ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್ಗೆ ಒಂದು ಟಾಂಗ್ ಕೂಡ ಕೊಟ್ಟಿದ್ದಾರೆ. ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ಬಳಿ ಈಗ ಬೇಕಾದಷ್ಟು ಹಣ ಇದೆ. ಇಡೀ ಗ್ರೌಂಡ್ನ್ನ ಮಳೆಯಿಂದ ಪ್ರೊಟೆಕ್ಟ್ ಮಾಡೋಕೆ ಬೇಕಾದ ಕವರ್ ಇದೆ ಅಂದ್ಮೇಲೆ ಕೇವಲ ಬಿಸಿಸಿಐ ಮಾತ್ರವಲ್ಲ ಆಲ್ಮೋಸ್ಟ್ ಎಲ್ಲಾ ಕ್ರಿಕೆಟ್ ಬೊರ್ಡ್ಗಳು ಕೂಡ ಈಗ ರಿಚ್ ಆಗಿವೆ ಅಂತಾ ಗವಾಸ್ಕರ್ ಹೇಳಿದ್ದಾರೆ. ಜೊತೆಗೆ ಮ್ಯಾಚ್ ಮಳೆಗೆ ಆಹುತಿಯಾಗಿ ಸೌತ್ ಆಫ್ರಿಕಾ ಸೀರಿಸ್ ಆರಂಭವಾಗಿರೋದು ದುರಂತ ಅಂತಾನೂ ಗವಾಸ್ಕರ್ ಕ್ರಿಟಿಸೈಸ್ ಮಾಡಿದ್ದಾರೆ.
ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಮ್ಯಾಚ್ ಶುರುವಾಗೋ ಟೈಮಿಂಗ್ನಲ್ಲಿ ಸ್ವಲ್ಪ ಡಿಫರೆನ್ಸ್ ಇದೆ. ಫಸ್ಟ್ ಮ್ಯಾಚ್ ಭಾರತೀಯ ಕಾಲಮಾನ 7.30ಕ್ಕೆ ಶೆಡ್ಯೂಲ್ ಆಗಿತ್ತು. ಆದ್ರೆ ಎರಡನೇ ಮ್ಯಾಚ್ ರಾತ್ರಿ 8.30ಕ್ಕೆ ಆರಂಭವಾಗುತ್ತೆ. ಸ್ಟಾರ್ ಸ್ಪೋರ್ಟ್ಸ್ ಮತ್ತು ಹಾಟ್ಸ್ಟಾರ್ನಲ್ಲಿ ಲೈವ್ ಇರುತ್ತೆ. ಆದ್ರೆ ಪ್ರಾಬ್ಲಂ ಆಗಿರೋದು ಮಳೆ ಮಾತ್ರ. ಈ ಮ್ಯಾಚ್ ಕೂಡ ಮಳೆಯಲ್ಲಿ ಹೋಯ್ತು ಅಂದ್ರೆ ಇಡೀ ಟಿ-20 ಸೀರಿಸ್ ನೀರಲ್ಲಿ ಹೋಮ ಮಾಡಿದಂತೆ.