ಮನೆ ಬಳಿ ಮೇಯಲು ಬಂದ ಹಸುಗಳ ಮೇಲೆ ಆಸಿಡ್ ಎರಚಿ ವಿಕೃತಿ ಮೆರೆದ ವೃದ್ಧೆ!
ಮನುಷ್ಯ ಮನುಷ್ಯತ್ವವನ್ನೇ ಮರೆಯುತ್ತಿದ್ದಾನೆ. ನಿತ್ಯ ಅನಾಚಾರಗಳನ್ನೇ ಮಾಡುತ್ತಿದ್ದಾನೆ. ಒಂಚೂರು ಕರುಣೆಯಿಲ್ಲದೇ ಮೂಕಪ್ರಾಣಿಗಳ ಮೇಲೆ ದರ್ಪ ತೋರುತ್ತಿದ್ದಾನೆ. ಇದೀಗ ಇಲ್ಲೊಬ್ಬರು ವೃದ್ಧೆ ಹಸುಗಳ ಮೇಲೆ ಆಸಿಡ್ ಸುರಿದು ವಿಕೃತಿ ಮೆರೆದಿದ್ದಾರೆ.
ಮನೆಯಂಗಳಕ್ಕೆ ಮೇಯಲು ಬರುತ್ತಿದ್ದ ಹಸುಗಳ ಮೇಲೆ ವೃದ್ಧೆ ಆಸಿಡ್ ಎರಚಿ ವಿಕೃತಿ ಮೆರೆದಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಗುಣಿ ಅಗ್ರಹಾರ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಈ ವೃದ್ಧ 18ಕ್ಕೂ ಹೆಚ್ಚು ಹಸುಗಳ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ ಎಂದು ವರದಿಯಾಗಿದೆ.
76 ವರ್ಷದ ವೃದ್ಧ ಜೋಸೆಫ್ ಗ್ರೇಸ್ ಆಸಿಡ್ ಎರಚಿದವರು. ಕಳೆದ ಮೂರು ದಿನಗಳಿಂದ ಮನೆ ಬಳಿ ಬರುವ ಹಸುಗಳ ಮೇಲೆ ನಿರಂತರವಾಗಿ ಆ ವೃದ್ದೆ ದಾಳಿ ನಡೆಸಿದ್ದಾರೆ. ರಾಜಣ್ಣ ಅವರಿಗೆ ಸೇರಿದ 2 ಹಸು, ನಾಗಣ್ಣ 4, ಪ್ರಕಾಶ್ 3, ಗಂಗಮ್ಮ 2, ಕೃಷ್ಣ 3, ಶ್ರೀರಾಮ3, ಮದನ್ 1 ಎಂಬವರಿಗೆ ಸೇರಿದ ಹಸುಗಳಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಇದೀಗ ಹಸುಗಳ ಮಾಲೀಕರು, ತಮ್ಮ ಹಸುಗಳಿಗೆ ಸುಟ್ಟ ಗಾಯಗಳಾಗಿವೆ. ಅವುಗಳು ನೋವಿನಿಂದ ಬಳಲುತ್ತಿದ್ದು ಹಾಲು ಕೊಡುತ್ತಿಲ್ಲ, ನೋವಿನಿಂದಾಗಿ ನಮ್ಮ ಹಸುಗಳು ಮೂಕವಾಗಿ ರೋಧಿಸುತ್ತಿವೆ. ನ್ಯಾಯ ಕೊಡಿಸಿ ಅಂತಾ ಮಾಲೀಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಹಿನ್ನೆಲೆಯಲ್ಲಿ ಹಸುಗಳ ಮಾಲಿಕರು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ ಎಂದು ವರದಿಯಾಗಿದೆ.
ಇನ್ನು ವೃದ್ಧೆ ಜೋಸೆಫ್ ಗ್ರೇಸ್ ತನ್ನ ತಪ್ಪನ್ನ ಒಪ್ಪಿಕೊಳ್ಳುವ ಬದಲು ಬೇರೆನೇ ಸಮಜಾಯಿಷಿ ನೀಡಿದ್ದಾರೆ. ತಾನು ಹಸುಗಳ ಮೇಲೆ ಆಸಿಡ್ ಎರಚಿದ್ದು ನಿಜ. ಬಾತ್ ರೂಂ ಗೆ ಬಳಸುವ ಆಸಿಡ್ ಎರಚಿದ್ದೇನೆ. ಇದು ನಮ್ಮ ಖಾಸಗಿ ಜಾಗ. ಇಲ್ಲಿ ಹಸುಗಳನ್ನ ಬಿಡುವುದು ಹಸುವಿನ ಮಾಲಿಕರ ತಪ್ಪು. ಹಸುಗಳು ಮನೆ ಬಳಿ ಬರಬಾರದು ಅಂತ ಮಾಡಿದ್ದು ಅಷ್ಟೇ. ಬೇರೆ ಉದ್ದೇಶ ನನಗಿಲ್ಲ ಎಂದು ವೃದ್ದೆ ಸಮಜಾಯಿಷಿ ನೀಡಿದ್ದಾರೆ.