ಭಾರತದಲ್ಲಿ ಮುಂದಿನ ದಿನಗಳಲ್ಲಿ ಪಿಂಕ್ ಬಾಲ್ ಟೆಸ್ಟ್ ನಡೆಯುವುದು ಅನುಮಾನ – ಬಿಸಿಸಿಐ ಮಹತ್ವದ ನಿರ್ಧಾರ

ಭಾರತದಲ್ಲಿ ಮುಂದಿನ ದಿನಗಳಲ್ಲಿ ಪಿಂಕ್ ಬಾಲ್ ಟೆಸ್ಟ್ ನಡೆಯುವುದು ಅನುಮಾನ – ಬಿಸಿಸಿಐ ಮಹತ್ವದ ನಿರ್ಧಾರ

ಭಾರತದಲ್ಲಿ ಮುಂದಿನ ದಿನಗಳಲ್ಲಿ ಪಿಂಕ್‌ ಬಾಲ್‌ ಟೆಸ್ಟ್ ನಡೆಯುವುದು ಅನುಮಾನವಾಗಿದೆ. ಡೇ-ನೈಟ್ ಟೆಸ್ಟ್ ಪಂದ್ಯವನ್ನು ಗುಲಾಬಿ ಚೆಂಡಿನೊಂದಿಗೆ ಆಡಲಾಗುತ್ತದೆ. ಟೀಂ ಇಂಡಿಯಾ ಸಹ ಈ ಮಾದರಿಯಲ್ಲಿ ಆಡುವುದು ಅನುಮಾನ. ಪಿಂಕ್ ಬಾಲ್ ಟೆಸ್ಟ್ ಆಯೋಜಿಸುವ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಟಿ-20 ವಿಶ್ವಕಪ್ ನಿಂದ ವಿರಾಟ್ ಕೊಹ್ಲಿ ಡ್ರಾಪ್ – ಕೊಹ್ಲಿಯ ಟಿ-20 ಭವಿಷ್ಯ ಏನು?

ಹಗಲು-ರಾತ್ರಿ ಟೆಸ್ಟ್‌ ಪಂದ್ಯಗಳು ಇನ್ನುಂದೆ ಭಾರತದಲ್ಲಿ ನಡೆಯುವುದು ಅನುಮಾನವಾಗಿದೆ. ಈ ಟೆಸ್ಟ್‌ ಪಂದ್ಯವನ್ನು ಪಿಂಕ್‌ ಬಾಲ್‌ನಲ್ಲಿ ಆಡುವುದರಿಂದ ಇದನ್ನು ಪಿಂಕ್‌ ಬಾಲ್‌ ಟೆಸ್ಟ್‌ ಎಂದೂ ಸಹ ಕರೆಯಲಾಗುತ್ತದೆ. ಹೀಗಾಗಿ ಬಿಸಿಸಿಐ ಇನ್ನು ಮುಂದೆ ಪುರುಷರ ಕ್ರಿಕೆಟ್‌ನಲ್ಲಿ ಅಥವಾ ಮಹಿಳೆಯರ ಈವೆಂಟ್‌ಗಳಲ್ಲಿ ಡೇ-ನೈಟ್ ಟೆಸ್ಟ್ ಪಂದ್ಯವನ್ನು ದೇಶೀಯ ಋತುವಿನಲ್ಲಿ ಆಯೋಜಿಸುವುದಿಲ್ಲ. ಬಿಸಿಸಿಐ ಪಿಂಕ್ ಬಾಲ್ ಟೆಸ್ಟ್ ಆಯೋಜಿಸಲು ಆಸಕ್ತಿ ಹೊಂದಿಲ್ಲ ಎಂದು ಹೇಳಲಾಗಿದೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಭಾರತೀಯ ಮಂಡಳಿಯು ಇನ್ನು ಮುಂದೆ ಪಿಂಕ್ ಬಾಲ್ ಟೆಸ್ಟ್‌ಗೆ ಉತ್ಸುಕವಾಗಿಲ್ಲ. ಏಕೆಂದರೆ ಇದು 4 ಅಥವಾ 5 ದಿನಗಳ ಬದಲಿಗೆ 2 ರಿಂದ 3 ದಿನಗಳಲ್ಲಿ ಕೊನೆಗೊಳ್ಳುತ್ತದೆ ಎಂದು ಹೇಳಿದ್ದಾರೆ. ಪಿಂಕ್ ಬಾಲ್ ಟೆಸ್ಟ್ ಅನ್ನು ಜನರಲ್ಲಿ ಜನಪ್ರಿಯಗೊಳಿಸಲು ಬಿಸಿಸಿಐ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದೆ ಎಂದು ಜಯ್ ಶಾ ಹೇಳಿದರು. ಇಲ್ಲಿಯವರೆಗೆ ಗುಲಾಬಿ ಚೆಂಡಿನೊಂದಿಗೆ ಆಡಿದ ಎಲ್ಲಾ ಟೆಸ್ಟ್‌ಗಳು ಕೇವಲ 2-3 ದಿನಗಳಲ್ಲಿ ಕೊನೆಗೊಂಡಿವೆ. ಜನರು 4 ರಿಂದ 5 ದಿನಗಳವರೆಗೆ ಟೆಸ್ಟ್ ಪಂದ್ಯಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಆದರೆ, ಇದು ಬೇಗನೆ ಮುಕ್ತಾಯಗೊಳ್ಳುತ್ತದೆ. ಹೀಗಾಗಿ ಬಿಸಿಸಿಐ ಭಾರತದಲ್ಲಿ ಇದನ್ನು ನಿಲ್ಲಿಸಲು ಮುಂದಾಗಿದೆಯಂತೆ. ಪಿಂಕ್ ಬಾಲ್ ಟೆಸ್ಟ್ ಅನ್ನು ಕೊನೆಯ ಬಾರಿಗೆ ಆಸ್ಟ್ರೇಲಿಯಾದಲ್ಲಿ ಆಡಲಾಯಿತು, ನಂತರ ಯಾವುದೇ ದೇಶವು ಇದನ್ನು ಆಯೋಜಿಸಲಿಲ್ಲ. ಟೀಮ್ ಇಂಡಿಯಾ ಇದುವರೆಗೆ 4 ಪಿಂಕ್ ಬಾಲ್ ಟೆಸ್ಟ್ ಆಡಿದ್ದು, 3ರಲ್ಲಿ ಗೆದ್ದಿದ್ದರೆ ಒಂದರಲ್ಲಿ ಸೋಲು ಕಂಡಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಕೊನೆಯ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಆಡಿದ್ದು, ಅದು ಕೂಡ 3 ದಿನಗಳಲ್ಲಿ ಕೊನೆಗೊಂಡಿತು. ಭಾರತೀಯ ಮಹಿಳಾ ಕ್ರಿಕೆಟ್ ತಂಡ ಇಲ್ಲಿಯವರೆಗೆ 2021 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಒಂದೇ ಒಂದು ಪಿಂಕ್ ಬಾಲ್ ಟೆಸ್ಟ್ ಆಡಿದ್ದರು. ಕ್ವೀನ್ಸ್ಲ್ಯಾಂಡ್ನಲ್ಲಿ ನಡೆದ ಆ ಟೆಸ್ಟ್ ಡ್ರಾ ಆಗಿತ್ತು ಬಿಸಿಸಿಐ ಕಾರ್ಯದರ್ಶಿಯ ಈ ಹೇಳಿಕೆಯ ನಂತರ, ಟೀಮ್ ಇಂಡಿಯಾ ಗುಲಾಬಿ ಚೆಂಡಿನೊಂದಿಗೆ ಟೆಸ್ಟ್ ಪಂದ್ಯ ಆಡುವುದು ಅನುಮಾನ. ಭಾರತೀಯ ಪುರುಷರ ತಂಡವು ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಅಲ್ಲಿ ಅದು ಡಿಸೆಂಬರ್ 26 ರಿಂದ 2-ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ. ಈ ಎರಡೂ ಟೆಸ್ಟ್‌ಗಳನ್ನು ಕೆಂಪು ಚೆಂಡಿನೊಂದಿಗೆ ಆಡಲಾಗುತ್ತದೆ.

Sulekha