ವಿನಯ್ ಸೇಡಿಗೆ ಆಸ್ಪತ್ರೆ ಸೇರಿದ ಸಂಗೀತಾ, ಡ್ರೋನ್ ಪ್ರತಾಪ್ – ಸ್ಪರ್ಧಿಗಳ ಅತಿರೇಕದ ವರ್ತನೆಗೆ ಬಿಗ್‌ಬಾಸ್ ಮೌನವೇಕೆ?

ವಿನಯ್ ಸೇಡಿಗೆ ಆಸ್ಪತ್ರೆ ಸೇರಿದ ಸಂಗೀತಾ, ಡ್ರೋನ್ ಪ್ರತಾಪ್ – ಸ್ಪರ್ಧಿಗಳ ಅತಿರೇಕದ ವರ್ತನೆಗೆ ಬಿಗ್‌ಬಾಸ್ ಮೌನವೇಕೆ?

ರಿಯಾಲಿಟಿ ಶೋನೇ ಆಗಿರಲಿ, ಯಾವುದೇ ಕಾರ್ಯಕ್ರಮವೇ ಇರಲಿ, ಅತಿರೇಕಕ್ಕೆ ಹೋದಾಗ ನೋಡಲು ಅಸಾಧ್ಯ. ಸದ್ಯಕ್ಕೆ ಬಿಗ್‌ಬಾಸ್ ರಿಯಾಲಿಟಿ ಶೋ ಮನರಂಜನೆ ನೆಪದಲ್ಲಿ ವಿಪರೀತಕ್ಕೆ ಹೋಗುತ್ತಿದೆ. ಟಾಸ್ಕ್ ನೆಪದಲ್ಲಿ ವೈಯಕ್ತಿಕ ದಾಳಿಗಳು ಜಾಸ್ತಿಯಾಗುತ್ತಿವೆ. ಟಾಸ್ಕ್ ವೇಳೆ ಸ್ಪರ್ಧಿಗಳ ಅತಿರೇಕದ ವರ್ತನೆ ವೀಕ್ಷಕರ ಅಸಮಾಧಾನಕ್ಕೂ ಕಾರಣವಾಗುತ್ತಿದೆ. ಇದರ ಮಧ್ಯೆ ಇಬ್ಬರು ಸ್ಪರ್ಧಿಗಳು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರಿದ್ದಾರೆ.

ಇದನ್ನೂ ಓದಿ: ಕ್ಯಾಪ್ಟನ್ಸಿ ಟಾಸ್ಕ್‌ನಿಂದ ವಿನಯ್, ನಮ್ರತಾರನ್ನು ಹೊರಗಿಟ್ಟ ಸ್ನೇಹಿತ್ – ‘ಅವನು ಯಾವ ಪುಟಗೋಸಿ ಫ್ರೆಂಡ್’ಎಂದು ಪ್ರಶ್ನಿಸಿದ ನಮ್ರತಾ

ಬಿಗ್‌ಬಾಸ್ ಮನೆಯಲ್ಲಿ ಏನಾಗುತ್ತಿದೆ. ಇಲ್ಲಿ ನಡೆಯುತ್ತಿರುವುದಾದರೂ ಏನು. ರಿಯಾಲಿಟಿ ಶೋನಲ್ಲಿ ಜನರಿಗೆ ತೋರಿಸುತ್ತಿರುವುದಾದರೂ ಏನು..  ಬರೀ ಜಗಳ, ಸೇಡು.. ಕಿತ್ತಾಟ.. ಹಾರಾಟ.. ಅದರಲ್ಲೂ ಈಗ ನಡೆಯುತ್ತಿರುವ ಟಾಸ್ಕ್ ನೆಪದಲ್ಲಿ ಸ್ಪರ್ಧಿಗಳ ವೈಯಕ್ತಿ ಕದನವೇ ಜಾಸ್ತಿಯಾಗಿದೆ. ಅತಿರೇಕದ ವರ್ತನೆ ಸ್ವತಃ ವೀಕ್ಷಕರಿಗೆ ವಾಕರಿಕೆ ಬರುವಂತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಭಾರೀ ಸುದ್ದಿಯಾಗುತ್ತಿದೆ. ಇದು ಬಿಗ್ಬಾಸ್ ಮನೆಯಲ್ಲಿ ನಡೆಯುತ್ತಿರುವುದು ಆಟವೇ, ವೈಯಕ್ತಿಕ ಸೇಡೇ ಎಂಬ ಅನುಮಾನ ಶುರುವಾಗಿದೆ. ಅದು ಎಷ್ಟರಮಟ್ಟಿಗೆ ಹೋಗಿದೆಯೆಂದರೆ ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಶೃಂಗೇರಿ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ಟಾಸ್ಕ್ ವೊಂದರಲ್ಲಿ ಅವರ ಮುಖಕ್ಕೆ ಕೆಮಿಕಲ್ ನೀರು ಹಾಕಿದ ಕಾರಣದಿಂದಾಗಿ ಅವರು ಅಸ್ವಸ್ಥಗೊಂಡಿದ್ದರು ಎಂದು ಹೇಳಲಾಗುತ್ತಿದೆ. ಕಣ್ಣಿಗೆ ಮತ್ತು ಮೂಗು, ಬಾಯಿಗೆ ನೀರು ಬಿದ್ದ ಪರಿಣಾಮದಿಂದ ಡ್ರೋನ್ ಮತ್ತು ಸಂಗೀತಾ ಉಸಿರಾಟದ ತೊಂದರೆಯಿಂದ ಒದ್ದಾಡಿದ್ದಾರೆ, ಇಬ್ಬರ ಚರ್ಮಕ್ಕೂ ಘಾಸಿಯಾಗಿದೆ ಎಂಬ ಮಾಹಿತಿ ಇದೆ. ಅವರೀಗ ಆರ್‌ಆರ್‌ನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಅವರಿಗೆ ರಾಕ್ಷಸರಾಗಿರುವ ವಿನಯ್ ಗೌಡ, ವರ್ತೂರು ಸಂತೋಷ್ ಅವರು ಡಿಟರ್ಜೆಂಟ್ ಇರುವ ನೀರಿನಿಂದ ಮುಖಕ್ಕೆ ಹೊಡೆದಿದ್ದಾರೆ. ಇದರಿಂದ ಇಬ್ಬರಿಗೂ ಉಸಿರಾಟದ ಸಮಸ್ಯೆ ಆಗಿದೆ ಎನ್ನಲಾಗಿದೆ. ಸಂಗೀತಾ ಕಂಡರೆ ವಿನಯ್‌ಗೆ ಆಗೋದಿಲ್ಲ. ಹಾಗಾಗಿ ಅವರು ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ. ಡಿಟರ್ಜೆಂಟ್ ಮಿಕ್ಸ್ ಮಾಡಿರುವ ನೀರು ಹಾಕಿದಕೂಡಲೇ ಸಂಗೀತಾ ಅವರು ನೋವಿನಿಂದ ನರಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ನೋಡಿದ ವೀಕ್ಷಕರು ವಿನಯ್ ತಂಡದವರು ಇಷ್ಟೊಂದು ಕ್ರೂರಿಯೇ ಎಂದು ಪ್ರಶ್ನೆ ಕೇಳುತ್ತಿದ್ದಾರೆ.

ಮತ್ತೊಂದು ಮಾಹಿತಿ ಪ್ರಕಾರ ಟಾಯ್ಲೆಟ್‌ಗೆ ಬಳಸುವ ಡಿಟರ್ಜೆಂಟ್ ಮಿಕ್ಸ್ ಮಾಡಿ ಇವರಿಬ್ಬರಿಗೆ ಎರಚಲಾಗಿದೆ. ವಿನಯ್ ಮತ್ತು ನಮ್ರತಾ ಇಬ್ಬರೂ ದ್ವೇಷದಿಂದ ಇವರಿಬ್ಬರ ಮೇಲೆ ಕೆಮಿಕಲ್ ಮಿಶ್ರಿತ ನೀರು ಎರಚಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ವಾಹಿನಿಕಡೆಯಿಂದ ಯಾವ ಹೇಳಿಕೆಯೂ ಬಂದಿಲ್ಲ. ಒಟ್ಟಾರೆ ಕೆಮಿಕಲ್ ನೀರಿನ ಪರಿಣಾಮದಿಂದಾಗಿ ಸದ್ಯಕ್ಕೆ ಡ್ರೋನ್ ಮತ್ತು ಸಂಗೀತಾರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಗೀತಾ ಅವರ  ಮೂಗು, ಬಾಯಿಗೆ ನೀರು ಬಿದ್ದಿದೆ ಎನ್ನಲಾಗುತ್ತಿದೆ. ಈ ಹಿಂದೆ ತನಿಷಾರನ್ನು ಹೀಗೆಯೇ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಆನಂತರ ಬಿಗ್ ಬಾಸ್ ಮನೆಗೆ ಕರೆತರಲಾಗಿತ್ತು. ಇದಕ್ಕೂ ಮೊದಲು ತುಕಾಲಿ ಸಂತೋಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದಿದ್ರು. ಈ ಇಬ್ಬರನ್ನೂ ಹಾಗೆಯೇ ಮಾಡುವ ಸಾಧ್ಯತೆ ಇದೆ.

ಕಳೆದ ಕೆಲವು ದಿನಗಳಿಂದ ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ ಭರಾಟೆ ಬಲು ಜೋರಾಗಿಯೇ ನಡೆಯುತ್ತಿದೆ. ಈ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಜಗಳ, ಕಿತ್ತಾಟ, ಮಾರಾಮಾರಿಗಳು ನಡೆದಿವೆ. ಈ ಮೂಲಕವೇ ಬಿಗ್ಬಾಸ್ ಟಿಆರ್ಪಿ ರೇಟ್ ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಆದರೆ, ಬಿಗ್ಬಾಸ್ ಶೋನಲ್ಲಿ ಬರುವ ಕಿತ್ತಾಟ, ಸೇಡು, ಜಗಳವನ್ನು ಫ್ಯಾಮಿಲಿ ಸಮೇತ ನೋಡಲು ಸಾಧ್ಯವಾಗುತ್ತಿಲ್ಲ ಎಂಬುದು ಕೆಲ ವೀಕ್ಷಕರ ಅಭಿಪ್ರಾಯ. ಟಾಸ್ಕ್ ಹೆಸರಲ್ಲಿ ಸೇಡು ತೀರಿಸಿಕೊಳ್ಳುವ ಈ ಕಾರ್ಯಕ್ರಮದಿಂದ ಯಾರಿಗೆ ಏನು ಸಂದೇಶ ಸಿಗುತ್ತಿದೆ ಎಂಬ ಪ್ರಶ್ನೆಯೂ ಎದುರಾಗಿದೆ. ಅಷ್ಟೇ ಅಲ್ಲದೆ, ಕಾರ್ತಿಕ್‌ಗೆ ಗೋದಿಹಿಟ್ಟಿನಿಂದ ವಿನಯ್ ಜೋರಾಗಿ ಹೊಡೆದಿರುವುದು, ವಿನಯ್ ಟಾರ್ಚರ್ ಸಹಿಸಲಾಗದೇ ಕಾರ್ತಿಕ್ ಚಪ್ಪಲಿಯನ್ನು ಕೆಳಕ್ಕೆ ಜೋರಾಗಿ ಎಸೆದಿರುವುದು, ಆ ಚಪ್ಪಲಿ ಬೌನ್ಸ್ ಆಗಿ ವಿನಯ್‌ಗೆ ಬಿದ್ದಿರುವುದು, ನಂತರ ವಿನಯ್ ತೀರಾ ಅಸಹ್ಯವಾಗಿ ಕೂಗಾಡಿರುವುದು, ಕೆಟ್ಟಪದಗಳನ್ನು ಬಳಕೆ ಮಾಡಿರುವುದು ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಜನ ಸೋಶಿಯಲ್ ಮೀಡಿಯಾದಲ್ಲಿ ಇಂಥಾ ವರ್ತನೆಗಳಿಗೆ ಕಡಿವಾಣ ಹಾಕಿ ಎಂದು ಕೇಳುತ್ತಿದ್ದಾರೆ. ಅದರಲ್ಲೂ ವಿನಯ್ ಗೌಡಗೆ ಸೋಶಿಯಲ್ ಮೀಡಿಯಾದಲ್ಲಿ ಸರಿಯಾಗಿಯೇ ಜನ ಕ್ಲಾಸ್ ತೆಗೆದುಕೊಳ್ತಿದ್ದಾರೆ.

ಇನ್ನು ನಮ್ರತಾ ಗೌಡ ಬಾಯಿಗೆ ಬೀಗ ಹಾಕಿ ಅಂತಾನೂ ಜನ ಹೇಳುತ್ತಿದ್ದಾರೆ. ನಮ್ರತಾ ಬಾಯಲ್ಲಿ ಬರುವ ಏಕವಚನ, ನಮ್ರತಾ ದುರಂಹಕಾರದ ವರ್ತನೆಗೂ ಬ್ರೇಕ್ ಹಾಕಿ ಎಂದು ವೀಕ್ಷಕರು ಸೋಶಿಯಲ್ ಮೀಡಿಯಾ ಮೂಲಕ ಕೇಳಿಕೊಳ್ಳುತ್ತಿದ್ದಾರೆ. ಆಟ ಏನೇ ಇರಲಿ, ವಿನಯ್ ಮತ್ತು ನಮ್ರತಾ ಸೇಡಿಗೆ ಸಂಗೀತಾ ಮತ್ತು ಡ್ರೋನ್ ಪ್ರತಾಪ್ ಆಸ್ಪತ್ರೆ ಸೇರಿದ್ದಾರೆ.

Sulekha