ವಿನಯ್, ನಮ್ರತಾ ಹಾಕಿದ ಗೆರೆ ದಾಟುವುದಿಲ್ಲ ಸ್ನೇಹಿತ್..!- ಕ್ಯಾಪ್ಟನ್ ಆಗಿ ಸ್ನೇಹಿತ್ಗೌಡ ತಾರತಮ್ಯ
ಬಿಗ್ಬಾಸ್ ನಲ್ಲಿ ಸ್ಪರ್ಧಿಗಳ ನಡುವೆ ಎರಡು ಗುಂಪು ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಕಾರ್ತಿಕ್ ಮತ್ತು ವಿನಯ್ಗೌಡ ಇಬ್ಬರದ್ದು ಬೇರೆ ಬೇರೆ ತಂಡಗಳ ನೇತೃತ್ವ. ಆದರೆ, ಕಾರ್ತಿಕ್ ಗುಂಪಿನಲ್ಲಿ ಒಗ್ಗಟ್ಟು, ವಿಧೇಯತೆ ಇದೆಯೋ ಇಲ್ಲವೋ. ಆದರೆ, ವಿನಯ್ಗೌಡ ಗುಂಪಿನಲ್ಲಿ ಲೀಡರ್ಗೆ ಸದಸ್ಯರು ಸಿಕ್ಕಾಪಟ್ಟೆ ವಿಧೇಯತೆ ತೋರಿಸುತ್ತಾರೆ. ಅದಕ್ಕೆ ಸಾಕ್ಷಿ ಈ ವಾರ ಕ್ಯಾಪ್ಟನ್ ಆಗಿ ಡಬಲ್ ಅಧಿಕಾರ ಪಡೆದಿರುವ ಸ್ನೇಹಿತ್. ಒಂದೆಡೆ ವಿನಯ್ಗೆ ವಿಧೇಯತೆ, ಮತ್ತೊಂದೆಡೆ ನಮ್ರತಾ ತಾಳಕ್ಕೆ ತಕ್ಕಂತೆ ಕುಣಿಯುವ ಸ್ನೇಹಿತ್ ಆಟದ ವೈಖರಿ ವೀಕ್ಷಕರಿಗೆ ಬೇಸರ ತಂದಿದೆ.
ಇದನ್ನೂ ಓದಿ: ತನಿಷಾ ಮತ್ತು ವರ್ತೂರು ಸಂತೋಷ್ ಮಧ್ಯೆ ಬೆಂಕಿ ಇಟ್ಟ ಬಿಗ್ಬಾಸ್..! – ಆಪ್ತರ ಮಧ್ಯೆ ಬಿರುಕು
ಸ್ನೇಹಿತ್ ಗೌಡ ಬಿಗ್ ಬಾಸ್ ಮನೆಯಲ್ಲಿ ಸದಾ ವಿನಯ್ ಪರವಾಗಿ ಇರುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ವಾರ ಕ್ಯಾಪ್ಟನ್ ಆದ ಸ್ನೇಹಿತ್ಗೆ ಒಂದು ಗೋಲ್ಡನ್ ಅವಕಾಶ ಸಿಕ್ಕಿತ್ತು. ಆದರೆ, ಇದನ್ನು ಸ್ವತಃ ಸ್ನೇಹಿತ್ ಗೌಡ ಕೈಚೆಲ್ಲಿದ್ದಾರೆ. ಮೊದಲು ನಾಮಿನೇಷನ್ ಪ್ರಕ್ರಿಯೆ. ಈ ಅಧಿಕಾರದ ಪ್ರಕಾರ ಈ ವಾರ ನಾಮಿನೇಷನ್ ಮಾಡುವ ಸಂಪೂರ್ಣ ಅಧಿಕಾರ ಸ್ನೇಹಿತ್ಗೆ ಇತ್ತು. ಹೀಗಾಗಿ ಅವರು ತಮ್ಮ ತಂಡದವರನ್ನು ಸೇವ್ ಮಾಡಿದ್ದಾರೆ. ವಿನಯ್, ನಮ್ರತಾ ನಾಮಿನೇಷನ್ನಿಂದ ಬಚಾವ್ ಆಗಿದ್ದಾರೆ. ಈ ವಾರ ತಂಡ ಮಾಡುವ ಆಯ್ಕೆಯನ್ನು ಬಿಗ್ ಬಾಸ್ ಸ್ನೇಹಿತ್ಗೆ ನೀಡಿದ್ದರು. ಈ ವೇಳೆ ತಂಡ ಸಮಬಲ ಆಗಿರುವಂತೆ ನೋಡಿಕೊಳ್ಳಬೇಕು ಎಂದು ಬಿಗ್ ಬಾಸ್ ಆದೇಶ ನೀಡಿದ್ದರು. ಹಾಗಿದ್ದರೂ ಕೂಡಾ ಸ್ನೇಹಿತ್, ವಿನಯ್, ನಮ್ರತಾ ಹಾಗೂ ಮೈಕಲ್ ಒಂದೇ ತಂಡ ಸೇರುವಂತೆ ಮಾಡಿದರು. ಇದು ಇಂಬ್ಯಾಲೆನ್ಸ್ ಆಗುತ್ತದೆ ಎಂದು ಸಂಗೀತಾ ಹೇಳಿದರೂ ಆ ಮಾತನ್ನು ಸ್ನೇಹಿತ್ ಕೇಳಲೇ ಇಲ್ಲ. ‘ನನಗೆ ಅಧಿಕಾರ ಇದೆ’ ಎಂದು ಬಾಯಿ ಮುಚ್ಚಿಸಿದರು. ಗೇಮ್ ಆಡುವ ಸಂದರ್ಭದಲ್ಲೂ ಸಂಗೀತಾ ವಿರುದ್ಧವೇ ಅವರು ಆದೇಶ ನೀಡುತ್ತಿದ್ದರು. ಇದು ಸಂಗೀತಾಗೆ ಬೇಸರ ಮೂಡಿಸಿದೆ. ‘ನೀವು ಪಕ್ಷಪಾತ್ರ ಮಾಡುತ್ತಿದ್ದೀರಿ’ ಎಂದು ಹೇಳುತ್ತಲೇ ಇದ್ದಾರೆ ಸಂಗೀತಾ. ‘ನೀನು ಯಾರಿಗೆ ಚೇಲಾ ಅನ್ನೋದು ಗೊತ್ತಿದೆ. ಹಿಂದಿನ ವಾರ ಯಾರು ಹೋಗಬೇಕಿತ್ತು ಅನ್ನೋದು ಗೊತ್ತಿದೆ’ ಎಂದಿದ್ದಾರೆ ಸಂಗೀತಾ. ಇನ್ನು ತನಿಷಾ ಕೂಡಾ ಸ್ನೇಹಿತ್ ವಿರುದ್ಧ ತಿರುಗಿಬಿದ್ದಿದ್ದಾರೆ. ನಮ್ರತಾ ಹೇಳಿದ್ದನ್ನು ಕೇಳಿ ನೀವು ತೀರ್ಪು ಕೊಡುತ್ತಿದ್ದೀರಾ ಎಂದು ತನಿಷಾ ಕೂಡಾ ಹೇಳಿದ್ದಾರೆ. ಇದ್ಯಾವುದಕ್ಕೂ ಸ್ನೇಹಿತ್ ಮಾತ್ರ ಕ್ಯಾರೇ ಎನ್ನುತ್ತಿಲ್ಲ. ವಿನಯ್ ಮತ್ತು ನಮ್ರತಾ ಕಡೆಯೇ ವಾಲುತ್ತಿದ್ದಾರೆ.
ಈ ಮೊದಲು ಅನೇಕ ಬಾರಿ ಸ್ನೇಹಿತ್ ಗೌಡ ಅವರಿಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಆದಾಗ್ಯೂ ಅವರು ಬದಲಾಗಿಲ್ಲ. ಈ ವಾರ ಸ್ನೇಹಿತ್ಗೆ ಕಿಚ್ಚ ಹೇಗೆ ಕ್ಲಾಸ್ ತೆಗೆದುಕೊಳ್ತಾರೆ ಅನ್ನೋದನ್ನು ನೋಡಲು ವೀಕ್ಷಕರು ಕೂಡಾ ಕಾಯುತ್ತಿದ್ದಾರೆ.