ಬೈಕ್ ಸವಾರನ ಜೀವಕ್ಕೆ ಬೆಲೆಯೇ ಇಲ್ಲದಂತೆ ವರ್ತಿಸಿದ ಭವಾನಿ ವಿರುದ್ಧ ಜನಾಕ್ರೋಶ – ದೊಡ್ಡಗೌಡರ ಸೊಸೆಗಿತ್ತು ಕಾನೂನಿನ ದಾರಿ
ಮೈಸೂರು ಜಿಲ್ಲೆ ಸಾಲಿಗ್ರಾಮದ ಸಮೀಪ ಡಿಸೆಂಬರ್ 3 ರಂದು ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಭವಾನಿ ಪ್ರಯಾಣಿಸುತ್ತಿದ್ದ KA-03-NK-5 ನಂಬರಿನ ಕಾರಿಗೆ ವಿರುದ್ಧ ದಿಕ್ಕಿನಿಂದ ಬಂದ ಬೈಕ್ ಡಿಕ್ಕಿಯಾಗಿದೆ. ನಿಯಮದಂತೆ ಲೆಫ್ಟ್ ಸೈಡಿನಲ್ಲಿ ಬರುತ್ತಿದ್ದ ಕಾರಿಗೆ ತಪ್ಪಾದ ಮಾರ್ಗದಲ್ಲಿ ಬಂದು ಸವಾರ ಡಿಕ್ಕಿ ಹೊಡೆದಿದ್ದಾನೆ. ಬೈಕ್ ಗುದ್ದಿದ ಪರಿಣಾಮ ಕಾರಿನ ಮುಂಭಾಗಕ್ಕೆ ಸ್ವಲ್ಪ ಮಟ್ಟಿಗೆ ಹಾನಿಯಾಗಿದ್ದು, ಸ್ಕ್ರಾಚ್ ಆಗಿದೆ. ಅಪಘಾತದ ಬಳಿಕ ರಸ್ತೆಯಲ್ಲಿ ಹೋಗ್ತಿದ್ದ ಇತರೆ ಸವಾರರು, ಸ್ಥಳೀಯರೆಲ್ಲಾ ಜಮಾಯಿಸುತ್ತಿದ್ದಂತೆ ಭವಾನಿಯವ್ರ ಸಿಟ್ಟು ಮತ್ತಷ್ಟು ನೆತ್ತಿಗೇರಿತ್ತು. ಪಾಪ ಬೈಕ್ ಸವಾರ ತನ್ನ ಗಾಡಿಯನ್ನ ಸೈಡ್ಗೆ ಹಾಕೋಕೆ ಹೊರಟಿದ್ದ ಅಷ್ಟೇ.. ಅಷ್ಟ್ರಲ್ಲಿ ಭವಾನಿ ಅವ್ರ ಸಿಟ್ಟು ಎಲ್ಲೆ ಮೀರಿತ್ತು. ಮಹಾಕಾಳಿ ಅವತಾರ ತಾಳಿದ್ದ ಭವಾನಿ ಅಕ್ಕಂಗೆ ಯಾರಾದ್ರೂ ಸ್ಥಳೀಯರು ಬಾಯಿ ಕೊಡೋಕೆ ಆಗುತ್ತಾ ಹೇಳಿ. ಆಗ ಸ್ಥಳೀಯರೊಬ್ಬರು ಪುಣ್ಯಕ್ಕೆ ಯಾರಿಗೆ ಏನೂ ಆಗಿಲ್ಲ. ಕಾರು ಕಂಟ್ರೋಲ್ ಮಾಡಿದ್ರು ಇಲ್ಲದಿದ್ರೆ ನೀವೇ ಹೋಗಿ ಬಿಡ್ತಿದ್ದೆ ಎಂದು ಬೈಕ್ ಸವಾರನಿಗೆ ಹೇಳಿದ್ದಾರೆ. ಇಷ್ಟಾದ್ರೂ ಭವಾನಿ ಬಾಯಲ್ಲಿ ಮಾತ್ರ ಬೈಕ್ ಸವಾರನಿಗೆ ಏನೂ ಆಗ್ಲಿಲ್ವಲ್ಲ ಅನ್ನೋ ಒಂದೇ ಒಂದು ಮಾತೂ ಬರ್ತಿಲ್ಲ. ಬೇಕಿದ್ರೆ ಅವ್ನು ಸಾಯ್ಲಿ, ಇದು ಒಂದೂವರೆ ಕೋಟಿ ರೂಪಾಯಿ ಕಾರು ಅಂತಾನೇ ಬಡಬಡಾಯಿಸ್ತಿದ್ರು.
ಇದನ್ನೂ ಓದಿ : ತಿಮ್ಮರಾಜಪ್ಪ ಒಡೆತನದ ಬಂಗಲೆ ನೋಡಿ ಅಧಿಕಾರಿಗಳೇ ಶಾಕ್! – ಸಿಕ್ಕಿಬಿದ್ದ ಮೇಲೆ ಬೆಸ್ಕಾಂ ಇಇಗೆ ಬಿಪಿ ಹೆಚ್ಚಾಯ್ತಾ?
ಕಾರಿಗೆ ಬೈಕ್ ಡಿಕ್ಕಿಯಾದಾಗ ಕಾನೂನಿನ ಪ್ರಕಾರ ಕೇಸ್ ದಾಖಲಿಸಬಹುದಿತ್ತು. ಕಾರಿಗೆ ಡ್ಯಾಮೇಜ್ ಆಗಿದ್ದಕ್ಕೆ ಇನ್ಶೂರೆನ್ಸ್ ಕ್ಲೇಮ್ ಮಾಡಿಸಿಕೊಳ್ಳಬಹುದಿತ್ತು. ಕಂಪ್ಲೇಟ್ ನೀಡಿದ FIR ಪ್ರತಿ ಅಥವಾ ಇಲ್ಲದಿದ್ರೂ ಇನ್ಶೂರೆನ್ಸ್ ಕ್ಲೇಮ್ ಮಾಡಬಹುದಿತ್ತು. ಕಾರಿನ ವಿಮೆ ಪಡೆದು ಅದರಿಂದ ಕಾರಿನ ಡ್ಯಾಮೇಜ್ ರಿಪೇರಿ ಮಾಡಿಸಬಹುದಿತ್ತು. ಅದ್ರಲ್ಲೂ ಇದು ಸಣ್ಣ ಅಪಘಾತ, ಸಣ್ಣ ಹಾನಿಯಾಗಿದ್ದ ಪರಿಣಾ, ಎಫ್ ಐಆರ್ ಕೂಡ ಅಗತ್ಯವಿರಲಿಲ್ಲ . ಹಾನಿ ಮತ್ತು ಅಪಘಾತದ ಸ್ಥಳದ ಫೋಟೋಗಳನ್ನ ತೆಗೆದುಕೊಂಡು ವಿಮಾ ಕಂಪನಿಗೆ ಹಾನಿ ಬಗ್ಗೆ ಅಗತ್ಯ ದಾಖಲೆಗಳನ್ನ ನೀಡಿದ್ರೆ ಇನ್ಶೂರೆನ್ಸ್ ಕ್ಲೇಮ್ ಆಗುತ್ತಿತ್ತು. ಒಂದು ವೇಳೆ ಭವಾನಿಯವ್ರ ಕಾರು ಚಾಲಕನೇ ಕಾರನ್ನು ಗ್ಯಾರೇಜ್ ಗೆ ಕೊಂಡೊಯ್ದು ರಿಪೇರಿ ಮಾಡಿಸಬಹುದಿತ್ತು. ಅಥವಾ ನಿಮ್ಮ ವಿಮಾ ಕಂಪನಿಯವರೇ ಸ್ಥಳಕ್ಕೆ ಬಂದು ರಿಪೇರಿ ಮಾಡುತ್ತಿದ್ರು. ಇಷ್ಟೆಲ್ಲಾ ಆಯ್ಕೆಗಳಿದ್ರೂ ಭವಾನಿ ರೇವಣ್ಣ ರಂಪ ರಾಮಾಯಣ ಮಾಡಿದ್ದಾರೆ. ಬೈಕ್ ಸವಾರನ ಜೀವಕ್ಕೆ ಬೆಲೆಯೇ ಇಲ್ಲದಂತೆ ವರ್ತಿಸಿದ್ದಾರೆ. ಇದು ಜನಾಕ್ರೋಶಕ್ಕೆ ಕಾರಣವಾಗಿದೆ.