ಶೀಘ್ರದಲ್ಲಿಯೇ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ದಂಪತಿ ವಿಚ್ಛೇದನ?

ಶೀಘ್ರದಲ್ಲಿಯೇ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ದಂಪತಿ ವಿಚ್ಛೇದನ?

ಬಾಲಿವುಡ್ ಸ್ಟಾರ್ ದಂಪತಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವೆ ಏನೂ ಸರಿಯಿಲ್ಲವೇ?, ಇಬ್ಬರ ನಡುವೆ ಪರಸ್ಪರ ವೈಮನಸ್ಸು ಮೂಡಿದೆಯೇ?, ಇಬ್ಬರೂ ದೂರ ದೂರ ಆಗಿದ್ದಾರೆಯೇ? ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವಾಗಲೇ ಈಗ ವಿಚ್ಛೇದನದ ಬಗ್ಗೆ ಮಾತು ಕೇಳಿಬರುತ್ತಿದೆ. ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ದಂಪತಿ ಶೀಘ್ರದಲ್ಲಿಯೇ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎಂಬ ಬಗ್ಗೆ ಸುದ್ದಿಯಾಗುತ್ತಿದೆ.

ಇದನ್ನೂ ಓದಿ: ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ತೂಕ ಹೆಚ್ಚಳಕ್ಕೆ ಫ್ಯಾನ್ಸ್ ಬೇಸರ – ಟ್ರೋಲ್‌ನಲ್ಲಿ ನಟಿಯನ್ನು ರೆಡಿ ಮಾಡಿದವರಿಗೂ ಬೈಗುಳ..!

ಬಾಲಿವುಡ್ ನ ಸೆಲೆಬ್ರಿಟಿ ದಂಪತಿ ಅಭಿಷೇಕ್ ಬಚ್ಚನ್ ಮತ್ತು ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಸಂಬಂಧ ಹದಗೆಟ್ಟಿದೆ. ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ಚರ್ಚೆ ಜೋರಾಗಿದೆ. ಕಳೆದ ಕೆಲವು ದಿನಗಳಿಂದ ಅಭಿಷೇಕ್-ಐಶ್ವರ್ಯಾ ವಿಚ್ಛೇದನದ ಕುರಿತು ಚರ್ಚೆಯಾಗುತ್ತಿದೆ. ಐಶ್ವರ್ಯಾ ಮತ್ತು ಅಭಿಷೇಕ್ ಕಳೆದ ಹಲವು ದಿನಗಳಿಂದ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ಐಶ್ವರ್ಯಾ ರೈ ಹುಟ್ಟುಹಬ್ಬವಿತ್ತು. ಆಗ ಐಶ್ವರ್ಯಾ ಜೊತೆಗಿದ್ದಿದ್ದು ಅವರ ತಾಯಿ ಮತ್ತು ಮಗಳು ಮಾತ್ರ. ಅವರ ಬರ್ತ್‌ಡೇ ದಿನ ಅಭಿಷೇಕ್ ಕೇವಲ ಒಂದು ಫೋಟೋ ಹಾಕಿ ವಿಶ್ ಮಾಡಿದ್ದರು. ಅದು ಕೂಡಾ ಹ್ಯಾಪಿ ಬರ್ತ್‌ಡೇ ಎಂದಷ್ಟೇ ಬರೆದಿದ್ದರು. ಇಬ್ಬರ ನಡುವೆ ಯಾವುದೂ ಸರಿಯಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಈ ನಡುವೆ ಐಶ್ ಮಾತನಾಡಿರುವ ಹಳೆಯ ಸಂದರ್ಶನವೊಂದು ವೈರಲ್ ಆಗಿದೆ. 2010ರಲ್ಲಿ ನಡೆದ ಸಂದರ್ಶನವೊಂದರಲ್ಲಿ ಐಶ್ವರ್ಯಾ ಅವರು ‘ಅಭಿಷೇಕ್ ಮತ್ತು ನಾನು ಪ್ರತಿದಿನ ಜಗಳವಾಡುತ್ತೇವೆ…’ ಎಂದು ಹೇಳಿದ್ದರು. ‘ನಮ್ಮ ನಡುವೆ ಭಿನ್ನಾಭಿಪ್ರಾಯವಿದೆ. ಈ ಭಿನ್ನಾಭಿಪ್ರಾಯ ಬೇಗ ಇತ್ಯರ್ಥವಾಗುತ್ತವೆ. ನಮ್ಮ ಸಂಬಂಧದಲ್ಲಿ ಏರಿಳಿತ ಇದೆ. ಅವರಿಲ್ಲದಿದ್ದರೆ ಜೀವನವು ಸಂಪೂರ್ಣವಾಗಿ ನೀರಸವಾಗಿರುತ್ತದೆ. ನಾವು ನಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇವೆ’ ಎಂದು ಹೇಳಿದ್ದರು. ಈಗ ಅಭಿಷೇಕ್ ಹಾಗೂ ಐಶ್ವರ್ಯಾ ಮಧ್ಯೆ ಮೂಡಿರುವ ಭಿನ್ನಾಭಿಪ್ರಾಯ ವಿಚ್ಛೇದನದವರೆಗೆ ಬಂದಿದೆ ಎನ್ನಲಾಗುತ್ತಿದೆ.

ಸ್ವಘೋಷಿತ ಚಿತ್ರ ವಿಶ್ಲೇಷಕ ಉಮೈರ್ ಸಂಧು ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಐಶ್ವರ್ಯಾ-ಅಭಿಷೇಕ್ ವಿಚ್ಛೇದನದ ಬಗ್ಗೆ ಬರೆದುಕೊಂಡಿದ್ದರು. ‘ಅಭಿಷೇಕ್-ಐಶ್ವರ್ಯಾ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ’ ಎಂದು ಉಮೈರ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇವರು ಪೋಸ್ಟ್ ಮಾಡುವ ಬಹುತೇಕ ಎಲ್ಲಾ ಟ್ವೀಟ್‌ಗಳು ಫೇಕ್ ಆಗಿರುತ್ತವೆ. ಹೀಗಾಗಿ, ಇವರ ಟ್ವೀಟ್‌ನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಅದೇನೇ ಇರಲಿ, ಬಚ್ಚನ್ ಫ್ಯಾಮಿಲಿ ಎಂದರೆ ಬಾಲಿವುಡ್‌ಗೆ ಹೆಮ್ಮೆ. ಐಶ್ವರ್ಯಾ ರೈ ಕೂಡಾ ಬಾಲಿವುಡ್‌ನ ಹೆಮ್ಮೆ. ಇವರಿಬ್ಬರ ಸಂಸಾರ ಚೆನ್ನಾಗಿರಲಿ, ಈಗ ಚರ್ಚೆಯಾಗುತ್ತಿರುವ ವಿಚಾರ ಇವರ ಸಂಸಾರದಲ್ಲಿ ಬಿರುಕು ಮೂಡಿಸದೇ ಇರಲಿ ಅನ್ನೋದೇ ಅಭಿಮಾನಿಗಳ ಆಶಯ.

Sulekha