ತಿಮ್ಮರಾಜಪ್ಪ ಒಡೆತನದ ಬಂಗಲೆ ನೋಡಿ ಅಧಿಕಾರಿಗಳೇ ಶಾಕ್! – ಸಿಕ್ಕಿಬಿದ್ದ ಮೇಲೆ ಬೆಸ್ಕಾಂ ಇಇಗೆ ಬಿಪಿ ಹೆಚ್ಚಾಯ್ತಾ?

ತಿಮ್ಮರಾಜಪ್ಪ ಒಡೆತನದ ಬಂಗಲೆ ನೋಡಿ ಅಧಿಕಾರಿಗಳೇ ಶಾಕ್! – ಸಿಕ್ಕಿಬಿದ್ದ ಮೇಲೆ ಬೆಸ್ಕಾಂ ಇಇಗೆ ಬಿಪಿ ಹೆಚ್ಚಾಯ್ತಾ?

ಮಂಗಳವಾರ ಬೆಳ್ಳಂಬೆಳ್ಳಗೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಶಾಕ್‌ ನೀಡಿದ್ದಾರೆ. ಕರ್ನಾಟಕದ ಹಲವಡೆ ಏಕಾಕಾಲಕ್ಕೆ ದಾಳಿ ಮಾಡಿದ್ದು, ಹಲವು ಇಲಾಖೆ ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಕಾರ್ಯಾಚರಣೆಗೆ ನಡೆಸುತ್ತಿದ್ದಾರೆ.

ತಿಮ್ಮರಾಜಪ್ಪ ಒಡೆತನದ ಬಂಗಲೆ ನೋಡಿ ಅಧಿಕಾರಿಗಳೇ ಶಾಕ್!

ಕ್ರೆಡಲ್ (ಕೆಆರ್ ಐಡಿಎಲ್) ಸೂಪರಿಂಟೆಂಡೆಂಟ್ ಎಂಜಿನಿಯರ್ ತಿಮ್ಮರಾಜಪ್ಪ ಅವರಿಗೆ ಸೇರಿದ ಕೋಲಾರ, ಬೆಂಗಳೂರು, ಬೆಳಗಾವಿ ಸೇರಿ 8 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕು ಮಾಹದೇವಪುರ ಹುಟ್ಟೂರಿನ ಮನೆ ಮೇಲೆ ದಾಳಿ ನಡೆಸಿದಾಗ ಬಂಗಲೆ ನೋಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ಬೆಂಗಳೂರು ನಗರದಲ್ಲೇ ತಿಮ್ಮರಾಜಪ್ಪಗೆ ಸೇರಿದ 7 ಕಡೆ ದಾಳಿ ಮಡಿದ್ದು, ಬೆಂಗಳೂರು ನಗರದಲ್ಲಿ 7 ಐಷಾರಾಮಿ ಬಂಗಲೆಗಳು 3 ಪ್ಲಾಟ್ ಗಳು ಪತ್ತೆಯಾಗಿವೆ. ಕೋಟ್ಯಂತರ ರೂಪಾಯಿ ಮೌಲ್ಯದ ಮನೆ, ಆಸ್ತಿ, ಜಮೀನು ದಾಖಲೆಗಳು ಸಿಕ್ಕಿವೆ. ತಿಮ್ಮರಾಜಪ್ಪ ಅವರು ಪ್ರಸ್ತುತ ಬೆಳಗಾವಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೋಲಾರ ಲೋಕಾಯುಕ್ತ ಎಸ್‍ಪಿ ಉಮೇಶ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.‌

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ – ಸುಖ ನಿದ್ರೆಯಲ್ಲಿದ್ದ ಸರ್ಕಾರಿ ಅಧಿಕಾರಿಗಳಿಗೆ ಶಾಕ್‌!

ಬೆಸ್ಕಾಂ ಉಪವಿಭಾಗದ ಇಇ ಚನ್ನಕೇಶವಗೆ ಹೈಬಿಪಿ!

ಇನ್ನು ಬೆಂಗಳೂರಿನ ಜಯನಗರ ಬೆಸ್ಕಾಂ ಉಪವಿಭಾಗದ ಇಇ ಚನ್ನಕೇಶವ ಅವರ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸುತ್ತಿರುವಂತೆ ಇಇ ಚನ್ನಕೇಶವ ಆಘಾತಕ್ಕೊಳಗಾಗಿದ್ದಾರೆ. ಅವರ ಬಿಪಿಯಲ್ಲಿ ಏರುಪೇರಾಗಿದೆ. ಲೋಕಾಯುಕ್ತ ಅಧಿಕಾರಿಗಳನ್ನು ಕಂಡು ನಿದ್ದೆಗಣ್ಣಲ್ಲಿದ್ದ ಚನ್ನಕೇಶವ ಅವರಿಗೆ ಹೈಬಿಪಿಯಾಗಿದೆ. ಕೂಡಲೇ ಅವರ ಪತ್ನಿ ಹಾಗೂ ಅಧಿಕಾರಿಗಳು ಮಾತ್ರೆ ನೀಡದ ಬಳಿಕ ಚನ್ನಕೇಶವ ಅವರು ಸುಧಾರಿಸಿಕೊಂಡಿದ್ದಾರೆ.

ಅಮೃತಹಳ್ಳಿಯ ಖಾಸಗಿ ಅಪಾರ್ಟ್ಮೆಂಟ್ ನ ಚನ್ನಕೇಶವ ಅವರ ನಿವಾಸದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ನಿವಾಸದಲ್ಲಿ ಪರಿಶೀಲನೆ ವೇಳೆ 6 ಲಕ್ಷ ನಗದು, ಅಂದಾಜು 3 ಕೆಜಿ ಚಿನ್ನ, 28ಕೆಜಿ ಬೆಳ್ಳಿ, 25 ಲಕ್ಷ ರೂ. ಮೌಲ್ಯದ ಡೈಮಂಡ್ ಸೇರಿದಂತೆ ಒಟ್ಟು 1.5 ಕೋಟಿ.ರೂಪಾಯಿ ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿವೆ. ಇದೀಗ ಚನ್ನಕೇಶವ ಅವರ ಆರೋಗ್ಯ ಸುಧಾರಿಸಿದ್ದು, ದಾಖಲೆ ಪರಿಶೀಲನೆಗೆ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎಂದು ವರದಿಯಾಗಿದೆ.

Shwetha M