8 ಬಾರಿ ದಸರಾ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ ಅರ್ಜುನ ಇನ್ನಿಲ್ಲ – ತಾಯಿ ಚಾಮುಂಡೇಶ್ವರಿಯ ಪ್ರೀತಿಯ ಗಜರಾಜ ಇನ್ನು ನೆನಪು ಮಾತ್ರ

8 ಬಾರಿ ದಸರಾ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ ಅರ್ಜುನ ಇನ್ನಿಲ್ಲ – ತಾಯಿ ಚಾಮುಂಡೇಶ್ವರಿಯ ಪ್ರೀತಿಯ ಗಜರಾಜ ಇನ್ನು ನೆನಪು ಮಾತ್ರ

ಕ್ಯಾಪ್ಟನ್ ಅರ್ಜುನ.. 8 ಬಾರಿ ದಸರಾ ಅಂಬಾರಿ ಹೊತ್ತಿದ್ದ ಗಜರಾಜ. ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಸದಾ ಅರ್ಜುನನ ಮೇಲಿತ್ತು. ಕಾಡಾನೆಗಳ ಸೆರೆಗೂ ನಾಯಕತ್ವ ಇವನದೇ ಆಗಿತ್ತು. ವಿಪರ್ಯಾಸವೆಂದರೆ, ಕರ್ತವ್ಯದಲ್ಲಿದ್ದಾಗಲೇ ಅರ್ಜುನ ದುರಂತ ಅಂತ್ಯ ಕಂಡಿದ್ದಾನೆ. ತಾಯಿ ಚಾಮುಂಡೇಶ್ವರಿಯ ಪ್ರೀತಿಯ ಪುತ್ರ ಅರ್ಜುನ ಬಾರದ ಲೋಕಕ್ಕೆ ತೆರಳಿದ್ದಾನೆ.

ಇದನ್ನೂ ಓದಿ: ಪೊಲೀಸರ ಬಿಗಿ ಭದ್ರತೆಯಲ್ಲಿ ದಸರಾ ಆನೆಗಳ ತೂಕ ಪರೀಕ್ಷೆ! – ತೂಕದಲ್ಲಿ ಮಾಜಿ ಕ್ಯಾಪ್ಟನ್‌ ಅರ್ಜುನ ಫಸ್ಟ್‌, ಅಭಿಮನ್ಯು ಸೆಕೆಂಡ್‌!

ಎಂಟು ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಕಾಡಾನೆ ಕಾರ್ಯಾಚರಣೆ ವೇಳೆ ಅಸುನೀಗಿದೆ. ಸಕಲೇಶಪುರ ತಾಲೂಕಿನ ಯಸಳೂರು ವಲಯದ ಬಾಳೆಕೆರೆ ಫಾರೆಸ್ಟ್‌ನಲ್ಲಿ ಈ ದುರ್ಘಟನೆ ನಡೆದಿದೆ. ಕಾಡಾನೆ ಸೆರೆ ಕಾರ್ಯಾಚರಣೆಯ ವೇಳೆ ಕ್ಯಾಪ್ಟನ್‌ ಅರ್ಜುನನ್ನು ಬಳಸಲಾಗಿತ್ತು. ಆದರೆ ಈ ಕಾರ್ಯಾಚರಣೆಯ ವೇಳೆ ಕಾಡಾನೆ ಅರ್ಜುನನ ಹೊಟ್ಟೆ ಭಾಗಕ್ಕೆ ತಿವಿದು ಸಾಯಿಸಿದೆ. ನಾಲ್ಕು ಸಾಕಾನೆಗಳೊಂದಿಗೆ ಇಂದು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರು ಕಾರ್ಯಾಚರಣೆ ಆರಂಭಿಸಿದ್ದರು. ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ವೇಳೆ ಅರ್ಜುನನ ಮೇಲೆ ಒಂಟಿಸಲಗ ಅಟ್ಯಾಕ್ ಮಾಡಿದೆ. ಸಾಕಾನೆ ಅರ್ಜುನ ಒಂಟಿಸಲಗದ ಜೊತೆ ಕಾಳಗಕ್ಕಿಳಿದಿದೆ. ಕಾರ್ಯಾಚರಣೆ ವೇಳೆ ಒಂಟಿಸಲಗ ದಾಳಿ ಮಾಡುತ್ತಿದ್ದಂತೆ ಉಳಿದ ಮೂರು ಸಾಕಾನೆಗಳು ಓಡಿ ಹೋಗಿವೆ. ಕೊನೆಗೆ ಒಂಟಿಸಲಗದ ಜೊತೆ ಅರ್ಜುನ ಆನೆಯು ಒಂಟಿಯಾಗಿ ಹೋರಾಟ ನಡೆಸಿದೆ. ಈ ಕಾಳಗ ಆರಂಭವಾಗುತ್ತಿದ್ದಂತೆ ಅರ್ಜುನನ ಮೇಲಿನಿಂದ ಮಾವುತ ಇಳಿದು ಓಡಿದ್ದಾರೆ. ಅರ್ಜುನ ಸಾವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕಾರ್ಯಾಚರಣೆಯ ಅಂತಿಮಹಂತದವರೆಗೂ ಅರ್ಜುನ ಹೋರಾಡಿದ್ದಾನೆ. ಹೋರಾಡಿ ಹೋರಾಡಿ ಕೊನೆಗೂ ಪ್ರಾಣವನ್ನೇ ಬಲಿಕೊಟ್ಟಿದ್ದಾನೆ. ಕ್ಯಾಪ್ಟನ್ ಅರ್ಜುನ ದಸರಾ ವೇಳೆ ಎಂಟು ಬಾರಿ ಅಂಬಾರಿ ಹೊತ್ತಿದ್ದು, ಜನರ ಪ್ರೀತಿಗೆ ಪಾತ್ರವಾಗಿತ್ತು. ಅರ್ಜುನ ಸೇರಿ ನಾಲ್ಕು ಪಳಗಿದ ಆನೆಗಳೊಂದಿಗೆ ಅರಣ್ಯ ಇಲಾಖೆ ಇಂದು ಕಾರ್ಯಾಚರಣೆ ಆರಂಭಿಸಿತ್ತು. ಪುಂಡಾನೆಗೆ ಅರವಳಿಕೆ ಚುಚ್ಚು ಮದ್ದು ನೀಡುವಾಗ ಅರ್ಜುನನ ಮೇಲೆ ಒಂಟಿಸಲಗ ಅಟ್ಯಾಕ್ ಮಾಡಿದೆ.

Sulekha