ಮೊಬೈಲ್ ಜಾಸ್ತಿ ಬಳಸುತ್ತೀರಾ? – ಬೆರಳು ಮರಗಟ್ಟಿಸುತ್ತೆ ಮೊಬೈಲ್ ಸ್ಕ್ರೋಲ್!
ಜನರ ಜೀವನ ಶೈಲಿ ತುಂಬಾ ಬದಲಾಗಿದೆ. ಎಲ್ಲವೂ ಬೆರಳ ತುದಿಯಲ್ಲಿಯೇ ಸಿಗ್ತಾಯಿದೆ. ಆದ್ರೆ ಕೆಲವರು ಊಟ, ತಿಂಡಿ ಬಿಡ್ತಾರೆ. ಓದು, ಕೆಲಸನೂ ಬಿಡ್ತಾರೆ.. ಆದ್ರೆ ಪಬ್ಜಿ ಗೇಮ್ ಆಡೋದು ಫೋನ್ ಸ್ಕ್ರೋಲ್ ಮಾಡೋದು ಮಾತ್ರ ಬಿಡೋದಿಲ್ಲ. ನೀವು ಪಬ್ ಜಿ ಗೇಮ್ ಆಡೋದು, ಫೋನ್ ಸ್ಕ್ರೋಲ್ ಮಾಡೋದು, ಸಿಸ್ಟಮ್ ಲಿ ಟೈಪ್ ಮಾಡ್ತಾ ಇದ್ರೆ ನಿಮ್ಮ ಹೆಬ್ಬರೆಳಿಗೆ ಆಪತ್ತು ಫಿಕ್ಸ್!
ಮೊಬೈಲ್, ಕಂಪ್ಯೂಟರ್ ಹೆಚ್ಚು ಬಳಕೆ ಮಾಡಿದ್ರೆ ಕಾರ್ಪಲ್ ಟನಲ್ ಸಿಂಡ್ರೋಮ್ ಅನ್ನೋ ಸಮಸ್ಯೆ ಕಾಡೋ ಸಾಧ್ಯತೆ ಇರುತ್ತೆ. ಈ ಸಿಂಡ್ರೋಮ್ ಹೆಬ್ಬೆರಳಿನಲ್ಲಿ ಕಾಣಿಸಿಕೊಳ್ಳುತ್ತೆ. ಇದ್ರಿಂದಾಗಿ ವಿಪರೀತ ನೋವು ಕಾಣಿಸಿಕೊಂದು ಹೆಬ್ಬೆರಳು ಬಾಗಿದಂತಾಗುತ್ತೆ. ತೋರು ಬೆರಳು ಹಾಗೂ ಮಧ್ಯದ ಬೆರಳುಗಳಿಗೂ ಇದರ ಎಫೆಕ್ಟ್ ಬೀಳುತ್ತೆ. ಹೆಬ್ಬೆಟ್ಟು, ತೋರು ಬೆರಳು ಹಾಗೂ ನಡುವಿನ ಬೆರಳಿಗೆ ಸ್ಪರ್ಶ ಕೊಡುವ ನರ ಕಂಪ್ರೈಸ್ ಆದ್ರೆ ಮೂರು ಬೆರಳು ಮರಗಟ್ಟಿದಂಗೆ ಆಗುತ್ತದೆ. ಕೆಲಸ ಮಾಡಲು ಕಷ್ಟ ಆಗುತ್ತೆ. ಅಷ್ಟೇ ಅಲ್ಲದೆ ಬೆರಳುಗಳು ಊದಿಕೊಳ್ಳುತ್ತೆ.
ಇದನ್ನೂ ಓದಿ: ಮೊಬೈಲ್ ಕವರ್ ನಲ್ಲಿ ನೋಟು ಇಡುತ್ತೀರಾ? – ಸಣ್ಣ ತಪ್ಪಿನಿಂದ ಜೀವಕ್ಕೆ ಅಪಾಯ!
ಈ ಸಮಸ್ಯೆ ಸಾಫ್ಟ್ವೇರ್ ಉದ್ಯೋಗಿಗಳಿಗೆ ಹಾಗೂ ಮೊಬೈಲ್ಗೆ ತೀರ ಅಡಿಕ್ಟ್ ಆದವರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಪ್ರಪಂಚದ ಜನಸಂಖ್ಯೆಯ ಸುಮಾರು ಶೇಕಡಾ. 2 ರಷ್ಟು ಜನರು ಕಾರ್ಪಲ್ ಟನಲ್ ಸಿಂಡ್ರೋಮ್ ಸಮಸ್ಯೆಗೆ ತುತ್ತಾಗಿದ್ದಾರೆ. ಹೀಗಾಗಿ ಈ ಸಮಸ್ಯೆಗಳಿಂದಾ ತಪ್ಪಿಸಿಕೊಳ್ಳಲು ಆದಷ್ಟು ಕಂಪ್ಯೂಟರ್ ಹಾಗೂ ಮೊಬೈಲ್ಗಳಿಂದ ದೂರ ಇರೋದು ಉತ್ತಮ.