ನಿಮ್ಮ ಕನ್ನಡಿ ನಿಮಗೆ ಸುಳ್ಳು ಹೇಳುತ್ತಾ? – ನಿಮ್ಮ ಸೌಂದರ್ಯದ ರಹಸ್ಯ ಗೊತ್ತಿದೆಯೇ?
ಈ ಹಾಳಾದ ಕನ್ನಡಿಯಲ್ಲಿ ನಾನು ಚೆನ್ನಾಗಿ ಕಾಣಿಸ್ತಿಲ್ಲ ಅನ್ನಿಸುತ್ತಾ? ಅಥವಾ ಬೇರೆಯವರು ಹೊಗಳಿದಷ್ಟೇನೂ ನಾನು ಚೆನ್ನಾಗಿಲ್ಲ ಅಂತ ಕನ್ನಡಿಮುಂದೆ ನಿಂತಾಗ ಅಂದ್ಕೊಳ್ತೀರಾ? ಹಾಗಿದ್ರೆ ಈ ವಿಚಾರದಲ್ಲಿ ನೀವು ಒಬ್ಬಂಟಿಯಲ್ಲ. ನಿಮ್ಮಂತೆ ಇನ್ನೂ ಅನೇಕರು ಯೋಚಿಸುತ್ತಿರುತ್ತಾರೆ. ಬಾರ್ಸಿಲೋನಾ ವಿಶ್ವವಿದ್ಯಾಲಯದ ಸಂಶೋಧಕರು ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ.
ಇದನ್ನೂ ಓದಿ: ಮೊಬೈಲ್ ಕವರ್ ನಲ್ಲಿ ನೋಟು ಇಡುತ್ತೀರಾ? – ಸಣ್ಣ ತಪ್ಪಿನಿಂದ ಜೀವಕ್ಕೆ ಅಪಾಯ!
ಅಧ್ಯಯನದಲ್ಲಿ ಪಾಲ್ಗೊಂಡ ಅಭ್ಯರ್ಥಿಗಳಿಗೆ ಕೆಲವು ಪ್ರಶ್ನೆಗಳನ್ನು ನೀಡಲಾಗಿತ್ತು. ಅದರಲ್ಲಿ ಆಹಾರ ಸೇವನೆ ಸಮಸ್ಯೆಯಿಂದ ಹಿಡಿದು ದೇಹದ ಆಕಾರದ ದೃಷ್ಟಿಕೋನದವರೆಗೆ ಹಲವು ಪ್ರಶ್ನೆಗಳಿದ್ದವು. ಜತೆಗೆ, ಸಂಶೋಧಕರು ಮೂರು ವರ್ಚ್ಯುವಲ್ ಬಾಡಿ ಶೇಪ್ ಸೃಷ್ಟಿಸಿದ್ದರು. ಪ್ರತಿ ಅಭ್ಯರ್ಥಿಯೂ ಇದನ್ನು ವರ್ಚ್ಯುವಲ್ ರಿಯಾಲಿಟಿಯ ಮೂಲಕ ಬಳಕೆ ಮಾಡಿ ನೋಡಬೇಕಾಗಿತ್ತು. ಈ ಸಂಶೋಧನೆಯಲ್ಲಿ ಕೆಲವರು ಚೆನ್ನಾಗಿದ್ದರೂ ಚೆನ್ನಾಗಿಲ್ಲ ಎಂದು ಭಾವಿಸುವುದು ಹಾಗೆಯೇ ಆಕರ್ಷಕವಾಗಿ ಇಲ್ಲದಿದ್ದರೂ ಭಾರೀ ಚೆನ್ನಾಗಿದ್ದೇನೆ ಎಂದು ಭಾವಿಸುವುದು ಸಾಮಾನ್ಯ ಎಂದು ತಿಳಿದು ಬಂದಿದೆ. ಇದಕ್ಕೆ ಅತಿ ಆತ್ಮವಿಶ್ವಾಸ ಅಥವಾ ಆತ್ಮ ವಿಶ್ವಾಸದ ಕೊರತೆಯೇ ಕಾರಣ ಎಂದು ಗುರುತಿಸಲಾಗಿದೆ. ಇದಕ್ಕೇನೆ ಸೌಂದರ್ಯದ ರಹಸ್ಯ ವ್ಯಕ್ತಿಯ ಆತ್ಮ ವಿಶ್ವಾಸದಲ್ಲಿ ಅಡಗಿದೆ ಎನ್ನುವುದು.