4ನೇ ಟಿ20 ಪಂದ್ಯಕ್ಕೆ ರಾಯ್‌ಪುರ ಕ್ರಿಕೆಟ್ ಮೈದಾನ ಸಜ್ಜು – ಪಿಚ್ ಹೇಗಿದೆ? ಯಾರಿಗೆ ಫೇವರ್ ಆಗಿದೆ?

4ನೇ ಟಿ20 ಪಂದ್ಯಕ್ಕೆ ರಾಯ್‌ಪುರ ಕ್ರಿಕೆಟ್ ಮೈದಾನ ಸಜ್ಜು – ಪಿಚ್ ಹೇಗಿದೆ? ಯಾರಿಗೆ ಫೇವರ್ ಆಗಿದೆ?

ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿರುವ ಟೀಂ ಇಂಡಿಯಾ ಯುವ ಪಡೆ, ಶುಕ್ರವಾರ 4ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ರಾಯ್ಪುರ ಕ್ರಿಕೆಟ್‌ ಮೈದಾನದಲ್ಲಿ ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ. ರಾಯ್​ಪುರ್​ನ ಶಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನ ಪಿಚ್ ಹೇಗಿದೆ? ಯಾರಿಗೆ ಫೇವರ್ ಆಗಿದೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟ–ಮೂರು ಮಾದರಿಯ ಕ್ರಿಕೆಟ್‌ಗೆ ಮೂವರು ನಾಯಕರು

ಗುವಾಹಟಿಯಲ್ಲಿ ಸರಣಿಯನ್ನು ವಶಪಡಿಸಿಕೊಳ್ಳುವ ಅವಕಾಶವನ್ನು ಟೀಮ್  ಇಂಡಿಯಾ ಕಳೆದುಕೊಂಡಿತ್ತು. ಶುಕ್ರವಾರ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟಿ20 ಪಂದ್ಯ ಆಡಲಿದೆ. ಕಳೆದ ಮೂರೂ ಟಿ-20 ಮ್ಯಾಚ್​​ಗಳಲ್ಲೂ ಪಿಚ್ ಹೆಚ್ಚಾಗಿ ಬ್ಯಾಟ್ಸ್​​ಮನ್​ಗಳಿಗೆ ಫೇವರ್​ ಆಗಿತ್ತು. ಹೀಗಾಗಿ ಎಲ್ಲಾ ಮೂರೂ ಮ್ಯಾಚ್​​ಗಳಲ್ಲೂ ಎರಡೂ ಟೀಮ್​ಗಳಿಂದ ಒಳ್ಳೇ ಸ್ಕೋರ್ ಬಂದಿತ್ತು. ಆದ್ರೆ 4ನೇ ಮ್ಯಾಚ್​​ ನಡೀತಾ ಇರೋ ರಾಯ್​​ಪುರ್​​ನದ್ದು ಅತ್ಯಂತ ಬ್ಯಾಲೆನ್ಸ್ ಆಗಿರುವ ಪಿಚ್. ಇದು ವನ್ ಸೈಡ್ ಪಿಚ್ ಅಂತೂ ಅಲ್ವೇ ಅಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್​ ಎರಡಕ್ಕೂ ಹೆಲ್ಪ್ ಆಗುವಂಥಾ ಪಿಚ್​​ನ್ನೇ ರೆಡಿ ಮಾಡಲಾಗಿದೆ. ಟಿ-20 ಫಾರ್ಮೆಟ್​ನಲ್ಲಿ ಈ ಗ್ರೌಂಡ್​ನಲ್ಲಿ​​ ಕೇವಲ ಒಂದು ಬಾರಿ ಮಾತ್ರ 200+ ಸ್ಕೋರ್ ಆಗಿದೆ. ಇದು ಸ್ಲೋ ಪಿಚ್ ಬೇರೆ ಆಗಿದ್ದು, ಬ್ಯಾಟಿಂಗ್​ ಮಾಡೋದು ಅಷ್ಟೊಂದು ಸುಲಭ ಇಲ್ಲ. ಇಲ್ಲಿ ಒಟ್ಟು 6 ಐಪಿಎಲ್​​ ಮ್ಯಾಚ್​ಗಳಾಗಿದ್ದು, ಹೈಯೆಸ್ಟ್ ಸ್ಕೋರ್ ಅಂದ್ರೆ 164 ರನ್. ಇನ್ನು ಆಗಿರೋ ಒಂದು ವಂಡೇ ಮ್ಯಾಚ್​​ನಲ್ಲಿ ಫಸ್ಟ್​ ಬ್ಯಾಟಿಂಗ್ ಮಾಡಿದ ಟೀಂ ಕೇವಲ 108 ರನ್​ಗಳಿಗೆ ಆಲೌಟ್ ಆಗಿತ್ತು. ಹೀಗಾಗಿ 4ನೇ ಮ್ಯಾಚ್​​ನಲ್ಲಿ ಬೌಲರ್ಸ್​​ಗಳ ರೋಲ್ ತುಂಬಾ ಇಂಪಾರ್ಟೆಂಟ್ ಆಗಿದೆ. ಇನ್ನು ಈ ಪಿಚ್​​ನಲ್ಲಿ ಟಾಸ್ ಕೂಡ ತುಂಬಾ ಇಂಪಾರ್ಟೆಂಟ್ ಆಗುತ್ತೆ. ಟಾಸ್​ ಗೆದ್ದ ಟೀಂ ಫಸ್ಟ್ ಬೌಲಿಂಗ್ ಮಾಡುವ ಸಾಧ್ಯತೆಯೇ ಹೆಚ್ಚಿದೆ. ಯಾಕಂದ್ರೆ, ಇಲ್ಲಿ ನಡೆದ ಆರು ಐಪಿಎಲ್​ ಮ್ಯಾಚ್​ಗಳಲ್ಲಿ, ಚೇಸಿಂಗ್ ಮಾಡಿದ ತಂಡ ನಾಲ್ಕು ಮ್ಯಾಚ್​ಗಳನ್ನ ಗೆದ್ದಿದೆ. ಹೀಗಾಗಿ ಟಾಸ್ ಗೆದ್ದು ಮೊದಲು ಬೌಲಿಂಗ್​ ಮಾಡಿದ್ರೆ 150-160 ರನ್​ಗಳ ಒಳಗೆ ರಿಸ್ಟ್ರಿಕ್ಟ್ ಮಾಡಿದ್ರೆ ಚೇಸಿಂಗ್ ವೇಳೆ ಗೆಲ್ಲೋದು ಸುಲಭ. ಯಾಕಂದ್ರೆ, ಸೆಕೆಂಡ್ ಇನ್ನಿಂಗ್ಸ್​ ವೇಳೆ ಡ್ಯೂ ಪ್ರಮಾಣ ಇನ್ನಷ್ಟು ಹೆಚ್ಚಾಗುತ್ತೆ. ಹೀಗಾಗಿ ಬ್ಯಾಟ್ಸ್​​ಮನ್​ಗಳಿಗೆ ಅಡ್ವಾಂಟೇಜ್ ಸಿಗುವ ಸಾಧ್ಯತೆ ಇದೆ.

 

 

Sulekha