ರೋಹಿತ್ ಶರ್ಮಾ ಅಸಮಾಧಾನದ ಬಳಿಕವೂ ಪಾಂಡ್ಯಾ ರಿಟರ್ನ್ – ಮುಂಬೈ ಇಂಡಿಯನ್ಸ್ ಈಗ ಒಡೆದ ಮನೆ?

ರೋಹಿತ್ ಶರ್ಮಾ ಅಸಮಾಧಾನದ ಬಳಿಕವೂ ಪಾಂಡ್ಯಾ ರಿಟರ್ನ್ – ಮುಂಬೈ ಇಂಡಿಯನ್ಸ್ ಈಗ ಒಡೆದ ಮನೆ?

ಒಂದಷ್ಟು ಹೈಡ್ರಾಮದ ಬಳಿಕ ಹಾರ್ದಿಕ್ ಪಾಂಡ್ಯಾ ಮುಂಬೈ ಇಂಡಿಯನ್ಸ್​ಗೆ ಮರಳಿದ್ದಾಯ್ತು. ಅಫೀಶಿಯಲ್​ ಆಗಿ ಎಲ್ಲವೂ ಕನ್ಫರ್ಮ್ ಆಗಿದೆ. ಹಾರ್ದಿಕ್ ಕೂಡ ಕಮಿಂಗ್ ಹೋಮ್ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಆದ್ರೆ, ಪಾಂಡ್ಯಾ ಕಮ್​​ಬ್ಯಾಕ್​ಗೂ ಮುನ್ನ ಫ್ರಾಂಚೈಸಿಗಳ ಮಧ್ಯೆ ಭಾರಿ ನಾಟಕವೇ ನಡೆದಿತ್ತು. ಇದಕ್ಕೆ ಮುಂಬೈ ಇಂಡಿಯನ್ಸ್​​ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಕಾರಣವೇ. ಹಾಗಿದ್ರೆ ಹಾರ್ದಿಕ್ ಪಾಂಡ್ಯಾರನ್ನ ವಾಪಸ್ ತಂಡಕ್ಕೆ ಕರೆಸಿಕೊಳ್ಳುವ ಬಗ್ಗೆ ರೋಹಿತ್​ ಶರ್ಮಾ ನಿಲುವು ಏನಾಗಿತ್ತು? ಹಾರ್ದಿಕ್ ಪಾಂಡ್ಯಾರನ್ನ ಬಿಟ್ಟು ಕೊಡೋಕೆ ಗುಜರಾತ್​ ಟೈಟಾನ್ಸ್ ನಿರ್ಧರಿಸಿದ್ಯಾಕೆ? ಎಂಬ ಬಗ್ಗೆ ವಿವರಣೆ ಇಲ್ಲಿದೆ.

ಇದನ್ನೂ ಓದಿ: ಗಾಯಕ್ವಾಡ್ ಚೊಚ್ಚಲ ಶತಕ ವ್ಯರ್ಥ, ಕೆಟ್ಟ ದಾಖಲೆ ಬರೆದ ಕನ್ನಡಿಗ – ಟೀಮ್ ಇಂಡಿಯಾ ವಿರುದ್ಧ ಗೆದ್ದು ಬೀಗಿದ ಕಾಂಗರೂ ಪಡೆ

ಮುಂಬೈ ಇಂಡಿಯನ್ಸ್ ಟೀಮ್‌ನಲ್ಲಿ ಆಗುತ್ತಿರುವ ಬದಲಾವಣೆ ಬಗ್ಗೆ ರೋಹಿತ್ ಶರ್ಮಾಗೆ ಅಸಮಾಧಾನ ಇದೆ ಎನ್ನಲಾಗುತ್ತಿದೆ. ಆಲ್ರೌಂಡರ್ ಕ್ಯಾಮರೂನ್ ಗ್ರೀನ್​ರನ್ನ ಬಿಟ್ಟು ಹಾರ್ದಿಕ್ ಪಾಂಡ್ಯಾರನ್ನು ವಾಪಸ್ ಕರೆಸಿಕೊಳ್ಳುವ ವಿಚಾರ ರೋಹಿತ್​ ಶರ್ಮಾಗೆ ಇಷ್ಟವಿರಲಿಲ್ಲ ಎನ್ನಲಾಗುತ್ತಿದೆ. ಕ್ಯಾಮರೂನ್ ಗ್ರೀನ್ ಟೀಂನಲ್ಲಿ ಇರಬೇಕು ಅನ್ನೋದು ರೋಹಿತ್ ಶರ್ಮಾರ ನಿಲುವಾಗಿತ್ತು. ಹೀಗಾಗಿ ಲಾಸ್ಟ್​ ಮಿನಿಟ್​​ನಲ್ಲಿ ಹಾರ್ದಿಕ್ ಪಾಂಡ್ಯಾ ಟ್ರೇಡ್ ಡೀಲ್​ನ್ನ ರೋಹಿತ್ ಶರ್ಮಾ ರಿಜೆಕ್ಟ್ ಮಾಡಿದ್ದು, ಕ್ಯಾಮರೂನ್ ಗ್ರೀನ್​​ ಪರ ಬ್ಯಾಟ್ ಬೀಸಿದ್ದರು. ಆದ್ರೆ ಮುಂಬೈ ಇಂಡಿಯನ್ಸ್​ ಮ್ಯಾನೇಜ್ಮೆಂಟ್ ಲೆಕ್ಕಾಚಾರವೇ ಬೇರೆಯಾಗಿತ್ತು. ಪಾಂಡ್ಯಾರನ್ನ ತಂಡಕ್ಕೆ ಸೇರಿಕೊಳ್ಳಲೇಬೇಕು ಅನ್ನೋ ನಿರ್ಧಾರಕ್ಕೆ ಮುಂಬೈ ಇಂಡಿಯನ್ಸ್ ಬಂದಿತ್ತು. ಹೀಗಾಗಿ ಕೊನೇ ಗಳಿಗೆಯಲ್ಲಿ ಒಂದಷ್ಟು ಡ್ರಾಮಾ ನಡೆದು ಕೊನೆಗೂ ಡೀಲ್ ಫಿಕ್ಸ್ ಆಗಿತ್ತು.

ಹಾರ್ದಿಕ್ ಪಾಂಡ್ಯಾ ಗುಜರಾತ್ ಟೈಟಾನ್ಸ್​​ನ ಮೊದಲ ಎರಡೂ ಐಪಿಎಲ್​​ ಟೂರ್ನಿಗಳಲ್ಲೂ ತುಂಬಾ ಚೆನ್ನಾಗಿಯೇ ಟೀಂ ಲೀಡ್ ಮಾಡಿದ್ದರು. ಪಾಂಡ್ಯಾ ಕ್ಯಾಪ್ಟನ್ಸಿಯಲ್ಲಿ ಫಸ್ಟ್ ಸೀಸನ್​ನಲ್ಲೇ ಜಿಟಿ ಟ್ರೋಫಿ ಗೆದ್ದಿತ್ತು. ಸೆಕೆಂಡ್ ಸೀಸನ್​ನಲ್ಲಿ ಫೈನಲ್​ಗೆ ಬಂದಿತ್ತು. ಆದ್ರೂ ಕೂಡ ಪಾಂಡ್ಯಾರನ್ನು ಗುಜರಾತ್ ಟೈಟಾನ್ಸ್ ಬಿಟ್ಟು ಕೊಟ್ಟಿದೆ. ಜಿಟಿ ಮ್ಯಾನೇಜ್ಮೆಂಟ್ ನೀಡಿರುವ ರೀಸನ್ ಏನಂದ್ರೆ, ಮುಂಬೈ ಇಂಡಿಯನ್ಸ್​ಗೆ ರಿಟರ್ನ್​ ಆಗಲು ಹಾರ್ದಿಕ್ ಪಾಂಡ್ಯಾ ಬಯಸಿದ್ದರು. ತಾನು ಮತ್ತೆ ಮುಂಬೈ ಇಂಡಿಯನ್ಸ್ ಗೆ ಮರಳುವುದಾಗಿ ಪಾಂಡ್ಯಾ ಹೇಳಿದ್ದು, ಅವರ ನಿರ್ಧಾರವನ್ನು ಗೌರವಿಸಲು ಗುಜರಾತ್ ಟೈಟಾನ್ಸ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಇದು ಜಿಟಿ ಸೈಡ್​ ಆಫ್ ವರ್ಷನ್ ಆಯ್ತು. ಇನ್ನು ರೋಹಿತ್​ ಶರ್ಮಾಗೆ ಮನಸ್ಸು ಇಲ್ಲದಿದ್ರೂ ಕೂಡ ಮುಂಬೈ ಇಂಡಿಯನ್ಸ್​ ಕೋಟಿ ಕೋಟಿ ಕೊಟ್ಟು ಹಾರ್ದಿಕ್ ಪಾಂಡ್ಯಾರನ್ನ ಕರೆಸಿಕೊಳ್ಳಲು ಪರ್ಟಿಕ್ಯುಲರ್ ರೀಸನ್ ಇದೆ. ಹೇಳಿಕೇಳಿ ಪಾಂಡ್ಯಾ ಟಿ-20ಯಲ್ಲಿ ಟೀಂ ಇಂಡಿಯಾವನ್ನ ಕೂಡ ಲೀಡ್ ಮಾಡಿದ್ದಾರೆ. ಮುಂದಿನ ದಕ್ಷಿಣ ಆಫ್ರಿಕಾ ವಿರುದ್ಧದ ಸೀರಿಸ್​ಗೂ ಹಾರ್ದಿಕ್​ ಪಾಂಡ್ಯಾ ಟೀಂ ಇಂಡಿಯಾದ ಕ್ಯಾಪ್ಟನ್ ಆಗಬಹುದು. ಗಾಯಕ್ಕೆ ಒಳಗಾಗದೆ ಇರ್ತಿದ್ರೆ ಆಸ್ಟ್ರೇಲಿಯಾ ವಿರುದ್ಧದ ಸೀರಿಸ್​ನಲ್ಲೂ ಪಾಂಡ್ಯಾ ತಂಡವನ್ನ ಲೀಡ್ ಮಾಡ್ತಿದ್ರು. ರೋಹಿತ್ ಶರ್ಮಾ ಟಿ-20ಯಲ್ಲಿ ಕಂಟಿನ್ಯೂ ಆಗಲ್ಲ ಅಂದ್ರೆ 2024ರಲ್ಲಿ ನಡೆಯೋ ವರ್ಲ್ಡ್​​ಕಪ್​ನಲ್ಲೂ ಹಾರ್ದಿಕ್​ ಪಾಂಡ್ಯಾ ಟೀಂ ಇಂಡಿಯಾದ ಕ್ಯಾಪ್ಟನ್ ಆಗಲಿದೆ. ಒಬ್ಬ ಕ್ಯಾಪ್ಟನ್ ಆಗಿ ಹಾರ್ದಿಕ್ ಪಾಂಡ್ಯ ಭವಿಷ್ಯ ಗಟ್ಟಿಯಾಗ್ತಿದೆ. ರೋಹಿತ್​ ಶರ್ಮಾ ಬಳಿಕ WHO IS NEXT ಅನ್ನೋ ಪ್ರಶ್ನೆ ಬಂದೇ ಬರುತ್ತೆ. ಮುಂದಿನ ಐಪಿಎಲ್​​ ಟೂರ್ನಿಯಲ್ಲೇ ಪಾಂಡ್ಯಾಗೆ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್ಸಿ ಪಟ್ಟ ಕಟ್ಟಲಾಗುತ್ತಾ ಅನ್ನೋದು ಗ್ಯಾರಂಟಿ ಇಲ್ಲ. ಆದ್ರೆ, ಈ ಬಾರಿ ಅಲ್ಲದಿದ್ರೂ ನೆಕ್ಸ್ಟ್ ಐಪಿಎಲ್​​ ಟೂರ್ನಿಯಲ್ಲಾದ್ರೂ ಹಾರ್ದಿಕ್ ಪಾಂಡ್ಯಾಗೆ ಕಾಪ್ಟನ್ಸಿ ಸಿಗೋದು ಆಲ್​ಮೋಸ್ಟ್ ಗ್ಯಾರಂಟಿ. ರೋಹಿತ್ ಬಳಿಕ ಹಾರ್ದಿಕ್ ಪಾಂಡ್ಯಾರೇ ಮುಂಬೈ ಇಂಡಿಯನ್ಸ್​ನ್ನ ಲೀಡ್ ಮಾಡೋದು ಅನ್ನೋದು ಈಗಾಗ್ಲೇ ಗ್ಯಾರಂಟಿಯಾಗಿದೆ.

ಒಂದು ವಿಚಾರವಂತೂ ಸ್ಪಷ್ಟ.. ಮುಂಬೈ ಇಂಡಿಯನ್ಸ್​​ನಲ್ಲಿ ಈಗ ಎಲ್ಲವೂ ಪರ್ಫೆಕ್ಟ್ ಆಗಿಯಂತೂ ಇಲ್ಲ. ಹಾರ್ದಿಕ್ ಪಾಂಡ್ಯಾ ಕ್ಯಾಪ್ಟನ್ ಆಗ್ತಾರೆ ಅನ್ನೋ ವಿಚಾರದ ಬಗ್ಗೆ ಕೆಲ ಮುಂಬೈ ಇಂಡಿಯನ್ಸ್​ ಆಟಗಾರರಿಗೆ ಒಂದಷ್ಟು ಅಸಮಾಧಾನ ಇದ್ದಂತೆ ಕಾಣ್ತಿದೆ. ಮುಂಬೈ ಇಂಡಿಯನ್ಸ್​ಗೆ ಪಾಂಡ್ಯಾ ಕಮ್​​ಬ್ಯಾಕ್ ಬಳಿಕ ಜಸ್ಪ್ರಿತ್ ಬುಮ್ರಾ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಒಂದು ಕ್ರಿಪ್ಟಿಕ್ ಪೋಸ್ಟ್ ಹಾಕಿಕೊಂಡಿದ್ದಾರೆ. SILENECE IS SOMETIMES THE BEST ANSWER ಅಂತಾ ಬರೆದುಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯಾ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆಗೋದು ಬುಮ್ರಾಗೆ ಅಷ್ಟಾಗಿ ಇಷ್ಟವಿದ್ದಂತೆ ಕಾಣ್ತಿಲ್ಲ. ನಿಮಗೆ ನೆನಪಿರಬಹುದು, ವರ್ಲ್ಡ್​​ಕಪ್​ಗೂ ಮುನ್ನ ಐರ್ಲೆಂಡ್ ವಿರುದ್ಧದ ಟಿ-20 ಸೀರಿಸ್​​ಗೆ ಜಸ್ಪ್ರಿತ್ ಬುಮ್ರಾ ಟೀಂ ಇಂಡಿಯಾದ ಕ್ಯಾಪ್ಟನ್ ಆಗಿದ್ದರು. ಬುಮ್ರಾರಲ್ಲೂ ಒಬ್ಬ ಕ್ಯಾಪ್ಟನ್ ಇರೋದಂತೂ ನಿಜ. ಇನ್ನು ಕಳೆದ ಹಲವು ವರ್ಷಗಳಿಂದ ಬುಮ್ರಾ ಮುಂಬೈ ಇಂಡಿಯನ್ಸ್​ನಲ್ಲೇ ಆಡ್ತಾ ಇದ್ದಾರೆ. ಬುಮ್ರಾ ಮುಂಬೈ ಇಂಡಿಯನ್ಸ್​ನ ವನ್​ ಆಫ್ ದಿ ಸೀನಿಯರ್ ಪ್ಲೇಯರ್. ಹೀಗಾಗಿ ರೋಹಿತ್ ಶರ್ಮಾ ಬಳಿಕ ಕ್ಯಾಪ್ಟನ್ಸಿ ಪಟ್ಟಕ್ಕೇರುವ ನಿರೀಕ್ಷೆ ಬುಮ್ರಾಗೆ ಕೂಡ ಇತ್ತು. ಆದ್ರೀಗ ಹಾರ್ದಿಕ್ ಪಾಂಡ್ಯಾರನ್ನ ಕ್ಯಾಪ್ಟನ್ ಮಾಡೋ ಸುದ್ದಿ ಜಸ್ಪ್ರಿತ್ ಬುಮ್ರಾರನ್ನ ಕೂಡ ಅಪ್​ಸೆಟ್​ ಆಗಿಸಿರುವಂತೆ ಕಾಣ್ತಿದೆ. ONE FAMILY ಅನ್ನೋದು ಮುಂಬೈ ಇಂಡಿಯನ್ಸ್​ ಟ್ಯಾಗ್ ಲೈನ್. ಆದ್ರೀಗ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ಒಡೆದ ಮನೆಯಾದಂತೆ ಕಾಣ್ತಿದೆ. ಅಂತೂ ಹಾರ್ದಿಕ್ ಪಾಂಡ್ಯಾ ಘರ್​​ ವಾಪ್ಸಿಯಿಂದಾಗಿ ಮುಂಬೈ ಇಂಡಿಯನ್ಸ್​​ನಲ್ಲಿ ಆಲ್​ ಈಸ್ ನಾಟ್ ವೆಲ್​ ಅನ್ನೋದಂತೂ ಗ್ಯಾರಂಟಿ.

ಇನ್ನು ಮುಂಬೈ ಇಂಡಿಯನ್ಸ್​ನ ಸಪೋರ್ಟರ್ಸ್ ಅಂತೂ ಯಾರೂ ಕೂಡ ಹಾರ್ದಿಕ್ ಪಾಂಡ್ಯಾರನ್ನ ಕ್ಯಾಪ್ಟನ್ ಆಗಿ ಒಪ್ಪಿಕೊಳ್ಳೋಕೆ ತಯಾರಿಲ್ಲ. ಮುಂದಿನ ಸೀಸನ್​ನಲ್ಲೂ ರೋಹಿತ್​​ ಶರ್ಮಾರೇ ಟೀಂ ಲೀಡ್ ಮಾಡೋದು ಬೆಸ್ಟ್ ಅಂತಿದ್ದಾರೆ. ಅದೇನೇ ಆದ್ರೂ ರೋಹಿತ್​ ಶರ್ಮಾರನ್ನ ಕ್ಯಾಪ್ಟನ್​ ಆಗಿ ರಿಪ್ಲೇಸ್ ಮಾಡೋಕೆ ಪಾಂಡ್ಯಾಗೂ ಸಾಧ್ಯವಾಗೋದು ಡೌಟೇ. ಇಲ್ಲಿ ಪಾಂಡ್ಯಾರ ಆಟಿಟ್ಯೂಡ್​ ಕೂಡ ಪ್ರಾಬ್ಲಂ. ಹಾರ್ದಿಕ್ ಪಾಂಡ್ಯಾರದ್ದು ಸ್ವಲ್ಪ ಡಾಮಿನೇಟ್ ಕ್ಯಾರೆಕ್ಟರ್. ಹೀಗಾಗಿ ಪಾಂಡ್ಯಾ ಜೊತೆಗೆ ಎಲ್ಲರೂ ಹೊಂದಿಕೊಳ್ತಾರೆ ಅನ್ನೋದು ಗ್ಯಾರಂಟಿ ಇಲ್ಲ. ಹೀಗಾಗಿ ಟೀಂನಲ್ಲಿ ರೋಹಿತ್ ಶರ್ಮಾ ಇರೋವಾಗ, ಅದ್ರಲ್ಲೂ ವರ್ಲ್ಡ್​​​ಕಪ್​ನಲ್ಲಿ ಸಕ್ಸಸ್​​ಫುಲ್​ ಆಗಿ ಟೀಂನ್ನ ಲೀಡ್ ಮಾಡಿರುವಾಗ ಈಗಲೇ ರೋಹಿತ್​ರಿಂದ ಕ್ಯಾಪ್ಟನ್ಸಿ ಕಿತ್ತುಕೊಳ್ಳೋದ್ರಲ್ಲಿ ಯಾವ ಅರ್ಥವೂ ಇಲ್ಲ.

Sulekha