ಹಣಕ್ಕಿಂತ ನಿಯತ್ತು ಮುಖ್ಯ ಎಂದ ವಿರಾಟ್ ಕೊಹ್ಲಿ ಆರ್‌ಸಿಬಿ ತೊರೆಯಲು ಮುಂದಾಗಿದ್ದು ಏಕೆ?

ಹಣಕ್ಕಿಂತ ನಿಯತ್ತು ಮುಖ್ಯ ಎಂದ ವಿರಾಟ್ ಕೊಹ್ಲಿ ಆರ್‌ಸಿಬಿ ತೊರೆಯಲು ಮುಂದಾಗಿದ್ದು ಏಕೆ?

2024ರ ಐಪಿಎಲ್​​ ಟೂರ್ನಿಗೆ ಸಂಬಂಧಿಸಿ ಸಾಕಷ್ಟು ಬೆಳವಣಿಗೆಗಳಾಗ್ತಿದೆ. ಎಲ್ಲರ ಫೋಕಸ್ ಈಗ ಐಪಿಎಲ್​ನತ್ತ ಶಿಫ್ಟ್ ಆಗಿದೆ. ಡಿಸೆಂಬರ್​​ನಲ್ಲಿ ಬಿಡ್ಡಿಂಗ್ ನಡೆಯುತ್ತೆ. ಅದಕ್ಕೂ ಮುನ್ನ ಈಗಾಗ್ಲೇ ಫ್ರಾಂಚೈಸಿಗಳ ಮಧ್ಯೆ ಪ್ಲೇಯರ್ಸ್​ಗಳ ಟ್ರೇಡಿಂಗ್ ಕೂಡ ನಡೆದಿದೆ. ಒಂದೇ ಒಂದು ಬಾರಿ ಕಪ್​ ಗೆಲ್ಲದ ರಾಯಲ್ ಚಾಲೆಂಜೆರ್ಸ್​ ಬೆಂಗಳೂರು ಟೀಂನಲ್ಲೂ ಕೆಲ ಬದಲಾವಣೆಗಳಿವೆ. ಈ ಮಧ್ಯೆ, ವಿರಾಟ್ ಕೊಹ್ಲಿ ಆರ್​ಸಿಬಿಗೆ ಗುಡ್​ಬೈ ಹೇಳೋಕೆ ಮುಂದಾಗಿದ್ರು ಅನ್ನೋದ್ರ ಬಗ್ಗೆ ಒಂದಷ್ಟು ಮಾಹಿತಿ ಸಿಕ್ಕಿದೆ. ಡೇ ವನ್​​ನಿಂದಲೂ ಆರ್​ಸಿಬಿಯಲ್ಲೇ ಆಡ್ತಾ ಇರುವ ಕೊಹ್ಲಿ, ತಮ್ಮ ಫೇವರೇಟ್ ಫ್ರಾಂಚೈಸಿಯನ್ನ ಬಿಡೋ ಬಗ್ಗೆ ಯೋಚಿಸಿದ್ಯಾಕೆ? ಮುಂದಿನ ದಿನಗಳಲ್ಲಿ ಫ್ರಾಂಚೈಸಿ ಚೇಂಜ್ ಮಾಡ್ತಾರಾ? ಕೊಹ್ಲಿಗೆ ಯಾವೆಲ್ಲಾ ಫ್ರಾಂಚೈಸಿಗಳು ಆಫರ್ ಮಾಡಿವೆ? ಎಂಬ ವಿವರಣೆ ಇಲ್ಲಿದೆ.

ಇದನ್ನೂ ಓದಿ:ಸೀ ದ ಬಾಲ್ & ಹಿಟ್ ದ ಬಾಲ್ – ಬ್ಯಾಟಿಂಗ್ ಬಿರುಗಾಳಿ ಜೈಸ್ವಾಲ್ ಸಕ್ಸಸ್ ಸೀಕ್ರೆಟ್

ಐಪಿಎಲ್​​ನಲ್ಲಿ ನಾವು ಎರಡು ರೀತಿಯ ಕ್ರಿಕೆಟಿಗರನ್ನ ಕಾಣಬಹುದು. ಕೆಲ ಕ್ರಿಕೆಟರ್ಸ್​​ ಹಣ ಸಿಗುತ್ತೆ ಅಂದ್ರೆ, ಹೆಚ್ಚಿನ ಸ್ಥಾನ ಮಾನ ಸಿಗುತ್ತೆ ಅಂದಕೂಡಲೇ ಒಂದು ಫ್ರಾಂಚೈಸಿಯನ್ನ ಬಿಟ್ಟು ಇನ್ನೊಂದು ಫ್ರಾಂಚೈಸಿಗೆ ಜಂಪ್ ಮಾಡೋದು ಸಹಜ. ಆದರೆ, ಇನ್ನೂ ಕೆಲ ಕ್ರಿಕೆಟರ್ಸ್ ಇರ್ತಾರೆ. ಅವರಿಗೆ ಕೇವಲ ದುಡ್ಡು ಮಾತ್ರ ದೊಡ್ಡದಾಗಿ ಕಾಣುವುದಿಲ್ಲ. ಫ್ರಾಂಚೈಸಿ ಜೊತೆಗೆ ಸ್ಪೆಷಲ್ ಬಾಂಡ್ ಹೊಂದಿರ್ತಾರೆ. ಡೀಪ್ & ಎಮೋಷನಲ್ ರಿಲೇಷನ್​​ಶಿಪ್ ಇಟ್ಟುಕೊಂಡಿರುತ್ತಾರೆ. ಅಂಥ ಕೆಲವೇ ಕೆಲ ಕ್ರಿಕಟರ್ಸ್​​ಗಳ ಪೈಕಿ ವಿರಾಟ್ ಕೊಹ್ಲಿ ಕೂಡ ಒಬ್ಬರು.

ಆರ್​ಸಿಬಿ ಅಂದ್ರೆ ವಿರಾಟ್ ಕೊಹ್ಲಿ.. ವಿರಾಟ್ ಕೊಹ್ಲಿ ಅಂದ್ರೆ ಆರ್​ಸಿಬಿ.. ಇದು ರಾಯಲ್ ಚಾಲೆಂಜೆರ್ಸ್ ಬೆಂಗಳೂರು ಮತ್ತು ವಿರಾಟ್ ಕೊಹ್ಲಿಗೆ ಇರುವ ಕನೆಕ್ಷನ್. ಆದ್ರೆ ಕಳೆದ 16 ವರ್ಷಗಳಿಂದಲೂ ಆರ್​ಸಿಬಿ ಪರವೇ ಆಡುತ್ತಿದ್ದಾರೆ. ಕೇವಲ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಾತ್ರವಲ್ಲ, ಐಪಿಎಲ್​​​ ಇತಿಹಾಸದಲ್ಲಿ ಕೂಡ ವಿರಾಟ್ ಕೊಹ್ಲಿ ವನ್ ಆಫ್ ದಿ ಗ್ರೇಟೆಸ್ಟ್ ಕ್ರಿಕೆಟರ್. ಆದ್ರೇನು ಮಾಡೋದು ಟ್ರೋಫಿ ಗೆಲ್ಲೋ ವಿಚಾರದಲ್ಲಿ ಕೊಹ್ಲಿ ಕೂಡ ಮೋಸ್ಟ್ ಅನ್​ಲಕ್ಕಿ ಪ್ಲೇಯರ್​. 2011ರ ವರ್ಲ್ಡ್​​ಕಪ್​​ ವಿನ್ನಿಂಗ್ ಟೀಂ ಕೊಹ್ಲಿ ಇದ್ದರು. ಹೀಗಾಗಿ ಒಂದು ವಿಶ್ವಕಪ್ ಗೆಲ್ಲೋಕೆ ಸಾಧ್ಯವಾಯ್ತು. ಅದೇ ಕೊನೆ..ಅಲ್ಲಿಂದ ಬಳಿಕ ಇದುವರೆಗೂ ಕೊಹ್ಲಿ ಒಂದೇ ಒಂದು ಬಾರಿ ಯಾವುದೇ ವಿಶ್ವಕಪ್ ಗೆದ್ದಿಲ್ಲ. ಟಿ-20 ವರ್ಲ್ಡ್​​ಕಪ್ ಆಗಲಿ.. ವಂಡೇ ವರ್ಲ್ಟ್​ಕಪ್​.. ವರ್ಲ್ಡ್​​ ಟೆಸ್ಟ್ ಚಾಂಪಿಯನ್​​ಶಿಪ್ ಆಗಲಿ ಗೆದ್ದುಕೊಂಡಿಲ್ಲ. ಇದು ಟೀಂ ಇಂಡಿಯಾದ ಪರ ಆಡೋವಾಗಿನ ಕಥೆಯಾಯ್ತು. ಇನ್ನು ಐಪಿಎಲ್​​​ನಲ್ಲಿ ಕಳೆದ 15 ವರ್ಷಗಳಿಂದ ಕೊಹ್ಲಿ ಆರ್​ಬಿಸಿ ಟೀಂನಲ್ಲೇ ಆಡ್ತಿದ್ದಾರೆ. 2008ರಲ್ಲಿ ಫ್ರಾಂಚೈಸಿ ಸೇರಿಕೊಂಡಿದ್ದ ಕೊಹ್ಲಿ, 2013ರ ಬಳಿಕ ಸುಮಾರು 7 ವರ್ಷಗಳ ಕಾಲ ಕ್ಯಾಪ್ಟನ್ ಕೂಡ ಆಗಿದ್ರು. ಆದ್ರೆ ಇದುವರೆಗೂ ಒಂದೇ ಒಂದು ಬಾರಿ ಟ್ರೋಫಿ ಎತ್ತಿಹಿಡಿಯೋಕೆ ಕೊಹ್ಲಿಗೆ ಸಾಧ್ಯವಾಗಿಲ್ಲ. ಐಪಿಎಲ್​​ನಲ್ಲಿ ಫೈನಲ್​ವರೆಗೆ ತಲುಪಿದ್ದೇ ಕೊಹ್ಲಿ ಟೀಮ್​ನ ಸಾಧನೆ. ಹಾಗಂತಾ ಟ್ರೋಫಿ ಗೆದ್ದಿಲ್ಲ ಅನ್ನೋ ಕಾರಣಕ್ಕೆ ಕೊಹ್ಲಿ ಏನೂ ಫ್ರಾಂಚೈಸಿ ಬಿಟ್ಟಿಲ್ಲ. ಆದ್ರೆ ಬಿಡೋ ಯೋಚನೆಯನ್ನಂತೂ ಮಾಡಿದ್ರಂತೆ. ಬಿಡ್ಡಿಂಗ್​ಗೂ ಮುನ್ನ ಹಲವು ಇತರೆ ಫ್ರಾಂಚೈಸಿಗಳು ಕೊಹ್ಲಿಯನ್ನ ಕಾಂಟ್ಯಾಕ್ಟ್ ಮಾಡಿವೆ. ತಮ್ಮ ಫ್ರಾಂಚೈಸಿಗೆ ಸೇರಿಕೊಳ್ಳುವಂತೆ ಆಫರ್ ಮಾಡಿವೆ. ಆಗ ಕೊಹ್ಲಿ ಕೂಡ ಫ್ರಾಂಚೈಚಿ ಚೇಂಜ್ ಮಾಡುವ ಬಗ್ಗೆ, ಅಂದ್ರೆ ಆರ್​ಸಿಬಿಗೆ ಗುಡ್​​ಬೈ ಹೇಳುವ ಬಗ್ಗೆ ಯೋಚನೆ ಮಾಡಿದ್ರಂತೆ. ಇಂಥದ್ದೊಂದು ಯೋಚನೆ, ಆಫರ್​​ಗಳೆಲ್ಲಾ ಬಂದ್ರೂ ಕೂಡ ಕೊಹ್ಲಿ ಆರ್​ಸಿಬಿ ಹೊಸ್ತಿಲು ದಾಟೋಕೆ ಮಾತ್ರ ಮನಸ್ಸು ಮಾಡಲೇ ಇಲ್ಲ. ಇದಕ್ಕೆ ಕಾರಣ ಏನು ಅನ್ನೋದನ್ನ ಕೂಡ ಕೊಹ್ಲಿ ರಿವೀಲ್ ಮಾಡಿದ್ದಾರೆ. ಫಿಲಾಸಿಕಲ್ ರೀತಿಯಲ್ಲಿ ಕೊಹ್ಲಿ ಆನ್ಸರ್ ಮಾಡಿದ್ದಾರೆ. ಇಟ್ಸ್ ನಾಟ್ ಎಬೌಟ್ ಕ್ರಿಕೆಟ್​.. ಇಟ್ಸ್ ನಾಟ್ ಎಬೌಟ್ ಮನಿ.. ಇಟ್ಸ್ ಎಬೌಟ್ ಲೈಫ್.. ಕೊಹ್ಲಿಗೆ ಇದು ಜೀವನ ಸೂತ್ರ ಪ್ರಶ್ನೆ. ಬದ್ಧತೆ, ನಂಬಿಕೆಯ ಪ್ರಶ್ನೆ.. ಜೀವನದಲ್ಲಿ ನಾವೆಲ್ಲಾ ಇಂತಿಷ್ಟು ವರ್ಷ ಅಂತಾ ಬದುಕುತ್ತೇವೆ.. ಬಳಿಕ ಸಾಯ್ತೇವೆ.. ಲೈಫ್ ಮೂವ್ಸ್ ಆನ್. ಸಾಕಷ್ಟು ಗ್ರೇಟ್​ ಪರ್ಸನಾಲಿಟಿಗಳು ಟ್ರೋಫಿಗಳನ್ನ ಗೆದ್ದಿದ್ದಾರೆ. ಆದ್ರೆ ಯಾರು ಕೂಡ ಅವರನ್ನ ಟ್ರೋಫಿ ಗೆದ್ದಿದ್ದಾರೆ ಅಂತಾ ಗುರುತಿಸೋದಿಲ್ಲ. ಅವನು ವರ್ಲ್ಡ್​​ಕಪ್​ ಚಾಂಪಿಯನ್​.. ಅವನು ಐಪಿಎಲ್​ ಚಾಂಪಿಯನ್ ಅಂತಾ ಗುರುತಿಸೋದಿಲ್ಲ. ಇಂಪಾರ್ಟೆಂಟ್​ ಆಗೋದು, ನೀನು ಒಳ್ಳೆಯ ವ್ಯಕ್ತಿನಾ? ಇಲ್ಲಾ ಕೆಟ್ಟ ವ್ಯಕ್ತಿನಾ ಅನ್ನೋದಷ್ಟೇ. ಒಳ್ಳೆಯ ವ್ಯಕ್ತಿಯಾಗಿದ್ರೆ ಇಷ್ಟ ಪಡ್ತಾರೆ.. ಕೆಟ್ಟ ವ್ಯಕ್ತಿಯಾಗಿದ್ರೆ ದೂರ ಉಳೀತಾರೆ. ನನ್ನ ಪಾಲಿಗೆ ಲಾಯಲ್ಟಿ ಅನ್ನೋದು ಮುಖ್ಯ. ಆರ್​ಸಿಬಿ ನನ್ನ ಮೇಲೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿದೆ. ಹೀಗಾಗಿ ಬೇರೆ ಫ್ರಾಂಚೈಸಿಗೆ ಹೋಗಿ ಟ್ರೋಫಿ ಗೆಲ್ಲೋದಕ್ಕಿಂತ, ಆರ್​ಸಿಬಿ ಜೊತೆಗೆ ಸಂಬಂಧ ಉಳಿಸಿಕೊಳ್ಳೋದು ನನಗೆ ತುಂಬಾ ಮುಖ್ಯ ಅಂತಾ ವಿರಾಟ್ ಕೊಹ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲ, ಡೇ ವನ್​ನಿಂದ ಆರ್​ಸಿಬಿ ನನಗೆ ಸಪೋರ್ಟ್ ಮಾಡುತ್ತಲೇ ಬಂದಿದೆ. ನನ್ನ ಮೇಲೆ ನಂಬಿಕೆ ಇಟ್ಟಿದೆ. ಗೌರವ ಕೊಟ್ಟಿದೆ. ಎಲ್ಲಾ ರೀತಿಯಲ್ಲೂ ನನ್ನನ್ನ ಬೆಂಬಲಿಸಿದೆ. ಹೀಗಾಗಿ ಅದನ್ನ ಉಳಿಸಿಕೊಳ್ಳೋದೆ ನನಗೆ ಮೋಸ್ಟ್ ಇಂಪಾರ್ಟೆಂಟ್​ ಅಂತಾ ಕೊಹ್ಲಿ ಹೇಳಿದ್ದಾರೆ. ಹೀಗಾಗಿ ಹಲವು ಆಫರ್​ಗಳು ಬಂದ್ರೂ ವಿರಾಟ್ ಕೊಹ್ಲಿ ಇನ್ಯಾವ ಫ್ರಾಂಚೈಸಿಗಳನ್ನ ಕೂಡ ಕಣ್ಣೆತ್ತಿಯೂ ನೋಡಿಲ್ಲ.

ಐಪಿಎಲ್​​ನಲ್ಲಿ ಇನ್ನೂ ಕೆಲ ಪ್ಲೇಯರ್ಸ್​​ಗಳು ಕೊಹ್ಲಿಯಂತೆ ಲಾಯಲ್ಟಿ ಉಳಿಸಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮತ್ತು ಮುಂಬೈ ಇಂಡಿಯನ್ಸ್​ನ ರೋಹಿತ್ ಶರ್ಮಾ. ಧೋನಿ ಪಾಲಿಗಂತೂ ಚೆನ್ನೈ ಸೆಕೆಂಡ್ ಹೋಮ್ ಆಗಿದೆ. ಚೆನ್ನೈ ಸೂಪರ್​ ಕಿಂಗ್ಸ್​​ ಮ್ಯಾನೇಜ್ಮೆಂಟ್​ ಜೊತೆಗೆ ಧೋನಿಗೆ ತುಂಬಾ ಸ್ಪೆಷಲ್ ಬಾಂಡ್ ಇದೆ. ಇಡೀ ಫ್ರಾಂಚೈಸಿ ಜೊತೆಗೆ ಎಮೋಷನಲ್ ಅಟ್ಯಾಚ್​ಮೆಂಟ್ ಕೂಡ ಇದೆ. ಧೋನಿ ಇಲ್ಲದ ಚೆನ್ನೈ ಸೂಪರ್​​ ಕಿಂಗ್ಸ್​​ನ್ನ ಊಹಿಸೋಕೂ ಸಾಧ್ಯವಿಲ್ಲ. ಚೆನ್ನೈ ಟೀಮ್​​ನಲ್ಲಿ ಧೋನಿ ಇಲ್ಲದೇ ಇದ್ರೆ ಆ ಫ್ರಾಂಚೈಸಿ ಫೈನಾನ್ಷಿಯಲಿ ಕೂಡ ಸಾಕಷ್ಟು ಹೊಡೆತ ತಿನ್ನೋದು ಗ್ಯಾರಂಟಿ. ಚೆನ್ನೈ ಟೀಮ್​ನ ಮಾರ್ಕೆಟ್ ವ್ಯಾಲ್ಯೂ ಅಕ್ಷರಶ: ಧೋನಿ ಕೈಯಲ್ಲೇ ಇದೆ. ಮ್ಯಾಚ್​ ಫಿಕ್ಸಿಂಗ್ ಆರೋಪದಿಂದಾಗಿ 2015ರಲ್ಲಿ ಸಿಎಸ್​ಕೆ ಎರಡು ವರ್ಷಗಳ ಕಾಲ ಬ್ಯಾನ್ ಆಗಿತ್ತು. ಬಳಿಕ ಧೋನಿ ರೈಸಿಂಗ್ ಪುಣೆ ಸೂಪರ್​ ಜಯಾಂಟ್ಸ್​ ಫ್ರಾಂಚೈಸಿಯನ್ನ ಸೇರಿಕೊಂಡಿದ್ರೆ. 2018ರಲ್ಲಿ ಸಿಎಸ್​​ಕೆ ಬ್ಯಾನ್ ಲಿಫ್ಟ್ ಆಗುತ್ತಲೇ ಮತ್ತೆ ಚೆನ್ನೈ ಸೂಪರ್​​ ಕಿಂಗ್ಸ್​​ ಕ್ಯಾಪ್ಟನ್ ಆಗಿ ಕಮ್​ಬ್ಯಾಕ್ ಮಾಡಿದ್ರು. ಧೋನಿ ರೀತಿಯಲ್ಲೇ ಒಂದು ಫ್ರಾಂಚೈಸಿಗೆ ಸ್ಟಿಕ್​ ಆನ್ ಆಗಿರೋ ಮತ್ತೊಬ್ಬ ಪ್ರಮುಖ ಪ್ಲೇಯರ್​ ರೋಹಿತ್ ಶರ್ಮಾ. ಐಪಿಎಲ್​​ ಆರಂಭದಲ್ಲಿ ರೋಹಿತ್​​ ಹೈದರಾಬಾದ್ ಡೆಕ್ಕನ್ ಚಾರ್ಜಸ್​ನಲ್ಲಿದ್ರು. ಅಲ್ಲೂ ಐಪಿಎಲ್​​ ಟ್ರೋಫಿ ಗೆದ್ದಿದ್ರು. ನಂತರ ಮುಂಬೈ ಇಂಡಿಯನ್ಸ್​ ಜಾಯಿನ್ ಆದ ರೋಹಿತ್ ಈವರೆಗೂ ತಿರುಗಿ ನೋಡಿದ್ದೇ ಇಲ್ಲ. ಈಗ ಹಾರ್ದಿಕ್ ಪಾಂಡ್ಯಾ ಮುಂಬೈಗೆ ಕಮ್​ಬ್ಯಾಕ್​ ಮಾಡೋವಾಗ, ರೋಹಿತ್ ಶರ್ಮಾ ಗುಜರಾತ್ ಟೈಟಾನ್ಸ್​ ಸೇರಿಕೊಳ್ತಾರೆ ಅಂತಾ ಹೇಳಲಾಗ್ತಿತ್ತು. ಆದ್ರೆ, ಮುಂಬೈನ ಮೋಸ್ಟ್ ಸಕ್ಸಸ್​​ಫುಲ್ ಕ್ಯಾಪ್ಟನ್ ರೋಹಿತ್ ಶರ್ಮಾ ಬೇರೆ ಯಾವುದೇ ಫ್ರಾಂಚೈಸಿಗಳನ್ನ ಸೇರಿಕೊಳ್ತಿಲ್ಲ. ಮುಂಬೈ ಇಂಡಿಯನ್ಸ್​ನಲ್ಲೇ ಕಂಟಿನ್ಯೂ ಆಗ್ತಿದ್ದಾರೆ. ಒಂದು ವೇಳೆ ಹಾರ್ದಿಕ್ ಪಾಂಡ್ಯಾರನ್ನ ಕ್ಯಾಪ್ಟನ್ ಮಾಡಿದ್ರೂ ಕೂಡ ರೋಹಿತ್ ಅವರ ಅಂಡರ್​ನಲ್ಲೇ ಆಡೋದು ಗ್ಯಾರಂಟಿ. ಇದು ಮುಂಬೈ ಇಂಡಿಯನ್ಸ್ ವಿಚಾರವಾಗಿ ರೋಹಿತ್ ಶರ್ಮಾಗೆ ಇರುವ ಕಮಿಟ್​ಮೆಂಟ್. ಹೀಗಾಗಿ ಐಪಿಎಲ್​​ನಲ್ಲಿ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್​​ ಶರ್ಮಾ ಉಳಿದ ಎಲ್ಲಾ ಆಟಗಾರರಿಗಿಂತಲೂ ಡಿಫರೆಂಟ್ ಎನ್ನಿಸಿಕೊಳ್ತಾರೆ. ಈ ಮೂವರು ಪ್ಲೇಯರ್ಸ್​ಗಳು ಈಗ ಇರೋ ಫ್ರಾಂಚೈಸ್​ನಲ್ಲೇ ಮುಂದುವರಿದ್ರೆ ಅದಕ್ಕೊಂದು ವ್ಯಾಲ್ಯೂ ಇರುತ್ತೆ. ಯಾಕಂದ್ರೆ ಆರ್​ಸಿಬಿ ಕೊಹ್ಲಿಯನ್ನ ಡಿಪೆಂಡ್ ಆಗಿದೆ, ಸಿಎಸ್​​ಕೆ ಧೋನಿಯನ್ನ ಡಿಪೆಂಡ್ ಆಗಿದೆ, ಎಮ್​ಐ ರೋಹಿತ್​ರನ್ನ ಡಿಪೆಂಡ್ ಆಗಿದೆ. ಈ ಮೂವರು ಪ್ಲೇಯರ್ಸ್​​ಗಳು ಈ ಮೂರೂ ಪ್ರಾಂಚೈಸ್​​ನಲ್ಲಿ ಇಲ್ಲಾಂದ್ರೆ ಆ ಫ್ರಾಂಚೈಸಿ ಎಲ್ಲಾ ರೀತಿಯಲ್ಲೂ ಹೊಡೆತ ತಿನ್ನುತ್ತೆ. ಹಾರ್ದಿಕ್ ಪಾಂಡ್ಯಾ ಈಗ ಮುಂಬೈ ಇಂಡಿಯನ್ಸ್​ಗೆ ಕಮ್​ಬ್ಯಾಕ್ ಮಾಡಿದ್ರೂ ಕೂಡ ರೋಹಿತ್​ ಶರ್ಮಾ ಇದ್ರಷ್ಟೇ ಆ ಫ್ರಾಂಚೈಸಿಗೆ ಒಂದು ವ್ಯಾಲ್ಯೂ ಇರುತ್ತೆ. ಈಗಾಗ್ಲೇ ಹಲವು ಮಂದಿ ರೋಹಿತ್​​ ಮುಂಬೈನಲ್ಲಿದ್ರಷ್ಟೇ ನಾವು ಮುಂಬೈ ಇಂಡಿಯನ್ಸ್​​ಗೆ ಸಪೋರ್ಟ್​ ಮಾಡೋದಾಗಿ ಹೇಳ್ತಿದ್ದಾರೆ.

Sulekha