ಎರಡನೇ ಟಿ20 ಪಂದ್ಯಕ್ಕೆ ಟೀಮ್ ಇಂಡಿಯಾ ರೆಡಿ – ತಿರುವನಂತಪುರಂನಲ್ಲಿ ಭಾರತದ ದಾಖಲೆ ಹೇಗಿದೆ?

ಎರಡನೇ ಟಿ20 ಪಂದ್ಯಕ್ಕೆ ಟೀಮ್ ಇಂಡಿಯಾ ರೆಡಿ –  ತಿರುವನಂತಪುರಂನಲ್ಲಿ ಭಾರತದ ದಾಖಲೆ ಹೇಗಿದೆ?

ಭಾರತ vs ಆಸ್ಟ್ರೇಲಿಯಾ.. ಫಸ್ಟ್ ಟಿ-20 ಮ್ಯಾಚ್​ಲ್ಲಿ ಗೆಲುವು ಕಂಡಿದ್ದಾಯ್ತು. ಸೂರ್ಯಕುಮಾರ್ ಯಾದವ್​ ಮತ್ತು ರಿಂಕು ಸಿಂಗ್ ಥ್ರಿಲ್ಲಿಂಗ್​ ಬ್ಯಾಟಿಂಗ್​​ನಿಂದಾಗಿ ಟೀಂ ಇಂಡಿಯಾ ಪಂದ್ಯವನ್ನ ಗೆದ್ದಿತ್ತು. ಇದೀಗ ಸೆಕೆಂಡ್ ಮ್ಯಾಚ್.. ಕೇರಳದ ತಿರುವನಂತಪುರಂನಲ್ಲಿ ಮತ್ತೊಮ್ಮೆ ಭಾರತ-ಆಸ್ಟ್ರೇಲಿಯಾ ಮುಖಾಮುಖಿಯಾಗ್ತಿವೆ. ಸೆಕೆಂಡ್ ಟಿ-20 ಪಂದ್ಯ ನಡೆಯುವುದು ಎಲ್ಲಿ. ಪಿಚ್ ಹೇಗಿದೆ? ಎಂಬ ಬಗ್ಗೆ ವಿವರ ಇಲ್ಲಿದೆ.

ಇದನ್ನೂ ಓದಿ: ವಿಶ್ವಕಪ್ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಟೌಟ್..! – ವೈರಲ್ ಫೋಟೋ ಹಿಂದಿರುವ ಅಸಲಿಯತ್ತೇನು?

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ತಿರುವನಂತಪುರಂನಲ್ಲಿ ನಡೆಯಲಿದೆ. ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಆದರೆ, ಎರಡನೇ ಪಂದ್ಯದಲ್ಲಿ ಕೆಲವೊಂದು ರೋಚಕತೆ ಇರಲಿದೆ. ಆಸ್ಟ್ರೇಲಿಯಾದ ಇಬ್ಬರು ಘಟಾನುಘಟಿಗಳು 2ನೇ ಪಂದ್ಯದಲ್ಲಿ ಅಖಾಡಕ್ಕಿಳಿಯುವ ಸಾಧ್ಯತೆ ಇದೆ. ಟ್ರಾವಿಸ್ ಹೆಡ್ ಮತ್ತು ಗ್ಲೇನ್ ಮ್ಯಾಕ್ಸ್​ವೆಲ್ ಅಖಾಡಕ್ಕಿಳಿಯಲಿದ್ದಾರೆ. ಆಸ್ಟ್ರೇಲಿಯಾದ ಬ್ಯಾಟಿಂಗ್ ಲೈನ್​ಅಪ್ ತುಂಬಾ ಸ್ಟ್ರಾಂಗ್ ಆಗಿದೆ.

ಇನ್ನು ಪಿಚ್​​ ರಿಪೋರ್ಟ್​​ಗೆ ಬರೋದಾದ್ರೆ.. ತಿರುವನಂತಪುರಂನ ಗ್ರೀನ್​ಫೀಲ್ಡ್​ ಸ್ಟೇಡಿಯಂನ ಗ್ರೌಂಡ್ ಹೆಸರಿಗೆ ತಕ್ಕಂತೆ ಅತ್ಯಂತ ಹಸಿರಾಗಿದೆ. ಸಾಮಾನ್ಯವಾಗಿ ಇಂಡಿಯನ್​​ ಗ್ರೌಂಡ್​​ಗಳಲ್ಲಿ ಹುಲ್ಲು ಇಷ್ಟೊಂದು ಹಸಿರಾಗಿರೋದಿಲ್ಲ. ಆದ್ರೆ, ಗ್ರೀನ್​ಲ್ಯಾಂಡ್​ ಗ್ರೌಂಡ್​ನ್ನ ನೋಡೋವಾಗ ಇಂಗ್ಲೆಂಡ್, ನ್ಯೂಜಿಲ್ಯಾಂಡ್​​ನ ಗ್ರೌಂಡ್​​ಗಳಂತೆ ಕಾಣ್ಸುತ್ತೆ. ಇದೇನು ಹೈಸ್ಕೋರಿಂಗ್ ಗ್ರೌಂಡ್ ಆಗಿಲ್ಲ. ಇದುವರೆಗೆ ಇಲ್ಲಿ ನಾಲ್ಕು ಇಂಟರ್​​ನ್ಯಾಷನಲ್​ ಮ್ಯಾಚ್​ಗಳಾಗಿದ್ದು, ಎಲ್ಲವೂ ಲೋ ಸ್ಕೋರ್​​ ಮ್ಯಾಚ್​ಗಳೇ. ತಿರುವನಂತಪುರಂನಲ್ಲಿ ಒಟ್ಟು ಮೂರು ಅಂತಾರಾಷ್ಟ್ರೀಯ ಟಿ-20 ಮ್ಯಾಚ್​​ಗಳಾಗಿವೆ. ಎವ್​ರೇಜ್ ಸ್ಕೋರ್​ ಅಂದ್ರೆ 114 ರನ್. ಇಲ್ಲಿ ಬೌಲರ್ಸ್​ಗಳಿಗೆ ಹೆಚ್ಚು ಅಡ್ವಾಂಟೇಜ್ ಇದೆ. ಎಸ್ಪೆಷಲಿ ಸೀಮರ್ಸ್​ ಮತ್ತು ಸ್ಪಿನ್ನರ್ಸ್​ಗಳಿಗೆ. ಬಾಲ್​ ಮೂವ್​ಮೆಂಟ್ ಹೆಚ್ಚಿರುತ್ತೆ. ಸ್ವಿಂಗ್.. ಸ್ಪಿನ್ ಚೆನ್ನಾಗಿ ಆಗುತ್ತೆ. ಚೇಸಿಂಗ್​ ಮಾಡಿದ ತಂಡ ಎರಡು ಬಾರಿ ಗೆದ್ದಿದೆ. ಹೀಗಾಗಿ ಇಲ್ಲೂ ಟಾಸ್ ವಿನ್ ಆದ್ರೆ ಫಸ್ಟ್ ಬೌಲಿಂಗ್ ಮಾಡುವ ಸಾಧ್ಯತೆ ಹೆಚ್ಚಿದೆ. ಬ್ಯಾಟಿಂಗ್ ಚೂಸ್​ ಮಾಡಿದ ಮಾತ್ರಕ್ಕೆ ಗೆಲ್ಲೋಕೆ ಸಾಧ್ಯವಿಲ್ಲ ಅಂತೇನಲ್ಲ. ಇಲ್ಲಿ ಆಗಿರೋದು ಮೂರು ಇಂಟರ್​​ನ್ಯಾಷಲ್ ಟಿ-20 ಮ್ಯಾಚ್​ಗಳು. ಹೀಗಾಗಿ ಅಟ್​ದಿ ಮೂಮೆಂಟ್ ಹೆಚ್ಚೇನೂ ಹೇಳೋಕೆ ಆಗಲ್ಲ. ಇನ್ನೊಂದು ಸಂಗತಿ ಏನಂದ್ರೆ ನೈಟ್ ಮ್ಯಾಚ್​ ನಡೆಯೋದು. ಒಂದು ವೇಳೆ ಡೇ & ನೈಟ್ ವಂಡೇ ಮ್ಯಾಚ್​ ಆಗ್ತಿದ್ರೆ. ಸೆಕೆಂಡ್ ಇನ್ನಿಂಗ್ಸ್​​ನಲ್ಲಿ ಬೌಲಿಂಗ್ ಮಾಡೋ ತಂಡಕ್ಕೆ ಡ್ಯೂ ಪ್ರಾಬ್ಲಂ ಆಗಬಹುದು ಅಂತಾ ಹೇಳ್ಬಹುದು. ಆದ್ರೆ, ಇದು ನೈಟ್ ಮ್ಯಾಚ್​ ಆಗಿರೋದ್ರಿಂದ ಎರಡೂ ಟೀಂಗಳು ಡ್ಯೂವನ್ನ ಎದುರಿಸಬೇಕಾಗುತ್ತೆ. ಹೀಗಾಗಿ ಫಸ್ಟ್ ಬ್ಯಾಟಿಂಗ್ OR ಬೌಲಿಂಗ್..ಯಾರು ಬೇಕಾದ್ರೂ ಗೆಲ್ಲಬಹುದು.

ಇನ್ನು ಟೀಂ ಇಂಡಿಯಾದ ಪ್ಲೇಯಿಂಗ್-11 ಹೇಗಿರಬಹುದು? ಸಂಭಾವ್ಯ ತಂಡದಲ್ಲಿ ಯಾರೆಲ್ಲಾ ಇರಬಹುದು ಅಂತಾ ನೋಡೋದಾದರೆ,

ಟೀಂ ಇಂಡಿಯಾ PLAYING-11?

  • ಯಶಸ್ವಿ ಜೈಸ್ವಾಲ್
  • ರುತುರಾಜ್ ಗಾಯಕ್ವಾಡ್
  • ಇಶಾನ್ ಕಿಶನ್
  • ಸೂರ್ಯಕುಮಾರ್ ಯಾದವ್
  • ತಿಲಕ್ ವರ್ಮಾ
  • ರಿಂಕು ಸಿಂಗ್
  • ವಾಷಿಂಗ್ಟನ್ ಸುಂದರ್
  • ಅಕ್ಸರ್ ಪಟೇಲ್
  • ರವಿ ಬಿಷ್ಣೋಯಿ
  • ಅರ್ಶ್​​ದೀಪ್ ಸಿಂಗ್
  • ಪ್ರಸಿಧ್ ಕೃಷ್ಣ

ಇದು ಆಸ್ಟ್ರೇಲಿಯಾ ವಿರುದ್ಧದ ಸೆಕೆಂಡ್ ಮ್ಯಾಚ್​ಗೆ ಟೀಂ ಇಂಡಿಯಾದ ಸಂಭಾವ್ಯ ತಂಡ. ಸೂರ್ಯಕುಮಾರ್​ ಕ್ಯಾಪ್ಟನ್ಸಿಯಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಈ ಸೀರಿಸ್​​ನ್ನ ಆಡ್ತಾ ಇದೆ. ಫಸ್ಟ್​ ಮ್ಯಾಚ್​​ನಲ್ಲಿ ಮೂವರು ಬ್ಯಾಟ್ಸ್​​ಮನ್​ಗಳು ಟೀಂಗೆ ನೆರವಾಗಿದ್ರು. ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್. ಆದ್ರೆ ಈ ಮ್ಯಾಚ್​​ನಲ್ಲಿ ಉಳಿದವರ ಬ್ಯಾಟ್​​ನಿಂದಲೂ ರನ್ ಬರಬೇಕಾದ ಅವಶ್ಯಕತೆ ಇದೆ. ಅಫ್​​ಕೋಸ್ ಮತ್ತೊಮ್ಮೆ ಸೆಂಟರ್​ ಆಫ್ ಅಟ್ರಾಕ್ಷನ್ ಆಗಿರೋದು ರಿಂಕು ಸಿಂಗ್. ಈ ಬಾರಿ ಫಸ್ಟ್​ ಬ್ಯಾಟಿಂಗ್ ಮೂಲಕ ಫಿನಿಶ್ ಮಾಡ್ತಾರಾ? ಇಲ್ಲಾ ಚೇಸಿಂಗ್​​ನಲ್ಲಿ ಫಿನಿಷ್ ಮಾಡ್ತಾರಾ ನೋಡ್ಬೇಕು.

Sulekha