ಟಾಯ್ಲೆಟ್ನಲ್ಲಿ ಕುಳಿತು ಪೇಪರ್ ಓದುವುದು, ಫೋನ್ ಬಳಸುತ್ತೀರಾ?
ಕೆಲವರು ಕುಂತ್ರೂ ನಿಂತ್ರೂ ಮಲಗಿದ್ರೂ ಮೊಬೈಲ್ ನಲ್ಲೇ ಮುಳುಗಿರ್ತಾರೆ. ನೀವು ಟಾಯ್ಲೆಟ್ ನಲ್ಲಿ ಕುಳಿತು ಮೊಬೈಲ್ ಯೂಸ್ ಮಾಡೋದು, ಪೇಪರ್ ಓದುವಂತಹ ಅಭ್ಯಾಸ ಬೆಳೆಸಿಕೊಂಡಿದ್ದೀರಾ? ಹಾಗಾದ್ರೆ ಈ ವಿಚಾರವನ್ನು ನೀವು ತಿಳಿದುಕೊಳ್ಳಲೇಬೇಕು. ಯಾಕೆ ಅನ್ನೋ ಮಾಹಿತಿ ಇಲ್ಲಿದೆ..
ಇದನ್ನೂ ಓದಿ: ಪವರ್ ಬ್ಯಾಂಕ್ ನಲ್ಲಿ ಫೋನ್ ಚಾರ್ಜ್ ಮಾಡ್ತೀರಾ? – ಸ್ಮಾರ್ಟ್ ಫೋನ್ ಬ್ಯಾಟರಿ ಹಾಳಾಗುತ್ತೆ ಹುಷಾರ್!
ಕೆಲವರು ಮೊಬೈಲ್ ಬಿಟ್ಟು ನೆಮ್ಮದಿಯಿಂದ 5 ಟಾಯ್ಲೆಟ್ ನಲ್ಲಿ ಕಾಲ ಕಳೆಯಲ್ಲ.ಇನ್ನು ಕೆಲವರು ಪೇಪರ್ ಓದುವ ಟೈಮ್ ಉಳಿಸಿಕೊಳ್ಳೋದಿಕ್ಕೆ ಟಾಯ್ಲೆಟ್ ನಲ್ಲೇ ಪೇಪರ್ ಓದುತ್ತಾರೆ. ವೆಸ್ಟರ್ನ್ ಕಮೋಡ್ ಮೇಲೆ ಕುಳಿತುಕೊಳ್ಳುವ ಇಂತವರಿಗೆ ಟೈಮ್ ಹೋಗೋದೇ ಗೊತ್ತಾಗೋದಿಲ್ಲ. ಆದ್ರೆ ನಿರಂತರವಾಗಿ ಈ ಅಭ್ಯಾಸವನ್ನ ಬೆಳೆಸಿಕೊಂಡವರಿಗೆ ಪೈಲ್ಸ್ ಬರೋದು ಗ್ಯಾರಂಟಿ.
ಇತ್ತೀಚೆಗೆ ಮೂಲವ್ಯಾಧಿ ಸಮಸ್ಯೆ ಬಳಲುವವರು ವೈದ್ಯರ ಬಳಿ ಹೋದಾಗ ಡಾಕ್ಟರ್ ಒಂದು ಪ್ರಶ್ನೆ ಕೇಳ್ತಾರಂತೆ. ನೀವು ಟಾಯ್ಲೆಟ್ ನಲ್ಲಿ ಮೊಬೈಲ್ ಯೂಸ್ ಮಾಡ್ತೀರಾ ಅಂತಾ. ಟಾಯ್ಲೆಟ್ನಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದು ಮತ್ತು ಟಾಯ್ಲೆಟ್ಗೆ ಹೋಗುವಾಗ ನಿಮ್ಮ ಫೋನ್ ಅನ್ನು ಬಳಸೋದು ಪೈಲ್ಸ್ ಎಂದು ಕರೆಯಲ್ಪಡುವ ಹೆಮೊರೊಯಿಡ್ಸ್ ಅನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸುತ್ತದೆ. ಹೆಮೊರೊಯಿಡ್ಸ್ ನೋವಿನಿಂದ ಕೂಡಿದ್ದು ತೀವ್ರತರವಾದ ಪ್ರಕರಣಗಳಲ್ಲಿ ರಕ್ತಸ್ರಾವವಾಗುವ ಅಪಾಯ ಇದೆ ಅಂತಾ ತಜ್ಞರು ಹೇಳ್ತಾರೆ. ಹೀಗಾಗಿ ನೀವೇನಾದ್ರೂ ಅಂತಹ ಅಭ್ಯಾಸ ಬೆಳೆಸಿಕೊಂಡಿದ್ರೆ ಈಗ್ಲೇ ಅದನ್ನ ಬಿಟ್ಟುಬಿಡಿ.