ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಡಿಸೆಂಬರ್ 14 ಕೊನೇ ದಿನ!
ಬೆಂಗಳೂರು: ಆಧಾರ್ ಕಾರ್ಡ್ ಭಾರತದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದ್ದು, ಇವಾಗಂತೂ ಆಧಾರ್ ಕಾರ್ಡ್ ಎಲ್ಲದಕ್ಕೂ ಕಡ್ಡಾಯ ಮಾಡಲಾಗಿದೆ. ಜೊತೆಗೆ ಆಧಾರ್ ಮೂಲಕ ಅನೇಕ ಸೌಲಭ್ಯಗಳನ್ನ ಮಾಡಬಹುದಾಗಿದೆ. ಇದೀಗ ಆಧಾರ್ ಕಾರ್ಡ್ ಮಾಡಿಸಿ 10 ವರ್ಷಕ್ಕಿಂತ ಜಾಸ್ತಿಯಾಗಿರುವವರು ಅಪ್ಡೇಟ್ ಮಾಡಿಸಲು ಡೆಡ್ಲೈನ್ ನಿಗದಿ ಮಾಡಲಾಗಿದೆ. ಇದುವರೆಗೆ ಒಮ್ಮೆಯೂ ಅಪ್ಡೇಟ್ ಮಾಡಿಸದೇ ಇರುವವರು ಡಿಸೆಂಬರ್ 14ರ ಒಳಗೆ ಅಪ್ಡೇಟ್ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಹೌದು, 2011ರಿಂದ 2015ರೊಳಗೆ ಆಧಾರ್ ಕಾರ್ಡ್ ಮಾಡಿಸಿಕೊಂಡು ಒಮ್ಮೆಯೂ ಅಪ್ಡೇಟ್ ಮಾಡದವರಿಗೆ ಇದೀಗ ಅಪ್ಡೇಟ್ ಮಾಡುವಂತೆ ಕಟ್ಟುನಿಟ್ಟಿನ ಆದೇಶ ಇದೆ. ಈ ಸಂಬಂಧ ಪ್ರತಿಯೊಬ್ಬರ ಮೊಬೈಲ್ಗೆ ಮೆಸೇಜ್ ಬರುತ್ತಿದೆ. ಇದೀಗ ಆಧಾರ್ ಕಾರ್ಡ್ ಅನ್ನು ಡಿಸೆಂಬರ್ 14 ಒಳಗೆ ಅಪ್ಡೇಟ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ 50 ಶುಲ್ಕ ರೂ ಪಾವತಿಸಿ ನಿಮ್ಮ ಆಧಾರ್ ಅಪ್ಡೇಟ್ ಮಾಡಿಕೊಳ್ಳಬೇಕಾಗುತ್ತದೆ.
ಡಿಸೆಂಬರ್ 14 ರ ಒಳಗೆ ಭಾರತೀಯ ನಿವಾಸಿಗಳು ತಮ್ಮ ಮಾಹಿತಿಯನ್ನು-ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ ಮತ್ತು ಇಮೇಲ್, ಇಮೇಲ್ ಇಲ್ಲದೇ ಆನ್ಲೈನ್ ಪೋರ್ಟಲ್ ಮೂಲಕ ಮಾರ್ಪಡಿಸಲು ಅಥವಾ ಸರಿಪಡಿಸಲು ಅವಕಾಶವನ್ನು ಹೊಂದಿರುತ್ತಾರೆ.
ಇದನ್ನೂ ಓದಿ: ಸಿಕ್ಸರ್ ಬಾರಿಸಿದರೂ ಸ್ಕೋರ್ ಬೋರ್ಡ್ನಲ್ಲಿ ದಾಖಲಾಗಲಿಲ್ಲ – ರಿಂಕು ಸಿಂಗ್ ಸಿಕ್ಸರ್ ಕಥೆ ಏನು?
ತಮ್ಮ ಭಾವಚಿತ್ರ, ಐರಿಸ್ ಅಥವಾ ಇತರ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸಬೇಕಾದ ವ್ಯಕ್ತಿಗಳು ಇನ್ನೂ ಆಧಾರ್ ನೋಂದಣಿ ಕೇಂದ್ರಕ್ಕೆ ವೈಯಕ್ತಿಕವಾಗಿ ಭೇಟಿ ನೀಡಬೇಕು ಮತ್ತು ಅನ್ವಯವಾಗುವ ಶುಲ್ಕವನ್ನು ಪಾವತಿಸಬೇಕು. ಫಿಂಗರ್ಪ್ರಿಂಟ್ಗಳು, ಐರಿಸ್ ಪ್ಯಾಟರ್ನ್ಗಳು ಮತ್ತು ಇತರ ಬಯೋಮೆಟ್ರಿಕ್ ಡೇಟಾವನ್ನು ಸ್ಕ್ಯಾನ್ ಮಾಡಲು ದಾಖಲಾತಿ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಅಪ್ಡೇಟ್ಗಳಿಗೆ ವಿಶೇಷ ಉಪಕರಣಗಳ ಬಳಕೆಯ ಅಗತ್ಯವಿರುತ್ತದೆ.
ಹೆಚ್ಚುವರಿಯಾಗಿ ಬಯೋಮೆಟ್ರಿಕ್ ಅಪ್ಡೇಟ್ ಪ್ರಕ್ರಿಯೆಯು ಸಂಭಾವ್ಯ ಸೈಬರ್ ಕ್ರೈಂ ಚಟುವಟಿಕೆಗಳನ್ನು ತಡೆಗಟ್ಟಲು ಅಗತ್ಯವಾದ ಪರಿಶೀಲನಾ ಕಾರ್ಯವಿಧಾನಗಳನ್ನು ಸಹ ಒಳಗೊಂಡಿದೆ. ನೀವು ನಿಮ್ಮ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಬೇಕೆಂದರೆ ಇಂದೇ ಹತ್ತಿರದ ಆಧಾರ್ ಸೆಂಟರ್ ಗೆ ಭೇಟಿ ನೀಡಿ ಪರಿಶೀಲನೆ ಮಾಡಿಕೊಳ್ಳುವುದು ಉತ್ತಮ.