ಸಿಕ್ಸರ್ ಬಾರಿಸಿದರೂ ಸ್ಕೋರ್ ಬೋರ್ಡ್‌ನಲ್ಲಿ ದಾಖಲಾಗಲಿಲ್ಲ – ರಿಂಕು ಸಿಂಗ್ ಸಿಕ್ಸರ್ ಕಥೆ ಏನು?

ಸಿಕ್ಸರ್ ಬಾರಿಸಿದರೂ ಸ್ಕೋರ್ ಬೋರ್ಡ್‌ನಲ್ಲಿ ದಾಖಲಾಗಲಿಲ್ಲ – ರಿಂಕು ಸಿಂಗ್ ಸಿಕ್ಸರ್ ಕಥೆ ಏನು?

ಆಸ್ಟ್ರೇಲಿಯಾ ವಿರುದ್ಧದ ಫಸ್ಟ್ ಟಿ-20 ಮ್ಯಾಚ್​​ನ್ನ ಟೀಂ ಇಂಡಿಯಾ ರೋಚಕವಾಗಿ ಗೆದ್ದುಕೊಂಡಿದೆ. ಟೀಂ ಇಂಡಿಯಾ ಟಾಸ್ ಗೆದ್ದು ಆಸ್ಟ್ರೇಲಿಯಾವನ್ನ ಮೊದಲು ಬ್ಯಾಟಿಂಗ್​ಗೆ ಇಳಿಸಿತ್ತು. ಅಸ್ಸೀಗಳು 20 ಓವರ್​​ನಲ್ಲಿ ಕೇವಲ 3 ವಿಕೆಟ್​ಗಳನ್ನ ಕಳೆದುಕೊಂಡು ಬರೋಬ್ಬರಿ 208 ರನ್ ಗಳಿಸಿದ್ದರು. ಇತ್ತ ಟೀಂ ಇಂಡಿಯಾ 8 ವಿಕೆಟ್​​ಗಳನ್ನ ಕಳೆದುಕೊಂಡು ಕೊನೆಗೂ ಟಾರ್ಗೆಟ್​​ನ್ನ ಚೇಸ್​​ ಮಾಡಿತ್ತು. ಆದ್ರೆ ಈ ಮ್ಯಾಚ್​​ನಲ್ಲಿ ಕೆಲ ಇಂಟ್ರೆಸ್ಟಿಂಗ್​ ಬೆಳವಣಿಗೆಗಳು ನಡೆದಿದೆ. ಅದ್ರಲ್ಲೂ ರಿಂಕು ಸಿಂಗ್​ ಲಾಸ್ಟ್​ ಬಾಲ್​ಗೆ ಹೊಡೆದ ಸಿಕ್ಸ್ ಕೌಂಟೇ ಆಗಿಲ್ಲ. ಸಿಕ್ಸರ್ ಹೊಡೆದ್ರೂ ಸಿಕ್ಕಿದ್ದು ಒಂದು ರನ್ ಮಾತ್ರ. ಇದಕ್ಕೆ ಕಾರಣ ಏನು ಅನ್ನೋದರ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಗ್ರೇಟ್ ಚೇಸರ್ ರಿಂಕು ಸಿಂಗ್..!- ಮೊದಲ ಪಂದ್ಯದಲ್ಲೇ ಸೇಡು ತೀರಿಸಿಕೊಂಡ ಭಾರತ

ಆಸ್ಟ್ರೇಲಿಯಾ ವಿರುದ್ಧದ ಫಸ್ಟ್ ಟಿ-20 ಮ್ಯಾಚ್​​ನಲ್ಲಿ ಟೀಂ ಇಂಡಿಯಾದ ಸ್ಟಾರ್ ಆಫ್ ಅಟ್ರಾಕ್ಷನ್ ಅಂದ್ರೆ ಕ್ಯಾಪ್ಟನ್ ಸೂರ್ಯಕುಮಾರ್ ಮತ್ತು ಫಿನಿಷರ್ ರಿಂಕು ಸಿಂಗ್. ಈ ಮ್ಯಾಚ್​​ನಲ್ಲಿ ಒಟ್ಟು ಮೂವರು ಬ್ಯಾಟ್ಸ್​ಮನ್​ಗಳು ತಂಡದ ಗೆಲುವಿಗೆ ಪ್ರಮುಖ ಕಾರಣರಾದ್ರು. ಇಶಾನ್ ಕಿಶನ್​ 58 ರನ್​ ಹೊಡೆದಿದ್ರು. ಸೂರ್ಯಕುಮಾರ್ ಯಾದವ್ 80 ರನ್ ಮಾಡಿದ್ರು. ನಂತರ ರಿಂಕು ಸಿಂಗ್ ಅತ್ಯಂತ ಕ್ರೂಶಿಯಲ್​​ ಇನ್ನಿಂಗ್ಸ್ ಆಡಿ 22 ರನ್​ ಮಾಡಿದ್ರು. ರಿಂಕು ಸಿಂಗ್​ರ ಆ 22 ರನ್​ನಿಂದಾಗಿಯೇ ಟೀಂ ಇಂಡಿಯಾ ಈ ಮ್ಯಾಚ್​​ನ್ನ ಗೆಲ್ಲೋಕೆ ಸಾಧ್ಯವಾಯ್ತು. ಯಾಕಂದ್ರೆ ಕೊನೆಯಲ್ಲಿ ಟೀಂ ಇಂಡಿಯಾ ಮೇಲಿಂದ ಮೇಲೆ ವಿಕೆಟ್​​ಗಳನ್ನ ಕಳೆದುಕೊಂಡು ಒಂದಷ್ಟು ಡ್ರಾಮಾ ನಡೀತು. ಇನ್ನೇನು ಮ್ಯಾಚ್​ ಸೋತೇ ಬಿಟ್ರು ಅನ್ನೋ ಟೈಮ್​ನಲ್ಲಿ ಫಿನಿಷಿಂಗ್ ಮಾಸ್ಟರ್ ರಿಂಕು ಸಿಂಗ್ ತಮ್ಮ ನ್ಯಾಚ್ಯುರಲ್​ ಸ್ಟೈಲ್​​ನಲ್ಲಿ ಫೀಯರ್​​ಲೆಸ್ ಆಗಿ ಬ್ಯಾಟ್ ಬೀಸಿದ್ರು. ಕೊನೆಯ 6 ಬಾಲ್​​ಗಳಲ್ಲಿ ಗೆಲ್ಲೋಕೆ 7 ರನ್​ಗಳು ಬೇಕಾಗಿತ್ತು. ಲಾಸ್ಟ್​ ಓವರ್​​ನಲ್ಲಿ ಭಾರತದ ಮೂರು ವಿಕೆಟ್​​ಗಳು ಬಿತ್ತು. ಕೊನೆಗೆ ಒಂದು ಬಾಲ್​ನಲ್ಲಿ ತಂಡಕ್ಕೆ ಒಂದು ರನ್​​ನ ಅವಶ್ಯಕತೆ ಇತ್ತು. ಈ ವೇಳೆ ರಿಂಕು ಸಿಂಗ್ ಹ್ಯೂಜ್ ಸಿಕ್ಸ್ ಹೊಡೆದ್ರು. ಆದ್ರೆ ಸಿಕ್ಸ್ ಕೌಂಟ್ ಆಗಲೇ ಇಲ್ಲ. ಆಸ್ಟ್ರೇಲಿಯಾ ವಿರುದ್ಧದ ಮ್ಯಾಚ್​​ನಲ್ಲಿ ರಿಂಕು ಸಿಂಗ್​ 22 ರನ್ ಹೊಡೆದಿದ್ದಾರೆ. ಈ ಪೈಕಿ 4 ಬೌಂಡರಿ ಇತ್ತೇ ಹೊರತು ರಿಂಕು ಲಾಸ್ಟ್​ ಬಾಲ್​​ಗೆ ಸಿಕ್ಸ್ ಹೊಡೆದಿದ್ದು ಕೌಂಟೇ ಆಗಿಲ್ಲ. ಹೀಗಾಗಿ ಟೀಂ ಇಂಡಿಯಾದ ಲಾಸ್ಟ್​ ರನ್​ ಬಗ್ಗೆ ಒಂದಷ್ಟು ಕನ್​​ಫ್ಯೂಷನ್ ಕ್ರಿಯೇಟ್ ಆಗಿತ್ತು. ಬಳಿಕ ಅಂಪೈರ್​ಗಳು ಅದನ್ನ ನೋ ಬಾಲ್ ಅಂತಾ ಪರಿಗಣಿಸ್ತಾರೆ. ನೋ ಬಾಲ್​ ಆಗಿದ್ರಿಂದ ಭಾರತದ ಗೆಲುವಿಗೆ ಬೇಕಾಗಿದ್ದ ಒಂದು ರನ್ ಅಲ್ಲೇ ಬಂದಿತ್ತು.

ಹಾಗಿದ್ದರೆ ರಿಂಕು ಸಿಂಗ್ ಹೊಡೆದಿದ್ದು ಸಿಕ್ಸರ್ ಆಗಿಲ್ಲ ಯಾಕೆ ಅನ್ನೋದು ಇಲ್ಲಿರುವ ಪ್ರಶ್ನೆ. ಮ್ಯಾಚ್​​ನ ಕೊನೆಯ ಬಾಲ್​​ನ್ನ ರಿಂಕು ಸಿಂಗ್​ ಲಾಂಗ್​ ಆನ್​ನತ್ತ ಸಿಕ್ಸ್ ಹೊಡೀತಾರೆ. ಆದ್ರೆ ಅದಕ್ಕೆ 6 ರನ್​ಗಳು ಸಿಗೋದಿಲ್ಲ. ಅದು ನೋ ಬಾಲ್​ ಆಗಿದ್ರಿಂದ ಒಂದು ರನ್ ಮಾತ್ರ ಸಿಕ್ಕಿದೆ. ಸೀನ್ ಅಬಾಟ್ ಎಸೆದ ಆ ಕೊನೆಯ ಬಾಲ್​ ನೋಬಾಲ್ ಆಗಿರೋದು ಅವರು ಓವರ್​ಸ್ಟೆಪ್ ಆಗಿರೋದ್ರಿಂದ. ಅಂದ್ರೆ ಬೌಲಿಂಗ್​ ಮಾರ್ಕ್​ ಬಳಿ ಲೈನ್​​ನನ್ನ ಕ್ರಾಸ್ ಮಾಡಿದ್ರು. ಹೀಗಾಗಿ ಅದು ನೋಬಾಲ್ ಆಗಿತ್ತು. ಆ ಬಾಲ್​ಗೆ ರಿಂಕು ಸಿಂಗ್ ಸಿಕ್ಸ್ ಹೊಡೀತಾರೆ. ಆದ್ರೆ ರೂಲ್ಸ್ ಪ್ರಕಾರ ಅದು ಸಿಕ್ಸ್ ಅಂತಾ ಕೌಂಟ್ ಆಗಲ್ಲ. ಯಾಕಂದ್ರೆ ಸೀನ್ ಅಬಾಟ್ ಬಾಲ್ ಡೆಲಿವರಿ ಮಾಡೋ ಮುನ್ನವೇ ನೋ ಬಾಲ್​​ ಹಾಕಿದ್ದರು. ಆಗಲೇ ಹೇಳಿದ ಹಾಗೆ ಓವರ್​ ಸ್ಟೆಪ್​​ ಆಗಿ ನೋಬಾಲ್ ಹಾಕಿದ್ರು. ಓವರ್​​ಸ್ಟೆಪ್ ಆಗಿದ್ರಿಂದಾಗಿ ಬಾಲ್​​ ಬ್ಯಾಟ್ಸ್​​ಮನ್​ನತ್ತ ಬರೋ ಮುನ್ನವೇ ನೋ ಬಾಲ್ ಆಗಿತ್ತು. ಇಲ್ಲಿ ನೋ ಬಾಲ್ ಕೌಂಟ್ ಆಗಿರೋದು ಬಾಲ್​ಡೆಲಿವರಿ ಆಗೋ ಮುನ್ನ ಮತ್ತು ಓವರ್​ಸ್ಟೆಪ್​ ಆದಾಗಲೇ. ಹೀಗಾಗಿ ರಿಂಕು ಸಿಂಗ್​ ಸಿಕ್ಸ್ ಹೊಡೆದ್ರೂ, ಬೌಂಡರಿ ಬಾರಿಸಿದ್ರು ಅದು ಲೆಕ್ಕಕ್ಕಿಲ್ಲ. ಅಲ್ಲಿ ಸಿಗೋದು ಒಂದೇ ರನ್. ಯಾಕಂದ್ರೆ ಸೀನ್ ಅಬಾಟ್ ಓವರ್​ಸ್ಟೆಪ್​ ಆದಾಗಲೇ ಭಾರತ ಅಲ್ಲಿ ಮ್ಯಾಚ್​​ ಗೆದ್ದಾಗಿತ್ತು. ಅಂದ್ರೆ ರಿಂಕು ಸಿಕ್ಸರ್​ ಹೊಡೆಯೋ ಮುನ್ನವೇ ಭಾರತ ಮ್ಯಾಚ್ ಗೆದ್ದಿತ್ತು. ಇಲ್ಲಿ ಭಾರತ ಮ್ಯಾಚ್​ ಗೆದ್ದ ಮೇಲೆ ರಿಂಕು ಸಿಂಗ್ ಸಿಕ್ಸರ್​ ಹೊಡೆದಿದ್ದು ಅಂತಾ ಆಗುತ್ತೆ. ಆದ್ರೆ ಈ ರೂಲ್ಸ್​​ಗೆ ಇನ್ನೊಂದು ಟ್ವಿಸ್ಟ್ ಕೂಡ ಇದೆ. ಒಂದು ವೇಳೆ ಭಾರತಕ್ಕೆ ಗೆಲ್ಲೋಕೆ ಒಂದಕ್ಕಿಂತ ಹೆಚ್ಚು ರನ್​ ಅಗತ್ಯ ಇರ್ತಿದ್ರೆ ಆಗ ರಿಂಕು ಸಿಂಗ್ ಸಿಕ್ಸರ್​ ಕೌಂಟ್ ಆಗ್ತಿತ್ತು. ಆದ್ರೆ ಗೆಲ್ಲೋಕೆ ಕೇವಲ ಒಂದು ರನ್ ಬೇಕಾಗಿತ್ತು. ಓವರ್​​​ಸ್ಟೆಪ್​​ ನೋಬಾಲ್​ನಲ್ಲೇ ಆ ಒಂದು ರನ್ ಬಂತು. ಹೀಗಾಗಿ ರಿಂಕು ಸಿಕ್ಸರ್​ ಹೊಡೆದ್ರೂ ರೂಲ್ಸ್ ಪ್ರಕಾರ ಭಾರತ ಮತ್ತು ರಿಂಕು ಸಿಂಗ್​ಗೆ ಸಿಕ್ಕಿರೋದು ಒಂದೇ ರನ್. 208ರನ್ ಆಗಿದ್ದಾಗ ರಿಂಕು ಸಿಂಗ್​ ಸಿಕ್ಸರ್​ ಹೊಡೆದ್ರೂ ಟೀಂ ಇಂಡಿಯಾದ ಸ್ಕೋರ್​ 209ರನ್ ಆಗಿದೆ. ಆಸ್ಟ್ರೇಲಿಯಾ ವಿರುದ್ಧದ ಮ್ಯಾಚ್​​ನಲ್ಲಿ ರಿಂಕು ಸಿಂಗ್​ ಒಂದೇ ಒಂದು ಸಿಕ್ಸರ್ ಹೊಡೆದಿಲ್ಲ ಅಂತಾನೆ ಕನ್ಸಿಡರ್ ಮಾಡಲಾಗಿದೆ.

Sulekha