ಸಹೋದ್ಯೋಗಿಯ ಮೇಲಿನ ಅತಿ ವ್ಯಾಮೋಹವೇ ನಾಲ್ಕು ಕೊಲೆಗೆ ಕಾರಣ – ಮನೆಯಲ್ಲಿ ಹೆಂಡತಿಯಿದ್ದರೂ ಬೇರೆ ಹೆಣ್ಣಿನ ಮೇಲೆ ಕಟುಕನಿಗೆ ಮೋಹ..!

ಸಹೋದ್ಯೋಗಿಯ ಮೇಲಿನ ಅತಿ ವ್ಯಾಮೋಹವೇ ನಾಲ್ಕು ಕೊಲೆಗೆ ಕಾರಣ – ಮನೆಯಲ್ಲಿ ಹೆಂಡತಿಯಿದ್ದರೂ ಬೇರೆ ಹೆಣ್ಣಿನ ಮೇಲೆ ಕಟುಕನಿಗೆ ಮೋಹ..!

ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಚೌಗಲೆ ಕೊಲೆಯ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಗೆಳತನದ ಬಗ್ಗೆ ಅತಿಯಾದ ವ್ಯಾಮೋಹವೇ ಕೊಲೆಗೆ ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪತ್ನಿ ಮತ್ತು ಮಗುವಿನ ಜೊತೆಯಲ್ಲೇ ವಾಸವಾಗಿದ್ದ ಕೊಲೆಗಾರ, ಮತ್ತೊಬ್ಬ ಹೆಣ್ಣಿಗಾಗಿ ಈ ನೀಚ ಕೃತ್ಯ ಮಾಡಿದ್ದು ನಿಜಕ್ಕೂ ಅಕ್ಷಮ್ಯ ಅಪರಾಧ.

ಇದನ್ನೂ ಓದಿ: ಒಂದೇ ಮನೆಯ ನಾಲ್ವರನ್ನು ಕೊಂದ ಕಟುಕ ಅರೆಸ್ಟ್ – ಮಂಗಳೂರು ಏರ್‌ಪೋರ್ಟ್ ಉದ್ಯೋಗಿಯಿಂದ ಭೀಕರ ಕೃತ್ಯ

ಉಡುಪಿಯ ನೇಜಾರು ತೃಪ್ತಿ ನಗರದಲ್ಲಿ ನಡೆದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳು ಹೊರಬರುತ್ತಿವೆ. ಆರೋಪಿ ಪ್ರವೀಣ್ ಮತ್ತು ಅಯ್ನಾಝ್ ಗೆ ಎಂಟು ತಿಂಗಳಿನಿಂದ ಪರಿಚಯವಿತ್ತು. ಇಬ್ಬರಿಗೂ ಮಧ್ಯೆಯಲ್ಲಿ ಗೆಳೆತನವಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರವೀಣ್ ಮತ್ತು ಅಯ್ನಾಝ್ ಮಧ್ಯೆ ಗೆಳೆತನವಿತ್ತು. ಪ್ರವೀಣ್, ಅಯ್ನಾಝ್ ಗೆ ಸಾಕಷ್ಟು ಸಹಾಯ ಮಾಡಿದ್ದ. ಆಕೆಗೆ ಫ್ಲ್ಯಾಟ್ ನಿಂದ ಉದ್ಯೋಗ ಸ್ಥಳಕ್ಕೆ ಓಡಾಡುವುದಕ್ಕೆ ತನ್ನ ಸ್ಕೂಟರ್ ನ್ನು ಕೊಟ್ಟಿದ್ದ. ಆದರೆ, ಅಯ್ನಾಝ್ ಒಂದು ತಿಂಗಳಿಂದ ಸರಿಯಾಗಿ ಮಾತನಾಡುತ್ತಿರಲಿಲ್ಲ. ಹೀಗಾಗಿ ಆಕೆಯನ್ನು ವಿಪರೀತ ಹಚ್ಚಿಕೊಂಡಿದ್ದ ಪ್ರವೀಣ್ ಗೆ ಆಕೆಯ ನಿರ್ಲಕ್ಷ್ಯ ಸಹಿಸಲು ಆಗಿರಲಿಲ್ಲ. ಹೀಗಾಗಿ ಅಯ್ನಾಝ್ ಳನ್ನು  ಕೊಲೆ ಮಾಡಬೇಕೆಂದು ಪೂರ್ವ ಸಿದ್ಧತೆ ಮಾಡಿಕೊಂಡೇ ಉಡುಪಿಗೆ ಬಂದಿದ್ದ. ಕೊಲೆ ಮಾಡುವ ದಿನ ಅವನು ಟೋಲ್​ಗೇಟ್ ಬಳಿ ಕಾರು ಇಟ್ಟು ಬೇರೆ ಬೇರೆ ವಾಹನದಲ್ಲಿ ಡ್ರಾಪ್ ಪಡೆದುಕೊಂಡು ತೃಪ್ತಿನಗರಕ್ಕೆ ಹೋಗಿದ್ದಾನೆ. ಮನೆಗೆ ಬಂದ ಪ್ರವೀಣ್ ಮೊದಲಿಗೆ ತನ್ನ ಸಹೋದ್ಯೋಗಿಯನ್ನು ಇರಿದು ಕೊಂದಿದ್ದಾನೆ. ಆಕೆಯ ಚೀತ್ಕಾರ ಕೇಳಿ ತಾಯಿ ಹೊರಬಂದಾಗ ಅವರನ್ನು ಅದೇ ಚಾಕುವಿನಿಂದ ಹಲ್ಲೆ ಮಾಡಿ ಕೊಂದಿದ್ದಾನೆ. ಮತ್ತೊಂದು ಕೋಣೆಯಲ್ಲಿದ್ದ ಯುವತಿಯ ಅಕ್ಕ ಆಕ್ರಂದನ ಕೇಳಿ ಆಚೆ ಬಂದಾಗ ಮೂರನೇ ಬಲಿ ಪಡೆದಿದ್ದಾನೆ. ಇವೆರೆಲ್ಲರ ಚೀತ್ಕಾರ, ಕೂಗು ಕೇಳಿ ಹೊರಗಡೆ ಆಡುತ್ತಿದ್ದ ಯುವತಿಯ 12 ವರ್ಷದ ತಮ್ಮ ಮನೆಯೊಳಗೆ ಓಡಿಬಂದಾಗ ಅರೋಪಿಯು ಬಾಲಕನನ್ನೂ ಕೊಂದಿದ್ದಾನೆ ಎಂದು ಎಸ್ ಪಿ, ಡಾ. ಅರುಣ್ ಹೇಳಿದರು. ಒಂದೇ ಚಾಕುವಿನಲ್ಲಿ ನಾಲ್ವರನ್ನೂ ಕೊಲೆಗೈದಿದ್ದಾನೆ. ಬಳಿಕ ಬೇರೆ ಬೇರೆ ವಾಹನಗಳಲ್ಲಿ ಮಂಗಳೂರಿನಲ್ಲಿರುವ ತನ್ನ ಮನೆಗೆ ತೆರಳಿದ್ದಾನೆ. ಘಟನೆಯ ಸಂದರ್ಭದಲ್ಲಿ ಕೈಗೆ ಆಗಿದ್ದ ಗಾಯಕ್ಕೆ ಚಿಕಿತ್ಸೆ ಪಡೆದು, ಚಾಕು ಮನೆಯಲ್ಲೇ ಇಟ್ಟು, ಹೆಂಡತಿ, ಮಗುವನ್ನು ಕರೆದುಕೊಂಡು ಆಕೆಯ ತವರು ಮನೆ ಕುಡುಚಿಗೆ ಹೋಗಿದ್ದಾನೆ.

2007ರಲ್ಲಿ ಪೂನದಲ್ಲಿ ಕೆಲಕಾಲ ಪೊಲೀಸ್ ಆಗಿದ್ದ ಪ್ರವೀಣ್ ಚೌಗುಲೆ, ಉತ್ತಮ ವೇತನಕ್ಕಾಗಿ ಏರ್ ಇಂಡಿಯಾ ಉದ್ಯೋಗಕ್ಕೆ ಸೇರಿದ್ದ.

Sulekha