ಬೌಲರ್ಸ್ಗಳ ಬಗ್ಗೆ ಪ್ರಶ್ನೆ ಮಾಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗನಿಗೆ ಮಾತಿನಲ್ಲೇ ಸೀಮರ್ ಎಸೆದ ಶಮಿ..!
ವರ್ಲ್ಡ್ಕಪ್ನಲ್ಲಿ ಟೀಂ ಇಂಡಿಯಾದ ಹೀರೋ ಅಂದ್ರೆ ಅದು ಮೊಹಮ್ಮದ್ ಶಮಿ. 7 ಮ್ಯಾಚ್ಗಳಲ್ಲಿ 24 ವಿಕೆಟ್ಗಳನ್ನ ಪಡೆದಿದ್ದರು. ಟೀಂ ಇಂಡಿಯಾ ಫೈನಲ್ ತಲುಪೋಕೆ ಶಮಿ ಪ್ರಮುಖ ಕಾರಣರಾಗಿದ್ದರು. ನಮ್ಮ ಬೌಲರ್ಸ್ಗಳೇ ಈ ಬಾರಿ ನಿಜವಾದ ಹೀರೋಗಳು ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಇದೇ ಕಾರಣಕ್ಕೆ ಪಾಕಿಸ್ತಾನದ ಮಾಜಿ ಕ್ರಿಕೆಟರ್ ಒಬ್ಬರು ಏನೇನೋ ಹೇಳಿಕೆ ಕೊಟ್ಟು ಪೇಚಿಗೆ ಸಿಲುಕಿದ್ದರು. ಇದೀಗ ಮೊಹಮ್ಮದ್ ಶಮಿ ಇದೇ ಹೇಳಿಕೆಗೆ ಖಾರವಾಗಿಯೇ ಉತ್ತರ ಕೊಟ್ಟಿದ್ದಾರೆ.
ಇದನ್ನೂ ಓದಿ: ಗ್ರೇಟ್ ಚೇಸರ್ ರಿಂಕು ಸಿಂಗ್..!- ಮೊದಲ ಪಂದ್ಯದಲ್ಲೇ ಸೇಡು ತೀರಿಸಿಕೊಂಡ ಭಾರತ
ವರ್ಲ್ಡ್ಕಪ್ ಟೂರ್ನಿ ನಡೆಯುವಾಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಸನ್ ರಾಜ ಒಂದು ಹೇಳಿಕೆ ನೀಡಿದ್ದರು. ಭಾರತೀಯ ಬೌಲರ್ಸ್ಗಳಿಗೆ ಬೇರೆಯದ್ದೇ ರೀತಿಯ ಬಾಲ್ಗಳನ್ನ ನೀಡಲಾಗ್ತಿದೆ. ವರ್ಲ್ಡ್ಕಪ್ನಲ್ಲಿ ಅಡ್ವಾಂಟೇಜ್ ಸಿಗಲಿ ಅಂತಾ ಐಸಿಸಿ ಡಿಫರೆಂಟ್ ಮಾದರಿಯ ಬಾಲ್ನ್ನ ನೀಡ್ತಿದೆ. ಭಾರತೀಯ ಬೌಲರ್ಸ್ಗಳಿಗೆ ಒಂದು ರೀತಿಯ ಬಾಲ್.. ಇತರೆ 9 ಟೀಂಗಳಿಗೆ ಡಿಫರೆಂಟ್ ಸೆಟ್ ಆಫ್ ಬಾಲ್ನ್ನ ನೀಡಲಾಗ್ತಿದೆ ಅಂತಾ ಪಾಕ್ ಟೆಲಿವಿಷನ್ ಶೋ ಒಂದರಲ್ಲಿ ಸ್ಟೇಟ್ಮೆಂಟ್ ಕೊಟ್ಟಿದ್ದರು. ಇದೀಗ ಮೊಹಮ್ಮದ್ ಶಮಿ, ಪಾಕ್ ಮಾಜಿ ಕ್ರಿಕೆಟಿಗನ ಹೇಳಿಕೆಗೆ ಸರಿಯಾಗಿಯೇ ಕೌಂಟರ್ ಕೊಟ್ಟಿದ್ದಾರೆ. ಈ ಬಾರಿಯ ವರ್ಲ್ಡ್ಕಪ್ನಲ್ಲಿ ನಾನು ಆಡಿದ ಮೊದಲ ಮ್ಯಾಚ್ನಲ್ಲಿ 5 ವಿಕೆಟ್ಗಳನ್ನ ಪಡೆದೆ. ನೆಕ್ಸ್ಟ್ ಮ್ಯಾಚ್ನಲ್ಲಿ 4 ವಿಕೆಟ್ಗಳನ್ನ ಪಡೆದೆ. ಬಳಿಕ ಮತ್ತೆ 5 ವಿಕೆಟ್ಗಳನ್ನ ಪಡೆದೆ. ಕೆಲ ಪಾಕಿಸ್ತಾನಿ ಆಟಗಾರರಿಗೆ ಇದನ್ನ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ನಾನೇನು ಮಾಡಲಿ?. ಪಾಕಿಸ್ತಾನಿಗಳ ತಲೆಯಲ್ಲಿ ಒಂದು ವಿಚಾರ ಫಿಕ್ಸ್ ಆಗಿಬಿಟ್ಟಿದೆ. ವರ್ಲ್ಡ್ ಕ್ರಿಕೆಟ್ನಲ್ಲಿ ನಾವೇ ಬೆಸ್ಟ್ ಪೇಸ್ ಬೌಲರ್ಸ್ಗಳು. ಆದ್ರೆ ಯಾರು ರೈಟ್ ಟೈಮ್ನಲ್ಲಿ ಪರ್ಫಾಮ್ ಮಾಡ್ತಾರೋ ಅವರಷ್ಟೇ ಬೆಸ್ಟ್ ಪ್ಲೇಯರ್ಸ್ಗಳಾಗ್ತಾರೆ. ಅದು ಬಿಟ್ಟು ಭಾರತೀಯ ಬೌಲರ್ಸ್ಗಳಿಗೆ ನೀಡಿದ ಬಾಲ್ನ ಕಲರ್ ಚೇಂಜ್ ಆಗಿದೆ. ಬೇರೆಯದ್ದೇ ಕಂಪನಿಯ ಬಾಲ್ನ್ನ ಬಳಸ್ತಿದ್ದಾರೆ. ಇಂಥಾ ಸ್ಟೇಟ್ಮೆಂಟ್ಗಳನ್ನ ಕೊಟ್ಟು ಸುಮ್ಮನೆ ಕಾಂಟ್ರೋವರ್ಸಿ ಕ್ರಿಯೇಟ್ ಮಾಡೋದಲ್ಲ. ಸುಧಾರ್ ಜಾವೋ ಯಾರ್.. ಇನ್ನಾದ್ರೂ ಸುಧಾರಿಸಿಕೊಳ್ಳಿ ಕಣ್ರಯ್ಯಾ.. ಇದು ಮೊಹಮ್ಮದ್ ಶಮಿಯ ಎಕ್ಸಾಕ್ಟ್ ಕೌಂಟರ್ ಅಟ್ಯಾಕ್. ನಮ್ಮ ಬೌಲರ್ಸ್ಗಳ ಬಗ್ಗೆ ಪ್ರಶ್ನೆ ಮಾಡಿದ ಪಾಕಿಸ್ತಾನದ ಹಸನ್ ರಾಜಾಗೆ ಈಗ ಶಮಿ ಮಾತಿನಲ್ಲೇ ಸೀಮರ್ ಎಸೆದಿದ್ದಾರೆ.
ಇದಿಷ್ಟೇ ಅಲ್ಲ, ಟೀಂ ಇಂಡಿಯಾ ಬೌಲರ್ಸ್ಗಳ ಪರ್ಫಾಮೆನ್ಸ್ಗೆ ಹೊಟ್ಟೆಕಿಚ್ಚು ಪಡ್ತಿರೋ ಪಾಕಿಸ್ತಾನಿಗಳಿಗೆ ಶಮಿ ಮಾತಲ್ಲೇ ಇನ್ನೊಂದಷ್ಟು ಮದ್ದು ಅರೆದಿದ್ದಾರೆ. ಇನ್ನೊಬ್ಬರು ಸಕ್ಸಸ್ ಆದಾಗ ಅದಕ್ಕೆ ಹೊಟ್ಟೆಕಿಚ್ಚು ಪಡುವುದಲ್ಲ. ಬೇರೆಯವರ ಸಕ್ಸಸ್ನ್ನ ಕೂಡ ಎಂಜಾಯ್ ಮಾಡೋದನ್ನ ಕಲೀರಿ. ಆದ್ರೆ ಪಾಕಿಸ್ತಾನದ ಪ್ಲೇಯರ್ಸ್ಗಳಿಗಂತೂ ನನ್ನ ಸಕ್ಸಸ್ನ್ನ ಡೈಜೆಸ್ಟ್ ಮಾಡೋಕೆ ಆಗ್ತಿಲ್ಲ ಅಂತಾ ಶಮಿ ನೇರಾನೇರ ಮುಖಕ್ಕೆ ಹೊಡೆದಂಗೆ ಹೇಳಿದ್ದಾರೆ.
ಇದ್ರ ಜೊತೆಗೆ ಇನ್ನೊಬ್ಬರ ಸಕ್ಸಸ್ನ್ನ ಎಂಜಾಯ್ ಮಾಡೋದ್ರ ಅಡ್ವಾಂಟೇಜ್ ಏನು ಅನ್ನೋದನ್ನ ಕೂಡ ಶಮಿ ವಿವರಿಸಿದ್ದಾರೆ. ಬೇರೆ ಟೀಮ್ನಲ್ಲೂ ನನ್ನ ಹಾಗೆ ಇನ್ನೂ 10 ಬೌಲರ್ಸ್ಗಳು ಪರ್ಫಾಮ್ ಮಾಡಿದ್ರೆ ನಾನು ಅದನ್ನ ಎಂಜಾಯ್ ಮಾಡ್ತೀನಿ. ನಾನು ಯಾರ ಬಗ್ಗೆಯೂ ಹೊಟ್ಟೆ ಕಿಚ್ಚು ಪಡೋದಿಲ್ಲ. ಇನ್ನೊಬ್ಬರ ಸಕ್ಸಸ್ನ್ನ ಎಂಜಾಯ್ ಮಾಡಿದ್ರೆ ಬೆಟರ್ ಪ್ಲೇಯರ್ ಆಗೋಕೆ ಸಾಧ್ಯ ಅಂತಾ ಶಮಿ ಹೇಳಿದ್ದಾರೆ.
ಇನ್ನು ವರ್ಲ್ಡ್ಕಪ್ನಲ್ಲಿ ತಮ್ಮ ಸಕ್ಸಸ್ ಬಗ್ಗೆಯೂ ಮೊಹಮ್ಮದ್ ಶಮಿ ಒಂದಷ್ಟು ಇಂಪಾರ್ಟೆಂಟ್ ಅಂಶಗಳನ್ನ ಕೂಡ ಪ್ರಸ್ತಾಪಿಸಿದ್ದಾರೆ. ನನ್ನ ಬಾಲ್ ಅಷ್ಟೊಂದು ಸ್ವಿಂಗ್ ಆಗೋದು ಹೇಗೆ? ಪರ್ಫೆಕ್ಟ್ ಆಗಿ ಸೀಮ್ ಬಾಲ್ ಎಸೆಯೋಕೆ ಸಾಧ್ಯವಾಗ್ತಿರೋದು ಹೇಗೆ ಅಂತಾ ಪ್ರಶ್ನಿಸ್ತಾರೆ. ಅದಕ್ಕೆ ಕಾರಣ ಹಾರ್ಡ್ ವರ್ಕ್ ಮತ್ತು ಎಕ್ಸಿಕ್ಯೂಶನ್ ಇವೆರಡು ಬಿಟ್ರೆ ಮತ್ತಿನ್ನೇನೂ ಅಲ್ಲ. ಪ್ಲ್ಯಾನ್ನನ್ನ ಸರಿಯಾಗಿ ಎಕ್ಸಿಕ್ಯೂಟ್ ಮಾಡಿದ್ರೆ ರಿಸಲ್ಟ್ ಬಂದೇ ಬರುತ್ತೆ. ನಾನು ನನ್ನ ಸ್ಕಿಲ್ನ್ನ ಪರ್ಫೆಕ್ಟ್ ಎಕ್ಸಿಕ್ಯೂಟ್ ಮಾಡೋಕೆ ಯಾವಾಗಲೂ ಎಫರ್ಟ್ ಹಾಕ್ತೀನಿ ಅಂತಾ ಮೊಹಮ್ಮದ್ ಶಮಿ ತಮ್ಮ ಸಿಂಪಲ್ ಸಕ್ಸಸ್ ಸೂತ್ರವನ್ನ ಬಿಟ್ಟಿದ್ದಾರೆ.
ಇನ್ನು ಪಾಕಿಸ್ತಾನದ ಹಸನ್ ರಾಜಾ ನೀಡಿದ ಕಾಂಟ್ರೋವರ್ಷಿಯಲ್ ಸ್ಟೇಟ್ಮೆಂಟ್ನ್ನ ಪಾಕ್ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಕೂಡ ಖಂಡಿಸಿದ್ದರು. ಈ ವಿಚಾರದ ಬಗ್ಗೆಯೂ ಶಮಿ ಈಗ ಮಾತನಾಡಿದ್ದಾರೆ. ಪಾಕಿಸ್ತಾನದ ಟಿವಿ ಶೋ ಒಂದರಲ್ಲಿ ವಾಸಿಂ ಅಕ್ರಂ ಮ್ಯಾಚ್ಗೂ ಮುನ್ನ ಬಾಲ್ನ್ನ ಹೇಗೆ ಸೆಲೆಕ್ಟ್ ಮಾಡಲಾಗುತ್ತೆ. ಆ ಪ್ರೊಸೀಜರ್ ಹೇಗಿರುತ್ತೆ ಅನ್ನೋದನ್ನ ವಿವರಿಸಿದ್ದಾರೆ. ಹಸನ್ ರಾಜಾ ಅನುಮಾನಕ್ಕೆ ಖುದ್ದು ವಾಸಿಂ ಅಕ್ರಮ್ ಆನ್ಸರ್ ಮಾಡಿದ್ದಾರೆ ಅಂತಾ ಶಮಿ ಹೇಳಿದ್ದಾರೆ.
ಈ ಬಾರಿ ಶಮಿ ಸೇರಿದಂತೆ ಟೀಂ ಇಂಡಿಯಾ ಬೌಲರ್ಸ್ಗಳು ಹಾರ್ಡ್ ವರ್ಕ್ ಮಾಡಿ, ಟಾಪ್ ಕ್ಲಾಸ್ ಆಗಿ ಬೌಲಿಂಗ್ ಮಾಡಿದ್ದಾರೆ ಅಷ್ಟೇ. ಈ ಎಲ್ಲಾ ಕಾರಣಕ್ಕಾಗಿಯೇ ಮೊಹಮ್ಮದ್ ಶಮಿ ಪಾಕಿಸ್ತಾನಿಗಳಿಗೆ ಸ್ಟ್ರೈಟ್ ಫಾರ್ವರ್ಡ್ ಆಗಿ ಆನ್ಸರ್ ಮಾಡಿದ್ದಾರೆ. ಹೊಟ್ಟೆಕಿಚ್ಚು ಪಡೋದನ್ನ ಬಿಟ್ಟು ಸ್ವಲ್ಪ ಸುಧಾರಿಕೊಳ್ರಪ್ಪಾ ಅಂತಾ ಖಡಕ್ ಆಗಿಯೇ ಹೇಳಿದ್ದಾರೆ.
ಇವೆಲ್ಲದ್ರ ಮಧ್ಯೆ, ಆಸ್ಟ್ರೇಲಿಯಾ ವಿರುದ್ಧದ ವರ್ಲ್ಡ್ಕಪ್ ಫೈನಲ್ ಮ್ಯಾಚ್ನಲ್ಲಿ ಜಸ್ಪ್ರಿತ್ ಬುಮ್ರಾ ಜೊತೆಗೆ ಮೊಹಮ್ಮದ್ ಶಮಿಗೆ ಓಪನಿಂಗ್ ಸ್ಪೆಲ್ ನೀಡಿರೋದು ಬ್ಯಾಡ್ ಡಿಸೀಶನ್ ಅಂತಾ ಪಾಕ್ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಅಭಿಪ್ರಾಯ ಪಟ್ಟಿದ್ದಾರೆ. ಫೈನಲ್ ಮ್ಯಾಚ್ವರೆಗೂ ಬುಮ್ರಾ ಜೊತೆಗೆ ಮೊಹಮ್ಮದ್ ಸಿರಾಜ್ ಓಪನಿಂಗ್ ಸ್ಪೆಲ್ ಮಾಡ್ತಿದ್ರು. ಆದ್ರೆ ಫೈನಲ್ನಲ್ಲಿ ಮಾತ್ರ ಶಮಿ ಕೈಗೆ ಬಾಲ್ ನೀಡಲಾಗಿತ್ತು. ಸಿರಾಜ್ರನ್ನ ಆಮೇಲೆ ಅಖಾಡಕ್ಕಿಳಿಸಲಾಗಿತ್ತು. ಆದ್ರೆ ಬುಮ್ರಾ ಜೊತೆಗೆ ಸಿಂಗ್ವ್ ಬೌಲರ್ ಸಿರಾಜ್ಗೆ ಆರಂಭದಲ್ಲಿ ಎರಡು-ಮೂರು ಓವರ್ಗಳನ್ನ ನೀಡಬೇಕಿತ್ತು. ಆರಂಭದಲ್ಲಿ ಬಾಲ್ ಸ್ವಿಂಗ್ ಆಗ್ತಿದ್ರಿಂದ ಶಮಿಯ ಕೆಲ ಬಾಲ್ಗಳು ವೈಡ್ ಹೋಗಿದ್ವು. ಓಪನಿಂಗ್ ಸ್ಪೆಲ್ಗೆ ಶಮಿಗಿಂತ ಸಿರಾಜ್ ಅವರೇ ಬೆಸ್ಟ್ ಆಪ್ಷನ್ ಆಗಿದ್ರು ಅಂತಾ ವಾಸಿಂ ಅಕ್ರಂ ಹೇಳಿದ್ದಾರೆ. ಇಲ್ಲಿ ಅಕ್ರಂ ನೋಟ್ಡೌನ್ ಮಾಡಿಕೊಳ್ಳುವಂತಾ ಪಾಯಿಂಟ್ನ್ನೇ ರೈಸ್ ಮಾಡಿದ್ದಾರೆ.