ಟೀಂ ಇಂಡಿಯಾದ ಹೊಸ ಕೋಚ್ ಯಾರು? – ರಾಹುಲ್ ದ್ರಾವಿಡ್ ಕೋಚ್ ಆಗಿ ಮುಂದುವರೀತಾರಾ?

ಟೀಂ ಇಂಡಿಯಾದ ಹೊಸ ಕೋಚ್ ಯಾರು? – ರಾಹುಲ್ ದ್ರಾವಿಡ್ ಕೋಚ್ ಆಗಿ ಮುಂದುವರೀತಾರಾ?

ಭಾರತೀಯ ಕ್ರಿಕೆಟ್​​ ಟೀಂನ ಕೋಚ್​​ ಬದಲಾಗ್ತಾರಾ? ಈ ಒಂದು ಪ್ರಶ್ನೆ ಬಗ್ಗೆ ಈಗ ಸಾಕಷ್ಟು ಚರ್ಚೆಗಳು ಶುರುವಾಗಿದೆ. ಯಾಕಂದ್ರೆ, ಬಿಸಿಸಿಐ ಜೊತೆಗಿನ ಒಪ್ಪಂದದ ಪ್ರಕಾರ ರಾಹುಲ್​ ದ್ರಾವಿಡ್ ಅವರ ಕೋಚಿಂಗ್ ಅವಧಿ ವರ್ಲ್ಡ್​​ಕಪ್​ ಟೂರ್ನಿಗೆ ಅಂತ್ಯವಾಗಿದೆ. ಇದುವರೆಗೂ ರಾಹುಲ್ ದ್ರಾವಿಡ್ ಕೋಚಿಂಗ್ ಭವಿಷ್ಯದ ಬಗ್ಗೆ ಯಾರು ಕೂಡ ಮಾತನಾಡಿಲ್ಲ. ಬಿಸಿಸಿಐನಿಂದಾಗಿ, ದ್ರಾವಿಡ್​ರಿಂದಾಗಲಿ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಹಾಗಿದ್ರೆ ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಕೋಚ್ ಆಗಿ ಮುಂದುವರೀತಾರಾ ಇಲ್ವಾ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾ ವಿಶ್ವಕಪ್ ಗೆಲ್ಲಲು ಹಿಂದಿನ ಶಕ್ತಿಯೇ ರಿಕ್ಕಿಪಾಂಟಿಂಗ್ – ರಣತಂತ್ರಗಾರ ರಿಕ್ಕಿಯ ಮೈಂಡ್ಗೇಮ್ ಸಕ್ಸಸ್ ಆಗಿದ್ದು ಹೇಗೆ?

ವರ್ಲ್ಡ್​​ಕಪ್​ ಬಳಿಕ ಆಸ್ಟ್ರೇಲಿಯಾ ವಿರುದ್ಧ ನಡೀತಿರೋ 5 ಮ್ಯಾಚ್​ಗಳ ಟಿ-20 ಸೀರಿಸ್​ಗೆ ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಕೋಚ್ ಆಗಿರೋದಿಲ್ಲ. ರಾಹುಲ್​ ದ್ರಾವಿಡ್​​ರ ಕೋಚ್ ಅವಧಿ ಈಗಾಗ್ಲೇ ಮುಗಿದಿರೋದ್ರಿಂದ ಮುಂದಿನ ಯಾವುದೇ ಮ್ಯಾಚ್​ಗಳಿಗೆ, ಸೀರಿಸ್​ಗೆ ರಾಹುಲ್​​ ಕೋಚಿಂಗ್ ಮಾಡೋದಿಲ್ಲ. ಇನ್ನು ರಾಹುಲ್ ದ್ರಾವಿಡ್ ಮತ್ತೆ ಟೀಂ ಇಂಡಿಯಾವನ್ನ ಸೇರ್ಪಡೆಯಾಗಬೇಕು ಅಂದರೆ ದ್ರಾವಿಡ್​​ ಜೊತೆಗಿನ ಒಪ್ಪಂದವನ್ನ ಬಿಸಿಸಿಐ ವಿಸ್ತರಿಸಲೇಬೇಕಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಟಿ-20 ಸೀರಿಸ್​ನಲ್ಲಿ ಅಂಡರ್​-19 ಮತ್ತು ಇಂಡಿಯಾ-A ತಂಡದ ಹೆಡ್ ಕೋಚ್ ಅಗಿರುವ ವಿವಿಎಸ್ ಲಕ್ಷ್ಮಣ್ ತಂಡವನ್ನ ಗೈಡ್ ಮಾಡಲಿದ್ದಾರೆ. ಇಲ್ಲಿ ಇನ್ನೊಂದು ವಿಚಾರ ಕೂಡ ಇದೆ. ಒಂದು ವೇಳೆ ರಾಹುಲ್​ ದ್ರಾವಿಡ್ ಕೋಚಿಂಗ್ ಕಾಂಟ್ರ್ಯಾಕ್ಟ್​ನ್ನ ರಿನ್ಯೂ ಮಾಡೋದಾದ್ರೂ ಕೂಡ ಬಿಸಿಸಿಐ ತನ್ನ ಪ್ರೊಸೀಜರ್​​ನ್ನ ಫಾಲೋ ಮಾಡಲೇಬೇಕು. ಅಂದ್ರೆ, ಹೆಡ್​ ಕೋಚ್​​ ಪೋಸ್ಟ್​ಗೆ ಅಪ್ಲಿಕೇಷನ್ ಹಾಕುವಂತೆ ಸೂಚಿಸಬೇಕು. ಆಗ ರಾಹುಲ್ ದ್ರಾವಿಡ್ ಕೂಡ ಅಪ್ಲಿಕೇಷನ್ ಹಾಕಬೇಕಾಗುತ್ತೆ. ಇನ್ನೂ ಯಾರಿಗೆಲ್ಲಾ ಟೀಂ ಇಂಡಿಯಾ ಕೋಚ್ ಆಗಬೇಕು ಅಂತಾ ಇದ್ಯೋ ಅವರೆಲ್ಲಾ ಬಿಸಿಸಿಐಗೆ ಅಪ್ಲಿಕೇಷನ್ ಹಾಕಬೇಕಾಗುತ್ತೆ. ಬಳಿಕ ಬಿಸಿಸಿಐ ಮ್ಯಾನೇಜ್ಮೆಂಟ್ ಟೀಂ ಇಂಡಿಯಾ ನಾಯಕನ ಜೊತೆ ಚರ್ಚೆ ನಡೆಸಿ ಅಂತಿಮ ತೀರ್ಮಾನವನ್ನ ತೆಗೆದುಕೊಳ್ಳುತ್ತೆ. ಮುಂದಿನ ಕೆಲ ದಿನಗಳಲ್ಲೇ ಬಿಸಿಸಿಐ ಹೆಡ್ ಕೋಚ್​ ಪೋಸ್ಟ್​​ಗೆ ಅಪ್ಲಿಕೇಷನ್ ಹಾಕುವಂತೆ ಸೂಚಿಸಲಿದೆ.

ಇವೆಲ್ಲದರ ಮಧ್ಯೆ, ಟೀಂ ಇಂಡಿಯಾ ಹೆಡ್ ಕೋಚ್​​ ಪೋಸ್ಟ್​ಗೆ ಮೂವರ ಹೆಸರು ಪ್ರಬಲವಾಗಿ ಕೇಳಿ ಬರ್ತಾ ಇದೆ. ಈ ಮೂವರು ಮಾಜಿ ಕ್ರಿಕೆಟಿಗರು ರೇಸ್​ನಲ್ಲಿ ಮುಂಚೂಣಿಯಲ್ಲಿದ್ದಾರೆ ಅನ್ನೋ ಇನ್​ಫಾರ್ಮೇಶನ್ ಇದೆ.

ನಂ.1-ವಿವಿಎಸ್. ಲಕ್ಷ್ಮಣ್

ಒಂದು ವೇಳೆ ಕೋಚ್ ಆಗಿ ರಾಹುಲ್ ದ್ರಾವಿಡ್​ರನ್ನ ಕಂಟಿನ್ಯೂ ಮಾಡಿಲ್ಲ ಅಂದ್ರೆ ವಿವಿಎಸ್​ ಲಕ್ಷ್ಮಣ್​ರನ್ನೇ ಹೆಡ್ ಕೋಚ್ ಆಗಿ ಮಾಡೋ ಸಾಧ್ಯತೆ ಹೆಚ್ಚಿದೆ. ಅಗಲೇ ಹೇಳಿದ ಹಾಗೆ ಲಕ್ಷ್ಮಣ್ ಸದ್ಯ ಇಂಡಿಯಾ ಅಂಡರ್-19, ಇಂಡಿಯಾ-ಎ ಕೋಚ್ ಆಗಿದ್ದಾರೆ. ಜೊತೆಗೆ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಡೈರೆಕ್ಟರ್ ಕೂಡ ಆಗಿದ್ದಾರೆ. ಈ ಹಿಂದೆ ರಾಹುಲ್ ದ್ರಾವಿಡ್ ಕೂಡ ಅಂಡರ್-19, ಇಂಡಿಯಾ-ಎ ಟೀಮ್​ನ ಕೋಚ್ ಆಗಿ, ಎನ್​ಸಿಎ ಚೀಫ್ ಆಗಿ ಬಳಿಕ ಸೀನಿಯರ್ಸ್​ ಟೀಮ್​ನ ಹೆಡ್​ ಕೋಚ್ ಆಗಿ ಆಯ್ಕೆಯಾಗಿದ್ರು. ಕ್ರಿಕೆಟ್​ ಜೊತೆಗೆ ಕೋಚಿಂಗ್​ನ ಅನುಭವವೂ ಲಕ್ಷ್ಮಣ್​ಗೂ ಚೆನ್ನಾಗಿಯೇ ಇದೆ. 2013ರಲ್ಲೇ ಲಕ್ಷ್ಮಣ್ ಕೋಚಿಂಗ್ ಕೆರಿಯರ್ ಶುರು ಮಾಡಿದ್ರು. ಐಪಿಎಲ್​​ನಲ್ಲಿ ಸನ್​ ರೈಸರ್ಸ್ ಹೈದರಾಬಾದ್​ ಮೆಂಟರ್​ ಆಗಿದ್ರು. 2021ರವರೆಗೆ ಅಂದ್ರೆ ಲಕ್ಷ್ಮಣ್ ಮೆಂಟರ್​ ಆಗಿರೋವರೆಗೂ ಐಪಿಎಲ್​​ನಲ್ಲಿ ಎಸ್​​ಆರ್​ಎಚ್​ ಕನ್ಸಿಸ್ಟೆಂಟ್ ಆಗಿ ಪರ್ಫಾಮ್ ಮಾಡಿತ್ತು. ಬಳಿಕ ಲಕ್ಷ್ಮಣ್ ಬಿಸಿಸಿಐ ಸೇರಿಕೊಂಡ್ರು. ಎನ್​ಸಿಎ ಮತ್ತು ಅಂಡರ್​-19 ತಂಡದ ಕೋಚ್ ಆಗಿರೋದ್ರಿಂದ ಟೀಂ ಇಂಡಿಯಾ ಭವಿಷ್ಯದ ಆಟಗಾರರು ಯಾರು? ಯಾವ ಆಟಗಾರನ ಸಾಮರ್ಥ್ಯ ಏನು?  ಹೇಗೆ ಟ್ರೈನ್ ಮಾಡಬೇಕು? ಇವೆಲ್ಲವೂ ಲಕ್ಷ್ಮಣ್​ಗೆ ಚೆನ್ನಾಗಿಯೇ ಗೊತ್ತಿದೆ. 2024ರಲ್ಲಿ ಟಿ-20 ವರ್ಲ್ಡ್​ಕಪ್ ಬೇರೆ ಇರೋದ್ರಿಂದ, ಐಪಿಎಲ್​​ನಲ್ಲಿ ಕೋಚಿಂಗ್ ಮಾಡಿದ ಅನುಭವ ಕೂಡ ಇರೋದ್ರಿಂದ  ಲಕ್ಷ್ಮಣ್ ಅವರನ್ನ ಟೀಂ ಇಂಡಿಯಾ ಸೀನಿಯರ್ಸ್ ಹೆಡ್​ ಕೋಚ್ ಆಗಿ ಬಿಸಿಸಿಐ ನೇಮಕ ಮಾಡುವ ಸಾಧ್ಯತೆಯೂ ಹೆಚ್ಚಿದೆ.

ನಂ.2-ಅನಿಲ್ ಕುಂಬ್ಳೆ

ನಿಮಗೆ ಗೊತ್ತಿರೋ ಹಾಗೆ ಅನಿಲ್​ ಕುಂಬ್ಳೆ ಈಗಾಗ್ಲೇ ಒಂದು ಬಾರಿ ಟೀಂ ಇಂಡಿಯಾದ ಹೆಡ್ ಕೋಚ್ ಆಗಿದ್ರು. ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗಿದ್ದಾಗ ಒಂದಷ್ಟು ಸಮಯ ಕುಂಬ್ಳೆ ಕೋಚ್ ಆಗಿದ್ರು. ಅನಿಲ್​ ಕುಂಬ್ಳೆ ಕೋಚಿಂಗ್ ಅವಧಿಯಲ್ಲಿ ಟೀಂ ಇಂಡಿಯಾ ಭಾರತದಲ್ಲಿ ಒಂದು ಟೆಸ್ಟ್ ಮ್ಯಾಚ್​ನ್ನ ಮಾತ್ರ ಸೋತಿತ್ತು. ಅಷ್ಟೇ ಅಲ್ಲ, 2017ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಟೀಂ ಇಂಡಿಯಾ ಫೈನಲ್​ಗೆ ತಲುಪಿತ್ತು. ಆದ್ರೆ ಅಂದಿನ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಕುಂಬ್ಳೆ ಮಧ್ಯೆ ಅಂಥಾ ಅಂಡರ್​​ಸ್ಟ್ಯಾಂಡಿಂಗ್ ಇರಲಿಲ್ಲ. ಕುಂಬ್ಳೆ ಟೀಮ್​ನಲ್ಲಿ ತುಂಬಾ ಸ್ಟ್ರಿಕ್ಟ್ ಆಗಿದ್ರು. ಕೊಹ್ಲಿ – ಕುಂಬ್ಳೆ ವಿಚಾರದಲ್ಲಿ ಒಳಗೊಳಗೆ ಏನೇನೋ ಬೆಳವಣಿಗೆಗಳೆಲ್ಲಾ ನಡೆದಿದ್ದವು. ಬಳಿಕ ಇದ್ದಕ್ಕಿದ್ದಂತೆ ಅನಿಲ್ ಕುಂಬ್ಳೆ ಹೆಡ್ ಕೋಚ್ ಸ್ಥಾನಕ್ಕೆ ರಾಜೀನಾಮೆ ಕೂಡ ನೀಡಿದ್ರು. ಈಗ ಮೂರೂ ಫಾರ್ಮೆಟ್​​ಗೂ ರೋಹಿತ್​ ಶರ್ಮಾರೆ ಕ್ಯಾಪ್ಟನ್​ ಆಗಿದ್ದಾರೆ. ಹೀಗಾಗಿ ಅನಿಲ್ ಕುಂಬ್ಳೆ ಕೂಡ ಕೋಚ್ ಸ್ಥಾನಕ್ಕೆ ಅಪ್ಲಿಕೇಷನ್ ಹಾಕಿದ್ರೂ ಆಶ್ಚರ್ಯ ಇಲ್ಲ ಅನ್ನೋ ಮಾಹಿತಿ ಇದೆ.

ನಂ.3-ವಿರೇಂದ್ರ ಸೆಹ್ವಾಗ್

ವರ್ಲ್ಡ್​ಕಪ್​ ಟೈಮ್​​ನಲ್ಲಿ ಐಸಿಸಿ ಹಾಲ್ ಆಫ್ ಫೇಮ್ ಅವಾರ್ಡ್​​ ಪಡೆದಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕೂಡ ಹೆಡ್​ ಕೋಚ್ ರೇಸ್​ನಲ್ಲಿದ್ದಾರೆ. ಸದ್ಯ ಸೆಹ್ವಾಗ್ ಯಾವುದೇ ಐಪಿಎಲ್​ ಫ್ರಾಂಚೈಸಿಗಳ ಜೊತೆಗೆ ಅಸೋಸಿಯೇಟ್ ಆಗಿಲ್ಲ. ಹೀಗಾಗಿ ಸೆಹ್ವಾಗ್​ಗೆ ಬಿಸಿಸಿಐನ್ನ ಜಾಯಿನ್ ಆಗುವ ಎಲ್ಲಾ ಅವಕಾಶಗಳು ಕೂಡ ಇದೆ. ಆ್ಯಕ್ಚುವಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​​ಬೈ ಹೇಳಿ ಎರಡು ವರ್ಷಗಳಲ್ಲೇ ಅಂದ್ರೆ 2017ರಲ್ಲಿ ವಿರೇಂದ್ರ ಸೆಹ್ವಾಗ್ ಟೀಂ ಇಂಡಿಯಾ ಹೆಡ್ ಕೋಚ್ ಆಗಬೇಕು ಅಂದುಕೊಂಡಿದ್ರು. ಹೀಗಾಗಿ ಅಂದು ಬಿಸಿಸಿಐ ಅಪ್ಲಿಕೇಷನ್ ಕೂಡ ಹಾಕಿದ್ರು. ಆದ್ರೆ ಆಗ ಚಾನ್ಸ್ ಸಿಕ್ಕಿರಲಿಲ್ಲ. ಈ ಬಾರಿ ಮತ್ತೆ ಸೆಹ್ವಾಗ್ ಅವರೇ ಅಪ್ಲಿಕೇಷನ್ ಹಾಕೋದು ಕೂಡ ಡೌಟ್. ಆದ್ರೆ ಸೆಹ್ವಾಗ್​ಗೆ ಟೀಂ ಇಂಡಿಯಾ ಕೋಚ್ ಆಗಲು ಇಂಟ್ರೆಸ್ಟ್ ಅನ್ನೋದು ಗ್ಯಾರಂಟಿಯಾದ್ರೆ ಖುದ್ದು ಬಿಸಿಸಿಐ ವಿರೇಂದ್ರ ಸೆಹ್ವಾಗ್​​ರನ್ನ ಕಾಂಟ್ಯಾಕ್ಟ್ ಮಾಡಬಹುದು. ಈ ಹಿಂದೆ 2021ರಲ್ಲಿ ಬಿಸಿಸಿಐ ರಾಹುಲ್ ದ್ರಾವಿಡ್​​ರನ್ನ ಕಾಂಟ್ಯಾಕ್ಟ್​ ಮಾಡಿ ಟೀಂ ಇಂಡಿಯಾ ಹೆಡ್ ಕೋಚ್ ಆಗ್ತೀರಾ ಅಂತಾ ಕೇಳಿಕೊಂಡಿದ್ದರೆ. ಅದಕ್ಕೆ ರಾಹುಲ್ ದ್ರಾವಿಡ್ ಒಪ್ಪಿದ್ದರು. ತಾವಾಗಿಯೇ ಅಪ್ಲಿಕೇಷನ್ ಹಾಕಿರಲಿಲ್ಲ. ಇದೀಗ ಮತ್ತೆ ಟೀಂ ಇಂಡಿಯಾ ಹೆಡ್ ಯಾರಾಗ್ತಾರೆ ಅನ್ನೋ ಪ್ರಶ್ನೆ ಭುಗಿಲೆದ್ದಿದೆ.

Sulekha