ಆಸ್ಟ್ರೇಲಿಯಾ ವಿಶ್ವಕಪ್ ಗೆಲ್ಲಲು ಹಿಂದಿನ ಶಕ್ತಿಯೇ ರಿಕ್ಕಿಪಾಂಟಿಂಗ್ – ರಣತಂತ್ರಗಾರ ರಿಕ್ಕಿಯ ಮೈಂಡ್ಗೇಮ್ ಸಕ್ಸಸ್ ಆಗಿದ್ದು ಹೇಗೆ?
6ನೇ ಬಾರಿಗೆ ಆಸ್ಟ್ರೇಲಿಯಾ ವರ್ಲ್ಡ್ಕಪ್ ಗೆದ್ದಿದ್ದೇ ಗೆದ್ದಿದ್ದು.. ಎಲ್ಲರೂ ಫೈನಲ್ನಲ್ಲಿ ಅಸ್ಸೀಗಳ ಪರ್ಫಾಮೆನ್ಸ್ ಬಗ್ಗೆಯೇ ಮಾತನಾಡ್ತಿದ್ದಾರೆ. ಆಸ್ಟ್ರೇಲಿಯನ್ನರ ತಾಕತ್ತು ಏನು? ಬೇರೆಲ್ಲಾ ಟೀಮ್ಗಳಿಗಿಂತಲೂ ಆಸ್ಟ್ರೇಲಿಯಾ ಅಷ್ಟೊಂದು ಡಿಫರೆಂಟ್ ಯಾಕೆ ಅನ್ನೋದು ಅವರ ಆಟದಿಂದಲೇ ಎಲ್ಲರಿಗೂ ಅರ್ಥವಾಗಿದೆ. ಆದ್ರೆ ಈ ಎಲ್ಲಾ ರಣತಂತ್ರದ ಹಿಂದೆ ಒಬ್ಬ ಕ್ರಿಕೆಟ್ ಮಾಂತ್ರಿಕನಿದ್ದಾನೆ. ಫೈನಲ್ನಲ್ಲಿ ಟೀಂ ಇಂಡಿಯಾಗೆ ಯಾವ ರೀತಿ ಸ್ಟ್ರ್ಯಾಟಜಿ ಮಾಡಬೇಕು. ಹೇಗೆ ಸೋಲಿಸಬೇಕು ಅನ್ನೋ ಮೇಜರ್ ರೋಲ್ ನಿಭಾಯಿಸಿದ್ದೇ ಆ ಒಬ್ಬ ರಣತಂತ್ರಗಾರ. ಆತ ಯಾರು? ಆಸ್ಟ್ರೇಲಿಯಾ ಮತ್ತೊಮ್ಮೆ ವಿಶ್ವಕಪ್ ಗೆಲ್ಲೋಕೆ ಅವರ ಕೊಡುಗೆ ಏನು ಎಂಬ ಬಗ್ಗೆ ವಿವರ ಇಲ್ಲಿದೆ.
ಇದನ್ನೂ ಓದಿ: ಕ್ರಿಕೆಟ್ ನಲ್ಲಿ ಹೊಸ ರೂಲ್ಸ್ ಜಾರಿಗೆ ತಂದ ಐಸಿಸಿ – ಬೌಲರ್ಸ್ ಯಾಮಾರಿದ್ರೆ ಬೀಳುತ್ತೆ 5 ರನ್ ಗಳ ದಂಡ!
ರಿಕ್ಕಿ ಪಾಂಟಿಂಗ್.. ಎರಡು ಬಾರಿ ಆಸ್ಟ್ರೇಲಿಯಾಗೆ ವರ್ಲ್ಡ್ಕಪ್ ಗೆಲ್ಲಿಸಿಕೊಟ್ಟ ಯಶಸ್ವೀ ನಾಯಕ. 2003 ಮತ್ತು 2007ರಲ್ಲಿ ಪಾಂಟಿಂಗ್ ಕ್ಯಾಪ್ಟನ್ಸಿಯಲ್ಲಿ ಸತತವಾಗಿ ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದಿತ್ತು. ಕೇವಲ ಆಸ್ಟ್ರೇಲಿಯಾ ಮಾತ್ರವಲ್ಲ ವರ್ಲ್ಡ್ ಕ್ರಿಕೆಟ್ನ ಬೆಸ್ಟ್ ನಾಯಕರಲ್ಲಿ ರಿಕ್ಕಿ ಪಾಂಟಿಂಗ್ ಹೆಸರು ಉತ್ತುಂಗದಲ್ಲಿದೆ. ಆದ್ರೆ ಕ್ರಿಕೆಟ್ನಿಂದ ರಿಟೈರ್ ಆದ್ರೂ ಕೂಡ ಮತ್ತೊಂದು ರೀತಿಯಲ್ಲಿ ಆಸ್ಟ್ರೇಲಿಯಾಗೆ ವಿಶ್ವಕಪ್ನ್ನ ಗೆಲ್ಲಿಸಿಕೊಡುತ್ತಲೇ ಬಂದಿದ್ದಾರೆ ರಿಕ್ಕಿ ಪಾಂಟಿಂಗ್. ಈ ಬಾರಿ ಫೈನಲ್ನಲ್ಲಿ ಆಸ್ಟ್ರೇಲಿಯಾ ಟೀಂ ಇಂಡಿಯಾವನ್ನ ಮಣಿಸೋಕೆ ಪರೋಕ್ಷ ಕಾರಣವೇ ರಿಕ್ಕಿ ಪಾಂಟಿಂಗ್. ನಿರಂತರ 10 ಮ್ಯಾಚ್ಗಳನ್ನ ಗೆದ್ದುಕೊಂಡು ಫೈನಲ್ಗೇರಿ ವರ್ಲ್ಡ್ಕಪ್ ಗೆಲ್ಲುವ ತಂಡವಾಗಿ ಭಾರತ ಹೊರಹೊಮ್ಮಿತ್ತು. ಟೀಂ ಇಂಡಿಯಾವನ್ನ ಮಣಿಸೋದು ಅಂದ್ರೆ ನಿಜಕ್ಕೂ ಸುಲಭದ ಸಂಗತಿಯಾಗಿರಲಿಲ್ಲ. ಜೊತೆಗೆ ಯಾವ ಪಿಚ್ ಬಗ್ಗೆಯೂ ಆಸ್ಟ್ರೇಲಿಯನ್ನರಿಗೆ ಸಾಕಷ್ಟು ಕನ್ಫ್ಯೂಷನ್ಗಳಿದ್ದವು. ಇದೇ ಕಾರಣಕ್ಕೆ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಹಲವು ಪಿಚ್ನ್ನ ಸೂಕ್ಷ್ಮವಾಗಿ ಪರಿಶೀಲಿಸಿದ್ರು. ಆದ್ರೆ ರಿಕ್ಕಿ ಪಾಂಟಿಂಗ್ಗೆ ಮಾತ್ರ ಫೈನಲ್ ಪ್ಲ್ಯಾನ್ ಹೇಗಿರಬೇಕು? ಟೀಂ ಇಂಡಿಯಾವನ್ನ ಸೋಲಿಸೋದು ಹೇಗೆ ಅನ್ನೋ ಬಗ್ಗೆ ಕಂಪ್ಲೀಟ್ ಕ್ಲಾರಿಟಿ ಹೊಂದಿದ್ದರು. ವರ್ಲ್ಡ್ ಕ್ರಿಕೆಟ್ಗೆ ವನ್ ಆಫ್ ದಿ ಬೆಸ್ಟ್ ಬ್ರೈನ್ ಪಾಂಟಿಂಗ್ ಮ್ಯಾಚ್ಗೂ ಎರಡು ದಿನ ಮತ್ತು ಮ್ಯಾಚ್ ಡೇನಂದು ಕೂಡ ಪ್ರಾಕ್ಟೀಸ್ ಮಾಡ್ತಿದ್ದ ಸಂದರ್ಭದಲ್ಲಿ ಆಸ್ಟ್ರೇಲಿಯಾ ಟೀಮ್ನ್ನ ಭೇಟಿಯಾಗಿದ್ದರು. ಈ ವೇಳೆ ಅಸ್ಸೀಗಳಿಗೆ ಒಂದು ಸಿಂಪಲ್ ಅಡ್ವೈಸ್ ಕೊಡ್ತಾರೆ. ಆ ಒಂದು ಅಡ್ವೈಸ್ ಆಸ್ಟ್ರೇಲಿಯನ್ ಪ್ಲೇಯರ್ಸ್ಗಳಿಗೆ ಬಿಗ್ ರಿಲೀಫ್ ನೀಡುತ್ತೆ. ಕಾನ್ಫಿಡೆನ್ಸ್ ಹೆಚ್ಚಿಸುತ್ತೆ. ಕಮಿನ್ಸ್ ಟೀಂ ಮೆಂಬರ್ಸ್ಗೆ ಒಂದಷ್ಟು ಕ್ಲಾರಿಟಿ ಸಿಗುತ್ತೆ. ಎಲ್ಲರ ಮೈಂಡ್ಸೆಟ್ನ್ನ ಕೂಡ ಚೇಂಜ್ ಮಾಡಿಬಿಡುತ್ತೆ.
ರಿಕ್ಕಿ ಪಾಂಟಿಂಗ್ ಹೇಳಿದ್ದೇನು?
‘Don’t worry about the surface. It’s a cricket pitch, its 22 yards long and just go out there and play your best game’
‘ನೀವ್ಯಾರು ಕೂಡ ಪಿಚ್ ಬಗ್ಗೆ ಟೆನ್ಷನ್ ಮಾಡಿಕೊಳ್ಳುವ ಅಗತ್ಯ ಇಲ್ಲ. ಇದೊಂದು ಕ್ರಿಕೆಟ್ ಪಿಚ್. ಇದು 22 ಯಾರ್ಡ್ಸ್ ಉದ್ದ ಇದೆ. ಸುಮ್ಮನೆ ಪಿಚ್ಗೆ ಹೋಗಿ, ನಿಮ್ಮ ಬೆಸ್ಟ್ ಪರ್ಫಾಮೆನ್ಸ್ ಕೊಡಿ’
ಇದು ಫೈನಲ್ ಮ್ಯಾಚ್ಗೂ ಮುನ್ನ ರಿಕ್ಕಿ ಪಾಂಟಿಂಗ್ ಎಲ್ಲಾ ಆಸ್ಟ್ರೇಲಿಯನ್ ಪ್ಲೇಯರ್ಸ್ಗಳಿಗೂ ಹೇಳಿದಂಥಾ ಮಾತು. ಯಾಕಂದ್ರೆ ಅಂದು ಆಸ್ಟ್ರೇಲಿಯನ್ನರು ಫೈನಲ್ಗೆ ಎಲ್ಲಾ ರೀತಿಯಲ್ಲೂ ಸಜ್ಜಾಗಿದ್ದರು. ಟೀಂ ಇಂಡಿಯಾಗೆ ಸರಿಯಾದ ಕೌಂಟರ್ ಸ್ಟ್ರ್ಯಾಟಜಿಯನ್ನೇ ಮಾಡಿದ್ರು. ಆದ್ರೆ ಪಿಚ್ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿದ್ರು. ಈ ಪಿಚ್ ಹೇಗೆ ವರ್ತಿಸುತ್ತೋ? ಮ್ಯಾಚ್ ಶುರುವಾದಂತೆ ಯಾವ ರೀತಿ ಬದಲಾಗುತ್ತೆ. ತಮ್ಮ ಪ್ಲ್ಯಾನ್ ಎಲ್ಲಿ ಉಲ್ಟಾ ಹೊಡೆಯುತ್ತಾ? ಇಂಥಾ ಹಲವಾರು ಪ್ರಶ್ನೆಗಳು ಅಸ್ಸೀಗಳಿಗಿತ್ತು. ಈ ಹಿಂದಿನಿಂದಲೂ ಭಾರತದಲ್ಲಿ ಆಡುವಾಗ ಇಲ್ಲಿನ ಪಿಚ್ಗಳ ಬಗ್ಗೆ ಆಸ್ಟ್ರೇಲಿಯನ್ಸ್ ಯಾವಾಗಲೂ ತಲೆ ಕೆಡಿಸಿಕೊಳ್ತಾನೆ ಇದ್ದಾರೆ. ಹೀಗಾಗಿ 2004ರಿಂದ ಇದುವರೆಗೂ ಭಾರತದಲ್ಲಿ ಆಸ್ಟ್ರೇಲಿಯಾಗೆ ಒಂದೇ ಒಂದು ಟೆಸ್ಟ್ ಸೀರಿಸ್ ಗೆಲ್ಲೋಕೆ ಸಾಧ್ಯವಾಗಿಲ್ಲ. 2008 ಮತ್ತು 2010ರಲ್ಲಿ 2-0 ಅಂತರದಿಂದ ಟೀಂ ಇಂಡಿಯಾ ಮುಂದೆ ಸೋತಿದ್ರು. 2013ರಲ್ಲಿ 4-0 ಅಂತರದಲ್ಲಿ ಮತ್ತೆ ಸೋತಿದ್ರು. 2017ರಲ್ಲಿ 2-1 ಅಂತರದಿಂದ ಸೀರಿಸ್ ಸೋತ್ರು. ಇತ್ತೀಚೆಗೆ ಮತ್ತು 2-1 ಅಂತರದಿಂದ ಟೆಸ್ಟ್ ಸೀರಿಸ್ ಕಳ್ಕೊಂಡಿದ್ರು. ಹೀಗಾಗಿ ವರ್ಲ್ಡ್ಕಪ್ ಫೈನಲ್ ಪಿಚ್ ಕಂಡೀಷನ್ ಬಗ್ಗೆಯೂ ಆಸ್ಟ್ರೇಲಿಯನ್ಸ್ ತಲೆಗೆ ಹುಳ ಬಿಟ್ಟುಕೊಂಡಿದ್ರು. ಆದ್ರೆ ಪಿಚ್ ಬಗ್ಗೆ ತಲೆನೇ ಕೆಡಿಸಿಕೊಳ್ಳಬೇಡಿ. ಅದು ಹೇಗೆ ಬೇಕಾದ್ರೂ ಇರಲಿ. ನಿಮ್ಮಿಂದಾದಷ್ಟು ಬೆಸ್ಟ್ ಕ್ರಿಕೆಟ್ ಆಡಿ ಅನ್ನೋ ರಿಕ್ಕಿಯ ಒಂದೇ ಒಂದು ಮಾತು ಪ್ಲೇಯರ್ಸ್ಗಳ ಮೆಂಟಾಲಿಟಿಯನ್ನೇ ಬದಲಾಯಿಸಿತ್ತು. ಆ ಕ್ಷಣವೇ ಪಿಚ್ ಬಗ್ಗೆ ಯೋಚನೆ ಮಾಡೋದನ್ನೇ ಬಿಟ್ಟಿದ್ರು.
ಇವೆಲ್ಲದ್ರ ಜೊತೆಗೆ ಇನ್ನೊಂದು ವಿಚಾರವನ್ನ ಹೇಳಲೇಬೇಕು. ಮೈಂಡ್ ಗೇಮ್ ಆಡೋದ್ರಲ್ಲಿ ರಿಕ್ಕಿ ಪಾಂಟಿಂಗ್ ಮಹಾ ಚಾಣಕ್ಯ. ಇಂಡಿಯನ್ ಪ್ಲೇಯರ್ಸ್ಗಳ ಮೆಂಟಾಲಿಟಿ ಬಗ್ಗೆ ಪಾಂಟಿಂಗ್ಗೆ ಚೆನ್ನಾಗಿಯೇ ಗೊತ್ತು. ಈ ಹಿಂದೆ 2003ರ ವರ್ಲ್ಡ್ ಕಪ್ ಫೈನಲ್ನಲ್ಲಿ ಪಾಂಟಿಂಗ್ ನೇತೃತ್ವದ ಟೀಂ ಭಾರತವನ್ನ ಮಣಿಸಿತ್ತು. ಆ ಮ್ಯಾಚ್ನಲ್ಲಿ ಪಾಂಟಿಂಗ್ ಸೆಂಚೂರಿ ಹೊಡೆದಿದ್ರು. ಹೈಯೆಸ್ಟ್ ಸ್ಕೋರರ್ ಆಗಿದ್ರು. ನಂತರ ಐಪಿಎಲ್ನಲ್ಲೂ ಮುಂಬೈ ಬಳಿ ದೆಹಲಿ ಕ್ಯಾಪಿಟಲ್ಸ್ ತಂಡದ ಕೋಚ್ ಬೇರೆ. ರೋಹಿತ್ ಶರ್ಮಾ ಸ್ಟ್ರ್ಯಾಟಜಿ ಬಗ್ಗೆ ಪಾಂಟಿಂಗ್ಗೆ ಚೆನ್ನಾಗಿಯೇ ಐಡಿಯಾ ಇರುತ್ತೆ. ವರ್ಲ್ಡ್ಕಪ್ ಫೈನಲ್ನಂಥಾ ಹೈಪ್ರೆಷರ್ ಗೇಮ್ನಲ್ಲಿ ನಮ್ಮವರ ಮೈಂಡ್ಸೆಟ್ ಹೇಗಿರುತ್ತೆ ಅನ್ನೋದು ಕೂಡ ಪಾಟಿಂಗ್ಗೆ ಚೆನ್ನಾಗಿಯೇ ಗೊತ್ತಿದೆ. ಹೀಗಾಗಿ ಆರಂಭದಿಂದಲೂ ಟೀಂ ಇಂಡಿಯಾದ ಮೇಲೆ ಪ್ರೆಷರ್ ಬಿಲ್ಡ್ ಮಾಡೋಕೆ ಬೇಕಾದ ಕೆಲ ಟಿಪ್ಸ್ಗಳನ್ನ ಕೂಡ ಪಂಟರ್ ಆಸ್ಟ್ರೇಲಿಯನ್ನರಿಗೆ ಕೊಟ್ಟಿದ್ರು. ಇನ್ನು ಫೈನಲ್ ಮ್ಯಾಚ್ಗಳಲ್ಲಿ, ಅದ್ರಲ್ಲೂ ವರ್ಲ್ಡ್ಕಪ್ ಫೈನಲ್ನಲ್ಲಂತೂ ಪ್ರತಿ ಬಾರಿಯೂ ಆಸ್ಟ್ರೇಲಿಯಾದ ಒಬ್ಬಲ್ಲಾ ಒಬ್ಬ ಪ್ಲೇಯರ್ ಇಂಡಿವಿಜ್ಯುವಲ್ ತನ್ನ ಬೆಸ್ಟ್ ಪರ್ಫಾಮೆನ್ಸ್ನ್ನ ಕೊಟ್ಟೇ ಕೊಡ್ತಾರೆ. 2003ರಲ್ಲಿ ಪಾಂಟಿಂಗ್, 2007ರಲ್ಲಿ ಗಿಲ್ಕ್ರಿಸ್ಟ್, ಈ ಬಾರಿ ಟ್ರಾವಿಸ್ ಹೆಡ್ ಯಾವ ರೀತಿ ಆಡಿದ್ರು ಅನ್ನೋದನ್ನ ನೀವು ನೋಡಿದ್ರಿ. ಹೈಪ್ರೆಷರ ಗೇಮ್ನಲ್ಲಿ ಇಂಥಾ ಮೇಜರ್ ಇನ್ನಿಂಗ್ಸ್ ಕಟ್ಟೋದ್ರ ಬಗ್ಗೆಯೂ ಪಾಂಟಿಂಗ್ ಅಸ್ಸೀಗಳಿಗೆ ಒಂದಷ್ಟು ಸಲಹೆಗಳನ್ನ ನೀಡಿದ್ರು.
ಇನ್ನು ಈ ಬಾರಿಯ ವರ್ಲ್ಡ್ಕಪ್ನಲ್ಲಿ ಆಲ್ಮೋಸ್ಟ್ ಎಲ್ಲಾ ಗ್ರೌಂಡ್ನ ಪಿಚ್ಗಳು ಕೂಡ ಫ್ಲ್ಯಾಟ್ ಪಿಚ್ ಆಗಿತ್ತು. ಅಂದ್ರೆ ಬ್ಯಾಟ್ಸ್ಮನ್ಗಳಿಗೆ ಹೆಚ್ಚು ಫೇವರ್ ಆಗಿತ್ತು. ರನ್ ಪ್ರವಾಹವೇ ಹರಿದುಬಂದಿತ್ತು. ಕಳೆದ ಹಲವು ವರ್ಷಗಳಿಂದ ಭಾರತದ ಬಹುತೇಕ ಪಿಚ್ಗಳು ಇದೇ ರೀತಿ ಇದೆ. ಆದ್ರೆ, ವರ್ಲ್ಡ್ಕಪ್ ಫೈನಲ್ ಮ್ಯಾಚ್ನಲ್ಲಿ ಮಾತ್ರ ಸಬ್ ಕಾಂಟಿನೆಂಟಲ್ ಮಾದರಿಯ ಪಿಚ್ ನಿರ್ಮಾಣ ಮಾಡಲಾಗಿತ್ತು. ಇದು ಟೀಂ ಇಂಡಿಯಾಗೆ ಬ್ಯಾಕ್ಫೈರ್ ಆಗಿದೆ ಅಂತಾ ಪಾಂಟಿಂಗ್ ಹೇಳಿದ್ದಾರೆ. ಇನ್ನು ಟಾಸ್ ಗೆದ್ರೆ ಬೌಲಿಂಗೇ ಮಾಡೋದು ಅಂತಾ ಆಸ್ಟ್ರೇಲಿಯನ್ಸ್ ಮೊದಲೇ ಫಿಕ್ಸ್ ಆಗಿದ್ರು. ಫೈನಲ್ನಲ್ಲಿ ಫಸ್ಟ್ 10 ಓವರ್ಗಳವರೆಗೆ ಮಾತ್ರ ಬಾಲ್ ಸ್ವಿಂಗ್ ಮತ್ತು ಸೀಮ್ ಆಗ್ತಿತ್ತು. ಬಳಿಕ ಸ್ಪಿನ್ನರ್ಸ್ಗಳಿಗೂ ಪಿಚ್ ಹೆಲ್ಪ್ ಆಗಿರಲಿಲ್ಲ. ಹೀಗಾಗಿ ಚೇಸಿಂಗ್ ವೇಳೆ ಆರಂಭದಲ್ಲಿ 3 ವಿಕೆಟ್ಗಳು ಬಿದ್ರೂ ಕೂಡ ಆಸ್ಟ್ರೇಲಿಯನ್ ಬ್ಯಾಟ್ಸ್ಮನ್ಗಳು ನಂತರ ಪಿಚ್ನ್ನ ಚೆನ್ನಾಗಿ ರೀಡ್ ಮಾಡಿ ಈಸಿಯಾಗಿ ರನ್ ಗಳಿಸ್ತಾ ಹೋದ್ರು. ಜೊತೆಗೆ ಆಗಲೇ ಹೇಳಿದ ಹಾಗೆ ಪಿಚ್ ಬಗ್ಗೆ ವರಿ ಮಾಡದೆ ಗೇಮ್ ಮೇಲೆಯೇ ಹೆಚ್ಚು ಫೋಕಸ್ ಮಾಡಿದ್ರು. ಪಾಂಟಿಂಗ್ ಸಲಹೆಯಿಂದಾಗಿ ಮೆಂಟಲಿ ನಮ್ಮವರಿಗಿಂತ ಹೆಚ್ಚು ಸ್ಟ್ರಾಂಗ್ ಆಗಿದ್ರು. ಪಾಸಿಟಿವ್ ಮೈಂಡ್ಸೆಟ್ನಲ್ಲಿ.. ಸೋಲೋ ಭಯ ಅವರಲ್ಲಿ ಇರಲೇ ಇಲ್ಲ. ಅಂತೂ ತಮ್ಮ ಟಿಪ್ಸ್ ಮೂಲಕವೇ ಪಂಟರ್ ಟೀಂ ಇಂಡಿಯಾವನ್ನ ಮತ್ತೊಮ್ಮೆ ಹಂಟ್ ಮಾಡಿದ್ದಾರೆ. ಅದಕ್ಕೆ ರಿಕ್ಕಿ ಪಾಂಟಿಂಗ್ ಮೋಸ್ಟ್ ಸಕ್ಸಸ್ಫುಲ್ ಕ್ಯಾಪ್ಟನ್ ಆಗಿರೋದು. ಎರಡು ಬಾರಿ ತಮ್ಮ ದೇಶಕ್ಕೆ ವರ್ಲ್ಡ್ಕಪ್ ಗೆಲ್ಲಿಸಿಕೋಡೋಕೆ ಸಾಧ್ಯವಾಗಿರೋದು.