28 ಲೀಟರ್ ಬಿಯರ್ ಕುಡಿದ ವ್ಯಕ್ತಿ! – ನಾಲ್ಕು ವಾರವಾದ್ರೂ ಅಮಲು ಬಿಡಲಿಲ್ಲ!
ಮೋಜು ಮಸ್ತಿಗಾಗಿ ಆರಂಭವಾಗುವ ಕುಡಿತ ಮೊದಮೊದಲಿಗೆ ಖುಷಿ ಕೊಡುತ್ತದೆ. ನಂತರ ನಮ್ಮ ಬದುಕನ್ನೇ ಬಲಿ ತೆಗೆದುಕೊಳ್ಳುತ್ತದೆ. ಹೀಗಿದ್ದರೂ ಜನ ಕುಡಿತವನ್ನು ಬಿಡುತ್ತಿಲ್ಲ. ಅದರ ಬೆಲೆ ಗಗನಕ್ಕೇರಿದರೂ ವೈನ್ ಶಾಪ್‍ಗಳಲ್ಲಿ ನೂಕುನುಗ್ಗಲು ಮಾತ್ರ ಕಡಿಮೆಯಾಗಿಲ್ಲ. ಈಗ ಕುಡಿತ ಲಿಂಗಬೇಧವಿಲ್ಲದೆ ಎಲ್ಲರನ್ನೂ ಹಾಳು ಮಾಡುವಲ್ಲಿ ಯಶಸ್ವಿಯಾಗಿದೆ. ಸದಾ ಒತ್ತಡದಲ್ಲಿ ಕೆಲಸ ಮಾಡುವ ಬಹುತೇಕ ಮಂದಿ ಒಂದು ಪೆಗ್ ಏರಿಸಿದರೆ ರಿಲ್ಯಾಕ್ಸ್ ಆಗುತ್ತದೆ ಎಂಬ ಭ್ರಮೆಯಲ್ಲಿಯೇ ಕುಡಿತವನ್ನು ಮುಂದುವರೆಸುತ್ತಿದ್ದಾರೆ. ಕುಡಿತದ ಚಟ ಆರೋಗ್ಯಕ್ಕೆ ಹಾಳು ಅಂತಾ ಗೊತ್ತಿದ್ದರೂ ಜನರು ಕುಡಿತವನ್ನು ಬಿಡುತ್ತಿಲ್ಲ. ಕೆಲವರು ಪ್ರತಿ ದಿನ ಸ್ವಲ್ಪ ಪ್ರಮಾಣದಲ್ಲಿ ಕುಡಿದರೆ, ಇನ್ನು ಕೆಲವರು ಕೆಲವರು ಕುಡಿಯುತ್ತಲೇ ಇರುತ್ತಾರೆ. ಇನ್ನೂ ಯಾವುದಾದರೊಂದು ಸಂದರ್ಭಗಳಲ್ಲಿ ಮಾತ್ರ ಕುಡಿಯುತ್ತಾರೆ. ಒಮ್ಮೆ ಕುಡಿದ್ರೆ ಅದರ ಅಮಲಿನಿಂದ ಹೊರ ಬರಲು ತುಂಬಾ ಸಮಯ ತೆಗೆದುಕೊಳ್ಳುವುದು ಸಾಮಾನ್ಯ. ಇಲ್ಲೊಬ್ಬ ವ್ಯಕ್ತಿ ಬಿಯರ್ ಕುಡಿದು ನಾಲ್ಕು ವಾರವಾದ್ರೂ ಅಮಲಿನಿಂದ ಹೊರಬರಲಾಗದೇ ಒದ್ದಾಡುತ್ತಿದ್ದಾನೆ.
ಇದನ್ನೂ ಓದಿ:ಚೀನಾದಲ್ಲಿ ಮತ್ತೊಂದು ಹೊಸ ಸೋಂಕು ಪತ್ತೆ! – ಮಕ್ಕಳ ಜೀವ ಹಿಂಡುತ್ತಿದೆ ಈ ನಿಗೂಢ ರೋಗ!
ಏನಿದು ಘಟನೆ?
ಸಾಮಾನ್ಯವಾಗಿ ಆಲ್ಕೋಹಾಲ್ ಕುಡಿದ ನಂತರ ಅದರ ಅಮಲು ಮರುದಿನದ ವರೆಗೂ ಇರುತ್ತದೆ. ಹೆಚ್ಚೆಂದರೆ ಒಂದೆರಡು ದಿನಗಳ ವರೆಗೆ ಅದೇ ಅಮಲಿನಲ್ಲಿ ಇರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಬಿಯರ್ ಕುಡಿದು, ಒಂದೆರಡು ದಿನವಲ್ಲ, ಬರೋಬ್ಬರಿ 4 ವಾರವಾದರೂ ಆತನಿಗೆ ಅದರ ಅಮಲಿನಿಂದ ಹೊರಬರಲು ಸಾಧ್ಯವಾಗಲಿಲ್ಲ. ಈ ವಿಚಿತ್ರ ಘಟನೆ ಸ್ಕಾಟ್ಲೆಂಡ್‌ನಲ್ಲಿ ನಡೆದಿದೆ.
‘ದಿ ಲ್ಯಾನ್ಸೆಟ್’ ಎಂಬ ನಿಯತಕಾಲಿಕೆಯ ಪ್ರಕಾರ ಈ 37 ವರ್ಷದ ವ್ಯಕ್ತಿಯನ್ನು ಆಲಸ್ಯ, ತಲೆನೋವು ಮತ್ತು ಕಣ್ಣು ಮಂಜಾಗುತ್ತಿದೆ ಎಂಬ ಸಮಸ್ಯೆಯಿಂದಾಗಿ ಮೊದಲಿಗೆ ಆಸ್ಪ್ರತೆಗೆ ದಾಖಲಿಸಲಾಗಿದೆ. ಆದರೆ ಆ ವ್ಯಕ್ತಿಗೆ ಇಂತಹ ಸಮಸ್ಯೆಗಳು ಏಕೆ ಬರುತ್ತಿವೆ ಎಂದು ಆರಂಭದಲ್ಲಿ ವೈದ್ಯರಿಗೂ ಅರ್ಥವಾಗಲಿಲ್ಲ. ಸಿಟಿ ಸ್ಕ್ಯಾನ್ ಮಾಡಿ, ಫಲಿತಾಂಶ ನೋಡಿದ ವೈದ್ಯರು ಆಶ್ಚರ್ಯಚಕಿತರಾಗಿದ್ದಾರೆ. ವ್ಯಕ್ತಿಯ ಮೆದುಳಿನ ಸುತ್ತ ಏನೋ ಸಮಸ್ಯೆ ಇದೆ ಎಂದು ವೈದ್ಯರಿಗೆ ತಿಳಿದುಬಂದಿದೆ.
ಈತನ್ನು ಪರೀಕ್ಷಿಸಿದ ಬಳಿಕ ವೈದ್ಯರು ವ್ಯಕ್ತಿಯ ಜೀವನಶೈಲಿಯ ಬಗ್ಗೆ ಕೇಳಿದ್ದಾರೆ. ಈ ಸಂದರ್ಭದಲ್ಲಿ ಆತ ತಾನು ಒಂದು ತಿಂಗಳ ಹಿಂದೆ 60 ಪಿಂಟ್‌ಗಳು ಅಂದರೆ ಸುಮಾರು 28 ಲೀಟರ್ ಬಿಯರ್ ಕುಡಿದಿರುವುದಾಗಿ ಹೇಳಿಕೊಂಡಿದ್ದಾನೆ. ವೈದ್ಯರು ಆತನ ರಕ್ತವನ್ನು ಪರೀಕ್ಷಿಸಿದಾಗ ಆತನ ದೇಹದಲ್ಲಿ ಲೂಪಸ್ ಹೆಪ್ಪುರೋಧಕ ಅಂಶ ಹೆಚ್ಚಿರುವುದು ಕಂಡುಬಂದಿದೆ. ಈ ಮೂಲಕ ‘ಲಾಂಗ್ ಹ್ಯಾಂಗೊವರ್’ ಹೊಂದಿರುವ ವ್ಯಕ್ತಿ ಎಂಬ ದಾಖಲೆಯನ್ನು ಮಾಡಿದ್ದಾನೆ.