ದಿನಕ್ಕೆ 10 ಸಾವಿರ ಹೆಜ್ಜೆ ನಡೆಯಲೇಬೇಕಾ? – ವಾಕಿಂಗ್ ಮಾಡಿದ್ರೆ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?
ಉತ್ತಮ ಆರೋಗ್ಯಕ್ಕೆ ವಾಕಿಂಗ್ ತುಂಬಾನೆ ಒಳ್ಳೆಯದು. ಅನೇಕ ಜನರು ತಮ್ಮ ಆರೋಗ್ಯದ ದೃಷ್ಟಿಯಿಂದ ದಿನಕ್ಕೆ 10 ಸಾವಿರ ಹೆಜ್ಜೆಗಳ ಗುರಿ ಇಟ್ಟುಕೊಂಡಿರುತ್ತಾರೆ. ಇದು ದೈಹಿಕ ಚಟುವಟಿಕೆಗೆ ಜನಪ್ರಿಯ ಶಿಫಾರಸು ಆಗಿದೆ. ವಾಕಿಂಗ್ ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದು ಹೃದಯ ಮತ್ತು ಶ್ವಾಸಕೋಶವನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಆದ್ರೆ ಕೆಲವರಿಗೆ 10 ಸಾವಿರ ಹೆಜ್ಜೆ ಟಾರ್ಗೆಟ್ ಕಂಪ್ಲೀಟ್ ಮಾಡಲು ಸಾಧ್ಯ ಆಗಲ್ಲ. ಈ ಟಾರ್ಗೆಟ್ ರೀಚ್ ಆಗ್ಬೇಕು ಅಂದ್ರೆ ಕೆಲವು ಸಿಂಪಲ್ ಟಿಪ್ಸ್ ಫಾಲೋ ಮಾಡೋದು ಉತ್ತಮ.
ಇದನ್ನೂ ಓದಿ: ಈರುಳ್ಳಿಯನ್ನು ಕತ್ತರಿಸಿ ಫ್ರಿಡ್ಜ್ ನಲ್ಲಿ ಇಡುವುದು ಡೇಂಜರ್ – ಕಟ್ ಮಾಡಿ ಇಟ್ಟರೆ ಬ್ಯಾಕ್ಟೀರಿಯಾ ಉಂಟಾಗಿ ಕಾಡುತ್ತೆ ಅನಾರೋಗ್ಯ
ಬೆಳಗ್ಗಿನ ವಾಕಿಂಗ್ ಒಳ್ಳೆಯ ಅಭ್ಯಾಸ ಅನ್ನೋದು ಎನ್ನುವುದು ನಿಮಗೆಲ್ಲಾ ಗೊತ್ತಿದೆ. ನೀವು 10 ಸಾವಿರ ಹೆಜ್ಜೆಗಳನ್ನು ಹಾಕ್ಬೇಕು ಅಂದ್ರೆ ಬೆಳಗ್ಗೆ ಕನಿಷ್ಟ ಅರ್ಧ ಗಂಟೆ ನಡೀಲೇಬೇಕು. ಆಗ ಮೊದಲ ಸುಮಾರು ಮೂರೂವರೆಯಿಂದ ನಾಲ್ಕು ಸಾವಿರ ಸ್ಟೆಪ್ಸ್ ಹಾಕಿರ್ತೀರಿ. ಇನ್ನು ನಿಮ್ಮ ಮನೆ ಅಥವಾ ಕೆಲಸ ಮಾಡುವ ಜಾಗದಲ್ಲಿ ಲಿಫ್ಟ್ ಇದ್ರೆ ಅದರ ಬದಲು ಮೆಟ್ಟಿಲುಗಳನ್ನೇ ಬಳಸಿ. ಇದ್ರಿಂದ ನಿಮ್ಮಕಾಲಿನ ಸ್ನಾಯುಗಳು ಶಕ್ತಿಯುತವಾಗ್ತವೆ.
ಇನ್ನು ಕೆಲಸದ ವೇಳೆ ಮೊಬೈಲ್ ಮೂಲಕ ಫೋನ್ಕಾಲ್ ಅಟೆಂಡ್ ಮಾಡುವಂತಿದ್ದರೆ, ನಡೆಯುತ್ತ ಮಾತಾಡಿ. ಇದು ಕೆಲಸ ಮಾಡಲು ಮತ್ತಷ್ಟು ಉತ್ಸಾಹ ಕೊಡುತ್ತದೆ. ಹಾಗೆಯೇ ಮಧ್ಯಾಹ್ನ ಊಟದ ನಂತರ ಕಚೇರಿಯ ಸುತ್ತಲೋ ಅಥವಾ ಹತ್ತಿರದಲೋ ಒಂದು ಹತ್ತು ನಿಮಿಷ ವಾಕ್ ಹೋಗಿ ಬನ್ನಿ. ಇದ್ರಿಂದ ಮನಸ್ಸು ರಿಲಾಕ್ಸ್ ಆಗೋದಲ್ಲದೆ, ಚೆನ್ನಾಗಿ ಕೆಲಸ ಮಾಡೋಕೂ ಸಾಧ್ಯವಾಗುತ್ತೆ. ಹೀಗೆ ಅವಕಾಶ ಸಿಕ್ಕಲ್ಲೆಲ್ಲಾ ನಡೆಯೋದಿಕ್ಕೆ ಆದ್ಯತೆ ಕೊಟ್ಟರೆ ನಿಮ್ಮ 10 ಸಾವಿರ ಹೆಜ್ಜೆ ಹಾಕುವ ಗುರಿ ನಿಮಗೆ ಗೊತ್ತಿಲ್ಲದಂತೆ ಮುಗಿದು ಹೋಗಿರುತ್ತೆ. ಅಷ್ಟೇ ಅಲ್ಲದೇ ನೀವು ಆರೋಗ್ಯವಾಗಿರುತ್ತೀರಿ.