WALLನಂಥಾ ಟೀಂ ಕಟ್ಟಿದ್ದು ಹೇಗೆ ರಾಹುಲ್ ದ್ರಾವಿಡ್? ಕನ್ನಡಿಗನ ಕೋಚಿಂಗ್ ಹೇಗಿತ್ತು?

WALLನಂಥಾ ಟೀಂ ಕಟ್ಟಿದ್ದು ಹೇಗೆ ರಾಹುಲ್ ದ್ರಾವಿಡ್?  ಕನ್ನಡಿಗನ ಕೋಚಿಂಗ್ ಹೇಗಿತ್ತು?

ಈ ಬಾರಿಯ ವರ್ಲ್ಡ್​ಕಪ್​ನಲ್ಲಿ ಟೀಂ ಇಂಡಿಯಾದ ಅಮೋಘ ಪರ್ಫಾಮೆನ್ಸ್​ನ ಮೇನ್ ಕ್ರೆಡಿಟ್ ಕನ್ನಡಿಗ ಕೋಚ್ ರಾಹುಲ್ ದ್ರಾವಿಡ್​​ಗೂ ಸಲ್ಲಬೇಕು. 2021ರ ನವೆಂಬರ್​ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಹೆಡ್ ಕೋಚ್ ಪಟ್ಟಕ್ಕೇರಿದ ದ್ರಾವಿಡ್ ಟೀಂ ಇಂಡಿಯಾದಲ್ಲಿ ಅಕ್ಷರಶ: ದೊಡ್ಡ ಕ್ರಾಂತಿಯನ್ನೇ ಮಾಡಿದ್ರು. ಯಾರೂ ಮಾಡದ ಸಾಹಸಗಳಿಗೆ ಆರಂಭದಲ್ಲೇ ಕೈ ಹಾಕಿದ್ರು. ಯುವಕರ ಪ್ರಬಲ ಪಡೆಯನ್ನ ಕಟ್ಟೋಕೆ, ಭಾರತೀಯ ಕ್ರಿಕೆಟ್​ಗೆ ಹೊಸ ಭವಿಷ್ಯ ಬರೆಯೋಕೆ ಕೋಚ್ ಆದ ದಿನದಂದೇ ರಾಹುಲ್ ದ್ರಾವಿಡ್ ನಿರ್ಧರಿಸಿದ್ರು. ಅದಕ್ಕೆ ಬೇಕಾದ ತಯಾರಿಗಳನ್ನ ಎರಡು ವರ್ಷಗಳಿಂದ ನಿರಂತರ ಮಾಡುತ್ತಲೇ ಬಂದಿದ್ದರು. ಈ ಬಾರಿಯ ವರ್ಲ್ಡ್​​ಕಪ್​ನಲ್ಲಿ ಟೀಂ ಇಂಡಿಯಾ ಈ ಲೆವೆಲ್​ಗೆ ಪರ್ಫಾಮ್ ಮಾಡಿದ್ರೆ ಅಂದ್ರೆ ಅದ್ರಲ್ಲಿ ಮಿಸ್ಟರ್​ ಡಿಪೆಂಡೆಬಲ್​.. ದಿ ವಾಲ್ ಖ್ಯಾತಿಯ ರಾಹುಲ್​ ದ್ರಾವಿಡ್​ ರೋಲ್​​ ತುಂಬಾನೆ ದೊಡ್ಡ ಮಟ್ಟದಲ್ಲಿದೆ.

ಇದನ್ನೂ ಓದಿ: HEAD ಗೆ ತಲೆಬಾಗಿದ ಭಾರತ – ಭಾರತದ ಸೋಲಿಗೆ ಏನು ಕಾರಣ? ಆಸ್ಟ್ರೇಲಿಯಾ ಗೆದ್ದು ಬೀಗಲು ಸಾಧ್ಯವಾಗಿದ್ದು ಹೇಗೆ?

ನೀವು ಟಿವಿಯಲ್ಲಿ ರಾಹುಲ್ ದ್ರಾವಿಡ್ ಅವರ ಒಂದು ಅಡ್ವಾಟೈಸ್​​ಮೆಂಟ್ ನೋಡಿರ್​​ಬಹುದು. ಇಂಜಿನ್ ಆಯಿಲ್ ಬಗ್ಗೆ.. ಅದ್ಯಾವುದೋ ಒಂದು ಆಯಿಲ್​ ವೆಹಿಕಲ್​ಗೆ ತುಂಬಾ ಒಳ್ಳೆಯದು.. ಮೈಲೇಜ್ ಕೊಡುತ್ತೆ.. ಪರ್ಫಾಮೆನ್ಸ್ ಕೂಡ ಬರುತ್ತೆ ಅಂತಾ ದ್ರಾವಿಡ್ ಆ ಆ್ಯಡ್​​ನಲ್ಲಿ ಹೇಳುತ್ತಾರೆ. ಆದರೆ, ಈ ಬಾರಿ ವರ್ಲ್ಡ್​​ಕಪ್​ನಲ್ಲಿ ಟೀಂ ಇಂಡಿಯಾ ಈ ಲೆವೆಲ್​ಗೆ ಪರ್ಫಾಮೆನ್ಸ್​ ಮಾಡೋಕೆ ರಾಹುಲ್​ ದ್ರಾವಿಡ್ ಕೂಡ ಕಾರಣ ಅನ್ನೋದನ್ನ ನ್ಯಾವ್ಯಾರು ಮರೆಯುವಂತಿಲ್ಲ. ದ್ರಾವಿಡ್ ಟೀಂ ಇಂಡಿಯಾಗೂ ಸ್ಪೆಷಲ್​​ ಆಯಿಲ್​​ಗೆ ಬಳಕೆ ಮಾಡಿದ್ದಾರೆ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಹಾಗಿದ್ರೆ ಕೋಚ್ ಆಗಿ ದ್ರಾವಿಡ್ ಇಂಡಿಯನ್​ ಕ್ರಿಕೆಟ್ ಮತ್ತು ಟೀಂ ಇಂಡಿಯಾದ ಮೇಲೆ ಯಾವ ಪರಿಣಾಮ ಬೀರಿದ್ದರು. ರೋಹಿತ್​ ಪಡೆಯನ್ನ ಕಟ್ಟಿದ್ದು ಹೇಗೆ ಅನ್ನೋದೆ ಒಂದು ರೋಚಕ ಸ್ಟೋರಿ.

ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಸೀನಿಯರ್​​ ತಂಡದ ಕೋಚ್ ಆಗುವ ಮುನ್ನ ಅಂಡರ್​-19 ಟೀಂಗೂ ಕೋಚ್ ಆಗಿದ್ದರು. ದ್ರಾವಿಡ್ ಕೋಚಿಂಗ್​​ನ ಅಡಿಯಲ್ಲಿ ಇಂಡಿಯನ್ ಅಂಡರ್​-19 ಟೀಂ ವರ್ಲ್ಡ್​​ಕಪ್​​ ಕೂಡ ಗೆದ್ದಿತ್ತು. ಹಾಗೆಯೇ ಇಂಡಿಯಾ-ಎ ಟೀಂಗೂ ದ್ರಾವಿಡ್​ ಕೋಚ್ ಆಗಿದ್ದರು. ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಡೈರೆಕ್ಟರ್ ಆಗಿಯೂ ಕಾರ್ಯನಿರ್ವಹಿಸಿದ್ದರು. ದೇಶಾದ್ಯಂತ ಹಲವು ಯುವ ಪ್ರತಿಭೆಗಳನ್ನ ಗುರುತಿಸಿ ಬೆಳೆಸಿದ್ರು. ಟ್ಯಾಲೆಂಟ್​​ ಹಂಟ್ ಮಾಡೋದ್ರಲ್ಲಿ ರಾಹುಲ್​ ದ್ರಾವಿಡ್​​ರದ್ದು ಎತ್ತಿದ ಕೈ. ಅಂಡರ್​-19 ಟೀಂ, ಇಂಡಿಯಾ-ಎ ಮತ್ತು ಎನ್​ಸಿಎ ಡೈರೆಕ್ಟರ್ ಆಗಿದ್ದಾಗ ದ್ರಾವಿಡ್ ಯುವ ಕ್ರಿಕೆಟಿಗರನ್ನ ಪತ್ತೆ ಮಾಡೋದಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ರು. ಅಂದ್ರೆ ಭವಿಷ್ಯದ ಟೀಂ ಇಂಡಿಯಾವನ್ನ ಕಟ್ಟೋಕೆ ರಾಹುಲ್ ದ್ರಾವಿಡ್ ಮುಂದಾಗಿದ್ರು. ಕೋಚ್ ಆಗಿ ರಾಹುಲ್ ದ್ರಾವಿಡ್​​ರ ಮೇನ್ ಫಿಲಾಸಫಿ ಅಂದ್ರೆ ಒಬ್ಬ ಉತ್ತಮ ಆಟಗಾರರನ್ನ ರೂಪಿಸಬೇಕು. ಗೆಲ್ಲೋದು ಮುಖ್ಯ ಅಲ್ಲ. ಅತ್ಯುತ್ತಮ ಪ್ಲೇಯರ್​​ನನ್ನಾಗಿ ಮಾಡೋದು ಹೆಚ್ಚು ಇಂಪಾರ್ಟೆಂಟ್. ಕ್ವಾಲಿಟಿ ಆಟಗಾರರನ್ನ ಸಿದ್ಧಗೊಳಿಸಿದ್ರಷ್ಟೇ ಮ್ಯಾಚ್ ಗೆಲ್ಲೋಕೆ ಸಾಧ್ಯ ಅನ್ನೋದು ದ್ರಾವಿಡ್ರ ವನ್ ಪಾಯಿಂಟ್ ಅಜೆಂಡಾ. ಆ್ಯಕ್ಚುವಲಿ ಕೋಚ್ ಆಗಿ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಬೆಸ್ಟ್​ ಯಂಗ್​​ ಕ್ರಿಕೆಟರ್ಸ್​ಗಳನ್ನೇ ನೀಡಿದ್ದಾರೆ. ನಿಮಗೆ ಗೊತ್ತಿರಲಿ, ಈ ವರ್ಲ್ಡ್​​ಕಪ್​​ನಲ್ಲಿ ಆಡಿರುವ ಮೊಹಮ್ಮದ್​ ಸಿರಾಜ್, ಇಶಾನ್ ಕಿಶನ್, ಶುಬ್ಮನ್ ಗಿಲ್, ಕುಲ್​ದೀಪ್ ಯಾದವ್ ಮತ್ತು ಶ್ರೇಯಸ್ ಅಯ್ಯರ್ ಇವರೆಲ್ಲರೂ ದ್ರಾವಿಡ್ ಗರಡಿಯಲ್ಲೇ ಬೆಳೆದವರು. ಟೀಂ ಇಂಡಿಯಾದ ಭವಿಷ್ಯದ ಆಟಗಾರರನ್ನ ದ್ರಾವಿಡ್ ಅವರು ಗುರುತಿಸಿ ಯಾವ ರೀತಿ ಬೆಳೆಸಿದ್ದಾರೆ ಅನ್ನೋದನ್ನ ವರ್ಲ್ಡ್​​ಕಪ್​ನಲ್ಲಿ ಈ ಯಂಗ್​ಸ್ಟರ್ಸ್​ಗಳ ಪರ್ಫಾಮೆನ್ಸೇ ಸಾಕ್ಷಿ.

ಇಲ್ಲಿ ರಾಹುಲ್ ದ್ರಾವಿಡ್​ರ ಕೋಚಿಂಗ್ ಸ್ಟೈಲ್​ ಬಗ್ಗೆ ಇನ್ನೊಂದಷ್ಟು ಇಂಟ್ರೆಸ್ಟಿಂಗ್ ವಿಚಾರವನ್ನ ಹೇಳಲೇಬೇಕು. ಕೋಚ್​ಗಳು ಅಂದ್ಮೇಲೆ ಒಬ್ಬೊಬ್ಬರದ್ದು ಒಂದೊಂದು ಸ್ಟೈಲ್ ಇರುತ್ತೆ. ಕೆಲ ಕೋಚ್​​ಗಳು ತುಂಬಾನೆ ಸ್ಟ್ರಿಕ್ ಆಗಿರ್ತಾರೆ. ಇನ್ನೂ ಕೆಲ ಕೋಚ್​ಗಳು ಆಟಗಾರರಿಗೆ ಹೆಚ್ಚು ಫ್ರೀಡಂ ಕೊಡ್ತಾರೆ. ಇಲ್ಲಿ ರಾಹುಲ್ ದ್ರಾವಿಡ್ 2ನೇ ಕೆಟಗರಿಯವರು. ಕೋಚ್ ಆಗಿ ದ್ರಾವಿಡ್ ಯಾವ ಪ್ಲೇಯರ್​ ಮೇಲೂ ಪ್ರೆಷರ್ ಬೀಳದಂತೆ ನೋಡಿಕೊಳ್ತಾರೆ. ಪರ್ಫಾಮೆನ್ಸ್ ವಿಚಾರದಲ್ಲಿ ಯಾರ ಮೇಲೂ ಫೋರ್ಸ್​​ ಮಾಡುವವರಲ್ಲ. ಪ್ರತಿಯೊಬ್ಬ ಇಂಡಿವಿಜ್ಯೂವಲ್​ಗೂ ತನಗಿಷ್ಟಬಂದಂತೆ. ತನ್ನ ನ್ಯಾಚ್ಯುರಲ್​ ಸ್ಟೈಲ್​ನಲ್ಲಿ, ಆತನ ಸ್ಟ್ರ್ಯಾಟಜಿಯಂತೆ ಆಡೋಕೆ ಅವಕಾಶ ಕೊಡ್ತಾರೆ. ಯಾವ ಏರಿಯಾದಲ್ಲಿ ಪ್ಲೇಯರ್​​​ ಡ್ರಾಬ್ಯಾಕ್ ಹೊಂದಿದ್ದಾನೋ ಅದನ್ನಷ್ಟೇ ಸರಿ ಪಡಿಸೋಕೆ ರಾಹುಲ್​​ ಟಿಪ್ಸ್​ ಕೊಡ್ತಾರೆ.

ನೆಟ್​ ಪ್ರಾಕ್ಟೀಸ್ ವೇಳೆ ರಾಹುಲ್ ದ್ರಾವಿಡ್ ಸೈಲೆಂಟ್ ಆಗಿ ನಿಂತು ನೋಡ್ತಿರ್ತಾರೆ. ಪ್ರತಿಯೊಬ್ಬ ಪ್ಲೇಯರ್​​ನ್ನೂ ಸೂಕ್ಷ್ಮವಾಗಿ ಗಮನಿಸ್ತಾರೆ. ಆತನ ಸಾಮರ್ಥ್ಯವನ್ನ ಡಿಟೇಲಾಗಿ ಸ್ಟಡಿ ಮಾಡ್ತಾರೆ. ಬಳಿಕ ಆತನಿಗೆ ಅಗತ್ಯವಿರೋ ಟಿಪ್ಸ್​ಗಳನ್ನ ನೀಡ್ತಾರೆ. ಇನ್ನು ಜಗತ್ತಿನ ಯಾವುದೇ ಗ್ರೌಂಡ್​​ನಲ್ಲಿ ಮ್ಯಾಚ್​​ ನಡೆಯಲಿ, ಮೊದಲು ರಾಹುಲ್ ದ್ರಾವಿಡ್ ಮಾಡೋ ಕೆಲಸ ಪಿಚ್ ಇನ್ಷ್​​ಪೆಕ್ಷನ್​​. ಇನ್ನೆರಡು ದಿನ ಕಳೆದು ಮ್ಯಾಚ್​ ಇದ್ರೂ ಕೂಡ ಮ್ಯಾಚ್​​ ನಡೆಯೋ ಸಿಟಿಗೆ ಆಗಮಿಸಿದ ಕೂಡಲೇ ಪ್ಲೇಯರ್ಸ್​​ಗಳೆಲ್ಲಾ ಹೋಟೆಲ್​ಗೆ ಹೋದ್ರೆ, ದ್ರಾವಿಡ್ ಮಾತ್ರ ನೇರವಾಗಿ ಸ್ಟೇಡಿಯಂಗೆ ತೆರಳಿ ಪಿಚ್ ಪರಿಶೀಲನೆ ಮಾಡ್ತಾರೆ. ಕ್ಯುರೇಟರ್​​ರಿಂದ, ಗ್ರೌಂಡ್ಸ್​​ಮನ್​ಗಳಿಂದ ಮಾಹಿತಿ ಪಡೀತಾರೆ. ಇದಾದ ಬಳಿಕ ಪಿಚ್​​​ನ್ನ ಆಧರಿಸಿ ಆ ಪಂದ್ಯಕ್ಕೆ ಟೀಂ ಕಾಂಬಿನೇಷನ್ ಹೇಗಿರಬೇಕು, ಸ್ಟ್ರ್ಯಾಟಜಿ ಏನಾಗಿರಬೇಕು ಅನ್ನೋದನ್ನ ನಿರ್ಧರಿಸ್ತಾರೆ.

ಇನ್ನು ಪ್ಲೇಯರ್ಸ್​​ಗಳ ಜೊತೆಗೆ ರಾಹುಲ್​ ದ್ರಾವಿಡ್ ತುಂಬಾನೆ ಫ್ರೀಯಾಗಿರ್ತಾರೆ. ತಾವೊಬ್ಬ ಕೋಚ್ ಅನ್ನೋ ರೀತಿಯಲ್ಲಿ ಯಾವತ್ತೂ ಪೋಸ್ ಕೊಟ್ಟವರೇ ಅಲ್ಲ. ಪ್ರತಿಯೊಬ್ಬ ಆಟಗಾರನೂ ಯಾವುದೇ ಅಂಜಿಕೆ ಇಲ್ಲದೆ ತಮ್ಮನ್ನ ರೀಚ್ ಆಗುವ ರೀತಿ ದ್ರಾವಿಡ್ ಟ್ರೀಟ್ ಮಾಡ್ತಾರೆ. ಟೀಂ ಇಂಡಿಯಾ ಪರ ಆಡ್ತಿದ್ದಾಗ ದ್ರಾವಿಡ್ ತುಂಬಾ ಸೀರಿಯಸ್ ಪ್ಲೇಯರ್ ಆಗಿದ್ರು. ಆದ್ರೆ ಕೋಚ್ ದ್ರಾವಿಡ್ ಮಾತ್ರ ಡ್ರೆಸ್ಸಿಂಗ್​ ರೂಮ್​​, ಟೀಮ್ ಮೇಟ್ಸ್​​ಗಳ ಜೊತೆ ತುಂಬಾ ಬಿಂದಾಸ್ ಆಗಿರ್ತಾರೆ. ಇದಕ್ಕೆ ಒಂದು ರೀಯಲ್​ ಇನ್ಸಿಡೆಂಟ್​​ನ ಉದಾಹರಣೆ ಕೊಡ್ತೀನಿ. ರಾಹುಲ್ ದ್ರಾವಿಡ್ ಅಂಡರ್​-19 ಟೀಂನ ಕೋಚ್ ಆಗಿದ್ದಾಗ ನ್ಯೂಜಿಲ್ಯಾಂಡ್​​ನಲ್ಲಿ ನಡೆದ ಅಂಡರ್-19 ವಿಶ್ವಕಪ್​ ಫೈನಲ್​​ನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನ ಎದುರಿಸಿತ್ತು. ಆದ್ರೆ ಮ್ಯಾಚ್​ಗೂ ಮುನ್ನ ಸ್ಟೇಡಿಯಂನ ಲಾಬಿಯಲ್ಲಿ ದ್ರಾವಿಡ್ ಟೀಂ ಮೀಟಿಂಗ್ ಹಮ್ಮಿಕೊಂಡಿದ್ರು. ಆದ್ರೆ ಲಾಬಿ ಸುತ್ತಲೂ ಆವರಿಸಿದ್ದ ಆಸ್ಟ್ರೇಲಿಯನ್ನರು ಹರಟೆ ಹೊಡೀತಾ ಇದ್ರು. ಮೀಟಿಂಗ್ ಆರಂಭವಾಗ್ತಿದ್ದಂತೆ ಇ್ನನಷ್ಟು ಜೋರಾಗಿ ಮಾತನಾಡೋಕೆ ಶುರು ಮಾಡ್ತಾರೆ. ಇದ್ರಿಂದ ಟೀಂ ಇಂಡಿಯಾದ ಮೀಟಿಂಗ್​​ಗೆ ಕೂಡ ಡಿಸ್ಟರ್ಬ್ ಆಗುತ್ತೆ.

ಆಗ ಕೋಚ್ ರಾಹುಲ್ ದ್ರಾವಿಡ್ ಒಂದು ಪ್ಲ್ಯಾನ್ ಮಾಡ್ತಾರೆ. ನಮ್ಮ ಎಲ್ಲಾ ಪ್ಲೇಯರ್ಸ್​​ಗಳು, ಕೋಚ್​ ಸ್ಟಾಫ್​​ಗಳಿಗೂ ಐದು ನಿಮಿಷಗಳ ಕಾಲ ಜೋರಾಗಿ, ಎಷ್ಟು ದೊಡ್ಡದಾಗಿ ಆಗುತ್ತೋ ಅಷ್ಟು ದೊಡ್ಡದಾಗಿ ನಗುವಂತೆ ಸೂಚಿಸ್ತಾರೆ. ಟೀಂ ಇಂಡಿಯಾದ ಎಲ್ಲರೂ ಕೂಡ ಜೋರಾಗಿ ನಗೋಕೆ ಶುರು ಮಾಡ್ತಾರೆ. ಕೂಡಲೇ ಮೀಟಿಂಗ್​ ರೂಮ್ ಸುತ್ತಲಿದ್ದ ಆಸ್ಟ್ರೇಲಿಯನ್ನರೆಲ್ಲಾ ಸೈಲೆಂಟ್ ಆಗಿಬಿಡ್ತಾರೆ. ಇದು ರಾಹುಲ್​ ದ್ರಾವಿಡ್​ರ ಒಂದು ವರ್ಷನ್ ಅಷ್ಟೇ. ಟೀಂ ಇಂಡಿಯಾ ಸೀನಿಯರ್ಸ್​ಗಳ ಜೊತೆಗೂ ರಾಹುಲ್​​ ದ್ರಾವಿಡ್ ಇದೇ ರೀತಿ ಇದ್ದಾರೆ.

 

Sulekha