ನಿಕರಾಗುವಾದ ಚೆಲುವೆ ಶೆಯ್ನಿಸ್ ಪಲಾಸಿಯೋಸ್ ಮಿಸ್ ಯೂನಿವರ್ಸ್ – ಜಗತ್ತಿನ ಅತಿ ಸುಂದರಿಯಾಗಿ ಆಯ್ಕೆಯಾಗಿದ್ದು ಹೇಗೆ?

ನಿಕರಾಗುವಾದ ಚೆಲುವೆ ಶೆಯ್ನಿಸ್ ಪಲಾಸಿಯೋಸ್ ಮಿಸ್ ಯೂನಿವರ್ಸ್ – ಜಗತ್ತಿನ ಅತಿ ಸುಂದರಿಯಾಗಿ ಆಯ್ಕೆಯಾಗಿದ್ದು ಹೇಗೆ?

90 ದೇಶಗಳ ಚೆಲುವೆಯರು. ಒಬ್ಬರಿಗಿಂತ ಒಬ್ಬರು ಸುಂದರಿಯರು. ಇವರ ಮಧ್ಯೆ ವಿಶ್ವಸುಂದರಿಯಾಗಿ ಮಿಂಚಿದ್ದು ನಿಕರಾಗುವಾದ ಚೆಲುವೆ ಶೆಯ್ನಿಸ್ ಪಲಾಸಿಯೋಸ್. 72ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ನಿಕರಾಗುವಾದ ಚೆಲುವೆ ಶೆಯ್ನಿಸ್ ಪಲಾಸಿಯೋಸ್ ವಿಜೇತರಾಗಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ.. ರಣಬೀರ್ ಕಪೂರ್ ಧರಿಸಿರುವ ವಾಚ್ ಬೆಲೆ ಇಷ್ಟೊಂದಾ?

72ನೇ ಮಿಸ್ ಯೂನಿವರ್ಸ್ ಸ್ಪರ್ಧೆಯು ಎಲ್ ಸಾಲ್ವಡಾರ್ನಲ್ಲಿ ಅದ್ಧೂರಿಯಾಗಿ ನಡೆದಿದೆ. 90 ಕ್ಕೂ ಹೆಚ್ಚು ದೇಶಗಳಿಂದ ಚೆಲುವೆಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇವರಲ್ಲಿ ವಿಶ್ವ ಸುಂದರಿ ಪಟ್ಟವನ್ನು ನಿಕರಾಗುವಾದ ಸುಂದರಿ ಶೆಯ್ನಿಸ್ ಪಲಾಸಿಯೋಸ್ ಕಿರೀಟವನ್ನು ಮುಡಿಗೇರಿಸಿಕೊಂಡರು.

23 ವರ್ಷದ ಶ್ವೇತಾ ಶಾರ್ದಾ ಭಾರತವನ್ನು ಪ್ರತಿನಿಧಿಸಿ ಸೆಮಿಫೈನಲ್ಗೆ ವರಗೆ ತಲುಪಿದ್ದರು. ಈ ಮೂಲಕ ಶಾರ್ದಾ ಅಗ್ರ 20 ಫೈನಲಿಸ್ಟ್‌ಗಳಲ್ಲಿ ಸ್ಥಾನ ಪಡೆಕೊಂಡಿದ್ದಾರೆ.

ನಿಕರಾಗುವಾದಿಂದ ಪ್ರತಿನಿಧಿಸಿದ ವಿಶ್ವ ಸುಂದರಿ ವಿಜೇತೆ ಶೆಯ್ನಿಸ್ ಅಲೋಂಡ್ರಾ ಪಲಾಸಿಯೊಸ್ ಕಾರ್ನೆಜೊ ಅವರಿಗೆ ಕಳೆದ ವರ್ಷದ ವಿಜೇತೆ ಆರ್ ಬೊನಿ ಗೇಬ್ರಿಯಲ್ ಅವರು 2023 ರ ವಿಶ್ವ ಸುಂದರಿ ಕಿರೀಟವನ್ನು ತೊಡಿಸಿದರು.

ಥಾಯ್ಲೆಂಡ್‌ನ ಆಂಟೋನಿಯಾ ಪೋರ್ಸಿಲ್ಡ್ ರನ್ನರ್ ಅಪ್ ಆಗಿ ಹಾಗೂ ಆಸ್ಟ್ರೇಲಿಯಾದ ಮೊರಾಯಾ ವಿಲ್ಸನ್ ಎರಡನೇ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದಾರೆ. ಅಂತಿಮ ಸುತ್ತಿನಲ್ಲಿ ಕೇಳಲಾದ ಪ್ರಶ್ನೆಗೆ ಶೆಯ್ನಿಸ್ ಅಲೋಂಡ್ರಾ ಪಲಾಸಿಯೊಸ್ ನೀಡಿದ ಉತ್ತರ ಇಡೀ ವಿಶ್ವದ ಗಮನಸೆಳೆದಿದೆ. ಮಹಿಳಾ ಶಕ್ತಿ ಹಾಗೂ ಸಬಲೀಕರಣಕ್ಕೆ ಸ್ಪೂರ್ತಿಯಾಗಿರುವ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಮತ್ತು ಸ್ತ್ರೀವಾದದ ತಾಯಿ ಎಂದು ಕರೆಯಲ್ಪಡುವ ಮೇರಿ ವೋಲ್ಸ್ಟೋನ್ಕ್ರಾಫ್ಟ್ ಅವರ ಹೆಸರನ್ನು ಮಿಸ್ ನಿಕರಾಗುವಾ ಉಲ್ಲೇಖಿಸಿದರು. ಈ ಮೂಲಕ ತೀರ್ಪುಗಾರರ ಮನ ಗೆದ್ದಿದ್ದಾರೆ.

Sulekha