ವಿಶ್ವಕಪ್ ನಲ್ಲಿ ಗೇಮ್ ಚೇಂಜರ್ ಆಗ್ತಾರೆ ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಸೂರ್ಯ ಕುಮಾರ್ – ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾಗೆ ಬಲ
2023ರ ಕ್ರಿಕೆಟ್ ವಿಶ್ವಕಪ್ ನಲ್ಲಿ ಅಮೋಘ ಪ್ರದರ್ಶನ ತೋರುತ್ತಿರುವ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಫೈನಲ್ ಪಂದ್ಯ ಆಡಲಿದೆ. ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಗೆಲ್ಲುವ ಮೂಲಕ ವಿಶ್ವಕಪ್ ನಲ್ಲಿ ಸತತ 10ನೇ ಪಂದ್ಯವನ್ನು ಗೆದ್ದುಕೊಂಡಿತ್ತು. ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಎಲ್ಲಾ ಆಟಗಾರರು ಶೈನ್ ಆಗುತ್ತಿದ್ದು, ಅದ್ರಲ್ಲೂ ಶ್ರೇಯಸ್ ಅಯ್ಯರ್ ಅದ್ಭುತವಾಗಿ ಆಡುತ್ತಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಶ್ರೇಯಸ್ ಅಯ್ಯರ್ ಕೂಡ ಹೀರೋ ಆಗಿದ್ದರು. 70 ಎಸೆತಗಳಲ್ಲಿ 105 ರನ್ ಗಳಿಸಿದ್ದರು. ಬ್ಯಾಟಿಂಗ್ ಕ್ರಮಾಂಕದಲ್ಲಿ ನಿರ್ಣಾಯಕ ನಾಲ್ಕನೇ ಸ್ಥಾನದಲ್ಲಿ ಸ್ಟ್ರಾಂಗ್ ಆಗಿ ನಿಂತಿದ್ದಾರೆ. ನಾಯಕ ರೋಹಿತ್ ಶರ್ಮಾ ತಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತಿದ್ದಾರೆ. ಈ ಮೆಗಾ ಟೂರ್ನಿಯಲ್ಲಿ ಆಡಿದ 10 ಪಂದ್ಯಗಳಲ್ಲಿ ಶ್ರೇಯಸ್ 526 ರನ್ ಗಳಿಸಿದ್ದಾರೆ. ಆದರೆ, ವಿಶ್ವಕಪ್ನ ಆರಂಭಿಕ ಪಂದ್ಯಗಳಲ್ಲಿ ಶ್ರೇಯಸ್ ಕಡಿಮೆ ಸ್ಕೋರ್ ಗಳಿಸಿದ್ದರು. ಇದರಿಂದಾಗಿ ತಂಡದಲ್ಲಿ ಶ್ರೇಯಸ್ ಅಯ್ಯರ್ ಸ್ಥಾನಕ್ಕೆ ಟೀಕೆ ವ್ಯಕ್ತವಾಗಿತ್ತು. ಸೂರ್ಯಕುಮಾರ್ ಅಥವಾ ಇಶಾನ್ ಕಿಶನ್ ಬದಲಿಗೆ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹಲವರು ಕಾಮೆಂಟ್ ಮಾಡಿದ್ದರು. ಬಳಿಕ ಚಾಲೆಂಜ್ ಆಗಿ ತೆಗೆದುಕೊಂಡ ಶ್ರೇಯಸ್ ಗ್ರೇಟ್ ಕಂ ಬ್ಯಾಕ್ ಮಾಡಿದ್ದರು.
ಇದನ್ನೂ ಓದಿ : ಟೀಂ ಇಂಡಿಯಾ ಪ್ರಾಕ್ಟೀಸ್ ಜೆರ್ಸಿ ಬಣ್ಣ ಕೇಸರಿ! – ಕೇಂದ್ರದ ವಿರುದ್ಧ ಗುಡುಗಿದ ದೀದಿ
ಇನ್ನು ವಿಶ್ವಕಪ್ ನಲ್ಲಿ ಸದ್ದು ಮಾಡುತ್ತಿರುವ ಮತ್ತೊಬ್ಬ ಆಟಗಾರ ಅಂದರೆ ಅದು ನಮ್ಮ ಕನ್ನಡಿಗ ಕೆ.ಎಲ್ ರಾಹುಲ್. ಬೆಂಗಳೂರಿನ ಈ ಕೀಪರ್ ಬ್ಯಾಟರ್ 71 ಏಕದಿನ ಪಂದ್ಯಗಳಲ್ಲಿ 50.51 ಸರಾಸರಿಯಲ್ಲಿ ರನ್ಗಳನ್ನು ಗಳಿಸಿದ್ದರೂ ಅವರನ್ನು ವಿಕೆಟ್ ಕೀಪರ್ ಪಾತ್ರದಲ್ಲಿ ಕಾಣುವವರೇ ಹೆಚ್ಚು. ತಂಡಕ್ಕೆ ಪದಾರ್ಪಣೆ ಮಾಡಿದ ದಿನದಿಂದ ಅವರು ನಿಭಾಯಿಸಿದ ಪಾತ್ರಗಳು ಹಲವು, ಸುಮಾರು ಒಂದು ದಶಕದ ಅವಧಿಯಲ್ಲಿ ಅವರ ಬ್ಯಾಟಿಂಗ್ ಕ್ರಮಾಂಕ ಹಲವು ಬಾರಿ ಬದಲಾಗಿದೆ. ಅದಕ್ಕೆ ತಕ್ಕಂತೆ ಮನಃಸ್ಥಿತಿ ಹೊಂದಿಸಿಕೊಂಡು ಆಟವಾಡುವ ಸವಾಲೂ ಅವರೆದುರಿಗಿದ್ದು, ಅದರಲ್ಲಿ ಅವರು ಯಶಸ್ವಿ ಆಗಿದ್ದಾರೆ. 2023ರ ವಿಶ್ವಕಪ್ ನಲ್ಲಿ ಐದನೇ ಕ್ರಮಾಂಕದಲ್ಲಿ ರಾಹುಲ್ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕೀಪಿಂಗ್ನಲ್ಲೂ ಉತ್ತಮ ಕ್ಯಾಚ್ಗಳನ್ನು ಪಡೆದಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಮ್ಯಾಚ್ ನಲ್ಲಿ ರಾಹುಲ್ ಮೇಲೆಯೂ ಹೆಚ್ಚಿನ ನಿರೀಕ್ಷೆಗಳನ್ನ ಇಟ್ಟುಕೊಳ್ಳಲಾಗಿದೆ. ಬ್ಯಾಟರ್ ಆಗಿ ಕೀಪರ್ ಆಗಿ ತಂಡಕ್ಕೆ ಒಂದೊಳ್ಳೆಯ ಬಲ ತುಂಬಲಿದ್ದಾರೆ.
ಇನ್ನು ಸೂರ್ಯಕುಮಾರ್ ಯಾದವ್ ಕೂಡ ವಿಶ್ವಕಪ್ ನಲ್ಲಿ ಬಹಳಷ್ಟು ಸದ್ದು ಮಾಡುತ್ತಿದ್ದಾರೆ. ಇನ್ನು 360 ಡಿಗ್ರಿ ರೀತಿ ಬ್ಯಾಟ್ ಮಾಡಬಲ್ಲ ಕೌಶಲ ಹೊಂದಿರುವ ಸೂರ್ಯಕುಮಾರ್ ಯಾದವ್ ವಿಶ್ವಕಪ್ ನಲ್ಲಿ ಒಳ್ಳೆಯ ಪ್ರದರ್ಶನ ತೋರುತ್ತಿದ್ದಾರೆ.