ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯ- ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಹೇಗಿದೆ?
ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ನವೆಂಬರ್ 19 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗ್ರ್ಯಾಂಡ್ ಫೈನಲ್ ಪಂದ್ಯ ನಡೆಯಲಿದೆ. ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ವಿಶ್ವ ಕ್ರಿಕೆಟ್ನ ಮಹತ್ವದ ಪಂದ್ಯಕ್ಕೆ ಸಾಕ್ಷಿಯಾಗಲು ಸಿದ್ಧವಾಗಿದೆ. ಹಾಗಾದರೆ, ಅಹ್ಮದಾಬಾದ್ನ ಪಿಚ್ ಹೇಗಿದೆ? ಮ್ಯಾಚ್ ನೋಡೋಕೆ ಯಾರೆಲ್ಲಾ ಬರ್ತಿದ್ದಾರೆ? ವಿಶ್ವಕಪ್ ಸಮಾರೋಪ ಸಮಾರಂಭಕ್ಕೆ ಬಿಸಿಸಿಐ ಏನೆಲ್ಲಾ ಸಿದ್ಧತೆ ಮಾಡಿಕೊಂಡಿದೆ ಎಂಬ ವಿವರ ಇಲ್ಲಿದೆ.
ಇದನ್ನೂ ಓದಿ: ರೋಹಿತ್ ಶರ್ಮಾ & ವಿರಾಟ್ ಕೊಹ್ಲಿ ಮಧ್ಯೆ ಬ್ರೋಮ್ಯಾನ್ಸ್ – ಇವರೇ ಟೀಮ್ ಇಂಡಿಯಾದ ಬಲಾಢ್ಯ ಕಂಬಗಳು
ಫಸ್ಟ್ ಆಫ್ ಆಲ್.. ಪಿಚ್ ರಿಪೋರ್ಟ್.. ಫೈನಲ್ ನಡೆಯೋ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಅತ್ಯಂತ ಬ್ಯಾಲೆನ್ಸ್ಟ್ ಪಿಚ್ ಆಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಒಂದೇ ರೀತಿಯಲ್ಲಿ ಹೆಲ್ಪ್ ಆಗುವಂಥಾ ಪಿಚ್. ಫಾಸ್ಟ್ ಮತ್ತು ಸ್ಪಿನ್ ಬೌಲರ್ಸ್ಗಳಿಗೆ ಈ ಪಿಚ್ನಲ್ಲಿ ಒಂದಷ್ಟು ಅಡ್ವಾಂಟೇಜ್ ಇದೆ. ಸ್ಪಿನ್ನರ್ಸ್ಗಳಿಗೆ ಹೆಚ್ಚು ಹೆಲ್ಪ್ ಆಗಬಹುದು. ಈ ಪಿಚ್ನಲ್ಲಿ ಎವರೇಜ್ ಫಸ್ಟ್ ಇನ್ನಿಂಗ್ಸ್ 253 ರನ್. ಹೀಗಾಗಿ ಈ ಗ್ರೌಂಡ್ನಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ ಟೀಂ 280 ಸ್ಕೋರ್ ಮಾಡಿದರೂ ಅದು ಬೆಸ್ಟ್ ಟಾರ್ಗೆಟ್ ಆಗಿರಲಿದೆ. ಇಲ್ಲಿ ಖಂಡಿತಾ ಟಾಸ್ ಮ್ಯಾಟರ್ ಆಗಿಯೇ ಆಗುತ್ತೆ. ಟಾಸ್ ಗೆದ್ದ ತಂಡ ಫಸ್ಟ್ ಬ್ಯಾಟಿಂಗ್ ಮಾಡೋ ಸಾಧ್ಯತೆ ಹೆಚ್ಚಾಗಿದೆ. ಆದ್ರೆ ಈ ಗ್ರೌಂಡ್ನಲ್ಲಿ ನಡೆದ ಕಳೆದ 5 ಮ್ಯಾಚ್ಗಳಲ್ಲಿ ಸೆಕೆಂಡ್ ಬ್ಯಾಟಿಂಗ್ ಮಾಡಿದ ಟೀಂ ಅಂದರೆ, ಚೇಸಿಂಗ್ ಮಾಡಿದವರೇ ಪಂದ್ಯವನ್ನ ಗೆದ್ದುಕೊಂಡಿದ್ದಾರೆ. ಆದ್ರೆ ವರ್ಲ್ಡ್ಕಪ್ ಫೈನಲ್ ಆಗಿರುವುದರಿಂದ ಒತ್ತಡ ಹೆಚ್ಚಿರುತ್ತೆ. ಹೀಗಾಗಿ ಟಾಸ್ ಗೆದ್ದರೆ ಫಸ್ಟ್ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು ಅನ್ನೋ ಲೆಕ್ಕಾಚಾರ ಕೂಡ ಇಲ್ಲಿದೆ.
ಫೈನಲ್ ನೋಡೋಕೆ ಸ್ಟೇಡಿಯಂಗೆ ಪ್ರಧಾನಿ ಮೋದಿ!
ಇನ್ನು ಭಾರತ-ಆಸ್ಟ್ರೇಲಿಯಾ ಫೈನಲ್ ಮ್ಯಾಚ್ ನೋಡೋಕೆ ವಿವಿಐಪಿಗಳ ದೊಡ್ಡ ದಂಡೇ ಸ್ಟೇಡಿಯಂಗೆ ಆಗಮಿಸಲಿದೆ. ಪ್ರಧಾನಿ ನರೇಂದ್ರ ಮೋದಿ, ಸಚಿನ್ ತೆಂಡೂಲ್ಕರ್, ವರ್ಲ್ಡ್ಕಪ್ ವಿನ್ನಿಂಗ್ ಕ್ಯಾಪ್ಟನ್ಸ್ಗಳಾದ ಮಹೇಂದ್ರ ಸಿಂಗ್ ಧೋನಿ, ಕಪಿಲ್ದೇವ್, ಪಾಪ್ ಸಿಂಗರ್ ಡುವಾ ಲಿಪಾ , ಅಂಬಾನಿ ಫ್ಯಾಮಿಲಿ, ಇನ್ನೊಂದಷ್ಟು ರಾಜಕಾರಣಿಗಳು, ಸಿನಿಮಾ ಸೆಲೆಬ್ರೆಟಿಗಳು ಇವೆರಲ್ಲರೂ ಫೈನಲ್ ಮ್ಯಾಚ್ಗೆ ಆಗಮಿಸ್ತಾ ಇದ್ದಾರೆ. ಇನ್ನೊಂದು ಸ್ಪೆಷಾಲಿಟಿ ಏನಂದ್ರೆ, ಸ್ಟೇಡಿಯಂ ಮೇಲ್ಬಾಗದಲ್ಲಿ ಭಾರತೀಯ ವಾಯುಪಡೆಯ ಏರ್ಶೋ ಕೂಡ ನಡೆಯಲಿದೆ. ಏರ್ಫೋರ್ಸ್ ಸೂರ್ಯಕಿರಣ ಟೀಂ ವೈಮಾನಿಕ ಪ್ರದರ್ಶನ ನಡೆಸಲಿದೆ. ಫಾರಿನ್ನಲ್ಲಿ ಫುಟ್ಬಾಲ್ ಮ್ಯಾಚ್ ವೇಳೆ, ಇನ್ನೂ ಕೆಲವೊಮ್ಮೆ ವರ್ಲ್ಡ್ಕಪ್ ಗೆದ್ದ ಬಳಿಕ ಟೀಂ ಮೆರವಣಿಗೆ ವೇಳೆ ಏರ್ಶೋ ನಡೆಯೋದು ಕಾಮನ್. ಆದ್ರೆ, ಕ್ರಿಕೆಟ್ನಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಏರ್ಶೋ ಹಮ್ಮಿಕೊಳ್ಳಲಾಗಿದ್ದು, ಈ ಮೂಲಕ ವರ್ಲ್ಡ್ಕಪ್ ಫೈನಲ್ನ್ನ ಇನ್ನಷ್ಟು ಮೆಮೋರೇಬಲ್ ಮಾಡೋ ಪ್ರಯತ್ನ ನಡೀತಿದೆ.