ರೋಹಿತ್ ಶರ್ಮಾ & ವಿರಾಟ್ ಕೊಹ್ಲಿ ಮಧ್ಯೆ ಬ್ರೋಮ್ಯಾನ್ಸ್ – ಇವರೇ ಟೀಮ್ ಇಂಡಿಯಾದ ಬಲಾಢ್ಯ ಕಂಬಗಳು
ರೋಹಿತ್ ಶರ್ಮಾ & ವಿರಾಟ್ ಕೊಹ್ಲಿ.. ಟೀಂ ಇಂಡಿಯಾದ ಇಬ್ಬರೂ ಸೀನಿಯರ್ ಮೋಸ್ಟ್ ಪ್ಲೇಯರ್ಸ್.. ಇವರಿಬ್ಬರೂ ಭಾರತೀಯ ಕ್ರಿಕೆಟ್ ತಂಡದ ಬಲಾಢ್ಯ ಕಂಬಗಳು. ಟೀಮ್ ಇಂಡಿಯಾದ ಎಲ್ಲಾ ಆಟಗಾರರ ಮೇಲೂ ಜವಾಬ್ದಾರಿ ಇದೆ. ಆದರೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೇಲೆ ಉಳಿದವರಿಗಿಂತ ಸ್ಪಲ್ಪ ಹೆಚ್ಚಿನ ಜವಾಬ್ದಾರಿ ಇದೆ. ಇಬ್ಬರೂ ತುಂಬಾ ಎಕ್ಸ್ಪೀರಿಯನ್ಸ್ ಇರೋ ಪ್ಲೇಯರ್ಸ್. ಅದರಂತೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ರೋಲ್ನ್ನ ಸಮರ್ಥವಾಗಿಯೇ ನಿಭಾಯಿಸ್ತಾ ಇದ್ದಾರೆ.
ಇದನ್ನೂ ಓದಿ: 20 ವರ್ಷಗಳ ಹಿಂದಿನ ಸೇಡು ತೀರಿಸಿಕೊಳ್ಳಲು ಭಾರತದ ತವಕ – ಆಸೀಸ್ ವಿರುದ್ಧ ಲೆಕ್ಕ ಚುಕ್ತಾ ಮಾಡುತ್ತಾ ಟೀಮ್ ಇಂಡಿಯಾ?
ವರ್ಲ್ಡ್ಕಪ್ ಶುರುವಾಗುವ ತನಕವೂ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಚಾರವಾಗಿ ಸೋಷಿಯಲ್ ಮೀಡಿಯಾ, ನ್ಯೂಸ್ ಚಾನೆಲ್ಗಳಲ್ಲಿ ಸಾಕಷ್ಟು ಕಾಂಟ್ರೋವರ್ಷಿಯಲ್ ಸುದ್ದಿಗಳು ಹರಿದಾಡುತ್ತಲೇ ಇದ್ದವು. ವಿರಾಟ್ ಕೊಹ್ಲಿ ಮತ್ತು ಕ್ಯಾಪ್ಟನ್ ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿ ಇಲ್ಲ. ಇಬ್ಬರ ಮಧ್ಯೆ ಅಷ್ಟೊಂದು ಅಂಡರ್ಸ್ಟ್ಯಾಂಡಿಂಗ್ ಇಲ್ಲ. ಒಬ್ಬರಿಗೊಬ್ಬರನ್ನ ಕಂಡರೆ ಅಷ್ಟಕ್ಕಷ್ಟೆ ಅಂತೆಲ್ಲಾ ಹೇಳಲಾಗುತ್ತಿತ್ತು. ಕೊಹ್ಲಿ ಮತ್ತು ರೋಹಿತ್ ಫ್ಯಾನ್ಸ್ ಅದೆಷ್ಟೋ ಬಾರಿ ಸೋಷಿಯಲ್ ಮೀಡಿಯಾದಲ್ಲಿ ಕಿತ್ತಾಡಿಕೊಂಡಿದ್ದೂ ಇದೆ. ಆದರೆ, ಈ ಬಾರಿಯ ವಿಶ್ವಕಪ್‌ನಲ್ಲಿ ಕಂಡುಬಂದಿದ್ದೇ ಬೇರೆ. ಈ ಬಾರಿಯ ವರ್ಲ್ಡ್ಕಪ್ನಲ್ಲಿ ರೋಹಿತ್ ಮತ್ತು ಕೊಹ್ಲಿ ಮಧ್ಯೆ ಅಕ್ಷರಶ: ಬ್ರೋಮ್ಯಾನ್ಸ್ ನಡೆದಿದೆ. ಹಳೆಯದ್ದೆನ್ನಲ್ಲಾ ಮರೆತು ವಿರಾಟ್ ಮತ್ತು ರೋಹಿತ್ ಇಬ್ಬರೂ ಈಗ ಮತ್ತೆ ಒಂದಾಗಿರೋದು ಅವರ ಬಾಡಿ ಲಾಂಗ್ವೇಜ್ನಲ್ಲೇ ಗೊತ್ತಾಗುತ್ತಿಗೆ. ಪ್ರತಿ ಮ್ಯಾಚ್ಗೂ ಮುನ್ನ ನೆಟ್ಪ್ರಾಕ್ಟೀಸ್ ವೇಳೆ ಇಬ್ಬರೂ ಡೀಪ್ ಆಗಿ ಡಿಸ್ಕಸ್ ಮಾಡ್ತಾರೆ. ಮ್ಯಾಚ್ ವೇಳೆಯೂ ಅಷ್ಟೇ, ಅಂದ್ರೆ ಫೀಲ್ಡಿಂಗ್ ಸಂದರ್ಭದಲ್ಲಿ ರೋಹಿತ್-ವಿರಾಟ್ ಆಗಾಗ ಚರ್ಚೆ ನಡೆಸುತ್ತಾ ಸ್ಟ್ರ್ಯಾಟಜಿ ಮಾಡ್ತಾರೆ. ರೋಹಿತ್ ಶರ್ಮಾಗೆ ವಿರಾಟ್ ಟಿಪ್ಸ್ಗಳನ್ನ ನೀಡುತ್ತಲೇ ಇರ್ತಾರೆ. ಇಬ್ಬರ ಪ್ಲ್ಯಾನ್ ವರ್ಕೌಟ್ ಆಗಿ ವಿಕೆಟ್ ಬಿದ್ದಾಗ ರೋಹಿತ್ ಮತ್ತು ಕೊಹ್ಲಿ ಪರಸ್ಪರ ಸೆಲೆಬ್ರೇಷನ್ ಮಾಡಿಕೊಳ್ಳುತ್ತಾರೆ. ರೋಹಿತ್ ಮತ್ತು ಕೊಹ್ಲಿ ಮಧ್ಯೆ ಈಗ ಎಲ್ಲವೂ ಪರ್ಫೆಕ್ಟ್ ಆಗಿದೆ. ಬ್ಯಾಟಿಂಗ್ ಮಾತ್ರವಲ್ಲ ಓವರ್ ಆಲ್ ಆಗಿ ರೋಹಿತ್ ಮತ್ತು ಕೊಹ್ಲಿ ಎದುರಾಳಿಗಳ ಪಾಲಿಗೆ ಅತ್ಯಂತ ಡೇಂಜರಸ್ ಕಾಂಬಿನೇಷನ್ ಆಗಿದ್ದಾರೆ.
ಟೀಂ ಇಂಡಿಯಾ ಅಂತಾ ಬಂದಾಗ ಒಪೊಸಿಟ್ ಟೀಂಗಳಿಗೆ ಮೊದಲಿಗೆ ನೆನಪಾಗೋದು, ದೊಡ್ಡ ತಲೆ ನೋವಾಗಿರೋದೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ. ಇಬ್ಬರನ್ನ ಕೂಡ ಔಟ್ ಮಾಡೋದೆ ಅತೀ ದೊಡ್ಡ ಟಾಸ್ಕ್ ಆಗಿದೆ. ಇಬ್ಬರನ್ನ ಕಟ್ಟಿ ಹಾಕೋಕೆ ಅಂತಾನೆ ಸಪರೇಟ್ ರಣತಂತ್ರ ಹೆಣೀಬೇಕು. ಬ್ಯಾಟಿಂಗ್ ವೇಳೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಧ್ಯೆ ಅಂಥಾ ಪಾಟ್ನರ್ಶಿಪ್ ಏನೂ ಬಿಲ್ಡ್ ಆಗಿಲ್ಲ. ಹೆಚ್ಚಿನ ಮ್ಯಾಚ್ಗಳಲ್ಲಿ ರೋಹಿತ್ ಶರ್ಮಾ ಔಟ್ ಆದ ಬಳಿಕವೇ ವಿರಾಟ್ ಕೊಹ್ಲಿ ಕ್ರೀಸ್ಗಿಳಿದಿದ್ರು. ಅಂದ್ರೆ ರೋಹಿತ್ ಆರಂಭದಿಂದಲೇ ಅಗ್ರೆಸ್ಸಿವ್ ಆಗಿ ಬ್ಯಾಟ್ ಬೀಸಿ ಆದಷ್ಟು ರನ್ ಕಲೆ ಹಾಕೋಕೆ ಯತ್ನಿಸುತ್ತಾರೆ. ಕಡಿಮೆ ಬಾಲ್ಗಳಲ್ಲಿ ಹೆಚ್ಚಿನ ಸ್ಕೋರ್ ಮಾಡಿ ಬೇಗನೆ ಔಟಾಗುತ್ತಾರೆ. ಆದರೆ, ಇಲ್ಲೊಂದು ಕ್ಲೀನ್ ಪ್ಲ್ಯಾನ್ ಇದೆ. ಓಪನಿಂಗ್ ಬಂದು ಆದಷ್ಟು ಸ್ಪೀಡ್ ಆಗಿ ಸ್ಟೇಜ್ ಸೆಟ್ ಮಾಡೋದಷ್ಟೇ ರೋಹಿತ್ ಶರ್ಮಾರ ಜಾಬ್. ಬಳಿಕ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಬಿಲ್ಡ್ ಮಾಡ್ತಾ ಹೋಗ್ತಾರೆ. ಮಿಡ್ಲ್ ಆರ್ಡರ್ ಬ್ಯಾಟ್ಸ್ಮನ್ಗಳ ಮಧ್ಯೆ ಉತ್ತಮ ಪಾಟ್ನರ್ಶಿಪ್ ಬರ್ತಿದೆ. ಆದ್ರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ಇನ್ನಿಂಗ್ಸ್ ಈ ವರ್ಲ್ಡ್ಕಪ್ನಲ್ಲಿ ಎಷ್ಟು ಕ್ರೂಶಿಯಲ್ ಆಗಿದೆ. ವಿಶ್ವಕಪ್ನ ಫಸ್ಟ್ ಮ್ಯಾಚ್ನಿಂದಲೂ ಇಬ್ಬರೂ ಉತ್ತಮ ಸ್ಕೋರ್ ಮಾಡಿದ್ದಾರೆ. ಫುಲ್ ಡಿಟೇಲ್ಸ್ ಈ ಕೆಳಗಿದೆ.
ರೋಹಿತ್-ಕೊಹ್ಲಿ ಸ್ಕೋರ್!
- ಭಾರತ VS ಆಸ್ಟ್ರೇಲಿಯಾ – ಕೊಹ್ಲಿ – 85 ರನ್
- ಭಾರತ VS ಅಫ್ಘಾನಿಸ್ತಾನ – ರೋಹಿತ್ – 131 ರನ್
- ಭಾರತ VS ಪಾಕಿಸ್ತಾನ – ರೋಹಿತ್ – 86 ರನ್
- ಭಾರತ VS ಬಾಂಗ್ಲಾದೇಶ – ಕೊಹ್ಲಿ – 103 ರನ್
- ಭಾರತ VS ನ್ಯೂಜಿಲ್ಯಾಂಡ್ – ಕೊಹ್ಲಿ – 95 ರನ್
- ಭಾರತ VS ಇಂಗ್ಲೆಂಡ್ – ರೋಹಿತ್ – 87 ರನ್
- ಭಾರತ VS ಶ್ರೀಲಂಕಾ – ಕೊಹ್ಲಿ – 88 ರನ್
- ಭಾರತ VS ದ.ಆಫ್ರಿಕಾ – ಕೊಹ್ಲಿ – 101 ರನ್
- ಭಾರತ VS ನ್ಯೂಜಿಲ್ಯಾಂಡ್ – ಕೊಹ್ಲಿ – 117
ಈ ಡೇಟಾದಿಂದ ಸ್ಪಷ್ಟವಾಗೋದು ಏನಂದ್ರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರಲ್ಲಿ ಒಬ್ಬರಾದ್ರೂ ಪ್ರತಿ ಮ್ಯಾಚ್ನಲ್ಲೂ ಪರ್ಫಾಮ್ ಮಾಡಿಯೇ ಮಾಡ್ತಾರೆ. ಅದ್ರಲ್ಲೂ ವಿರಾಟ್ ಕೊಹ್ಲಿ ಅಂತೂ ಈ ಬಾರಿಯ ವರ್ಲ್ಡ್ಕಪ್ ಸೆಂಚೂರಿ ಸ್ಟಾರ್ ಆಗಿದ್ದಾರೆ. ರೋಹಿತ್ ಶರ್ಮಾ ಹೆಚ್ಚು ಶತಕ ಹೊಡೆಯದಿದ್ರೂ, ಕಡಿಮೆ ಬಾಲ್ಗಳಲ್ಲಿ ಆದಷ್ಟು ಸ್ಕೋರ್ ಮಾಡಿ ಉಳಿದ ಬ್ಯಾಟ್ಸ್ಮನ್ಗಳಿಗೆ ಪ್ಲ್ಯಾಟ್ಫಾರ್ಮ್ ಕ್ರಿಯೇಟ್ ಮಾಡ್ತಿದ್ದಾರೆ. ಟ್ರೆಂಡ್ ಸೆಟ್ ಮಾಡ್ತಿದ್ದಾರೆ. ರೋಹಿತ್ ಶರ್ಮಾ ಫಾಸ್ಟ್ ಸ್ಕೋರಿಂಗ್ನಿಂದಾಗಿ 3ನೇ ಆರ್ಡರ್ನಲ್ಲಿ ಕ್ರೀಸ್ಗೆ ಇಳಿಯುವ ವಿರಾಟ್ ಕೊಹ್ಲಿ ಮೇಲಿನ ಪ್ರೆಷರ್ ಕಡಿಮೆಯಾಗ್ತಿದೆ. ಕೊಹ್ಲಿ ಆರಾಮ್ಸೆ ಒಂದಷ್ಟು ಟೈಮ್ ತಗೊಂಡು, ಡಿಫೆನ್ಸ್ ಆಡಿ, ಪಿಚ್ಗೆ ಸೆಟ್ ಆಗೋಕೆ ಅವಕಾಶ ಸಿಗ್ತಿದೆ. ಇದು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ಅತ್ಯಂತ ಪ್ಲ್ಯಾನ್ಡ್ ಬ್ಯಾಟಿಂಗ್.
ಇನ್ನು ಈ ವರ್ಲ್ಡ್ಕಪ್ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ 500 ಎಬೋವ್ ಸ್ಕೋರ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಅಂತೂ 700+ ಸ್ಕೋರ್ ಮಾಡಿದ್ದು, ಟೂರ್ನಿಯಲ್ಲಿ ಟಾಪ್ ಸ್ಕೋರರ್ ಆಗಿದ್ದಾರೆ. ಹೀಗಾಗಿ ರೋಹಿತ್ ಮತ್ತು ವಿರಾಟ್ ಕೊಹ್ಲಿ ಟೀಂ ಇಂಡಿಯಾದ ದೊಡ್ಡ ಸ್ಟ್ರೆಂತ್ ಆಗಿರೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಜೊತೆಗೆ ರೋಹಿತ್ ಮತ್ತು ವಿರಾಟ್ ಪರಸ್ಪರ ಬ್ಯಾಕ್ಅಪ್ ಕೂಡ ಮಾಡ್ತಿದ್ದಾರೆ.
ಈ ಹಿಂದೆ ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದಾಗ ಪ್ರೆಸ್ಮೀಟ್ ವೇಳೆ ಕೊಹ್ಲಿಯನ್ನ ಟೀಂನಿಂದ ಡ್ರಾಪ್ ಮಾಡ್ತೀರಾ ಅಂತಾ ಒಬ್ಬರು ಪ್ರಶ್ನೆ ಕೇಳಿದ್ರು. ಅದಕ್ಕೆ ರೋಹಿತ್ ಶರ್ಮಾ, ಅದೇನ್ ಕ್ವಶ್ಚನ್ ಕೇಳ್ತೀರಾ..ಕೊಹ್ಲಿಯಂಥಾ ಪ್ಲೇಯರ್ನ್ನ ಟೀಂನಿಂದ ಬಿಡೋಕೆ ಸಾಧ್ಯಾನಾ? ಎಲ್ಲರ ಕೆರಿಯರ್ನಲ್ಲೂ ಏಳು ಬೀಳು ಇದ್ದೇ ಇರುತ್ತೆ. ಕೊಹ್ಲಿಗೆ ಯಾವತ್ತಿಗೂ ನಮ್ಮ ಸಪೋರ್ಟ್ ಇದೆ. ಅವರ ಸಾಮರ್ಥ್ಯ ಏನು ಅನ್ನೋದು ಎಲ್ಲರಿಗೂ ಗೊತ್ತೇ ಇದೆ ಅಂತಾ ಹೇಳಿದ್ರು. ಜೊತೆಗೆ ನಾನು ಕೂಡ ವಿರಾಟ್ ಕೊಹ್ಲಿಯಷ್ಟು ಒಳ್ಳೆಯ ಬ್ಯಾಟ್ಸ್ಮನ್ ಅಲ್ಲ. ಬ್ಯಾಟಿಂಗ್ ವಿಚಾರದಲ್ಲಿ ಸದ್ಯ ಅವರಿಗೆ ಯಾರೂ ಮ್ಯಾಚಿಂಗ್ ಇಲ್ವೇ ಇಲ್ಲ ಅನ್ನೋದಾಗಿಯೂ ರೋಹಿತ್ ಶರ್ಮಾ ಹೇಳಿಕೊಂಡಿದ್ರು. ಹೀಗಾಗಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವಿನ ಈ ಬ್ರೋಮ್ಯಾನ್ಸ್ ಟೀಂ ಇಂಡಿಯಾದ ಪಾಲಿಗೆ ದೊಡ್ಡ ಪ್ಲಸ್ ಪಾಯಿಂಟ್ ಅನ್ನೋದ್ರಲ್ಲಿ ಎರಡು ಮಾತಿಲ್ಲ.