ಬಿಗ್‌ಬಾಸ್ ಸ್ಪರ್ಧಿಯಿಂದ ಗರ್ಭಿಣಿಯಾಗಿದ್ದಾಗಿ ಹೇಳಿಕೆ- ಈ ವಾರ ಎಲಿಮಿನೇಟ್ ಆಗೋದು ಇವರೇ..!

ಬಿಗ್‌ಬಾಸ್ ಸ್ಪರ್ಧಿಯಿಂದ ಗರ್ಭಿಣಿಯಾಗಿದ್ದಾಗಿ ಹೇಳಿಕೆ- ಈ ವಾರ ಎಲಿಮಿನೇಟ್ ಆಗೋದು ಇವರೇ..!

ಬಿಗ್‌ಬಾಸ್ ಶೋನಲ್ಲಿ ನಾನಾ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಆದರೆ, ಈ ಬಾರಿ ಸ್ಪರ್ಧಿಯೊಬ್ಬರು ನಾನು ಗರ್ಭಿಣಿಯಾಗಿದ್ದೇನೆ. ನನಗೆ ಪಿರಿಯಡ್ಸ್ ಆಗಿಲ್ಲ. ನಾನು ಪ್ರೆಗ್ನೆಂಟ್ ಆಗಿರುವುದು ಕನ್‌ಫರ್ಮ್ ಆಗಿದೆ. ಬಿಗ್‌ಬಾಸ್ ಮನೆಯಿಂದ ನನ್ನನ್ನು ಹೊರಗೆ ಕಳಿಸಿಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇದನ್ನು ಓದಿ: ಬಿಗ್‌ಬಾಸ್‌ ಸ್ಪರ್ಧಿ ನಟಿ ತನಿಷಾ ಕುಪ್ಪಂಡ ವಿರುದ್ಧ ಅವಹೇಳನಕಾರಿ ಪದ ಬಳಕೆ ಆರೋಪ – ಒರಿಜಿನಲ್ ವಿಡಿಯೋ ಕೇಳಿದ ಪೊಲೀಸರು

ನನಗೆ ಪಿರಿಯಡ್ಸ್ ಆಗಿಲ್ಲ, ಗರ್ಭಿಣಿಯೇ ಎಂದು ತಿಳಿದುಕೊಳ್ಳುವುದಕ್ಕಾಗಿ ರಕ್ತ ಪರೀಕ್ಷೆ ಮಾಡಿಸಿದ್ದೇನೆ. ನಾನು ಪ್ರಗ್ನೆಂಟ್ ಆಗಿದ್ದೇನೆ ದಯವಿಟ್ಟು ಮನೆಯಿಂದ ನನ್ನ ಆಚೆ ಕಳುಹಿಸಿ ಎಂದು ಹಿಂದಿ ಬಿಗ್ ಬಾಸ್  ಸ್ಪರ್ಧಿ, ನಟಿ ಅಂಕಿತಾ ಲೋಖಂಡೆ ಹೇಳಿದ್ದಾರೆ.  ಈ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಸದ್ಯ ಪ್ರಸಾರವಾಗುತ್ತಿರುವ ಸೀಸನ್ ನಲ್ಲಿ ನಟಿ ಅಂಕಿತಾ ಲೋಖಂಡೆ ಮತ್ತು ಪತಿ ವಿಕ್ಕಿ ಜೈನ್ ಇಬ್ಬರೂ ಬಿಗ್ ಬಾಸ್ ಮನೆಯೊಳಗೆ ಇದ್ದಾರೆ. ಇದೇ ಮೊದಲ ಬಾರಿಗೆ ಇಂಥದ್ದೊಂದು ಸುದ್ದಿ ಬಿಗ್ ಬಾಸ್ ಮನೆಯಿಂದ ಬಂದಿದೆ ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ಬಿಗ್ ಬಾಸ್ ಆಯೋಜಕರು ಅಧಿಕೃತವಾಗಿ ಹೇಳಿಕೆ ನೀಡದೇ ಇದ್ದರೂ, ಸದ್ಯದಲ್ಲೇ ಸತ್ಯ ಆಚೆ ಬರಲಿದೆ ಎಂದು ಚರ್ಚಿಸಲಾಗುತ್ತಿದೆ.

ಹಿಂದಿ ಬಿಗ್ ಬಾಸ್ ಶೋನಲ್ಲಿ ನಾನಾ ರೀತಿಯ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಈ ಬಾರಿ ಮದುವೆಯಾದ ಎರಡು ಜೋಡಿಗಳನ್ನು ಬಿಗ್ ಬಾಸ್ ಮನೆಗೆ ಕಳುಹಿಸಲಾಗಿತ್ತು. ಅದರಲ್ಲಿ ಒಂದು ಜೋಡಿಯಿಂದ ಈ ಗುಡ್ ನ್ಯೂಸ್ ಸಿಕ್ಕಿದೆ. ಈಗಾಗಲೇ ಅಂಕಿತಾ ಲೋಖಂಡೆ ಅವರನ್ನು ಮನೆಯಿಂದ ಹೊರಗೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಮಾಹಿತಿ ಇದೆ.

Sulekha