ಹೆಣ್ಣು ಮಗು ಹುಟ್ಟಿದ್ರೆ 2 ಲಕ್ಷ ರೂ. ಉಳಿತಾಯದ ಬಾಂಡ್! – ಮಹತ್ವದ ಯೋಜನೆ ಘೋಷಿಸಿದ ಬಿಜೆಪಿ
ರಾಜಸ್ತಾನ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಭಾರಿ ಸರ್ಕಸ್ ನಡೆಸುತ್ತಿವೆ. ಇದೀಗ ರಾಜಸ್ಥಾನದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಹೆಣ್ಣುಮಗುವಿನ ಜನನದ ಮೇಲೆ 2 ಲಕ್ಷ ರೂ. ಉಳಿತಾಯ ಬಾಂಡ್ ನೀಡಲಾಗುವುದು ಎಂದು ಘೋಷಣೆ ಮಾಡಿದೆ.
ಬಿಜೆಪಿಯ ‘ಸಂಕಲ್ಪ ಪತ್ರ’ವನ್ನು ಬಿಡುಗಡೆ ಮಾಡಿದ ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಸರ್ಕಾರದ ಕಾಗದ ಸೋರಿಕೆ ಮತ್ತು ಇತರ ಆರೋಪಗಳ ಹಗರಣಗಳ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಹೆಣ್ಣುಮಕ್ಕಳು ಮತ್ತು ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ.
ಇದನ್ನೂ ಓದಿ: ಭಾರತ ತನಿಖೆಗೆ ನಿರಾಕರಿಸುತ್ತಿಲ್ಲ, ಕೆನಡಾ ಮೊದಲು ಸಾಕ್ಷ್ಯ ಕೊಡಲಿ! – ನಿಜ್ಜರ್ ಹತ್ಯೆ ಬಗ್ಗೆ ಜೈ ಶಂಕರ್ ತಿರುಗೇಟು
ಸಂಕಲ್ಪ ಪತ್ರದಲ್ಲಿ ಏನೇನಿದೆ?
ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಪ್ರತಿ ಎಲ್ಪಿಜಿ (LPG) ಸಿಲಿಂಡರ್ಗೆ 450 ರೂ. ಸಬ್ಸಿಡಿ ಮತ್ತು 2.5 ಲಕ್ಷ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ. ಪ್ರತಿ ಜಿಲ್ಲೆಯಲ್ಲಿ ‘ಮಹಿಳಾ ಠಾಣೆ’ ಮತ್ತು ಪ್ರತಿ ಪೊಲೀಸ್ ಠಾಣೆಯಲ್ಲಿ ‘ಮಹಿಳಾ ಡೆಸ್ಕ್’ ಮತ್ತು ಪ್ರತಿ ನಗರದಲ್ಲಿ ‘ಆ್ಯಂಟಿ ರೋಮಿಯೋ ಸ್ಕ್ವಾಡ್’ ಅನ್ನು ಸ್ಥಾಪಿಸಲಾಗುವುದು. ಹೆಣ್ಣುಮಗು ಜನಿಸಿದಾಗ 2 ಲಕ್ಷ ರೂ. ಉಳಿತಾಯ ಬಾಂಡ್ ಮತ್ತು ಭೂಮಿ ಹರಾಜಾದ ರೈತರಿಗೆ ಪರಿಹಾರ ನೀತಿ ಘೋಷಣೆ.
ರಾಜಸ್ಥಾನದಲ್ಲಿ ನವೆಂಬರ್ 25 ರಂದು ಚುನಾವಣೆ ವಿಧಾನಸಭಾ ಚುನಾವಣೆ ನಡೆಯಲಿದೆ. ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ.