ಸತತ 8 ದಿನಗಳ ಕಾಲ ನಿದ್ದೆಯಲ್ಲೇ ಇದ್ದ ಯುವಕ – ಯುವಕನನ್ನು ಕಾಡಿದ ‘ಕುಂಭಕರ್ಣ ಸಿಂಡ್ರೋಮ್’!
ಬೆಳಗ್ಗೆ ಹೊತ್ತು ಬೇಗ ಎದ್ದಿಲ್ಲ ಅಂದ್ರೆ ಮನೆಗಳಲ್ಲಿ ಬೈತಿರ್ತಾರೆ. ಆದ್ರೆ ಈ ಆಸಾಮಿ ಬರೋಬ್ಬರಿ 8 ದಿನಗಳ ಕಾಲ ನಿದ್ದೆ ಮಾಡಿದ್ದಾನೆ. 26 ವರ್ಷದ ಯುವಕನೊಬ್ಬ ಸತತ 8 ದಿನಗಳ ಮಲಗಿದ್ದ ವಿಚಿತ್ರ ಘಟನೆ ಮುಂಬೈನಲ್ಲಿ ನಡೆದಿದೆ.
ಇದನ್ನೂ ಓದಿ : Whatsapp ಬಳಕೆದಾರರೇ ಹುಷಾರ್ – ಇಂತಹ Message ಕ್ಲಿಕ್ ಮಾಡಿದ್ರೆ ಅಪಾಯ ಗ್ಯಾರಂಟಿ!
ಒಂದಲ್ಲ ಎರಡಲ್ಲ ಬರೋಬ್ಬರಿ 8 ದಿನಗಳ ನಿದ್ದೆ ಮಾಡಿದ್ದಾನೆ. ಊಟ ಮಾಡಲು, ಸ್ನಾನಕ್ಕೆ ಹಾಗೂ ತನ್ನ ದೈನಂದಿನ ಕೆಲಸಗಳಿಗೆ ಮಾತ್ರವೇ ಎಚ್ಚರಗೊಳ್ತಿದ್ದ. ಅದೂ ಕೂಡ ಅರೆ ಪ್ರಜ್ಞಾವಸ್ಥೆಯಲ್ಲಿ. ಇದರಿಂದ ಭಯಗೊಂಡ ಕುಟುಂಬಸ್ಥರು ಆತನನ್ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಯುವಕನನ್ನ ಪರೀಕ್ಷಿಸಿದ ವೈದ್ಯರು ಆತ ಕ್ಲೈನ್-ಲೆವಿನ್ ಸಿಂಡ್ರೋಮ್ ರೋಗಕ್ಕೆ ತುತ್ತಾಗಿರುವುದಾಗಿ ಹೇಳಿದ್ದಾರೆ. KLS ಅನ್ನೋದು ಒಂದು ಸಂಕೀರ್ಣ ರೋಗ. ವೈದ್ಯಲೋಕದಲ್ಲೇ ಇದು ಮೂರನೇ ಪ್ರಕರಣವಾಗಿದೆ. ಈ ರೋಗಕ್ಕೆ ಸ್ಪಷ್ಟ ಕಾರಣಗಳಿಲ್ಲ. ವೈರಲ್ ಸೋಂಕು ಸಹ ಕಾರಣ ಇರಬಹುದು ಎನ್ನಲಾಗಿದೆ. ಸೂಕ್ತ ಚಿಕಿತ್ಸೆ ನೀಡಿದ್ರೂ ಚೇತರಿಸಿಕೊಳ್ಳುತ್ತಾರೋ, ಇಲ್ಲವೋ ಎಂಬುದನ್ನು ಖಚಿತವಾಗಿ ಹೇಳಲು ವೈದ್ಯರಿಗೂ ಸಾಧ್ಯವಾಗಿಲ್ಲ. ವೈದ್ಯರ ಭಾಷೆಯಲ್ಲಿ ಇದನ್ನ ಕುಂಭಕರ್ಣ ಸಿಂಡ್ರೋಮ್ ಎಂದು ಕರೆಯುತ್ತಾರೆ. ಈ ಕಾಯಿಲೆಗೆ ಕಾರಣ ಮತ್ತು ಸರಿಯಾದ ಚಿಕಿತ್ಸೆ ಬಗ್ಗೆ ತಿಳಿಯಲು ಸಂಶೋಧನೆ ನಡೆಸಲಾಗುತ್ತಿದೆ.