ಆಸ್ಟ್ರೇಲಿಯಾ VS ದ.ಆಫ್ರಿಕಾ ನಡುವೆ ಸೆಮಿಫೈನಲ್ ಪಂದ್ಯ – ನವೆಂಬರ್ 16ರಂದು ಮೆಗಾ ಫೈಟ್

ಆಸ್ಟ್ರೇಲಿಯಾ VS ದ.ಆಫ್ರಿಕಾ ನಡುವೆ ಸೆಮಿಫೈನಲ್ ಪಂದ್ಯ – ನವೆಂಬರ್ 16ರಂದು ಮೆಗಾ ಫೈಟ್

ನವೆಂಬರ್ 15ರಂದು ಭಾರತ ಮತ್ತು ನ್ಯೂಜಿಲ್ಯಾಂಡ್​​ ಮಧ್ಯೆ ಮೊದಲ ಸೆಮಿಫೈನಲ್ ನಡೆಯಲಿದೆ. ಮರುದಿನವೇ ಅಂದರೆ, ನವೆಂಬರ್ 16ರಂದು ಆಸ್ಟ್ರೇಲಿಯಾ vs ಸೌತ್ ಆಫ್ರಿಕಾ ಮಧ್ಯೆ ಮತ್ತೊಂದು ಮೆಗಾ ಸೆಮಿಫೈನಲ್​ ನಡೆಯಲಿದೆ.

ಇದನ್ನೂ ಓದಿ: ವಿಶ್ವಕಪ್‌ನಲ್ಲಿ ದಾಖಲೆ ಬರೆಯುತ್ತಿರುವ ರಚಿನ್ ರವೀಂದ್ರಗೆ ದೃಷ್ಟಿ ತೆಗೆದ ಅಜ್ಜಿ – ನ್ಯೂಝಿಲೆಂಡ್ ಆಟಗಾರನಿಗೆ ಬೆಂಗಳೂರಿನಲ್ಲಿ ಅಜ್ಜಿಯ ಮಮಕಾರ

ಆಸ್ಟ್ರೇಲಿಯಾ vs ಸೌತ್ ಆಫ್ರಿಕಾ.  ಎರಡೂ ಕೂಡ ಸಮಬಲವಾಗಿರುವ ಟೀಂಗಳೇ. ಆಲ್​ಮೋಸ್ಟ್​​ ಒಂದೇ ರೇಂಜ್​​ನಲ್ಲಿವೆ. ನ್ಯೂಜಿಲ್ಯಾಂಡ್​ನಂತೆ ದಕ್ಷಿಣ ಆಫ್ರಿಕಾ ಕೂಡ ಇದುವರೆಗೂ ಒಂದೇ ಒಂದು ಬಾರಿ ವರ್ಲ್ಡ್​​ಕಪ್ ಟ್ರೋಫಿಯನ್ನ ಗೆದ್ದಿಲ್ಲ. ಈ ಬಾರಿಯ ವಿಶ್ವಕಪ್​ನಲ್ಲಿ ಟೆಂಬಾ ಬವುಮಾ ತಂಡ ತುಂಬಾ ಚೆನ್ನಾಗಿಯೇ ಆಡುತ್ತಿದೆ. ವಿಶ್ವಕಪ್​​ ಗೆಲ್ಲುವ ಫೇವರೇಟ್ ತಂಡ ಇದಾಗಿದೆ. ಚೋಕರ್ಸ್​​ ಹಣೆಪಟ್ಟಿಯನ್ನ ಕಳಚಿಕೊಳ್ಳಲೇಬೇಕು ಅನ್ನೋ ನಿರ್ಧಾರಕ್ಕೆ ಸೌತ್​ ಆಫ್ರಿಕಾ ಪ್ಲೇಯರ್ಸ್​​ಗಳು ಭಾರತಕ್ಕೆ ಬರೋ ಮುನ್ನವೇ ನಿರ್ಧರಿಸಿದಂತೆ ಕಾಣುತ್ತಿದೆ. ಅದಕ್ಕೆ ತಕ್ಕ ರೀತಿಯಲ್ಲೇ ರಾಬಿನ್ ರೌಂಡ್ ಸ್ಟೇಜ್​ನಲ್ಲಿ ಆಡಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್​ನ್ನ ಗೆದ್ದು ದಕ್ಷಿಣ ಆಫ್ರಿಕಾ ಸೆಮಿಫೈನಲ್​​ಗೆ ಎಂಟ್ರಿಯಾಗುತ್ತಾ ಅನ್ನೋದೆ ಈಗಿರುವ ಪ್ರಶ್ನೆ. ಆದ್ರೆ ಅಷ್ಟು ಸುಲಭಕ್ಕೆ ಬಿಟ್ಟು ಕೊಡೋ ಟೀಂ ಅಂತೂ ಅಲ್ವೇ ಅಲ್ಲ. ಅಫ್ಘಾನಿಸ್ತಾನ ವಿರುದ್ಧದ ಗೆಲುವು ಆಸಿಸ್​​ ಪ್ಲೇಯರ್ಸ್​​ಗಳ ಕಾನ್ಫಿಡೆನ್ಸ್​ನ್ನ ಇನ್ನೊಂದು ಲೆವೆಲ್​ಗೆ ತೆಗೆದುಕೊಂಡು ಹೋಗಿರುತ್ತೆ. ಅದ್ರಲ್ಲೂ ಗ್ಲೇನ್ ಮ್ಯಾಕ್ಸ್​ವೆಲ್ ಅಂತೂ ಎಂಥಾ ಮ್ಯಾಚ್​ನ್ನ ಬೇಕಾದ್ರೂ ಟರ್ನ್ ಮಾಡಬಹುದು. ಹೀ ಈಸ್​ ದ ಮೋಸ್ಟ್ ಡೇಂಜರಸ್ ಬ್ಯಾಟ್ಸ್​​ಮನ್​ ಇನ್ ದಿ ವರ್ಲ್ಡ್​.. ಆಸ್ಟ್ರೇಲಿಯಾ ಈ ಬಾರಿಯೂ ಫೈನಲ್​ಗೆ ಎಂಟ್ರಿಯಾದ್ರೆ ಅದ್ರಲ್ಲಿ ಯಾವುದೇ ಆಶ್ಚರ್ಯ ಇಲ್ಲ.

ಅಂತೂ ಸೆಮಿಫೈನಲ್​ನಲ್ಲಿ ಆಡುವ ನಾಲ್ಕು ಟೀಂಗಳು ಯಾವೆಲ್ಲಾ ಅನ್ನೋದು ಈಗಾಗ್ಲೇ ಫಿಕ್ಸ್ ಆಗಿದೆ.. ಭಾರತ-ನ್ಯೂಜಿಲ್ಯಾಂಡ್ ಮಧ್ಯೆ ಮೊದಲ ಸೆಮಿಫೈನಲ್.. ಆಸ್ಟ್ರೇಲಿಯಾ-ಸೌತ್ ಆಫ್ರಿಕಾ ಮಧ್ಯೆ 2ನೇ ಸೆಮಿಫೈನಲ್ ನಡೆಯೋದು ಗ್ಯಾರಂಟಿ. ಇಲ್ಲಿ ಗೆದ್ದವರು ನವಂಬರ್ 19ರಂದು ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್​​ನಲ್ಲಿ ವರ್ಲ್ಡ್​​ಕಪ್ ಟ್ರೋಫಿಗಾಗಿ ಹೋರಾಡಲಿದ್ದಾರೆ.

 

Sulekha