2.5 ಮಿಲಿಯನ್ ಡಾಲರ್ ಪತ್ತೆ ಕೇಸ್ಗೆ ಟ್ವಿಸ್ಟ್! – ಚಿಂದಿ ಆಯುವವನ ಮೇಲೆ ಹಲ್ಲೆ ಮಾಡಿ ಅಪಹರಣ!
ನಾಗವಾರ ರೈಲು ಹಳಿ ಪಕ್ಕದ ಪೊದೆಯಲ್ಲಿ ಚಿಂದಿ ಆಯುವ ವ್ಯಕ್ತಿಯೊಬ್ಬರಿಗೆ 2.5 ಮಿಲಿಯನ್ ಡಾಲರ್ ಕರೆನ್ಸಿಯ ಕಟ್ಟು ಸಿಕ್ಕಿತ್ತು. ಈ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಅತ್ತ ಬೆಂಗಳೂರು ಪೊಲೀಸರು 2.5 ಮಿಲಿಯನ್ ಡಾಲರ್ ಕರೆನ್ಸಿಯ ಬಗ್ಗೆ ತನಿಖೆ ನಡೆಸಲು ರಾಷ್ಟ್ರ ರಾಜಧಾನಿಗೆ ಹೋಗಿದ್ರೆ. ಇತ್ತ ಸ್ಕ್ರ್ಯಾಪ್ ಡೀಲರ್ ನನ್ನು ದುಷ್ಕರ್ಮಿಗಳು ಅಪಹರಿಸಿ ಆತನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಇದನ್ನೂ ಓದಿ: ರೈಲು ಹಳಿಯ ಬಳಿ 2.5 ಮಿಲಿಯನ್ ಡಾಲರ್ ಪತ್ತೆ ಕೇಸ್ಗೆ ಟ್ವಿಸ್ಟ್! – ಹೆಬ್ಬಾಳ ಪೊಲೀಸರು ದೆಹಲಿಗೆ ತೆರಳಿದ್ದೇಕೆ?
ಕಳೆದ ಶುಕ್ರವಾರ, ಸ್ಕ್ರ್ಯಾಪ್ ಡೀಲರ್ ಬಪ್ಪಾ ಜೊತೆ ಚಿಂದಿ ಆಯುವವ ಸಲೇಮನ್, ನಾಗವಾರ ರೈಲ್ವೆ ಹಳಿಯಲ್ಲಿ ಚಿಂದಿ ಆಯುತ್ತಿದ್ದಾಗ 3 ಮಿಲಿಯನ್ ಡಾಲರ್ ನೋಟಿನ ಕಂತೆ ಸಿಕ್ಕಿತ್ತು. ಸಲೇಮಾನ್ ಬಪ್ಪನಿಗೆ ಹಣದ ಬಗ್ಗೆ ತಿಳಿಸಿದನು. ಬೇರೆ ಕಡೆ ಸಂಚಾರ ಮಾಡುತ್ತಿದ್ದ ಬಪ್ಪನು ಹಣವನ್ನು ತನ್ನ ಬಳಿ ಇಟ್ಟುಕೊಳ್ಳುವಂತೆ ಸೂಚಿಸಿದನು. ಆದರೆ, ಸಲೇಮಾನ್ ಸಾಮಾಜಿಕ ಕಾರ್ಯಕರ್ತ ಕಲೀಮುಲ್ಲಾ ಸಂಪರ್ಕಿಸಿದ್ದಾನೆ. ಅವರು ಭಾನುವಾರ ಸಲೇಮಾನ್ ನನ್ನು ಪೊಲೀಸ್ ಕಮಿಷನರ್ ಬಳಿಗೆ ಕರೆದೊಯ್ದರು. ಅಲ್ಲಿ ಹಣವನ್ನು ಹಸ್ತಾಂತರಿಸಿದರು, ನಂತರ ಅದನ್ನು ಪರಿಶೀಲನೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗೆ ಕಳುಹಿಸಲಾಯಿತು. ಈ ಬೆನ್ನಲ್ಲೇ ದುಷ್ಕರ್ಮಿಗಳು ಕೆಂಪಾಪುರ ಸಮೀಪದ ಚಿರಂಜೀವಿ ಲೇಔಟ್ನಲ್ಲಿರುವ ಬಪ್ಪ ಮನೆಗೆ ತೆರಳಿ ಹಣ ನೀಡುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದಾರೆ. ಶಬ್ಧವನ್ನು ಕೇಳಿದ ಇತರ ಚಿಂದಿ ಆಯುವವರು ಬಪ್ಪನನ್ನು ರಕ್ಷಿಸಲು ಬಂದ್ದಾರೆ. ಆದರೆ ದುಷ್ಕರ್ಮಿಗಳು ಅವರಿಗೆ ಬೆದರಿಕೆ ಹಾಕಿ ಹತ್ತಿರಕ್ಕೆ ಬಾರದಂತೆ ಸೂಚಿಸಿದರು. ಬಳಿಕ ದುಷ್ಕರ್ಮಿಗಳು ಆತನನ್ನು ಅಪಹರಿಸಿ ಅಮಾನುಷವಾಗಿ ಥಳಿಸಿ ರೈಲ್ವೆ ಹಳಿಯಲ್ಲಿ ಸಿಕ್ಕ ಹಣವನ್ನು ತಮಗೆ ನೀಡುವಂತೆ ಒತ್ತಡ ಹಾಕಿದ್ದಾರೆ. ಬಳಿಕ ಆತನನ್ನು ದುಷ್ಕರ್ಮಿಗಳು ಮಾನ್ಯತಾ ಟೆಕ್ ಪಾರ್ಕ್ ಬಳಿ ಬಿಟ್ಟು ಹೋಗಿದ್ದಾರೆ ಎಂದು ವರದಿಯಾಗಿದೆ.
ದುಷ್ಕರ್ಮಿಗಳು ಬಪ್ಪಾ ವಾಸಿಸುವ ಅದೇ ಪ್ರದೇಶದವರು ಎಂದು ಶಂಕಿಸಲಾಗಿದೆ. ಪೊಲೀಸ್ ದೂರು ನೀಡಿದರೆ ದುಷ್ಕರ್ಮಿಗಳು ಬಪ್ಪನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಯಾವುದೇ ದೂರು ದಾಖಲಾಗಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ.