ಹೊಡಿಬಡಿ ಆಟದಿಂದಾಗಿ ಮ್ಯಾಕ್ಸ್‌ವೆಲ್‌ ದ್ವಿಶತಕ – ಏನಿದು ಹೊಸ ಬ್ಯಾಟಿಂಗ್ ಶೈಲಿ? ಯಾವ ಬ್ಯಾಟ್ಸ್‌ಮೆನ್ ಯಾವ ಬ್ಯಾಟಿಂಗ್ ಶೈಲಿಯಲ್ಲಿ ಫೇಮಸ್?

ಹೊಡಿಬಡಿ ಆಟದಿಂದಾಗಿ ಮ್ಯಾಕ್ಸ್‌ವೆಲ್‌ ದ್ವಿಶತಕ – ಏನಿದು ಹೊಸ ಬ್ಯಾಟಿಂಗ್ ಶೈಲಿ? ಯಾವ ಬ್ಯಾಟ್ಸ್‌ಮೆನ್ ಯಾವ ಬ್ಯಾಟಿಂಗ್ ಶೈಲಿಯಲ್ಲಿ ಫೇಮಸ್?

ಅಫ್ಘಾನಿಸ್ತಾನ ವಿರುದ್ಧ ಗ್ಲೇನ್ ಮ್ಯಾಕ್ಸ್​ವೆಲ್ ಆಡಿದ ಕಂಡು ಕೇಳರಿಯದ ಇನ್ನಿಂಗ್ಸ್​​ಗೆ ಇಡೀ ಕ್ರಿಕೆಟ್ ಜಗತ್ತೇ ನಿಬ್ಬೆರಗಾಗಿದೆ. ಎಲ್ಲರೂ ಮ್ಯಾಕ್ಸ್​ವೆಲ್​ ಬ್ಯಾಟಿಂಗ್ ಬಗ್ಗೆಯೇ ಮಾತನಾಡ್ತಿದ್ದಾರೆ. ಮ್ಯಾಕ್ಸ್​ವೆಲ್ ಆಡಿರೋದು ಕ್ರಿಕೆಟ್ ಇತಿಹಾಸದ ವನ್ ಆಫ್ ದಿ ಟಾಪ್ ಕ್ಲಾಸ್ ಇನ್ನಿಂಗ್ಸ್​ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಅದ್ರಲ್ಲೂ ಇಂಜ್ಯೂರಿಗೆ ಒಳಗಾಗಿ ಕಾಲು ಕೂಡ ಅಲ್ಲಾಡಿಸೋಕೆ ಆಗದೆ, ನಿಂತಲ್ಲಿಂದಲೇ ಬೌಂಡರಿ, ಸಿಕ್ಸರ್​ಗಳ ಸುರಿಮಳೆಗೆರೆದಿದ್ರು. ಇನ್ನು ಮ್ಯಾಕ್ಸ್​​ವೆಲ್ ಹೊಡೆದ ಒಂದೊಂದು ಶಾಟ್​ಗಳು ಕೂಡ ಹೀಗೂ ಬ್ಯಾಟಿಂಗ್ ಮಾಡಬಹುದಾ ಎಂಬಂತಿತ್ತು. ಕ್ರಿಕೆಟ್​​ ಬುಕ್​​ನಲ್ಲಿ ಎಲ್ಲೂ ಕಾಣೋಕೆ ಸಿಗದಂಥಾ ಶಾಟ್ಸ್​​ಗಳನ್ನ ಮ್ಯಾಕ್ಸ್​ವೆಲ್​ ಹೊಡೆದಿದ್ರು. ಆಸ್ಟ್ರೇಲಿಯಾವನ್ನ ಗೆಲ್ಲಿಸೋಕೆ ತಾವೇ ಹೊಸ ಶಾಟ್ಸ್​​ಗಳನ್ನ ಅನ್ವೇಷಿಸಿಕೊಂಡಿದ್ರು. ಈ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ‘ನಿನ್ನಿಂದ ಮಾತ್ರ ಇದು ಸಾಧ್ಯ’ – ಮ್ಯಾಕ್ಸ್‌ವೆಲ್‌ ದ್ವಿಶತಕಕ್ಕೆ ರನ್ ಮೆಷಿನ್ ವಿರಾಟ್ ಕೊಹ್ಲಿ ಮೆಚ್ಚುಗೆ

1960, 1980, 90ರ ದಶಕದಲ್ಲೆಲ್ಲಾ ಕ್ರಿಕೆಟ್​​ ಆಡೋವಾಗ ಬ್ಯಾಟ್ಸ್​ಮನ್​ಗಳು ಸೆಲೆಕ್ಟಿವ್ ಶಾಟ್ಸ್​​ಗಳಿಗಷ್ಟೇ ಸೀಮಿತವಾಗಿದ್ದರು. ಕ್ರಿಕೆಟ್​ ಬುಕ್​ನಲ್ಲಿರುವ ಶಾಟ್ಸ್​​ಗಳನ್ನ ಹೊಡೆಯುತ್ತಿದ್ದರು. ​ ಎಲ್ಲರೂ ಒಂಥರಾ ಬುಕ್ಕಿಶ್ ರೀತಿಯಲ್ಲೇ ಬ್ಯಾಟಿಂಗ್ ಮಾಡುತ್ತಿದ್ದರು. ಕೋಚ್​ಗಳು ಏನು ಹೇಳಿಕೊಟ್ಟಿದ್ರೋ, ಕ್ರಿಕೆಟ್​​ ಬುಕ್​ನಲ್ಲಿ ಯಾವ್ಯಾವ ಶಾಟ್​ಗಳಿವೆಯೋ ಅದನ್ನಷ್ಟೇ ಆಡುತ್ತಿದ್ದರು. ಆದರೆ, ಕಾಲ ಬದಲಾಗುತ್ತಾ ಬಂತು. ಆಧುನಿಕ ಕಾಲದ ಕ್ರಿಕೆಟಿಗರು, ಅದ್ರಲ್ಲೂ ಟಿ-20 ಫಾರ್ಮೆಟ್ ಬಂದ ಮೇಲಂತೂ ಬ್ಯಾಟಿಂಗ್​​ ಮಾಡೋ ಶೈಲಿಯೇ ಬದಲಾಗುತ್ತಾ ಹೋಯಿತು. ಹೊಡಿಬಡಿ ಆಟದಿಂದಾಗಿ ಬ್ಯಾಟ್ಸ್​​ಮನ್​ಗಳು ಬೇಗನೆ ರನ್ ಕಲೆ ಹಾಕೋಕೆ ಹೊಸ ಹೊಸ ಶಾಟ್ಸ್​​ಗಳನ್ನ ತಾವಾಗಿಯೇ ಅನ್ವೇಷಣೆ ಮಾಡಿಕೊಂಡರು. ಯಾವ್ಯಾವ ಬ್ಯಾಟ್ಸ್​ಮನ್​ ಏನೆಲ್ಲಾ ಹೊಸ ಶಾಟ್​​ ಕಂಡುಹಿಡಿದಿದ್ದಾರೆ ಅನ್ನೋದನ್ನು ಈ ಕೆಳಗೆ ವಿವರಣೆ ಇದೆ.

ಪ್ಯಾಡಲ್​ ಸ್ಕೂಪ್ ಶಾಟ್-ಡಾಗ್ಲಸ್ ಮ್ಯಾರಿಲ್ಲರ್!

ಡಾಗ್ಲಸ್ ಮ್ಯಾರಿಲ್ಲರ್ ಜಿಂಬಾಬ್ವೆ ತಂಡದ ಮಾಜಿ ಕ್ರಿಕೆಟಿಗ. ಪ್ಯಾಡಲ್ ಸ್ಕೂಪ್ ಅನ್ನೋ ಶಾಟ್​ನ್ನೇ ಮೊದಲು ಡಾಗ್ಲಸ್ ಮ್ಯಾರಿಲ್ಲರ್. ಆಸ್ಟ್ರೇಲಿಯಾ ವಿರುದ್ಧದ ಮ್ಯಾಚ್ ಒಂದರ ವೇಳೆ ಗ್ಲೇನ್ ಮೆಗ್ರಾಥ್ ಬೌಲಿಂಗ್​​ನಲ್ಲಿ ಡಾಗ್ಲಸ್ ಮ್ಯಾರಿಲ್ಲರ್ ಮೊಟ್ಟ ಮೊದಲ ಬಾರಿಗೆ ಪ್ಯಾಡಲ್ ಸ್ಕೂಪ್ ಮಾಡ್ತಾರೆ. ರೈಟ್ ಹ್ಯಾಡ್ ಬ್ಯಾಟ್ಸ್​ಮನ್ ಆಗಿದ್ದ ಡಾಗ್ಲಸ್ ಮ್ಯಾರಿಲ್ಲರ್ ಔಟ್​ ಸೈಡ್​ ದಿ ಆಫ್​ ಸ್ಟಂಪ್​ಗೆ ಬಂದ ಬಾಲ್​​ನ್ನ ಒಂದು ಕಾಲನ್ನ ಮುಂದೆ ಇಟ್ಟು ಬ್ಯಾಕ್ವಟ್ ಪಾಯಿಂಟ್​​ನತ್ತ ಹೊಡೀತಾರೆ. ಈಗ ಈ ಶಾಟ್​​ ಕಾಮನ್ ಆಗಿದ್ದು, ಆದ್ರೆ ಮೊದಲ ಬಾರಿಗೆ ಈ ರೀತಿ ಪ್ಯಾಡಲ್ ಸ್ಕೂಪ್ ಮಾಡಿದ್ದು ಜಿಂಬಾಬ್ವೆಯ ಡಾಗ್ಲಸ್ ಮ್ಯಾರಿಲ್ಲರ್.

ದಿಲ್​ ಸ್ಕೂಪ್ ಶಾಟ್ -ತಿಲಕರತ್ನೆ ದಿಲ್ಷಾನ್!

ಶ್ರೀಲಂಕಾದ ಓಪನಿಂಗ್ ಬ್ಯಾಟ್ಸ್​ಮನ್​ ಆಗಿದ್ದ ತಿಲಕರತ್ನೆ ದಿಲ್ಷಾನ್ ತಮ್ಮ ಸ್ಕೂಪ್​ ಶಾಟ್ ಮೂಲಕ ಬ್ಯಾಟಿಂಗ್​ಗೆ ಹೊಸ ಟಚ್ ಕೊಟ್ಟಿದ್ರು. ಸಾಮಾನ್ಯವಾಗಿ ಸ್ಪಿನ್ ಬೌಲಿಂಗ್​ಗೆ ಮಾತ್ರ ಬ್ಯಾಟ್ಸ್​​ಮನ್​ಗಳು ಸ್ವೀಪ್ ಮಾಡ್ತಾರೆ. ಆದ್ರೆ ದಿಲ್ಷಾನ್ ಸ್ವೀಪ್ ಮಾಡೋ ಮಾದರಿಯಲ್ಲೇ ಒಂದು ಕಾಲನ್ನ ಮುಂದೆ ಇಟ್ಟು ಫಾಸ್ಟ್​​ ಬೌಲಿಂಗ್​ಗೆ ಸ್ಕೂಪ್ ಮಾಡ್ತಿದ್ರು. ಅಂದ್ರೆ ಸ್ಕೂಪ್ ಮಾಡಿದಾಗ ಬಾಲ್ ವಿಕೆಟ್ ಕೀಪರ್ ತಲೆ ಮೇಲೆಯೇ ಹೋಗಿ ಬೌಂಡರಿ ಹೋಗ್ತಿತ್ತು. ದಿಲ್ಷಾನ್ ಅವರೇ ಕಂಡುಕೊಂಡ ಶಾಟ್ ಇದಾಗಿದ್ದು, ಅವರಷ್ಟು ಪರ್ಫೆಕ್ಟ್​ ಆಗಿ ಇನ್ಯಾವ ಬ್ಯಾಟ್ಸ್​ಮನ್​ ಕೂಡ ಈ ಶಾಟ್​​ನ್ನ ಆಡಿಲ್ಲ. ಹೀಗಾಗಿ ಆ ಶಾಟ್​​ಗೆ ದಿಲ್ ಸ್ಕೂಪ್ ಅಂತಾನೆ ಹೆಸರು ಬಂತು.

ರಿವರ್ಸ್ ಸ್ಕೂಪ್ – ಎಬಿಡಿ ವಿಲಿಯರ್ಸ್!

ದಕ್ಷಿಣ ಆಫ್ರಿಕಾದ ಮಿಸ್ಟರ್ 360 ಡಿಗ್ರಿ ಪ್ಲೇಯರ್ಸ್ ಎಬಿಡಿ ವಿಲಿಯರ್ಸ್ ರಿವರ್ಸ್ ಸ್ಕೂಪ್​ ಎಕ್ಸ್​​ಪರ್ಟ್. ರಿವರ್ಸ್ ಸ್ಕೂಪ್​ ಮೂಲಕವೇ ಬೌಲರ್ಸ್​ಗಳ ನಿದ್ದೆಗೆಡಿಸ್ತಿದ್ರು. ಎಷ್ಟೇ ಟೈಟ್ ಫೀಲ್ಡಿಂಗ್ ಸೆಟ್ ಮಾಡಿದ್ರು. ಎಬಿಡಿ ರಿವರ್ಸ್ ಸ್ಕೂಪ್​ ಮೂಲಕ ಬ್ಯಾಟ್ ತಿರುಗಿಸಿ ಬಾಲ್​​ನ್ನ ಬೌಂಡರಿಯಾಚೆಗೆ ತಳ್ತಾ ಇದ್ರು. ಎಬಿಡಿ ವಿಲಿಯರ್ಸ್ ರೀತಿಯಲ್ಲಿ ಇದುವರೆಗೂ ಯಾರಿಂದಲೂ ರಿವರ್ಸ್ ಸ್ಕೂಪ್ ಮಾಡೋಕೆ ಸಾಧ್ಯವಾಗಿಲ್ಲ.

ಸ್ವಿಚ್ ಹಿಟ್ – ಕೆವಿನ್ ಪೀಟರ್ಸನ್!

ಇಂಗ್ಲೆಂಡ್​ನ ಮಾಜಿ ಕ್ರಿಕೆಟಿಗ ಕೆವಿನ್​ ಪೀಟರ್ಸನ್​ ಟ್ರೇಡ್ ಮಾರ್ಕ್ ಶಾಟ್ ಸ್ವಿಚ್ ಹಿಟ್. ರೈಟ್ ಹ್ಯಾಂಡ್ ಬ್ಯಾಟ್ಸ್​​ಮನ್ ಆಗಿದ್ದ ಪೀಟರ್ಸನ್, ಇನ್ನೇನು ಬೌಲರ್ ಬಾಲ್ ಎಸೀಬೇಕು ಅನ್ನೋವಷ್ಟರಲ್ಲಿ ಒಂದು ಜಂಪ್​​ ಹೊಡೆದು ಲೆಫ್ಟ್​ ಹ್ಯಾಂಡ್ ಬ್ಯಾಟ್ಸ್​​ಮನ್​​ ಪೊಸೀಶನ್ ಪಡೆಯುತ್ತಿದ್ರು. ಬಳಿಕ ಒಂದು ಕಾಲನ್ನ ಮುಂದೆ ಇಟ್ಟು ಬ್ಯಾಟ್​ ಬೀಸುತ್ತಲೇ ಬಾಲ್​ ಸಿಕ್ಸರ್​, ಬೌಂಡರಿಗೆ ಹೋಗ್ತಿತ್ತು. ಈ ಶಾಟ್​​ನ್ನ ಕೂಡ ಫಸ್ಟ್ ಟೈಮ್ ಆಡಿರೋದು ಅಂದ್ರೆ ಪೀಟರ್ಸನ್ ಮಾತ್ರ. ಈ ಶಾಟ್​ನ್ನ ಸ್ವಿಚ್ ಹಿಟ್ ಅಂತಾ ಕರೀತಾರೆ. ಆದ್ರೆ ಇದನ್ನ ಹೊಡಿಯೋದು ಅಷ್ಟೊಂದು ಸುಲಭ ಇಲ್ಲ. ರೈಟ್ ಹ್ಯಾಂಡ್​ ಬ್ಯಾಟ್ಸ್​​ಮನ್​ ಲೆಫ್ಟ್​​ಹ್ಯಾಂಡ್ ಪೊಸೀಶನ್ ತೆಗೆದುಕೊಂಡು ಅದೇ ಸ್ಟ್ರೆಂತ್​ನಲ್ಲಿ ಹೊಡಿಯೋದೆ ಇಲ್ಲಿರುವ ದೊಡ್ಡ ಚಾಲೆಂಜ್. ಯಾಕಂದ್ರೆ ರೈಟ್​ಹ್ಯಾಂಡ್ ಬ್ಯಾಟ್ಸ್​ಮನ್​ಗಳಿಗೆ ಲೆಫ್ಟ್ ಹ್ಯಾಂಡ್​ನಲ್ಲಿ ಅಷ್ಟೊಂದು ಸ್ಟ್ರೆಂತ್ ಇರೋದಿಲ್ಲ. ಹೀಗಾಗಿ ಇಂಥಾ ಸ್ವಿಚ್ ಹಿಟ್ ನಿಜಕ್ಕೂ ರಿಸ್ಕೀ ಶಾಟ್ ಆಗಿಯೇ ಇರುತ್ತೆ.

ಹೆಲಿಕಾಪ್ಟರ್​ ಶಾಟ್ – ಎಂ.ಎಸ್.ಧೋನಿ!

ಈ ಹೆಲಿಕಾಪ್ಟರ್​ ಶಾಟ್ ಬಗ್ಗೆ ಹೆಚ್ಚೇನು ಹೇಳಕಬೇಕಾದ ಅವಶ್ಯಕತೆಯೇ ಇಲ್ಲ. ನಿಮಗೆಲ್ಲರಿಗೂ ಗೊತ್ತೇ ಇದೆ. ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್​.ಧೋನಿ ಫಸ್ಟ್​ ಟೈಮ್ ಈ ಹೆಲಿಕಾಪ್ಟರ್ ಶಾಟ್​ ಆಡಿದ್ರು. ಸಾಮಾನ್ಯವಾಗಿ ಯಾರ್ಕರ್​​ ಬಾಲ್​ಗಳನ್ನ ಎದುರಿಸೋದು ಅಂದ್ರೆ ಬ್ಯಾಟ್ಸ್​​ಮನ್​​ಗಳಿಗೆ ದೊಡ್ಡ ಚಾಲೆಂಜ್. ಪರ್ಫೆಕ್ಟ್ ಯಾರ್ಕರ್​ ಬಾಲ್​ಗೆ ಸ್ಕೋರ್ ಮಾಡೋದು ತುಂಬಾನೆ ಕಷ್ಟ. ಅದ್ರಲ್ಲೂ ಸ್ಲಾಗ್ ಓವರ್ಸ್​ಗಳಲ್ಲಂತೂ ಯಾರ್ಕರ್ ಬೌಲರ್ಸ್​​ಗಳ ಮೇನ್ ವೆಪನ್ ಆಗಿರುತ್ತೆ. ಆದ್ರೆ ಧೋನಿ ಮಾತ್ರ ಇದಕ್ಕೆ ಪರಿಹಾರ ಕಂಡುಕೊಂಡಿದ್ದು ತಮ್ಮ ಹೆಲಿಕಾಪ್ಟರ್ ಶಾಟ್​ಗಳ ಮೂಲಕ. ಯಾರ್ಕರ್​ ಬಾಲ್​ಗಳಿಗೆ ಹೆಲಿಕಾಪ್ಟರ್ ಶಾಟ್​ ಮೂಲಕ ಸಿಕ್ಸರ್ ಹೊಡೀತಿದ್ರು. ಔಟ್ ಸೈಟ್ ದಿ ಆಫ್ ಸ್ಟಂಪ್ ಹೋಗೋ ಬಾಲ್​ಗಳಿಗೂ ಕೂಡ ಹೆಲಿಕಾಪ್ಟರ್​ ಶಾಟ್ ಮೂಲಕ ಧೋನಿ ಸ್ಕೋರ್ ಮಾಡ್ತಿದ್ರು.

ಅಪ್ಪರ್ ಕಟ್ ಶಾಟ್ – ಸಚಿನ್ ತೆಂಡೂಲ್ಕರ್!

2003ರ ವರ್ಲ್ಡ್​​ಕಪ್​ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಶೋಯೆಬ್ ಅಖ್ತರ್ ಬಾಲ್​ಗೆ ಸಚಿನ್ ತೆಂಡೂಲ್ಕರ್ ದಿ ಫೇಮಸ್ ಅಪ್ಪರ್ ಕಟ್ ಶಾಟ್ ಹೊಡೀತಾರೆ. ಔಟ್ ಸೈಡ್​ ಆಫ್​​ ಸ್ಟಂಪ್​​ನತ್ತ ಬೌನ್ಸ್ ಆಗಿ ಬಂದ ಬಾಲ್​​ನ್ನ ಸಚಿನ್ ತುದಿಗಾಲಲ್ಲಿ ನಿಂತು ಅಪ್ಪರ್ ಕಟ್ ಮಾಡ್ತಾರೆ. ಆ ಬಾಲ್​ ನೇರವಾಗಿ ಸ್ಟ್ಯಾಂಡ್​​ ಮೇಲೆಯೇ ಬಿದ್ದಿತ್ತು. ಅಂದು ಸಚಿನ್ ಆಡಿದ ಅಪ್ಪರ್ ಕಟ್ ಶಾಟ್ ಆಫ್​ ದಿ ಟೂರ್ಮಮೆಂಟ್ ಅಂತಾನೆ ಲೇಬಲ್​ ಆಗಿತ್ತು. ಬಳಿಕ ವಿರೇಂದ್ರ ಸೆಹ್ವಾಗ್ ಕೂಡ ಸಚಿನ್ ರೀತಿಯಲ್ಲೇ ಅಪ್ಪರ್ ಕಟ್ ಮಾಡ್ತಿದ್ರು. ಇನ್ನು ಬೌನ್ಸರ್​​ಗಳು ಬಂದಾಗಲೂ ಸಚಿನ್ ಅಪ್ಪರ್ ಕಟ್ ಮೂಲಕ ಥರ್ಡ್​ಮೆನ್​ನ್ಯಾಚೆಗೆ ಸಿಕ್ಸರ್​ ಹೊಡೀತಿದ್ರು.

ಶಾರ್ಟ್ ಆರ್ಮ್ ಜ್ಯಾಬ್ – ವಿರಾಟ್ ಕೊಹ್ಲಿ!

ಟೀಂ ಇಂಡಿಯಾದ ರನ್ ಮಷೀನ್ ವಿರಾಟ್ ಕೊಹ್ಲಿಯ ಟ್ರೇಡ್ ಮಾರ್ಕ್ ಶಾಟ್​ಗಳಲ್ಲಿ ಈ ಶಾರ್ಟ್ ಆರ್ಮ್ ಜ್ಯಾಬ್ ಕೂಡ ಒಂದು. ಬಾಟಮ್ ಹ್ಯಾಂಡ್ ಸ್ಟ್ರಾಂಗ್ ಇದ್ರಷ್ಟೇ ಈ ಶಾಟ್ ಹೊಡೆಯೋಕೆ ಸಾಧ್ಯ. ಬ್ಯಾಟ್​ನ್ನ ಸ್ವಿಂಗ್ ಮಾಡಿ ಕ್ರಾಸ್​ ಬ್ಯಾಟ್​ ಮೂಲಕ ಫಾಸ್ಟ್ ಬಾಲ್​ಗಳಿಗೆ ಕೊಹ್ಲಿ ಬೌಂಡರಿ, ಸಿಕ್ಸರ್​ ಹೊಡೀತಾರೆ. 2022ರಲ್ಲಿ ಟಿ-20 ವರ್ಲ್ಡ್​ಕಪ್ ವೇಳೆ ಪಾಕಿಸ್ತಾನ ವಿರುದ್ಧದ ಮ್ಯಾಚ್​​ನಲ್ಲಿ ಹ್ಯಾರಿಸ್ ರವೂಫ್​ ಬಾಲ್​ಗೆ ವಿರಾಟ್​ ಕೊಹ್ಲಿ ಇದೇ ಶಾರ್ಟ್ ಆರ್ಮ್ ಜ್ಯಾಬ್ ಶಾಟ್ ಮೂಲಕವೇ ಎರಡು ಫೇಮಸ್ ಸಿಕ್ಸರ್​​ಗಳನ್ನ ಹೊಡೆದಿದ್ರು. ಕೊಹ್ಲಿಯ ಈ ಸ್ಪೆಷಲ್​ ಶಾಟ್​​ಗಳಿಂದಾಗಿಯೇ ಭಾರತ ಮ್ಯಾಚ್​ನ್ನ ಗೆದ್ದುಕೊಂಡಿತ್ತು.

ಫ್ಲಿಕ್ & ಹೆಲಿಕಾಪ್ಟರ್ ವಿಪ್ – ಸೂರ್ಯಕುಮಾರ್​ ಯಾದವ್!

ಇನ್ನು ಟೀಂ ಇಂಡಿಯಾ ಮಿಸ್ಟರ್ 360 ಬಗ್ಗೆ ಹೇಳದೆ ಈ ಎಪಿಸೋಡ್​​ನ್ನ ಮುಗಿಸೋಕೆ ಸಾಧ್ಯವೇ ಇಲ್ಲ. ಸೂರ್ಯಕುಮಾರ್ ಟ್ರೇಡ್​ಮಾರ್ಕ್​​ ಶಾಟ್​ನ್ನ ನೀವೆಲ್ಲಾ ನೋಡಿಯೇ ಇರ್ತೀರಾ. ಸೂರ್ಯಕುಮಾರ್​ ಪ್ರಮುಖವಾಗಿ ಎರಡು ರೀತಿಯ ಶಾಟ್​ಗಳನ್ನ ಆಡ್ತಾರೆ, ಒಂದು ಫ್ಲಿಕ್ ಶಾಟ್.. ಫಾಸ್ಟ್ ಬಾಲ್​ಗಳನ್ನ ಫೈನ್​ ಲೆಗ್​​ನತ್ತ ಜಸ್ಟ್ ಫ್ಲಿಕ್ ಮಾಡಿಯೇ ಸಿಕ್ಸರ್ ಹೊಡೀತಾರೆ. ಮತ್ತೊಂದು ಹೆಲಿಕಾಪ್ಟರ್​ ವಿಪ್ ಶಾಟ್. ಒಂದು ಕಾಲು ಮೇಲಕ್ಕೆತ್ತಿ ಬ್ಯಾಕ್ವಟ್ ಪಾಯಿಂಟ್​​ನತ್ತ ಸಿಕ್ಸರ್​ ಹೊಡೀತಾರೆ. ಆ ಭಾಗದಲ್ಲಿ ಬೌಂಡರಿ ಲೈನ್ ಕೂಡ ಹತ್ತಿರವಾಗಿರೋದ್ರಿಂದ ಹೆಲಿಕಾಪ್ಟರ್ ವಿಪ್ ಮೂಲಕ ಸಿಕ್ಸರ್ ಹೊಡಿಯೋದನ್ನ ಸೂರ್ಯಕುಮಾರ್ ಅನ್ವೇಷಿಸಿಕೊಂಡಿದ್ದಾರೆ.

Sulekha