1 ಕೆಜಿ ಮಶ್ರೂಮ್ ಬೆಲೆಗೆ ಕಾರು ಕೊಳ್ಳಬಹುದು – ವಿಶ್ವದ ದುಬಾರಿ ಅಣಬೆ ಯಾವುದು ಗೊತ್ತಾ?
ಮಶ್ರೂಮ್ ಹಲವರ ಫೇವರೆಟ್ ಫುಡ್. ವಿದೇಶಿ ತರಕಾರಿಯಾಗಿರುವ ಅಣಬೆ ಭಾರತದಲ್ಲೂ ಜನಪ್ರಿಯವಾಗಿದೆ. ಮಶ್ರೂಮ್ ಸೇವನೆ ಆರೋಗ್ಯಕ್ಕೆ ತುಂಬಾನೇ ಒಳ್ಳೇದು. ವಿಟಮಿನ್ಸ್, ಮಿನರಲ್ಸ್ ಮತ್ತು ಅಮೈನೋ ಆಸಿಡ್ ಗಳು ಅಣಬೆಗಳಲ್ಲಿ ಇರೋದ್ರಿಂದ ಆರೋಗ್ಯಕ್ಕೆ ರಾಮಬಾಣವೆಂದು ಪರಿಗಣಿಸಲಾಗುತ್ತೆ. ಇತ್ತೀಚೆಗೆ ಅಣಬೆ ಕೃಷಿಯಿಂದ ಲಕ್ಷಾಂತರ ರೂಪಾಯಿ ಆದಾಯ ಕೂಡ ಗಳಿಸುತ್ತಿದ್ದಾರೆ.
ಇದನ್ನೂ ಓದಿ : Tattoo ಹಾಕಿಸಿಕೊಳ್ಳುವಾಗ ಈ ತಪ್ಪು ಮಾಡಬೇಡಿ – ಟ್ಯಾಟೂ ಕ್ರೇಜ್ ಆರೋಗ್ಯಕ್ಕೆ ಎಷ್ಟು Danger?
ಯುರೋಪಿಯನ್ ವೈಟ್ ಟ್ರಫಲ್ ಮಶ್ರೂಮ್ ಬಹಳ ಅಪರೂಪದ ಅಣಬೆಯಾಗಿದೆ. ಇದನ್ನು ವಿಶ್ವದ ಅತ್ಯಂತ ದುಬಾರಿ ಮಶ್ರೂಮ್ ಎನ್ನಲಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಮಶ್ರೂಮ್ ಬೆಲೆ ಕೆಜಿಗೆ 7 ರಿಂದ 9 ಲಕ್ಷ ರೂಪಾಯಿ ಇದೆ. ಯಾಕಂದ್ರೆ ಇದು ಕೃತಕವಾಗಿ ಬೆಳೆಸುವ ಮಶ್ರೂಮ್ ಅಲ್ಲ. ಸ್ವತಃ ಹಳೆಯ ಮರಗಳಲ್ಲಿ ಬೆಳೆಯುತ್ತದೆ. ಇದರಲ್ಲಿ ಅನೇಕ ರೀತಿಯ ರೋಗಗಳನ್ನ ನಿವಾರಿಸುವ ಗುಣ ಇದೆ. ಹೀಗಾಗೇ ಈ ಮಶ್ರೂಮ್ ಗೆ ಜಗತ್ತಿನಲ್ಲಿ ಭಾರೀ ಬೇಡಿಕೆ ಇದೆ. ಮತ್ತೊಂದು ಮಟ್ಸುಟೇಕ್ ಎಂಬ ಬಗೆಯ ಮಶ್ರೂಮ್ 3 ರಿಂದ 5 ಲಕ್ಷ ರೂಪಾಯಿಗೆ ಸೇಲ್ ಆಗುತ್ತೆ. ಇದು ಸುಗಂಧಕ್ಕೆ ಹೆಸರುವಾಸಿಯಾಗಿದೆ.