ಹಲ್ಲು ನೋವೆಂದು ರೂಟ್‌ ಕೆನಾಲ್‌ ಮಾಡಿದ್ರು! – ವೈದ್ಯನ ನಿರ್ಲಕ್ಷ್ಯಕ್ಕೆ 4 ವರ್ಷದ ಬಾಲಕ ಸಾವು!

ಹಲ್ಲು ನೋವೆಂದು ರೂಟ್‌ ಕೆನಾಲ್‌ ಮಾಡಿದ್ರು! – ವೈದ್ಯನ ನಿರ್ಲಕ್ಷ್ಯಕ್ಕೆ 4 ವರ್ಷದ ಬಾಲಕ ಸಾವು!

ಹಲ್ಲು ನೋವು ಅಂತಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದ ಬಾಲಕ ಧಾರುಣವಾಗಿ ಸಾವನ್ನಪ್ಪಿದ್ದಾನೆ. ನೋವು ಕಡಿಮೆ ಮಾಡಬೇಕಾದ ಚಿಕಿತ್ಸೆಯೇ ಆತನನ್ನು ಬಲಿತೆಗೆದುಕೊಂಡಿದೆ.

ಹೌದು, ಖಾಸಗಿ ಆಸ್ಪತ್ರೆಯಲ್ಲಿ ಹಲ್ಲಿನ ರೂಟ್ ಕೆನಾಲ್ ಚಿಕಿತ್ಸೆಗೆ ಒಳಗಾಗಿದ್ದ ಪುಟ್ಟ ಮಗು ಮಂಗಳವಾರ ಧಾರುಣವಾಗಿ ಸಾವನ್ನಪ್ಪಿದ ಘಟನೆ ಕೇರಳದ ಕುನ್ನಂಕುಲಂನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. 4 ವರ್ಷದ ಬಾಲಕ ಮೃತನಾಗಿದ್ದಾನೆ.

ಇದನ್ನೂ ಓದಿ: ಕೆಇಎ ಪರೀಕ್ಷಾ ಅಕ್ರಮ – ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

ನಡೆದಿದ್ದೇನು?

ರೂಟ್ ಕೆನಾಲ್​ಗೆಂದು ಕುಟುಂಬಸ್ಥರು ಬಾಲಕನನ್ನು ಕುನ್ನಂಕುಲಂನಲ್ಲಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ವೈದ್ಯರು ಮೊದಲು ಬಾಲಕನಿಗೆ ಅರಿವಳಿಕೆ ನೀಡಿ ರೂಟ್ ಕೆನಾಲ್ ಮಾಡಿದ್ದಾರೆ. ಆದರೆ, ರೂಟ್ ಕೆನಾಲ್​ ನಂತರ ಮಗುವಿಗೆ ಪ್ರಜ್ಞೆ ಬಂದಾಗ ತೀವ್ರ ಅಸ್ವಸ್ಥತೆಯಿಂದ ಬಳಲಿದ್ದಾನೆ. ಬಳಿಕ ಬಾಲಕನ ರಕ್ತದೊತ್ತಡ ಕಡಿಮೆಯಾಗಿ ಕೆಲವೇ ಹೊತ್ತಲ್ಲಿ ಬಾಲಕನ ಪ್ರಾಣಪಕ್ಷಿ ಹಾರಿಹೋಗಿದೆ.

ರೂಟ್ ಕೆನಾಲ್​ಗೆಂದು ಆಸ್ಪತ್ರೆಗೆ ಬಂದಿದ್ದ ಮಗ ಇನ್ನಿಲ್ಲ ಎನ್ನುವ ಸುದ್ದಿ ಕುಟುಂಬಸ್ಥರಿಗೆ ಆಘಾತವನ್ನುಂಟು ಮಾಡಿದೆ. ವೈದ್ಯಕೀಯ ನಿರ್ಲಕ್ಷ್ಯ ಆರೋಪದ ಮೇಲೆ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು  ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Shwetha M