ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್‌ ನ್ಯೂಸ್‌! – ವೈಕುಂಠ ದ್ವಾರ ದರ್ಶನ ಟಿಕೆಟ್ ಬಿಡುಗಡೆ!

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್‌ ನ್ಯೂಸ್‌! – ವೈಕುಂಠ ದ್ವಾರ ದರ್ಶನ ಟಿಕೆಟ್ ಬಿಡುಗಡೆ!

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಟಿಟಿಡಿ ಸಿಹಿಸುದ್ದಿಯೊಂದನ್ನು ನೀಡಿದೆ. ಶ್ರೀವಾರಿ ದೇವಸ್ಥಾನದಲ್ಲಿ ವೈಕುಂಠ ದ್ವಾರ ದರ್ಶನಕ್ಕಾಗಿ ಭಕ್ತರಿಗೆ ದರ್ಶನದ ಟಿಕೆಟ್‌ಗಳ ಕೋಟಾವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಟಿಟಿಡಿ ಮಾಹಿತಿ ನೀಡಿದೆ.

ಡಿ.23ರಿಂದ ಜ.1ರವರೆಗೆ ಶ್ರೀವಾರಿ ದೇವಸ್ಥಾನದಲ್ಲಿ ವೈಕುಂಠ ದ್ವಾರ ದರ್ಶನ ಮಹೋತ್ಸವ ನಡೆಯಲಿದೆ. ಈ ದರ್ಶನಕ್ಕೆ ಆನ್‌ಲೈನ್‌ ಮೂಲಕ ಟಿಕೆಟ್‌ ಬುಕ್ ಮಾಡಲು ನ.10ರಿಂದ ಅವಕಾಶ ಕಲ್ಪಿಸಲಾಗಿದೆ ಎಂದು ಟಿಟಿಡಿ ಮಾಹಿತಿ ನೀಡಿದೆ.

ಈ ಬಗ್ಗೆ ಟಿಟಿಡಿ (ತಿರುಮಲ ತಿರುಪತಿ ದೇಗುಲ) ಕಾರ್ಯನಿರ್ವಹಣಾಧಿಕಾರಿ ಧರ್ಮರೆಡ್ಡಿ ಮಾಹಿತಿ ನೀಡಿದ್ದು, ‘ಈ ಬಾರಿ 10 ದಿನಗಳ ಅವಧಿಯಲ್ಲಿ 4.25ಲಕ್ಷ ಜನರಿಗೆ ವೈಕುಂಠ ದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆ ಸಮಯದಲ್ಲಿ 300 ರು. ವಿಶೇಷ ದರ್ಶನ ಹಾಗೂ ಶ್ರೀವಾಣಿ ದರ್ಶನ ಹೊರತುಪಡಿಸಿ ಉಳಿದ ಎಲ್ಲ ರೀತಿಯ ದರ್ಶನಗಳನ್ನು ರದ್ದುಪಡಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಆರ್ಥಿಕ ಇಲಾಖೆ ಎಚ್ಚರಿಕೆ – ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಯ ಹಣ ಜಮೆಗೆ ಡೆಡ್‍ಲೈನ್!

ಈ 10 ದಿನಗಳಲ್ಲಿ ವಿಐಪಿ  ದರ್ಶನಗಳು, ಆರ್ಜಿತ ಸೇವಾ ದರ್ಶನಗಳು ಮತ್ತು ಶಿಶುಗಳನ್ನು ಹೊಂದಿರುವ ಪೋಷಕರು, ದೈಹಿಕ ವಿಕಲಚೇತನರು, ಹಿರಿಯ ನಾಗರಿಕರು ಮತ್ತು ಅನಿವಾಸಿ ಭಾರತೀಯರು ಸೇರಿದಂತೆ ಇತರ ವಿಶೇಷ ದರ್ಶನಗಳನ್ನು ರದ್ದುಗೊಳಿಸಲು ಟಿಟಿಡಿ ನಿರ್ಧರಿಸಿದೆ ಎಂದು ಹೇಳಿದ್ದಾರೆ.

SSD ಟೋಕನ್‌ಗಳ ಜೊತೆಗೆ, TTD ನವೆಂಬರ್ 10 ರಿಂದ ಆನ್‌ಲೈನ್‌ನಲ್ಲಿ ಒಂದು ಟಿಕೆಟ್‌ಗೆ 300 ರೂ. ನಂತೆ   2.25 ಲಕ್ಷ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಿದೆ. ಹೆಚ್ಚುವರಿಯಾಗಿ, 20,000 ಶ್ರೀವಾಣಿ-ಟ್ರಸ್ಟ್ ಲಿಂಕ್ಡ್ ದರ್ಶನ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ. ಹಿಂದಿನ ವರ್ಷಗಳಂತೆಯೇ ವೈಕುಂಠ ದ್ವಾರದ ಅವಧಿಯಲ್ಲಿ ಶ್ರೀವಾಣಿ ಟಿಕೆಟ್ ಹೊಂದಿರುವವರಿಗೆ 300 ರೂ.ಗಳ ದರ್ಶನವನ್ನು ನೀಡಲಾಗುವುದು ಎಂದು ಧರ್ಮರೆಡ್ಡಿ ಮಾಹಿತಿ ಮಾಡಿದರು.

2023 ರ ಅಕ್ಟೋಬರ್ ತಿಂಗಳಿಗೆ ತಿರುಮಲ ದೇವಸ್ಥಾನವು 108.65 ಕೋಟಿ ರೂಪಾಯಿಗಳ ಹುಂಡಿ ಸಂಗ್ರಹವನ್ನು ಕಂಡಿತ್ತು ಎಂದು ಧರ್ಮಾ ರೆಡ್ಡಿ ಮಾಹಿತಿ ನೀಡಿದ್ದಾರೆ. ಈ ಅವಧಿಯಲ್ಲಿ, ಸುಮಾರು 21.75 ಲಕ್ಷ ಭಕ್ತರು ತಿರುಮಲಬೆಟ್ಟದ ದೇವಸ್ಥಾನಕ್ಕೆ ಭೇಟಿ ನೀಡಿದರು. ಗಮನಾರ್ಹ ಸಂಗತಿಯೆಂದರೆ, ಸುಮಾರು 8.30 ಲಕ್ಷ ಭಕ್ತರು ಕಲ್ಯಾಣಕಟ್ಟೆಯಲ್ಲಿ ತಮ್ಮ ಮುಡಿಯನ್ನು ಅರ್ಪಿಸುವ ಮೂಲಕ  ಹರಕೆಯನ್ನು ತೀರಿಸಿದ್ದಾರೆ.

Shwetha M