ನಿರಂತರ 8 ಪಂದ್ಯಗಳನ್ನು ಗೆದ್ದು ಬೀಗಿದ ಭಾರತ – ವರ್ಲ್ಡ್‌ಕಪ್ ಕ್ಲೀನ್‌ಸ್ವೀಪ್ ಮಾಡುತ್ತಾ ಟೀಮ್ ಇಂಡಿಯಾ?

ನಿರಂತರ 8 ಪಂದ್ಯಗಳನ್ನು ಗೆದ್ದು ಬೀಗಿದ ಭಾರತ –   ವರ್ಲ್ಡ್‌ಕಪ್ ಕ್ಲೀನ್‌ಸ್ವೀಪ್ ಮಾಡುತ್ತಾ ಟೀಮ್ ಇಂಡಿಯಾ?

ಟೀಂ ಇಂಡಿಯಾದ ಗೆಲುವಿನ ನಾಗಾಲೋಟ ಮುಂದುವರೆದಿದೆ. ರಾಬಿನ್ ರೌಂಡ್ಸ್ ಸ್ಟೇಜ್​​ನಲ್ಲಿ ಆಡಿರುವ ಎಲ್ಲಾ 8 ಮ್ಯಾಚ್​ಗಳನ್ನ ಕೂಡ ಭಾರತ ಗೆದ್ದುಕೊಂಡಿದೆ. ಇನ್ನು ಬಾಕಿ ಉಳಿದಿರುವುದು ನೆದರ್​ಲ್ಯಾಂಡ್​​ ವಿರುದ್ಧದ ಮ್ಯಾಚ್. ಅದ​ನ್ನು ಕೂಡ ಗೆಲ್ಲುವುದು ಗ್ಯಾರಂಟಿ. ಕೇವಲ ಪಂದ್ಯಗಳನ್ನ ಗೆಲ್ಲೋದು ಮಾತ್ರ ಮುಖ್ಯವಲ್ಲ. ಯಾವ ರೀತಿ ಗೆಲ್ಲುತ್ತಿದ್ದೇವೆ ಅನ್ನೋದು ಕೂಡಾ ಇಲ್ಲಿ ಮುಖ್ಯವಾಗುತ್ತದೆ.

ಇದನ್ನೂ ಓದಿ: ಭಾರತದ ಹುಲಿಗಳ ಅಬ್ಬರಕ್ಕೆ ಸೋತು ಸುಣ್ಣವಾದ ಹರಿಣಗಳು – ಟೀಮ್ ಇಂಡಿಯಾ ಪವರ್‌ಗೆ ಸೌತ್ಆಫ್ರಿಕಾ ಸುಸ್ತು

ಈ ಬಾರಿ ವರ್ಲ್ಡ್​​ಕಪ್​​ ಗೆಲ್ಲೋದು ಭಾರತವೇ.. ವರ್ಲ್ಡ್​​ಕಪ್​​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ನಿರಂತರವಾಗಿ 8 ಮ್ಯಾಚ್​ಗಳನ್ನ ಗೆದ್ದಿದೆ. ಈಗಿನ ಟೀಂ ಇಂಡಿಯಾ ಹೈವೇನಲ್ಲಿ ಹೈಸ್ಪೀಡ್​​ ಆಗಿ ಹೋಗುತ್ತಿರುವ ಟ್ರಕ್​​ನಂತೆ ಕಾಣ್ತಿದೆ. ಯಾರಿಂದಲೂ ತಡೆಯೋಕೆ ಸಾಧ್ಯವೇ ಇಲ್ಲ. ಸೌತ್​ ಆಫ್ರಿಕಾ ಕೋಚ್ ರಾಬ್ ವಾಲ್ಟರ್ಸ್​ ಟೀಂ ಇಂಡಿಯಾದ ಬಗ್ಗೆ ಕೆಲ ವಿಚಾರ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮ್ಯಾಚ್​ ಬಳಿಕ ಪ್ರೆಸ್​​ಮೀಟ್​ನಲ್ಲಿ ಟೀಂ ಇಂಡಿಯಾದ ಬಗ್ಗೆ ಕೇಳಿದಾಗ, What should I say? All I can say is that this is a hell of a team. Hell of a team. ಇದು ಸೌತ್​​ ಆಫ್ರಿಕಾ ಕೋಚ್ ರಾಬ್ ವಾಲ್ಟರ್ಸ್ ಆಡಿರೋ ಮಾತು. ಇಷ್ಟೇ ಅಲ್ಲ, ಕೊಲ್ಕತ್ತಾ ಪಿಚ್ ಸ್ಪಿನ್ನರ್ಸ್​ಗಳಿಗೆ ಹೆಚ್ಚು ಫೇವರ್​ ಆಗಿದ್ದಿದ್ದು ನಿಮ್ಮ ಟೀಂ ಸರ್​ಪ್ರೈಸ್ ಆಗಿಸ್ತಾ ಅಂತಾ ಕೇಳಿದಾಗ, ಸ್ಕೋರ್​ ಬೋರ್ಡೇ ಎಲ್ಲಾ ಹೇಳುತ್ತೆ. ಮಾತನಾಡುವಂಥದ್ದು ಏನೂ ಇಲ್ಲ ಅಂದಿದ್ದಾರೆ. ಅಂದರೆ, ಟೀಂ ಇಂಡಿಯಾ ಇದೇ ಪಿಚ್​ನಲ್ಲಿ 300+ ಸ್ಕೋರ್ ಮಾಡಿದೆ ಅನ್ನೋದು. ದಕ್ಷಿಣ ಆಫ್ರಿಕಾ ಕೋಚ್ ಪಾಕಿಸ್ತಾನಿಗಳಂತೆ, ಭಾರತದ ಬೌಲರ್ಸ್​​ಗಳಿಗೆ ಸ್ಪೆಷಲ್ ಬಾಲ್ ನೀಡಲಾಗ್ತಿದೆ. ಐಸಿಸಿ, ಬಿಸಿಸಿಐ ಟೀಂ ಇಂಡಿಯಾ ನೀಡುವ ಬೌಲ್​ನೊಳಗೆ ಏನೋ ಇದೆ ಅಂತೆಲ್ಲಾ ನಾನ್ಸೆನ್ಸ್​ ಸ್ಟೇಟ್​ಮೆಂಟ್​​ನ್ನ ಕೊಟ್ಟಿಲ್ಲ. ಭಾರತೀಯ ತಂಡ ಆ ಲೆವೆಲ್​​ನಲ್ಲಿ ಆಲ್ರೌಂಡ್ ಪರ್ಫಾಮೆನ್ಸ್​ ಕೊಡ್ತಿದೆ ಅನ್ನೋದನ್ನ ದಕ್ಷಿಣ ಆಫ್ರಿಕಾ ಕೋಚ್ ಕೂಡ ಒಪ್ಪಿಕೊಂಡಿದ್ದಾರೆ. ಇದುವೇ ರಿಯಾಲಿಟಿ.

ಟೀಂ ಇಂಡಿಯಾದ ಈಗಿನ ಗೆಲುವಿನ ನಗಾರಿ ನೋಡಿದರೆ ಸೆಮಿಫೈನಲ್ ಆಗಲಿ, ಫೈನಲ್​​ ಇರಲಿ ಯಾರಿಗೂ ಸೋಲಿಸಲು ಸಾಧ್ಯವೇ ಇಲ್ಲ. ಈ ವರ್ಲ್ಡ್​​ಕಪ್​ನಲ್ಲಂತೂ ಟೀಂ ವನ್​​ ವೇ ರೋಡ್​​ನಲ್ಲಿ ಹೋಗ್ತಾ ಇರುವಂತೆ ಕಾಣ್ತಿದೆ. ಹಿಂದೆಯೂ ಯಾರೂ ಕಾಣ್ತಿಲ್ಲ.. ಮುಂದೆ ಅಂತೂ ಇಲ್ವೇ ಇಲ್ಲ.. ಈ ವರ್ಲ್ಡ್​​ಕಪ್ ಟೂರ್ನಿ ಆರಂಭವಾಗುವಾಗ ಟೀಂ ಇಂಡಿಯಾ ಪ್ಲೇಯರ್ಸ್​ಗಳು ಈ ರೀತಿ ಆಡ್ತಾರೆ ಅಂತಾ ಯಾರು ಕೂಡ ಅಂದುಕೊಂಡಿರಲಿಲ್ಲ. ಈ ವರ್ಲ್ಡ್​​ಕಪ್​ ಅಷ್ಟೊಂದು ಸುಲಭ ಇಲ್ಲ. ತಂಡ ಕಂಪ್ಲೀಟ್ ಸೆಟ್ ಆಗಿದ್ಯಾ? ಇಲ್ವಾ? ಈ ರೀತಿ ಸಾಕಷ್ಟು ಅನುಮಾನಗಳಿದ್ವು.. ಪ್ರಶ್ನೆಗಳಿದ್ವು.. ಕೆಲ ಇಂಡಿವಿಜ್ಯುವಲ್ ಪ್ಲೇಯರ್ಸ್​ಗಳ ಬಗ್ಗೆ ಚರ್ಚೆಯಾಗುತ್ತಲೇ ಇತ್ತು. ಆದ್ರೀಗ ಇವೆಲ್ಲದಕ್ಕೂ ಟೀಂ ಇಂಡಿಯಾ ಆಟಗಾರರೇ ಪುಲ್‌ಸ್ಟಾಪ್ ಇಟ್ಟಿದ್ದಾರೆ.

ಜಗತ್ತಿನ ಎಲ್ಲಾ ಕ್ರಿಕೆಟ್​ ಎಕ್ಸ್​ಪರ್ಟ್​​ಗಳು.. ಮಾಜಿ ಕ್ರಿಕೆಟರ್ಸ್​ಗಳು.. ಈವನ್ ಪ್ರಧಾನಿ ಮೋದಿ ಕೂಡ ಪಂದ್ಯ ಗೆದ್ದಾಗ ಟ್ವೀಟ್​ ಮೂಲಕ ಈ ತಂಡವನ್ನ ಡಿಫೈನ್ ಮಾಡಿರೋದು ಒಂದೇ ವರ್ಡ್ ಮೂಲಕ.. ಅನ್​ಸ್ಟಾಪೆಬಲ್..

ಕೇವಲ ಭಾರತೀಯರಿಗಷ್ಟೇ ಅಲ್ಲ, ವರ್ಲ್ಡ್ಕಪ್​ ನೋಡ್ತಿರೋ ಎಲ್ಲರಿಗೂ ಅನ್ನಿಸ್ತಿರೋದು.. ಈ ಬಾರಿ ಟೀಂ ಇಂಡಿಯಾವನ್ನ ಕಟ್ಟಿ ಹಾಕೋದು ಸಾಧ್ಯವೇ ಇಲ್ಲ.. ವರ್ಲ್ಡ್​​ಕಪ್​ ಗೆಲ್ಲೋದು ಭಾರತವೇ ಅನ್ನೋ ಭಾವನೆ ಫಿಕ್ಸ್ ಆಗಿಬಿಟ್ಟಿದೆ. ಮ್ಯಾಚ್​ಗಳನ್ನ ಗೆಲ್ಲೋದಷ್ಟೇ ಅಲ್ಲ..ಎದುರಾಳಿ ಟೀಂಗಳನ್ನ ಅಕ್ಷರಶ: ಡೆಮಾಲಿಷ್ ಮಾಡ್ತಾ ಇದ್ದಾರೆ. ಎಲ್ಲಾ ಡಿಪಾರ್ಟ್​​​ಮೆಂಟ್​​ನಲ್ಲೂ ಹೈಕ್ಲಾಸ್ ಪರ್ಫಾಮೆನ್ಸ್.. ಇದು ಹೇಗಾಗಿದೆ ಅಂದ್ರೆ, ಇಂಡಿಯಾದ ಮ್ಯಾಚ್​ ಇದ್ದಾಗ, ಹೇ ನೋಡೋಕೇನಿದೆ ಗೆಲ್ತಾರೆ ಬಿಡು.. ಬರೀ ವನ್ ಸೈಡೆಡ್ ಗೇಮ್​.. ಮ್ಯಾಚ್​ ಇಂಟ್ರೆಸ್ಟಿಂಗೇ ಇರೋದಿಲ್ಲ.. ರೋಹಿತ್ ಶರ್ಮಾ ಸಿಕ್ಸರ್ ಹೊಡೀತಾರೆ.. ವಿರಾಟ್ ಕೊಹ್ಲಿ ಸೆಂಚೂರಿ ಹೊಡೀತಾರೆ..  ಶಮಿ..ಸಿರಾಜ್ ಕ್ಲೀನ್ ಬೌಲ್ಡ್ ಮಾಡ್ತಾರೆ.. ಬುಮ್ರಾ ಬೌನ್ಸರ್, ಯಾರ್ಕರ್​ ಹಾಕ್ತಾರೆ.. ಜಡೇಜಾ, ಕುಲ್​ದೀಪ್​ ಸೇರಿ ಆಲೌಟ್ ಮಾಡ್ತಾರೆ.. ಇಷ್ಟೇ ನಡೀತಾ ಇರೋದು. ಆದ್ರೆ ಟೀಂ ಇಂಡಿಯಾ ಆಡ್ತಿರುವ ಯಾವ ಮ್ಯಾಚ್​ ಕೂಡ ಥ್ರಿಲ್ಲಿಂಗ್ ಅನ್ನಿಸ್ತಾನೆ ಇಲ್ಲ. ಯಾಕಂದ್ರೆ ಎದುರಾಳಿ ಟೀಂಗಳಿಗೆ ಕಾಂಪಿಟೀಷನ್ನೇ ಕೊಡೋಕೆ ಆಗ್ತಿಲ್ಲ. ನಮ್ಮವರ ಬ್ಯಾಟಿಂಗ್.. ನಮ್ಮವರ ಬೌಲಿಂಗ್​ ನೋಡೋದ್ರಲ್ಲೇ ಮಜಾ ಸಿಗ್ತಾ ಇದೆ. ಎನಿವೇ.. ಡಾಮಿನೇಟ್ ಬೇಕಾದ್ರೂ ಮಾಡಲಿ.. ಏನು ಬೇಕಿದ್ರೂ ಮಾಡಲಿ.. ಈ ಬಾರಿ ಮತ್ತೊಮ್ಮೆ ಟೀಂ ಇಂಡಿಯಾ ವರ್ಲ್ಡ್​ಕಪ್ ಗೆದ್ದರೆ ಅಷ್ಟೇ ಸಾಕು.

Sulekha