ರಾಜ್ಯ ಸರ್ಕಾರಕ್ಕೆ ಆರ್ಥಿಕ ಇಲಾಖೆ ಎಚ್ಚರಿಕೆ – ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಯ ಹಣ ಜಮೆಗೆ ಡೆಡ್ಲೈನ್!
ಬೆಂಗಳೂರು: ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಯಾದ ಅನ್ನಭಾಗ್ಯ ಮತ್ತು ಗೃಹಲಕ್ಷ್ಮೀ ಯೋಜನೆಗಳು ಈಗಾಗಲೇ ಅನುಷ್ಠಾನಗೊಂಡಿದೆ. ಆದರೆ ಯೋಜನೆಯ ಲಾಭ ಫಲಾನುಭವಿಗಳಿಗೆ ಸಂಪೂರ್ಣವಾಗಿ ತಲುಪುತ್ತಿಲ್ಲ. ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ಜಮಾವಣೆಯಾಗುತ್ತಿಲ್ಲ. ಇದೀಗ ಈ ಎರಡು ಗ್ಯಾರಂಟಿಯ ಫಲಾನುಭವಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.
ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಫಲಾನುಭವಿಗಳಿಗೆ ಕೆಲವು ತಿಂಗಳಿನಿಂದ ಹಣ ಜಮಾವಣೆಯಾಗುತ್ತಿಲ್ಲ ಎಂಬ ದೂರುಗಳು ಕೇಳಿಬಂದಿದೆ. ರಾಜ್ಯದಲ್ಲಿ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಹಣ ವಿಳಂಬವಾಗುತ್ತಿದ್ದ ಬೆನ್ನಲ್ಲೇ ಫಲಾನುಭವಿಗಳಿಗೆ ಹಣ ತಲುಪಿಸೋಕೆ ನಿಗದಿತ ಡೆಡ್ಲೈನ್ ಅನ್ನು ಆರ್ಥಿಕ ಇಲಾಖೆ ನೀಡಿದೆ. ಆರ್ಥಿಕ ಇಲಾಖೆಯ ಡಿಡಿಓಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಈ ಮೂಲಕ ಹಣ ತಲುಪಲು ಪ್ರತಿ ತಿಂಗಳಲ್ಲೂ ದಿನಾಂಕ ಫಿಕ್ಸ್ ಮಾಡಲಾಗುತ್ತಿದೆ. ಗೃಹಲಕ್ಷ್ಮೀ, ಅನ್ನಭಾಗ್ಯದ ಹಣ ಖಾತೆಗೆ ಜಮೆ ಆಗಲು ಇನ್ಮುಂದೆ ಡೆಡ್ ಲೈನ್ ಇರಲಿದೆ.
ಇದನ್ನೂ ಓದಿ: ಮತ್ತೊಂದು ಅಪಖ್ಯಾತಿ ಪಡೆದ ರಾಷ್ಟ್ರ ರಾಜಧಾನಿ! – ವಿಶ್ವದಲ್ಲೇ ನಂ.1 ಮಲಿನ ನಗರ ದೆಹಲಿ!
ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪ್ರತಿ ತಿಂಗಳ 20ಕ್ಕೆ ಹಾಕಲು ಆರ್ಥಿಕ ಇಲಾಖೆ ಸುತ್ತೋಲೆ ನೀಡಿದೆ. ಅನ್ನಭಾಗ್ಯದ ದುಡ್ಡನ್ನು 10-15 ದಿನಾಂಕದೊಳಗೆ ಪ್ರಕ್ರಿಯೆಗೆ ಸೂಚನೆ ನೀಡಲಾಗಿದೆ. ಹಾಗೆಯೇ ಗೃಹಲಕ್ಷ್ಮೀ ಹಣ ತಿಂಗಳ 15- 20 ರೊಳಗೆ ಜಮೆಗೆ ಸೂಚನೆ ನೀಡಲಾಗಿದೆ ಎಂದು ವರದಿಯಾಗಿದೆ.