ಚಾಕೋಲೇಟ್ ತಿನ್ನೋ ಮುನ್ನ ಎಚ್ಚರ! – ಚಾಕೋಲೇಟ್ಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ಸೀಸ, ಕ್ಯಾಡ್ಮಿಯಂ ಪತ್ತೆ!
ಬಹುತೇಕರಿಗೆ ಚಾಕೋಲೇಟ್ ಅಂದರೆ ತುಂಬಾ ಇಷ್ಟ. ಅದರಲ್ಲೂ ಮಕ್ಕಳಂತೂ ಚಾಕೋಲೇಟ್ ಕಂಡರೆ ಬೇಕೇ ಬೇಕು ಅಂತಾ ಹಠ ಹಿಡಿತಾರೆ. ಆದ್ರೀಗ ಆತಂಕಕಾರಿ ವರದಿಯೊಂದು ಹೊರಬಿದ್ದಿದೆ. ಅದೇನೆಂದರೆ, ಚಾಕೋಲೇಟ್ ಉತ್ಪನ್ನಗಳಲ್ಲಿ ಮೂರನೇ ಒಂದು ಭಾಗದಷ್ಟು ಸೀಸ್ ಮತ್ತು ಕ್ಯಾಡ್ಮಿಯಂ ಅಂಶ ಇರುವುದು ಅಧ್ಯಯನ ವರದಿಯಲ್ಲಿ ಬಹಿರಂಗವಾಗಿದೆ.
ಲಾಭೋದ್ದೇಶವಿಲ್ಲದ ಗ್ರಾಹಕ ವಕಾಲತ್ತು ಸಂಸ್ಥೆಯಾದ ಕನ್ಸ್ಯೂಮರ್ ರಿಪೋರ್ಟ್ಸ್ ಮಾಡಿದ ಅಧ್ಯಯನದಿಂದ ಗೊತ್ತಾಗಿದೆ. ಡಾರ್ಕ್ ಚಾಕೋಲೇಟ್ಸ್ ಬಾರ್ಸ್, ಮಿಲ್ಕ್ ಚಾಕೋಲೇಟ್ ಬಾರ್ಸ್, ಕೋಕೋ ಪೌಡರ್, ಚಾಕೋಲೇಟ್ ಚಿಪ್ಸ್ ಮತ್ತು ಮಿಕ್ಸಸ್ ಫಾರ್ ಹಾಟ್ ಕೊಕಾ, ಬ್ರೌನೀಸ್ ಮತ್ತು ಚಾಕೋಲೇಟ್ ಕೇಕ್ ಒಳಗೊಂಡಂತೆ 7 ವರ್ಗಗಳಲ್ಲಿ ಸುಮಾರು 48 ಉತ್ಪನ್ನಗಳನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇದರಲ್ಲಿ 16 ಉತ್ಪನ್ನಗಳಲ್ಲಿ ಸೀಸ, ಕ್ಯಾಡ್ಮಿಯಂ ಅಥವಾ ಎರಡರ ಸಂಭಾವ್ಯ ಹಾನಿಕಾರಕ ಅಂಶಗಳು ಪತ್ತೆಯಾಗಿದೆ.
ಇದನ್ನೂ ಓದಿ: ಚಳಿ ಇದೆ ಅಂತಾ ಪದೇ ಪದೆ ಕಾಫಿ ಕುಡಿಯುವುದು ಡೇಂಜರ್?
ವಾಲ್ಮಾರ್ಟ್ ಕಂಪನಿಯ ಚಾಕೋಲೇಟ್ ಬಾರ್ ಮತ್ತು ಹಾಟ್ ಚಾಕೋಲೇಟ್ ಮಿಕ್ಸ್, ಹರ್ಷೆ ಮತ್ತು ದ್ರೋಸ್ತೆ ಕಂಪನಿಯ ಕೋಕಾ ಪೌಡರ್, ಟಾರ್ಗೆಟ್ ಕಂಪನಿ ಸೆಮಿ ಸ್ವೀಟ್ ಚಾಕೋಲೇಟ್ ಚಿಪ್ಸ್ ಮತ್ತು ಟ್ರೇಡರ್ ಜೋ, ನೆಸ್ಲೇ ಮತ್ತು ಸ್ಟಾರ್ಬಕ್ಸ್ ಕಂಪನಿಗಳ ಹಾಟ್ ಚಾಕೋಲೇಟ್ ಮಿಕ್ಸಸ್ಗಳಲ್ಲಿ ಭಾರೀ ಪ್ರಮಾಣ ಸೀಸ ಮತ್ತು ಕ್ಯಾಡ್ಮಿಯಂ ಒಳಗೊಂಡಿದೆ. ಮಿಲ್ಕ್ ಚಾಕೋಲೇಟ್ ಬಾರ್ಗಳಲ್ಲಿ ಕೆಲವೇ ಪ್ರಮಾಣ ಕೋಕಾ ಸಾಲಿಡ್ಗಳು ಪತ್ತೆಯಾಗಿದ್ದು, ಅತ್ಯಧಿಕ ಲೋಹದ ಅಂಶ ಪತ್ತೆಯಾದ ಒಂದೇ ಒಂದು ವರ್ಗ ಇದಾಗಿದೆ. ಅಂದಹಾಗೆ ಸೀಸ ಮತ್ತು ಕ್ಯಾಡ್ಮಿಯಂಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ನರಮಂಡಲದ ಸಮಸ್ಯೆಗಳು, ಪ್ರತಿರಕ್ಷಣಾ ವ್ಯವಸ್ಥೆಯ ನಿಗ್ರಹ ಮತ್ತು ಮೂತ್ರಪಿಂಡದಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಅಪಾಯಗಳು ವಿಶೇಷವಾಗಿ ಗರ್ಭಿಣಿಯರು ಮತ್ತು ಚಿಕ್ಕ ಮಕ್ಕಳಿಗೆ ಹೆಚ್ಚಿರಲಿದೆ ಅಂತಾ ಅಧ್ಯಯನದಿಂದ ಗೊತ್ತಾಗಿದೆ. ಹಾಗಾಗಿ ಇನ್ಮುಂದೆ ಚಾಕೊಲೇಟ್ ಖರಿಸೋ ಮುನ್ನ ಚಾಕೊಲೇಟ್ ಗೆ ಯಾವ ಕೆಮಿಕಲ್ ಹಾಕಿದಾರೆ ಅಂತಾ ಪರೀಕ್ಷಿಸಿಕೊಳ್ಳೋದು ಉತ್ತಮ.