ಶ್ರೀಲಂಕಾ ವಿರುದ್ಧದ ಮ್ಯಾಚ್‌ನಲ್ಲಿ ಮಿಂಚಿದ ಕನ್ನಡಿಗ – ಕೆ.ಎಲ್ ರಾಹುಲ್ ಕೀಪಿಂಗ್‌ಗೆ ಅಭಿಮಾನಿಗಳು ಫಿದಾ

ಶ್ರೀಲಂಕಾ ವಿರುದ್ಧದ ಮ್ಯಾಚ್‌ನಲ್ಲಿ ಮಿಂಚಿದ ಕನ್ನಡಿಗ – ಕೆ.ಎಲ್ ರಾಹುಲ್ ಕೀಪಿಂಗ್‌ಗೆ ಅಭಿಮಾನಿಗಳು ಫಿದಾ

ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದಲ್ಲಿ ಮಿಂಚುತ್ತಿರುವ ಮತ್ತೊಬ್ಬ ಆಟಗಾರ ಹೆಮ್ಮೆಯ ಕನ್ನಡಿಗ ಕೆ.ಎಲ್ ರಾಹುಲ್. ವಿಕೆಟ್ ಕೀಪರ್ ಆಗಿ ಕೆ.ಎಲ್ ರಾಹುಲ್ ಚೆನ್ನಾಗಿಯೇ ಆಡುತ್ತಿದ್ದಾರೆ. ಜೊತೆಗೆ ತನ್ನ ಕೀಪಿಂಗ್ ಬಗ್ಗೆ ಎದ್ದಿರುವ ವಿವಾದವನ್ನು ಆಟದ ಮೂಲಕವೇ ತಣ್ಣಗಾಗುವಂತೆ ಮಾಡಿದ್ದಾರೆ.

ಇದನ್ನೂ ಓದಿ:  18 ರನ್ ನೀಡಿ 5 ವಿಕೆಟ್ ಪಡೆದ ಮೊಹಮ್ಮದ್ ಶಮಿ – ಲಂಕಾ ವಿಕೆಟ್ ದಹನ ಮಾಡಲು ಶಮಿಗೆ ಸಿರಾಜ್ ಸಾಥ್

ಶ್ರೀಲಂಕಾ ವಿರುದ್ಧದ ಮ್ಯಾಚ್​ನಲ್ಲಿ ಗೋಲ್ಡ್ ಮೆಡಲ್ ನಿಜವಾಗಿಯೂ ಕೆ.ಎಲ್. ರಾಹುಲ್​ಗೆ ನೀಡಬಹುದಿತ್ತು ಎಂಬ ಮಾತು ಕೇಳಿಬರುತ್ತಿದೆ. ಯಾಕಂದರೆ ಕೀಪಿಂಗ್ ಮಾಡೋವಾಗ ವೈಡ್​ ಬಾಲ್​​ನ್ನ ರಾಹುಲ್ ಡೈವ್ ಹೊಡೆದು ತಡೆದಿದ್ದರು. ಇಲ್ಲದಿದ್ದರು ಬೌಂಡರಿಗೆ ಹೋಗುವುದು ಪಕ್ಕಾ ಆಗಿತ್ತು. ಇನ್ನು ಕೆಎಲ್ ರಾಹುಲ್ ಕೀಪಿಂಗ್ ಕೂಡ ತುಂಬಾ ಚೆನ್ನಾಗಿಯೇ ಮಾಡುತ್ತಿದ್ದಾರೆ. ವರ್ಲ್ಡ್​ಕಪ್​ಗೂ ಮುನ್ನ ಕೆಎಲ್​ ಕೀಪಿಂಗ್​ ಸಾಮರ್ಥ್ಯದ ಬಗ್ಗೆ ಒಂದಷ್ಟು ಪ್ರಶ್ನೆಗಳು ಎದ್ದಿದ್ದವು. ಆದರೆ, ಕೀಪರ್ ಆಗಿಯೂ ಕೆಎಲ್ ರಾಹುಲ್ ಬೆಸ್ಟ್ ಪರ್ಫಾಮೆನ್ಸ್ ನೀಡುತ್ತಿದ್ದಾರೆ. ಜೊತೆಗೆ ಲಂಕಾ ವಿರುದ್ಧ 12 ಓವರ್​​ನಲ್ಲಿ ಮೊಹಮ್ಮದ್ ಶಮಿ ಬೌಲಿಂಗ್​ನಲ್ಲಿ ಚಮೀರ್​ ಪುಲ್​ ಶಾಟ್ ಹೊಡೆಯೋಕೆ ಹೋದಾಗ ಬಾಲ್ ಗ್ಲೌಸ್​ಗೆ ಟಚ್ ಆಗಿ ಕೀಪರ್ ಕೆಎಲ್ ರಾಹುಲ್ ಕೈ ಸೇರಿತ್ತು. ಈ ವೇಳೆ ಶಮಿಗೆ ಕೂಡ ಅದು ಔಟಾಗಿರಬಹುದು ಅನ್ನೋ ಡೌಟ್ ಬಂದಿರಲಿಲ್ಲ. ಆದ್ರೆ, ಕೆಎಲ್ ರಾಹುಲ್​ ಕೂಡಲೇ ಡಿಆರ್​ಎಸ್ ತೆಗೆದುಕೊಳ್ಳುವಂತೆ ರೋಹಿತ್ ಶರ್ಮಾಗೆ ಸಿಗ್ನಲ್ ಮಾಡ್ತಾರೆ. ಇತ್ತ ರೋಹಿತ್ ಕೂಡ ಅದು ಔಟಾಗಿರಲ್ಲ ಅಂತಾನೆ ಅಂದಿಕೊಂಡಿದ್ದರು. ಅಂಪೈರ್​ ಕೂಡ ಔಟ್ ಕೊಟ್ಟಿರಲಿಲ್ಲ. ಆದ್ರೆ ಕೆಲ್ ರಾಹುಲ್ ಬಿಡಲೇ ಇಲ್ಲ. ಸ್ವಲ್ಪ ಅಗ್ರಸ್ಸಿವ್ ಆಗಿಯೇ ಡಿಆರ್​ಎಸ್ ತೆಗೆದುಕೊಳ್ಳುವಂತೆ ಕ್ಯಾಪ್ಟನ್​ಗೆ ಫೋರ್ಸ್ ಮಾಡುತ್ತಾರೆ. ಕೆಎಲ್​ ಕಾನ್ಫಿಡೆನ್ಸ್ ನೋಡಿ ಬಳಿ ರೋಹಿತ್ ಕೂಡ ಡಿಆರ್​ಎಸ್ ಮೊರೆ ಹೋಗುತ್ತಾರೆ.   ರಿಪ್ಲೇನಲ್ಲಿ ನೋಡಿದಾಗ ಬಾಲ್​ ಬ್ಯಾಟ್ಸ್​ಮನ್ ಗ್ಲೌಸ್​ಗೆ ಟಚ್​ ಆಗಿರೋದು ಸ್ಪಷ್ಟವಾಗಿತ್ತು. ಆಗ ಕೆಎಲ್ ರಾಹುಲ್​ ಕ್ಯಾಪ್ಟನ್ ರೋಹಿತ್​​ರತ್ತ ನೋಟ ಬೀರಿ ಮೆಸೇಜ್ ಪಾಸ್ ಮಾಡ್ತಾರೆ. ಅಂತೂ ಕೆಎಲ್ ರಾಹುಲ್​ ಕೀಪಿಂಗೂನಲ್ಲೂ ಗ್ರೇಟ್ ಜಾಬ್ ಮಾಡ್ತಿದ್ದಾರೆ. ಬೌಲರ್ಸ್​ಗಳಿಗೆ ಕೆಲ ಟಿಪ್ಸ್​ಗಳನ್ನ ಕೂಡ ಕೊಡ್ತಿರ್ತಾರೆ. ಈ ಹಿಂದೆ ಮಹೆಂದ್ರ ಸಿಂಗ್ ಧೋನಿ ಕೀಪಿಂಗ್​ ಮಾಡುವಾಗ ಯಾವ ರೀತಿ ಬೌಲರ್ಸ್​ಗೆ ಸಜೆಷನ್​​ಗಳನ್ನ ನೀಡ್ತಿದ್ರೋ ಅದೇ ರೋಲ್​ನ್ನ ಈಗ ಕೆಎಲ್ ರಾಹುಲ್ ನಿಭಾಯಿಸ್ತಾ ಇದ್ದಾರೆ. ಎಕ್ಸ್​ಪೀರಿಯನ್ಸ್ ಕ್ರಿಕೆಟರ್ ಬೇರೆ. ಕ್ಯಾಪ್ಟನ್ಸಿ ಅನುಭವ ಕೂಡ ಇರೋದ್ರಿಂದ ಇವೆಲ್ಲವೂ ಕೀಪಿಂಗ್ ವೇಳೆ ಕೆಎಲ್ ರಾಹುಲ್​ಗೆ ಹೆಲ್ಪ್ ಆಗ್ತಿದೆ.

 

Sulekha