ಟೀಮ್ ಇಂಡಿಯಾ ಫೀಲ್ಡಿಂಗ್‌ನಲ್ಲೂ ಸಖತ್ ಪವರ್ – ಮ್ಯಾಚ್‌ನ ಬೆಸ್ಟ್ ಫೀಲ್ಡರ್‌ಗೆ ಗೋಲ್ಡ್ ಮೆಡಲ್
ಟೀಂ ಇಂಡಿಯಾದ ಜೋಶ್ ನಿಜಕ್ಕೂ ನೆಕ್ಸ್ಟ್ ಲೆವೆಲ್ನಲ್ಲಿದೆ. ಈ ಟೀಮ್ ಆಡ್ತಿರೋದನ್ನ ನೋಡಿದ್ರೆ ಈ ಬಾರಿ ವರ್ಲ್ಡ್ಕಪ್ ಮಿಸ್ ಆಗೋ ಚಾನ್ಸೇ ಇಲ್ಲ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲದ್ರಲ್ಲೂ ಹೈಕ್ಲಾಸ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಭಾರತೀಯ ಕ್ರಿಕೆಟ್ನ ಈ ಹಿಂದಿನ ಎಲ್ಲಾ ಟೀಂಗಳಿಗಿಂತಲೂ ಈ ತಂಡ ತುಂಬಾನೆ ಡಿಫರೆಂಟ್ ಆಗಿದೆ. ಈ ವರ್ಲ್ಡ್ಕಪ್ಗಾಗಿಯೇ ಟೀಂ ಇಂಡಿಯಾದಲ್ಲಿ ಅಳವಡಿಸಿರುವ ಒಂದು ಸ್ಪೆಷಲ್ ಕಲ್ಚರ್ ಬಗ್ಗೆ ವಿವರ ಇಲ್ಲಿದೆ.
ಇದನ್ನೂ ಓದಿ: 18 ರನ್ ನೀಡಿ 5 ವಿಕೆಟ್ ಪಡೆದ ಮೊಹಮ್ಮದ್ ಶಮಿ – ಲಂಕಾ ವಿಕೆಟ್ ದಹನ ಮಾಡಲು ಶಮಿಗೆ ಸಿರಾಜ್ ಸಾಥ್
ವರ್ಲ್ಡ್ಕಪ್ ಟೂರ್ನಿಯುದ್ದಕ್ಕೂ ಟೀಂ ಇಂಡಿಯಾದ ಫೀಲ್ಡಿಂಗ್ ಹೇಗಿದೆ ಅನ್ನೋದು ಎಲ್ಲರಿಗೂ ಗೊತ್ತು. ಭಾರತದ ಗೆಲುವಿನಲ್ಲಿ ಬ್ಯಾಟಿಂಗ್, ಬೌಲಿಂಗ್ ಮಾತ್ರವಲ್ಲ ಫೀಲ್ಡಿಂಗ್ ಕೂಡ ತುಂಬಾನೆ ಎಫೆಕ್ಟಿವ್ ಆಗಿದೆ. ಫೀಲ್ಡಿಂಗ್ ಡಿಪಾರ್ಟ್ಮೆಂಟ್ಗೆ ಬೂಸ್ಟ್ ಸಿಗಲಿ ಅನ್ನೋ ಕಾರಣಕ್ಕೆ ಕೋಚಿಂಗ್ ಸ್ಟಾಫ್ ಹೊಸ ಐಡಿಯಾ ಮಾಡಿತ್ತು. ಪ್ರತಿ ಮ್ಯಾಚ್ನಲ್ಲೂ ಬೆಸ್ಟ್ ಫೀಲ್ಡಿಂಗ್ ಮಾಡಿದವರಿಗೆ ಗೋಲ್ಡ್ ಮೆಡಲ್ ನೀಡಲಾಗುತ್ತೆ. ಅತ್ಯುತ್ತಮವಾಗಿ ಕ್ಯಾಚ್ ಹಿಡಿದರೆ, ಸ್ಕೋರ್ ತಡೆದರೆ ಆ ಫೀಲ್ಡರ್‌ಗೆ ಗೋಲ್ಡ್ ಮೆಡಲ್ ನೀಡಲಾಗುತ್ತಿದೆ. ಇದರ ಸಂಪೂರ್ಣ ಹೊಣೆ ಹೊತ್ತುಕೊಂಡಿರೋದು ಟೀಂ ಇಂಡಿಯಾದ ಫೀಲ್ಡಿಂಗ್ ಕೋಚ್ ಟಿ.ದಿಲೀಪ್. ಭಾರತ ಫೀಲ್ಡಿಂಗ್ ಮಾಡೋವಾಗ ಗ್ರೌಂಡ್ನ ಸುತ್ತಲೂ ರೌಂಡ್ಸ್ ಹೊಡೆಯೋ ದಿಲೀಪ್, ಬೆಸ್ಟ್ ಫೀಲ್ಡಿಂಗ್ ಮಾಡಿದವರು ಯಾರು ಅನ್ನೋದನ್ನ ನೋಟ್ ಮಾಡಿಕೊಳ್ತಾರೆ. ಬಳಿಕ ಮ್ಯಾಚ್ ಮುಗಿದ್ಮೇಲೆ ಡ್ರೆಸ್ಸಿಂಗ್ ರೂಮ್ನಲ್ಲಿ ಅನೌನ್ಸ್ ಮಾಡಲಾಗುತ್ತೆ.
ಈ ಅನೌನ್ಸ್ಮೆಂಟ್ ಕೂಡ ತುಂಬಾನೆ ಇಂಟ್ರೆಸ್ಟಿಂಗ್ ಆಗಿದೆ. ಮ್ಯಾಚ್‌ನ ಬೆಸ್ಟ್ ಫೀಲ್ಡರ್ ಯಾರು ಅನ್ನೋದನ್ನ ಹಾಗೆ ಸುಮ್ನೆ ಅನೌನ್ಸ್ ಮಾಡೋದಿಲ್ಲ. ಕೋಚ್ ದಿಲೀಪ್ ಇಲ್ಲೂ ಒಂದಷ್ಟು ಕ್ರಿಯೇಟಿವಿಟಿ ತೋರಿಸುತ್ತಾರೆ. ಆರಂಭದಲ್ಲಿ ರಾಹುಲ್ ದ್ರಾವಿಡ್ ಅನೌನ್ಸ್ ಮಡಿದ್ರು. ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿರುವ ಟಿವಿ ಸ್ಕ್ರೀನ್ನಲ್ಲಿ ಬೆಸ್ಟ್ ಫೀಲ್ಡರ್ ಹೆಸರು ಡಿಸ್ಪ್ಲೇ ಮಾಡಲಾಗುತ್ತದೆ. ಅದಾದ ನಂತರ ಸ್ಟೇಡಿಯಂನಲ್ಲಿ ದೊಡ್ಡ ಪರದೆ ಮೇಲೆ ಬೆಸ್ಟ್ ಫೀಲ್ಡಿಂಗ್ನ ವಿಡಿಯೋ ಪ್ಲೇ ಮಾಡಿ ಆಗ ರವೀಂದ್ರ ಜಡೇಜಾಗೆ ಮೆಡಲ್ ನೀಡಲಾಗಿತ್ತು. ಇದಾದ ಬಳಿಕ ಧರ್ಮಶಾಲಾದಲ್ಲಿ ಶ್ರೇಯಸ್ ಅಯ್ಯರ್ ಹೆಸರನ್ನ ಸ್ಪೈಡರ್ ಕ್ಯಾಮರಾದ ಮೂಲಕ ಘೋಷಣೆ ಮಾಡಲಾಯ್ತು. ಕ್ಯಾಮರಾಗೆ ಶ್ರೇಯಸ್ ಅಯ್ಯರ್ ಫೋಟೋ ಪ್ಲೇಟ್ನ್ನ ಫಿಕ್ಸ್ ಮಾಡಲಾಗಿತ್ತು. ಮುಂಬೈನಲ್ಲಿ ಶ್ರೀಲಂಕಾ ವಿರುದ್ಧದ ಮ್ಯಾಚ್ ಬಳಿಕ ಬೆಸ್ಟ್ ಫೀಲ್ಡರ್ ಅನೌನ್ಸ್ಮೆಂಟ್ ಇನ್ನೂ ಇಂಟ್ರೆಸ್ಟಿಂಗ್ ಆಗಿತ್ತು. ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮೂಲಕ ಬೆಸ್ಟ್ ಫೀಲ್ಡರ್ ಹೆಸರನ್ನ ಅನೌನ್ಸ್ ಮಾಡಲಾಯ್ತು. ಶ್ರೇಯಸ್ ಅಯ್ಯರ್ಗೆ 2ನೇ ಬಾರಿಗೆ ಗೋಲ್ಡ್ ಮೆಡಲ್ ಸಿಕ್ಕಿದೆ. ಆದ್ರೆ ಶ್ರೇಯಸ್ ಹೆಸರು ಅನೌನ್ಸ್ ಮಾಡೋ ಮುನ್ನ ಟೀಂನ್ನ ಉದ್ದೇಶಿಸಿ ಸಚಿನ್ ಮಾತನಾಡ್ತಾರೆ. 2003ರ ವರ್ಲ್ಡ್ಕಪ್ ವೇಳೆ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಒಂದು ಚಾರ್ಟ್ ಸಿದ್ಧಪಡಿಸಿಡ್ತಿದ್ರಂತೆ. I CAN.. WE CAN ಅನ್ನೋದು. ಗ್ರೌಂಡ್ಗೆ ಎಂಟ್ರಿಯಾಗೋ ಮುನ್ನ ಪ್ರತಿಯೊಬ್ಬ ಪ್ಲೇಯರ್ ಕೂಡ ಆ ಚಾರ್ಟ್ ಮುಂದೆ ಸೈನ್ ಹಾಕಬೇಕಿತ್ತು. ಅಂದ್ರೆ ನಾನು ದೇಶಕ್ಕಾಗಿ, ಟೀಂಗಾಗಿ 100 ಪರ್ಸೆಂಟ್ ಎಫೆರ್ಟ್ ಹಾಕ್ತೇನೆ. ನನ್ನಿಂದಾಷ್ಟು ಕೊಡುಗೆ ನೀಡ್ತೇನೆ ಅನ್ನೋ ಕಮಿಟ್ಮೆಂಟ್ ಅದು. ಪ್ರತಿಯೊಬ್ಬರು ಈ ರೀತಿ ಜವಾಬ್ದಾರಿ ತಗೊಂಡಾಗ, ಕಲೆಕ್ಟಿವ್ ಪರ್ಫಾಮೆನ್ಸ್ ಇದ್ದಾಗ ಮಾತ್ರ ಟೀಂ ಗೆಲ್ಲೋಕೆ ಸಾಧ್ಯ ಅನ್ನೋದು ಇದ್ರ ಪ್ರಮುಖ ಉದ್ದೇಶ.
ಇನ್ನು ಬೆಸ್ಟ್ ಫೀಲ್ಡರ್‌ಗೆ ಗೋಲ್ಡ್ ಮೆಡಲ್ ನೀಡುವ ಈ ಐಡಿಯಾ ಹೊಳೆದಿದ್ದು, ಬಿಸಿಸಿಐನ ಅಫೀಶಿಯಲ್ ಒಬ್ಬರಿಗೆ. ಆ ವ್ಯಕ್ತಿ ಯಾರು ಅನ್ನೋದು ಇನ್ನೂ ಕೂಡ ರಿವೀಲ್ ಆಗಿಲ್ಲ. ಆದ್ರೆ ವರ್ಲ್ಡ್ಕಪ್ಗೂ ಮುನ್ನ ಆಸ್ಟ್ರೇಲಿಯಾ ವಿರುದ್ಧದ ಸೀರಿಸ್ನಲ್ಲಿ ಟೀಂ ಇಂಡಿಯಾದ ಫೀಲ್ಡಿಂಗ್ ಅಷ್ಟೊಂದು ಕ್ವಾಲಿಟಿ ಇರಲಿಲ್ಲ. ಒಂದಷ್ಟು ಕ್ಯಾಚ್ಗಳು ಡ್ರಾಪ್ ಆಗಿತ್ತು, ಮಿಸ್ ಫೀಲ್ಡಿಂಗ್ ಆಗಿತ್ತು. ಈ ವೇಳೆ ಬಿಸಿಸಿಐ ಅಫೀಶಿಯಲ್ ವರ್ಲ್ಡ್ಕಪ್ ಟೂರ್ನಿಯಲ್ಲಿ ಪ್ರತಿ ಮ್ಯಾಚ್ನಲ್ಲಿ ಬೆಸ್ಟ್ ಫೀಲ್ಡರ್‌ಗೆ ಮೆಡಲ್ ನೀಡುವ ಬಗ್ಗೆ ಸಲಹೆ ಕೊಟ್ಟಿದ್ರಂತೆ. ಹೀಗಾಗಿ ಫೀಲ್ಡಿಂಗ್ ಮಾಡುವಾಗ ಪ್ಲೇಯರ್ಸ್ಗಳ ನಡುವೆಯೇ ಕಾಂಪಿಟೀಶನ್ ಇರುತ್ತೆ. ಒಂದು ಬಾರಿಯಾದ್ರೂ ಮೆಡಲ್ ಗೆಲ್ಲಲೇಬೇಕು ಅನ್ನೋ ಹಠ ಎಲ್ಲಾ ಆಟಗಾರರಿಗೂ ಬರುತ್ತೆ. ತಮ್ಮ ಫೀಲ್ಡಿಂಗ್ನ್ನ ಕೂಡ ಇಂಪ್ರೂವ್ ಮಾಡಿಕೊಳ್ತಾರೆ. ಹೀಗಾಗಿ ಕೊನೆಗೆ ಟೀಂ ಮ್ಯಾನೇಜ್ಮೆಂಟ್ ಬಿಸಿಸಿಐ ಲೋಗೊ ಇರುವ ಗೋಲ್ಡ್ ಮೆಡಲ್ ನೀಡೋಕೆ ನಿರ್ಧರಿಸಿತ್ತು. ಈಗ ಡೈವ್ ಮಾಡಿ ಕ್ಯಾಚ್ ಹಿಡಿದಾಗ, ಅದ್ಭೂತವಾಗಿ ಬಾಲ್ ತಡೆದಾಗ ಆಟಗಾರರೇ ಮೆಡಲ್ ನಿಡುವಂತೆ ಸಿಗ್ನಲ್ ಮಾಡ್ತಾರೆ. ಅದ್ರಲ್ಲೂ ರವೀಂದ್ರ ಜಡೇಜಾ ಅಂತಾ ಪ್ರತಿ ಬಾರಿ ಡೈವ್ ಮಾಡಿ ಕ್ಯಾಚ್ ಹಿಡಿದಾಗಲೂ ಮೆಡಲ್ ನೀಡುವಂತೆ ಸಿಗ್ನಲ್ ಮಾಡ್ತಾರೆ. ವರ್ಲ್ಡ್ಕಪ್ನಲ್ಲಿ ಟೀಂ ಇಂಡಿಯಾ ಫೀಲ್ಡಿಂಗ್ ಇಂಪ್ರೂ ಆಗೋಕೆ ಈ ಮೆಡಲ್ನದ್ದೂ ರೋಲ್ ಇರೋದ್ರಲ್ಲಿ ಯಾವುದೇ ಅನುಮಾನ ಇಲ್ಲ.
ಹಾಗಿದ್ರೆ ಇದುವರೆಗೆ ಯಾರೆಲ್ಲಾ ಬೆಸ್ಟ್ ಫೀಲ್ಡರ್ ಮೆಡಲ್ ಗೆದ್ದಿದ್ದಾರೆ ಅನ್ನೋದನ್ನ ಕೂಡ ನೋಡೋಣ.
ಬೆಸ್ಟ್ ಫೀಲ್ಡರ್ ವಿನ್ನರ್ಸ್!
ವಿರಾಟ್ ಕೊಹ್ಲಿ – 1 ಮೆಡಲ್
ಶಾರ್ದುಲ್ ಠಾಕೂರ್ – 1 ಮೆಡಲ್
ರವೀಂದ್ರ ಜಡೇಜಾ – 1 ಮೆಡಲ್
ಕೆ.ಎಲ್.ರಾಹುಲ್ – 2 ಮೆಡಲ್
ಶ್ರೇಯಸ್ ಅಯ್ಯರ್ – 2 ಮೆಡಲ್