ಮಲಗುವ ಭಂಗಿಗಳಲ್ಲೇ ತಮ್ಮ ಭಾವನೆಗಳನ್ನು ಸೂಚಿಸುತ್ತವೆ ಶ್ವಾನಗಳು – ಪೆಟ್ ಪ್ರಿಯರಿಗೆ ಇಲ್ಲಿದೆ ಒಂದೊಳ್ಳೆ ಮಾಹಿತಿ!
ಮನೆಗಳಲ್ಲಿ ಶ್ವಾನಗಳಿದ್ರೆ ಅವುಗಳೂ ಮನೆ ಸದಸ್ಯರೇ ಆಗಿ ಬಿಡುತ್ತವೆ. ಶ್ವಾನಗಳು ಓಡಾಡುತ್ತಿದ್ದರೆ ಅದೇನೋ ಉಲ್ಲಾಸ, ಉತ್ಸಾಹ. ಅವುಗಳ ಓಡಾಟ, ಆಟ ಮನಸ್ಸನ್ನು ಮುದಗೊಳಿಸುತ್ತದೆ. ಹೀಗಾಗಿಯೇ ತುಂಬಾ ಜನ ತಮ್ಮ ಮನೆಯಲ್ಲೇ ಒಂದೋ ಎರಡೋ ಶ್ವಾನವನ್ನು ತಂದು ಸಾಕುತ್ತಾರೆ. ಮನುಷ್ಯನ ಭಾವನೆಗಳನ್ನು ಅರ್ಥೈಸುವ ನಾಯಿಗಳು ಪ್ರಾಮಾಣಿಕತೆಗೆ ಇನ್ನೊಂದು ಹೆಸರು ಎಂದೇ ಹೇಳಬಹುದು. ಶ್ವಾನಗಳು ಮಲಗುವ ರೀತಿ, ಅವುಗಳ ವರ್ತನೆಯಿಂದಲೇ ಅವುಗಳ ಗುಣಲಕ್ಷಣಗಳನ್ನ ತಿಳಿದುಕೊಳ್ಳಬಹುದು.
ಇದನ್ನೂ ಓದಿ : ರಾಜನಂತಿದ್ದ ನಾಯಿ ಈಗ ಅನಾಥ! – ಮುದ್ದಿನ ಶ್ವಾನವನ್ನು ವೈಟ್ಹೌಸ್ನಿಂದ ಬೈಡೆನ್ ಹೊರಹಾಕಿದ್ದೇಕೆ?
ಹೆಚ್ಚಾಗಿ ನಾಯಿಗಳು ಮುದುರಿಕೊಂಡು ಸುರುಳಿಯಾಗಿ ಮಲಗುತ್ತವೆ. ಇದಕ್ಕೆ ಕಾರಣ, ಶ್ವಾನಗಳು ಹೊರಗಿನ ಹವಾಮಾನದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಿರುತ್ತವೆ, ಶರತ್ಕಾಲ ಮತ್ತು ಚಳಿಗಾಲದ ತಿಂಗಳುಗಳಲ್ಲಿ ಹವಾಮಾನವು ತಂಪಾಗಿರುವಾಗ, ನಾಯಿಗಳು ಈ ರೀತಿ ಮಲಗುವುದು, ಉಷ್ಣತೆಯನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ.ಹೀಗಾಗಿ ನಿಮ್ಮ ಮನೆಯಲ್ಲಿರುವ ಶ್ವಾನ ಈ ರೀತಿ ಮಲಗಿದರೆ ಅದಕ್ಕೆ ಚಳಿಯಾದ ವಾತಾವರಣದ ಅನುಭವವಾಗುತ್ತಿದೆ ಎಂದರ್ಥ. ಹಾಗೇ ಕೈ ಮತ್ತು ಕಾಲುಗಳನ್ನು ಚಾಚಿಕೊಂಡು ಹೊಟ್ಟೆಯನ್ನು ಕೆಳಕ್ಕೆ ಇಳಿಸಿ ಮಲಗಿರುತ್ತವೆ. ಇದು ಶ್ವಾನ ಖುಷಿಯಾಗಿದೆ ಎಂಬುದನ್ನು ಸೂಚಿಸುತ್ತದೆ. ಅಲ್ಲದೆ, ಶ್ವಾನ ಆಟ ಆಡಲು ಹೆಚ್ಚು ಉತ್ಸುಕವಾಗಿದೆ ಎಂಬುದನ್ನು ಅರ್ಥೈಸುತ್ತದೆ. ಎದ್ದ ಮೇಲೆ ಮಾಲೀಕರು ತನ್ನನ್ನು ಆಟವಾಡಲು ಕರೆದೊಯ್ಯಲಿ ಎಂಬ ಉದ್ದೇಶದಿಂದ ನಾಯಿ ಈ ರೀತಿ ಮಲಗುತ್ತದೆ.
ಕೆಲವು ಶ್ವಾನವನ್ನು ಮಾಲೀಕರ ಅಥವಾ ಇತರೆ ನಾಯಿ ಬಳಿ ಮುದುರಿ ಮಲಗುತ್ತವೆ. ಇದು ಬೆಚ್ಚಗಿರಲು ಹಾಗೂ ರಕ್ಷಣೆಗೆ ಶ್ವಾನ ಬಳಸುವ ವಿಧಾನ. ಮತ್ತು ಮಾಲೀಕರ ಮೇಲಿರುವ ಅಕ್ಕರೆಯನ್ನು ನಾಯಿ ಸಮೀಪವೇ ಮುದುರಿಕೊಂಡು ಮಲಗಿ ವ್ಯಕ್ತಪಡಿಸುತ್ತದೆ. ಕೆಲವೊಂದು ಶ್ವಾನಗಳು ಕಾಲುಗಳನ್ನು ಚಾಚಿ ಬೇಕಾಬಿಟ್ಟಿಯಾಗಿ ಮಲಗುತ್ತವೆ. ಇದು ನಾಯಿಗೆ ಬಿಸಿಯಾದ ವಾತಾವರಣ ಕಿರಿಕಿರಿಯನ್ನುಂಟು ಮಾಡುತ್ತಿದೆ ಎಂಬುದನ್ನು ತೋರಿಸುತ್ತದೆ. ಹೊರಗಿನ ತಣ್ಣನೆಯ ವಾತಾವರಣದಿಂದ ಹಾಯಾಗಲು ಶ್ವಾನಗಳು ಈ ರೀತಿ ಮಲಗುತ್ತವೆ. ಇನ್ನೂ ಕೆಲ ನಾಯಿಗಳು ಹೊಟ್ಟೆಯನ್ನು ಮಗುಚಿ ಹಾಕಿ ಮಲಗುತ್ತವೆ. ಇದು ನಾಯಿಗೆ ಸುಸ್ತಾಗಿದೆ. ಸ್ಪಲ್ಪ ಹೊತ್ತು ಆರಾಮವಾಗಿರಲು ಬಯಸುತ್ತದೆ ಎಂಬುದನ್ನು ಸೂಚಿಸುತ್ತದೆ. ಈ ರೀತಿ ಮಲಗುವುದರಿಂದ ನಾಯಿಗಳ ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಈ ರೀತಿ ಮಲಗಿದ ಶ್ವಾನಗಳು ಹೆಚ್ಚು ಹೊತ್ತು ನಿದ್ದೆಗೆ ಜಾರುವುದಿಲ್ಲ. ಹೆಚ್ಚು ಆಹಾರವನ್ನು ಸೇವಿಸಿದ ಸಂದರ್ಭದಲ್ಲಿ ಶ್ವಾನಗಳು ಅಂಗಾತ ಮಲಗುತ್ತವೆ. ಈ ರೀತಿ ಮಲಗುವುದರಿಂದ ಅವುಗಳಿಗೆ ರಿಲ್ಯಾಕ್ಸ್ ಅನುಭವವಾಗುತ್ತದೆ.