ದೀಪಾವಳಿಗೂ ಮುನ್ನವೇ ರಾಜ್ಯದ ಜನತೆಗೆ ಬೆಲೆ ಏರಿಕೆ ಬರೆ! – ಮತ್ತೆ ಗಗನಕ್ಕೇರಿದ ಈರುಳ್ಳಿ ಬೆಲೆ
ದೀಪಾವಳಿಗೂ ಮುನ್ನವೇ ರಾಜ್ಯದ ಜನರಿಗೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಮುಂಗಾರು ಕೈ ಕೊಟ್ಟ ಹಿನ್ನೆಲೆ ನೀರಿನ ಅಭಾವ ಉಂಟಾಗಿದೆ. ಹೀಗಾಗಿ ಬೆಳೆದ ಬೆಲೆಗೆ ಸರಿಯಾದ ಫಸಲು ಸಿಕ್ಕಿಲ್ಲ. ಹೀಗಾಗಿ ರಾಜ್ಯದಲ್ಲಿ ತರಕಾರಿ, ಹಣ್ಣುಗಳ ಬೆಲೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಟೊಮ್ಯಾಟೋ ಬಳಿಕ ಈಗ ಈರುಳ್ಳಿ ಬೆಲೆ ಗಗನಕ್ಕೆ ಏರಿಕೆಯಾಗುತ್ತಿದ್ದು, ಗ್ರಾಹಕರಿಗೆ ಕಣ್ಣೀರು ಬರುವಂತೆ ಆಗಿದೆ.
ಮಳೆ ಕೊರತೆಯಿಂದ ಹೆಚ್ಚಾಗಿ ಈರುಳ್ಳಿ ಬೆಳೆ ಬೆಳೆಯದ ಕಾರಣ ಹಾಗೂ ಎಪಿಎಂಸಿಗೆ ನಿಗದಿತ ಪ್ರಮಾಣದಲ್ಲಿಈರುಳ್ಳಿ ಬಾರದ ಕಾರಣ ಚಿಲ್ಲರೆ ಮಾರುಕಟ್ಟೆಯಲ್ಲಿಈರುಳ್ಳಿ ಬೆಲೆ ಕೆಜಿಗೆ ರೂ.100 ಗೆ ತಲುಪಿದೆ. ದೀಪಾವಳಿ ಹಬ್ಬದ ವೇಳೆಗೆ ಮತ್ತಷ್ಟು ಹೆಚ್ಚಾಗಿ ಗ್ರಾಹಕರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ: ಐದು ಗ್ಯಾರಂಟಿ ಬಳಿಕ ಶಾಲಾ ಮಕ್ಕಳಿಗೆ ಸಿದ್ದರಾಮಯ್ಯ ಹೊಸ ಗ್ಯಾರಂಟಿ – ರಾಜ್ಯೋತ್ಸವ ದಿನ ಏನಿದು ಗಿಫ್ಟ್?
ರಾಜ್ಯದಲ್ಲಿಆಗಸ್ಟ್-ಸಪ್ಟೆಂಬರ್ನಲ್ಲಿ ಸ್ವಲ್ಪ ಪ್ರಮಾಣ ಮಳೆ ಆಗಿದ್ದರಿಂದ ರೈತರು ಅಧಿಕ ಪ್ರಮಾಣದಲ್ಲಿಈರಳ್ಳಿ ಬೆಳೆ ಬೆಳೆದಿಲ್ಲ. ಇದರಿಂದ ಈರುಳ್ಳಿ ಇಳುವರಿ ಕ್ಷೀಣಿಸಿದೆ. ಈ ಕಾರಣಕ್ಕೆ ಈರುಳ್ಳಿ ಬೆಲೆ ದಿನೇದಿನೇ ಗಗನಕ್ಕೇರುತ್ತಿದೆ. ದೊಡ್ಡ ಗಾತ್ರದ ಗಡ್ಡೆ ಕೆಜಿಗೆ ರೂ.40, ಮಧ್ಯಮ ಗಾತ್ರದ ರೂ.30 ಹಾಗೂ ಸಾಮಾನ್ಯ ಗಾತ್ರದ ಸಣ್ಣ ಗಡ್ಡೆಗೆ ರೂ.20ರಿಂದ 25 ರೂ.ಕೆಜಿಯಂತೆ ಮಾರಾಟವಾಗುತ್ತಿದ್ದ ಈರುಳ್ಳಿ ಈಗ ದಿಢೀರ್ ಆಗಿ ರೂ.100 ಕೆಜಿ ಮಾರಾಟವಾಗುತ್ತಿದೆ.
ಬೆಲೆ ಏರಿಕೆಯ ಬಿಸಿ ಈಗ ಹೋಟೆಲ್ಗಳಿಗೂ ತಟ್ಟಿದೆ. ಈರುಳ್ಳಿ ದರ ಹೆಚ್ಚಾಗಿದ್ದರಿಂದ ನಾನ್ವೆಜ್ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಈರುಳ್ಳಿ ನೀಡುತ್ತಿಲ್ಲ ಎಂದು ಹೇಳಲಾಗುತ್ತಿದೆ.