ಬೆಂಗಳೂರು ಜನತೆಯನ್ನು ಕಾಡುತ್ತಿದೆ ಚಿರತೆ ಚಿಂತೆ – ಅರವಳಿಕೆ ಚುಚ್ಚುಮದ್ದು ನೀಡಲು ಹೋಗಿದ್ದ ವೈದ್ಯರ ಮೇಲೆ ದಾಳಿ ಮಾಡಿ ಪರಾರಿ

ಬೆಂಗಳೂರು ಜನತೆಯನ್ನು ಕಾಡುತ್ತಿದೆ ಚಿರತೆ ಚಿಂತೆ – ಅರವಳಿಕೆ ಚುಚ್ಚುಮದ್ದು ನೀಡಲು ಹೋಗಿದ್ದ ವೈದ್ಯರ ಮೇಲೆ ದಾಳಿ ಮಾಡಿ ಪರಾರಿ

ಬೆಂಗಳೂರಿನಲ್ಲಿ ಚಿರತೆಯದ್ದೇ ಚಿಂತೆ ಶುರುವಾಗಿದೆ. ಕಣ್ಣಿಗೆ ಒಂದು ಸಲ ಕಂಡರೆ ಮತ್ತೊಂದು ಸಲ ಕಾಣದಂತೆ ಮಾಯವಾಗುತ್ತಿದೆ. ಕಟ್ಟಡದಿಂದ ಕಟ್ಟಡಕ್ಕೆ ಜಿಗಿದು ಆಟವಾಡಿಸುತ್ತಿದೆ. ತನ್ನ ಪಾಡಿಗೆ ತಾನು ಬೊಮ್ಮನಹಳ್ಳಿ ಸುತ್ತಮುತ್ತ ರೌಂಡ್ಸ್ ಹೊಡೆಯುತ್ತಾ ಇರುವ ಚಿರತೆ ಬುಧವಾರ ಅರವಳಿಕೆ ತಜ್ಞರ ಮೇಲೆ ದಾಳಿ ಮಾಡುವ ಮೂಲಕ ನನ್ ಹತ್ರ ಬಂದರೆ ಹುಷಾರ್ ಎಂದು ವಾರ್ನಿಂಗ್ ಬೇರೆ ಮಾಡಿ ಪರಾರಿಯಾಗಿದೆ. ಹಾಗಿದ್ದರೂ ಕೂಡಾ ಚಿರತೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

ಇದನ್ನೂ ಓದಿ: ತಿಮ್ಮಪ್ಪನ ಭಕ್ತರಿಗೆ ಮತ್ತೆ ಕರಡಿ, ಚಿರತೆ ಕಾಟ! – ಗುಂಪು ಗುಂಪಾಗಿ ತೆರಳಲು ಟಿಟಿಡಿ ಮನವಿ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿರತೆ ಹಾವಳಿ ಜನರ ನಿದ್ದೆಗೆಡಿಸಿದೆ. ಬೊಮ್ಮನಹಳ್ಳಿ ಭಾಗದ ಕೂಡ್ಲು ಸಮೀಪ ಕಾಣಿಸಿಕೊಂಡಿದ್ದ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಯುತ್ತಿದೆ. ಲೆಪರ್ಡ್ಸ್ ಟಾಸ್ಕ್ ಫೋರ್ಸ್ ತಂಡ ಥರ್ಮಲ್ ಡ್ರೋನ್ ಟೀಂ ಫೀಲ್ಡ್‌ಗೆ ಇಳಿದು ಚಿರತೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸುತ್ತಿದೆ. ಶೋಧ ನಡೆಸಿದ ಸ್ಥಳದಲ್ಲೇ ಚಿರತೆ ಪತ್ತೆಯಾದರೂ ಕೂಡಾ ಅರಣ್ಯಾಧಿಕಾರಿಗಳನ್ನು ಚಿರತೆ ಚೆನ್ನಾಗಿಯೇ ಆಟವಾಡಿಸುತ್ತಿದೆ. ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯ ತಂಡದಲ್ಲಿದ್ದ ಅರವಿಳಿಕೆ ತಜ್ಞರಾದ ಡಾ. ಕಿರಣ್ ಎಂಬುವರ ಮೇಲೆ ಚಿರತೆ ದಾಳಿ ನಡೆಸಿದ್ದು ಅವರ ಕತ್ತಿಗೆ ಗಾಯವಾಗಿದೆ. ಸದ್ಯಕ್ಕೆಕಿರಣ್ ಅವರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಇದೇ ವೇಳೆ ಚಿರತೆ ಶಾರ್ಪ್ ಶೂಟರ್ ಮೇಲೂ ದಾಳಿ ಮಾಡಿದೆ. ಲೆಪರ್ಡ್ ಟಾಸ್ಕ್ಫೋರ್ಸ್ ಶಾರ್ಪ್ ಶೂಟರ್ ಧನ್ರಾಜ್ ಎನ್ನುವರಿಗೆ ಕಾಲು ಮತ್ತು ಭುಜಕ್ಕೆ ಗಾಯವಾಗಿದೆ. ಹಾಗೇ ಕಾರ್ಯಚರಣೆಯಲ್ಲಿರುವ ಬಿಬಿಎಂಪಿ ಸಿಬ್ಬಂದಿ ಮಹೇಶ್ ಮೇಲೂ ದಾಳಿ ಮಾಡಿದ್ದು, ಅವರ ಕಾಲಿಗೆ ಗಾಯವಾಗಿದೆ. ಈ ಹಿನ್ನೆಲೆಯಲ್ಲಿ ಮೂವರು ಚಿಕಿತ್ಸೆಗೆ ತೆರಳಿದ್ದಾರೆ.

ಬೆಂಗಳೂರಿನ ಬೊಮ್ಮನಹಳ್ಳಿ ಭಾಗದ ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಕಾರ್ಯಚರಣೆ ನಡೆಸುತ್ತಿದ್ದಾರೆ. ಮೊನ್ನೇ ಅಷ್ಟೇ ಬೊಮ್ಮನಹಳ್ಳಿ ಭಾಗದ ಕೂಡ್ಲು ಸಮೀಪ ಕಾಣಿಸಿಕೊಂಡಿದ್ದ ಚಿರತೆ ಮತ್ತೆ ಪ್ರತ್ಯಕ್ಷವಾಗಿದೆ. ಕೃಷ್ಣಾರೆಡ್ಡಿ ಕೈಗಾರಿಕಾ ಪ್ರದೇಶದಲ್ಲಿ ಚಿರತೆ ಪತ್ತೆಯಾಗಿದೆ. ಆದ್ರೆ, ಅರಣ್ಯಾಧಿಕಾರಿಗಳ ಕೈಗೆ ಸಿಗದೇ ಅತ್ತ ಬೋನಿಗೆ ಬೀಳದೇ ಆಟವಾಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಕೃಷ್ಣಾರೆಡ್ಡಿ ಕೈಗಾರಿಕಾ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಅರವಳಿಕೆ ನೀಡಿದ 15 ನಿಮಿಷ ಮಾತ್ರ ಪವರ್ ಇರುತ್ತೆ. ಅರವಳಿಕೆ ಮದ್ದು ನೀಡಿ 20 ನಿಮಿಷ ಕಳೆದಿದೆ. ಹೀಗಾಗಿ ಚಿರತೆ ಮತ್ತೆ ಆ್ಯಕ್ಟಿವ್ ಆಗಿರುವ ಸಾಧ್ಯತೆ ಇದೆ. ಇದರಿಂದ ಅರಣ್ಯ ಸಿಬ್ಬಂದಿ ಅಲರ್ಟ್ ಆಗಿದ್ದು, ಚಿರತೆ ತುಂಬಾ ಆ್ಯಕ್ಟಿವ್ ಆಗಿರುವುದರಿಂದ ಇದೀಗ ಹೈ ಡೋಸ್ ಅರಿವಳಿಕೆ ಮದ್ದು ನೀಡಿ ಸೆರೆಯಲು ಅರಣ್ಯ ಸಿಬ್ಬಂದಿ ಸಿದ್ದತೆ ನಡೆಸಿದೆ.

ಮಂಗಳವಾರ ತಡರಾತ್ರಿ ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ರಾತ್ರಿ 11 ಗಂಟೆ ವೇಳೆ ಕಾಂಪೌಂಡ್ ಜಿಗಿದು ಚಿರತೆ ಓಡಿದೆ. ಪಾಳು ಬಿದ್ದಿರುವ ಬಿಲ್ಡಿಂಗ್ ಒಳಗೆ ನುಗ್ಗಿರುವ ಶಂಕೆ ಮೇಲೆ ತಡರಾತ್ರಿವರೆಗೂ ಹುಡುಕಾಟಲಾಯ್ತು ಆದ್ರೆ ಅಲ್ಲಿಯೂ ಚಿರತೆ ಕಾಣಸಿಗಲಿಲ್ಲ. ಕೆಲ ಹೊತ್ತು ಕಾಂಪೌಂಡ್ ಮೇಲೆ ಕುಳಿತು ಮತ್ತೆ ಹಳೆ ಕಟ್ಟಡದೊಳಗೆ ನುಗ್ಗಿದೆ. ಥರ್ಮಲ್ ಡ್ರೋಣ್ ನಲ್ಲಿ ಚಿರತೆಯ ಚಲನವಲನ ಸೆರೆಯಾಗಿತ್ತು.

Sulekha