ಸಲಾರ್, ಡಂಕಿ ಸಿನಿಮಾ ಜೊತೆ ಹಾಲಿವುಡ್ನ ಬಿಗ್ಬಜೆಟ್ ಚಿತ್ರ ರಿಲೀಸ್ – ಬಾಕ್ಸ್ಆಫೀಸ್ ವಾರ್ ಆಗೋದು ಗ್ಯಾರಂಟಿ..!
ಡಿಸೆಂಬರ್ ತಿಂಗಳಲ್ಲಿ ಸಿನಿಮಾ ಪ್ರೇಮಿಗಳಿಗೆ ಹಬ್ಬವೋ ಹಬ್ಬ. ಡಿಸೆಂಬರ್ 22ಕ್ಕೆ ಡಂಕಿ ಹಾಗೂ ಸಲಾರ್ ಸಿನಿಮಾ ರಿಲೀಸ್ ಆಗಲಿವೆ. ಇದರ ಮಧ್ಯೆ ಮತ್ತೊಂದು ಬಿಗ್ಬಜೆಟ್ ಸಿನಿಮಾ ಬಾಕ್ಸ್ ಆಫೀಸ್ ಫೈಟ್ಗೆ ರೆಡಿಯಾಗಿದೆ. ಇ ಮತ್ತೊಂದು ಭಾರಿ ಬಜೆಟ್ ಸಿನಿಮಾ ಪ್ರಭಾಸ್ ಮತ್ತು ಶಾರುಖ್ ಖಾನ್ ಸಿನಿಮಾಗಳ ಜೊತೆ ರಿಲೀಸ್ ಆಗಲಿದೆ.
ಇದನ್ನೂ ಓದಿ:ಲಿಪ್ಲಾಕ್ ಮಾಡ್ತಾ ಉಂಗುರ ತೊಡಿಸಿಕೊಂಡ ನಟಿ – ಅಮಲಾ ಪೌಲ್ ಎರಡನೇ ಮದುವೆಗೆ ಭರ್ಜರಿ ಸಿದ್ಧತೆ
ಡಿಸೆಂಬರ್ ತಿಂಗಳಲ್ಲಿ ಬಾಕ್ಸ್ ಆಫೀಸ್ ಕದನ ಜೋರಾಗಿಯೇ ಇರಲಿದೆ. ಪ್ರಭಾಸ್ ನಟನೆಯ ಬಹುನಿರೀಕ್ಷಿತ ಸಿನಿಮಾ ಸಲಾರ್ ಡಿಸೆಂಬರ್ 22ಕ್ಕೆ ಬಿಡುಗಡೆ ಆಗಲಿದೆ. ಅದರ ಜೊತೆಗೆ ಗೆಲುವಿನ ಕುದುರೆಯ ಮೇಲೆ ಓಡುತ್ತಿರುವ ಶಾರುಖ್ ಖಾನ್ ನಟನೆಯ ಡಂಕಿ ಸಿನಿಮಾ ಸಹ ಸಲಾರ್ ಜೊತೆಗೆ ಬಿಡುಗಡೆ ಆಗಲಿದೆ. ಈ ಎರಡೂ ಸಿನಿಮಾಗಳ ನಡುವೆ ಭಾರಿ ಪೈಪೋಟಿ ಇರಲಿದೆ. ಇದರ ನಡುವೆ ಅದೇ ದಿನ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಸಹ ಬಿಡುಗಡೆ ಆಗುತ್ತಿದೆ. ಇದೀಗ ಡಿಸೆಂಬರ್ 22ರಂದೇ ಹಾಲಿವುಡ್ನ ಜನಪ್ರಿಯ ಸಿನಿಮಾ ‘ಅಕ್ವಾಮ್ಯಾನ್’ ಸರಣಿಯ ಹೊಸ ಸಿನಿಮಾ ಬಿಡುಗಡೆ ಆಗುತ್ತಿದೆ. ‘ಅಕ್ವಾಮ್ಯಾನ್’ ಸರಣಿಯ ಎರಡನೇ ಸಿನಿಮಾ ‘ಅಕ್ವಾಮ್ಯಾನ್: ದಿ ಲಾಸ್ಟ್ ಕಿಂಗ್ಡಮ್’ ಸಿನಿಮಾ ಡಿಸೆಂಬರ್ 22 ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಆಕ್ವಾಮ್ಯಾನ್ ಆಗಿ ಜಾಸನ್ ಮೋಮಾ ನಟಿಸಿದ್ದು, ಆಂಬರ್ ಹರ್ಡ್ ಸಹ ಸಿನಿಮಾದಲ್ಲಿ ನಟಿಸಿದ್ದಾರೆ. 1000 ಕೋಟಿಗೂ ಹೆಚ್ಚಿನ ಮೊತ್ತದ ಹಣವನ್ನು ಈ ಸಿನಿಮಾದ ಮೇಲೆ ಸುರಿಯಲಾಗಿದ್ದು ನೀರಿನಾಳದಲ್ಲಿ ನಡೆಯುವ ರೋಚಕ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. 2018ರಲ್ಲಿ ಬಿಡುಗಡೆ ಆಗಿದ್ದ ‘ಆಕ್ವಾಮ್ಯಾನ್’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಅದೇ ಕಾರಣಕ್ಕೆ ಇದೀಗ ‘ಆಕ್ವಾಮ್ಯಾನ್ 2’ ಸಿನಿಮಾವನ್ನು ನಿರ್ಮಿಸಲಾಗಿದೆ. ಕೋವಿಡ್ ಬಳಿಕ ಭಾರತದಲ್ಲಿ ಹಾಲಿವುಡ್ ಸಿನಿಮಾಗಳು ಬಹಳ ಒಳ್ಳೆಯ ಕೆಲೆಕ್ಷನ್ ಮಾಡುತ್ತಿವೆ.
‘ಸಲಾರ್’ ಸಿನಿಮಾ ನವೆಂಬರ್ ತಿಂಗಳಲ್ಲಿಯೇ ಬಿಡುಗಡೆ ಆಗಬೇಕಿತ್ತು. ಆದರೆ ಸಿನಿಮಾದ ಬಿಡುಗಡೆ ದಿನಾಂಕವನ್ನು ನಿರ್ಮಾಣ ಸಂಸ್ಥೆ ಮುಂದೂಡಿತು. ಇನ್ನು ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ಡಿಸೆಂಬರ್ 22 ರಂದು ಬಿಡುಗಡೆ ಆಗಲಿದೆ ಎಂದು ತಿಂಗಳುಗಳ ಮೊದಲೇ ಘೋಷಣೆ ಮಾಡಿ ಆಗಿತ್ತು. ಡಿಸೆಂಬರ್ 22ರಂದೇ ಶಾರುಖ್ ಖಾನ್ ನಟನೆಯ ‘ಡಂಕಿ’, ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾಗಳು ಬಿಡುಗಡೆ ಆಗುತ್ತಿರುವ ಕಾರಣ ‘ಆಕ್ವಾಮ್ಯಾನ್’ ಸಿನಿಮಾಕ್ಕೆ ಚಿತ್ರಮಂದಿರಗಳ ಕೊರತೆ ಎದುರಾಗಬಹುದು. ‘ಆಕ್ವಾಮ್ಯಾನ್’ ಸಿನಿಮಾ ಬಿಡುಗಡೆ ಆಗುತ್ತಿರುವ ‘ಡಂಕಿ’ ‘ಸಲಾರ್’ ಸಿನಿಮಾಗಳಿಗೂ ಸಮಸ್ಯೆ ಕೊಡುವ ಸಾಧ್ಯತೆಯೂ ಇದೆ. ಯಾಕಂದರೆ, ‘ಆಕ್ವಾಮ್ಯಾನ್ 2’ ಸಿನಿಮಾ ಸಹ ದೊಡ್ಡ ಮೊತ್ತವನ್ನು ಗಳಿಸುವ ವಿಶ್ವಾಸದಲ್ಲಿದೆ.