ಚಿಪ್ಸ್ ಮಾರಿ ₹4,000 ಕೋಟಿ ಸಂಪಾದಿಸಿದ ಉದ್ಯಮಿ! – ಬಡವನಾಗಿ ಹುಟ್ಟಿ ಬಿಲಿಯನೇರ್ ಆಗಿದ್ದೇಗೆ ಗೊತ್ತಾ?
ಬಡವನಾಗಿ ಹುಟ್ಟುವುದು ತಪ್ಪಲ್ಲ. ಆದರೆ, ಬಡವನಾಗಿ ಸಾಯುವುದು ತಪ್ಪು ಅನ್ನೋ ಮಾತಿದೆ. ಹೀಗೆ ಹಲವರು ಕಡುಬಡತನದಲ್ಲೇ ಹುಟ್ಟಿ ಬಳಿಕ ಸಾವಿರಾರು ಕೋಟಿ ಸಂಪಾದನೆ ಮಾಡಿದ್ದಾರೆ. ಅಂಥವರಲ್ಲಿ ಚಂದುಭಾಯಿ ವಿರಾನಿ ಕೂಡ ಒಬ್ಬರು. ಯಾರು ಈ ಚಂದುಭಾಯಿ ಎಂಬ ಬಗ್ಗೆ ವರದಿ ಇಲ್ಲಿದೆ.
ಇದನ್ನೂ ಓದಿ: ನೀವು ಬಳಸುವ ಅಡುಗೆ ಎಣ್ಣೆ ಬಗ್ಗೆ ಎಚ್ಚರ! – ಜಾಹೀರಾತಿಗೆ ಮಾರು ಹೋದರೆ ಕಾದಿದೆ ಅಪಾಯ – ನಿಮಗಾಗಿ ಇಲ್ಲಿದೆ ವಿಸ್ತ್ರತ ಮಾಹಿತಿ..!
ಮನೆಯಲ್ಲಿ ಬಡತನದ ಕಾರಣ 10ನೇ ಕ್ಲಾಸ್ಗೆ ಓದುವುದನ್ನು ನಿಲ್ಲಿಸಿದ್ದರು ಚಂದುಭಾಯಿ ವಿರಾನಿ. ಗುಜರಾತ್ ಮೂಲದ ಚಂದುಬಾಯಿ ಆರಂಭದ ದಿನಗಳಲ್ಲಿ ಕೃಷಿ ಉತ್ಪನ್ನಗಳು ಮತ್ತು ಯಂತ್ರೋಪಕರಣಗಳ ಮಾರಾಟ ಮಾಡುತ್ತಿದ್ದರು. ಆದರೆ ಯಾಕೋ ವ್ಯಾಪಾರ ಕೈಹಿಡಿಯಲಿಲ್ಲ. ಹಲವು ಕಡೆ ಕೆಲಸ ಮಾಡಿದರೂ ಅದೇ ಕಥೆ. ಪ್ರಯೋಜನ ಅಂತೂ ಆಗಲಿಲ್ಲ. ಕೊನೆಗೆ ಥಿಯೇಟರ್ಗಳಲ್ಲಿ ಸೀಟ್ ಫಿಕ್ಸ್ ಮಾಡೋದು, ಪೋಸ್ಟರ್ ಹಾಕುವುದು ಮತ್ತು ಸಿನಿಮಾಗಳಿಗೆ ಕ್ಯಾಂಟೀನ್ ನಡೆಸುವ ಕೆಲಸಕ್ಕೂ ಕೈ ಹಾಕಿದರು. ಈ ವೇಳೆ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಸ್ನ್ಯಾಕ್ಸ್ಗಾಗಿ ಹೆಚ್ಚು ಹಣ ಖರ್ಚು ಮಾಡಲು ಹಿಂದೇಟು ಹಾಕುವುದನ್ನ ಗಮನಿಸಿದ್ದರು. ಹೀಗಾಗಿ ಜಸ್ಟ್ 10 ಸಾವಿರ ಇನ್ವೆಸ್ಟ್ ಮಾಡಿ ತಮ್ಮ ಮನೆಯ ಶೆಡ್ನಲ್ಲೇ ಆಲೂಗಡ್ಡೆ ಚಿಪ್ಸ್ ಮಾಡಲು ಶುರು ಮಾಡಿದರು. ಟೇಸ್ಟ್ ಮತ್ತು ಕ್ವಾಲಿಟಿ ಚೆನ್ನಾಗಿತ್ತು. ಇದೇ ಚಂದೂಬಾಯಿ ವಿರಾನಿಯವರ ಜೀವನವನ್ನೇ ಬದಲಾಯಿಸಿತು. ಈ ಉದ್ಯಮ ಇವರ ಕೈ ಹಿಡಿಯಿತು. ಈಗ ಚಂದೂಹಾಯಿ ವಿರಾನಿಯವರ ಕಂಪನಿ ಆದಾಯ ಇದೀಗ 4,000 ಕೋಟಿ ರೂಪಾಯಿಗಳನ್ನು ತಲುಪಿದೆ.